’ಕವಿತೆ ಹಾಡಾಯಿತು..’ – ಚಿದಂಬರ ನರೇಂದ್ರ

ಚಿದಂಬರ ನರೇಂದ್ರ


ತಾಜಾ ಕವಿತೆಯೊಂದು
ಟ್ಯೂನಿಗೆ ಒಗ್ಗಿಕೊಳ್ಳಬೇಕೆಂದು
ತನ್ನ ರೆಕ್ಕೆ ಪುಕ್ಕಗಳನ್ನೆಲ್ಲ
ಟ್ರಿಮ್ ಮಾಡಿಸಿಕೊಳ್ಳಲು
ತಲೆ ತಗ್ಗಿಸಿಕೊಂಡು ಕೂತಿತ್ತು.
ಪ್ರಾಸ ಸರಿಹೊಂದುತ್ತಿಲ್ಲ ಎಂದು
ಒಂದಿಷ್ಟು ಶಬ್ದಗಳು
ಅರ್ಥ ಕಳೆದುಕೊಂಡವು.
ಹಾಡುವವರ ಮಿತಿಗಳನ್ನ
ಅರ್ಥ ಮಾಡಿಕೊಂಡು
ಕವಿತೆ, ತನ್ನ ಆವೇಶವನ್ನು ತಾನೇ
ಸ್ವಲ್ಪ ಕಡಿಮೆ ಮಾಡಿಕೊಂಡಿತು.
ಹಿನ್ನೆಲೆ ಸಂಗೀತಕ್ಕೆ
ಆಭಾಸವಾಗಬಾರದೆಂದು
ಕೆಲವು ಶಬ್ದಗಳನ್ನ ಒತ್ತಿದರು
ಕೆಲವನ್ನ ಹಾಗೇ ತೇಲಿಸಿಬಿಟ್ಟರು.
ಕವಿತೆ ಸುಮ್ಮನಾದಲ್ಲೆಲ್ಲ
ಸಿಳ್ಳೆ ಹೊಡೆದರು
ಚಿಟಕಿ ಹಾಕಿದರು
ಇದು ಪ್ರದರ್ಶನ ಕಲೆ
ಜನರ ಕಿವಿಗಳಿಗೆ
ಮೋಸ ಮಾಡಬಾರದೆಂದು
ಸಮಜಾಯಿಶಿ ನೀಡಿದರು.
ಸಂಗೀತಗಾರ ಮಹಾ ರಸಿಕ
ಗಮ್ಮತ್ತಿನ ಕೆಲವು ಆಲಾಪ್ ಗಳನ್ನ
ನಡು ನಡುವೆ ಫಿಟ್ ಮಾಡಿ
ಮತ್ತೆ ಮತ್ತೆ
ಅವುಗಳನ್ನೇ ಹಾಡುತ್ತಿದ್ದ.
ಆತ ನುರಿತ ಗಾಯಕನಂತೆ
ಕೆಲವೊಮ್ಮೆ
ತುಂಬಾ ಭಾವುಕನಾಗಿಬಿಡುತ್ತಿದ್ದ,
ಒಮ್ಮೊಮ್ಮೆ ಅತಿಯಾಗಿ
ತಾರಕಕ್ಕೆ ಹೋಗಿ
ಅಲ್ಲೇ ಒಂದಿಷ್ಟು ಹೊತ್ತು
ಕಾಲ ಕಳೆದುಬಿಡುತ್ತಿದ್ದ
ಅದೇನೋ ಅವನ
ಸಿಗ್ನೆಚರ್ ಸ್ಟೈಲ್ ಅಂತೆ,
ಹೀಗೆ ಹಾಡಿದಾಗಲೆಲ್ಲ
ಜನ ಚಪ್ಪಾಳೆ ಹೊಡೆಯುತ್ತಾರಂತೆ.
ಕೊನೆಗೂ
ಹಾಡು ಹಿಟ್ ಆಗಿದೆ.
ಕವಿತೆಯ ಸಾಲುಗಳನ್ನ
ಕೆಲವರು
ಟಾಯ್ಲೆಟ್ ನ ಗೋಡೆಗಳ
ಮೇಲೆ ಬರೆದರೆ
ಇನ್ನೂ ಕೆಲವರು
ದೇವಸ್ಥಾನದ
ಕಂಬಗಳ ಮೇಲೆ ಕೆತ್ತಿದ್ದಾರೆ.
 

‍ಲೇಖಕರು G

February 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ನರೇಂದ್ರ ಜಿ, ತುಂಬ ಸಶಕ್ತ. ಸುಂದರ ಹೂವಾಗಿ ಅರಳಿದ ಬದುಕು, ನೂರು ಒತ್ತಡಗಳಿಗೆ, ಅನಿವಾರ್ಯತೆಗಳಿಗೆ ಅದು ಹೇಗೆ ತನ್ನತನವನ್ನು ಕಳೆದುಕೊಂಡು, ಮಾರ್ಪಡುತ್ತ, ಹೊಸ ಹೊಸ ರೂಪಗಳನ್ನು ತಳೆಯುವುದು, ಅದು ತನ್ನದೋ ಅಥವಾ ಇನ್ನಾರದೋ ಬಿಂಬವಾಗುವುದು ಎಂತಹ ವಿಪರ್ಯಾಸವಲ್ಲವೇ.

    ಪ್ರತಿಕ್ರಿಯೆ
  2. Anonymous

    Kavite tumbaa chennagide. Obba taayi tanna koosige tannishtadante alankarisalashaktalaadaaga untaaguguva pechi illi padagalaagive.
    Rohini Satya.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: