ಡೈಲಿಬುಕ್ : ’ಸತ್ಯಮೇವ ಜಯತೇ’

ದಯಾನಂದ ಲಿಂಗೇಗೌಡ ಅವರ ಕಾದಂಬರಿ ಬಿಡುಗಡೆ ಆಗಿದೆ

ಪುಸ್ತಕದ ಮುಖಪುಟ ಮತ್ತು ಬೆನ್ನುಡಿ ’ಅವಧಿ’ ಓದುಗರಿಗಾಗಿ

ಬೆನ್ನುಡಿ

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ, ಸಾವಿರಾರು ವರ್ಷಗಳಿಂದ ಬೆಳೆದಿದ್ದ ಸಂಬಂಧದ ಬುಡಕ್ಕೆ ಒಂದೇ ಕೊಡಲಿ ಪೆಟ್ಟು ಸಾಕು, ಧರೆಗುರುಳಿಸಲು. ಇಂತಹ ಪ್ರಯತ್ನಗಳು ದಿನನಿತ್ಯ ಕಾಣುವಂತದ್ದೆ. ಅಂತಹುದೇ ಗಧಾ ಪ್ರಯೋಗ ಪ್ರಯತ್ನವನ್ನು ಪ್ರಸಿದ್ಧ ಬಾಲಿಹುಡ್ ನಟರೊಬ್ಬರು ಕಿರುತೆರೆಯ ಮೇಲೆ ಮಾಡಿದ್ದರು. ವೈದ್ಯರ ಘನತೆಯನ್ನು ಹರಾಜಿಗಿಟ್ಟು, ಕೋಟಿ ಸಂಪಾದಿಸಿದ್ದು, ಕಾರ್ಯಕ್ರಮ ನೋಡಿದವರಿಗೆ ವೇದ್ಯವಾಗಿರಬಹುದು. ಹರಾಜಿಗಿಟ್ಟಿದ್ದು ನಮ್ಮ ಆಸ್ತಿ, ಕಳೆದುಕೊಂಡವರು ರೋಗಿಗಳು, ಗಳಿಸಿಕೊಂಡವರು ಮೂರನೇಯವರು. ಆದರು ವೈದ್ಯರು ಕಳೆದುಕೊಂಡಿದ್ದಕ್ಕಿಂತಲೂ, ಸಾರ್ವಜನಿಕರು ಕಳೆದುಕೊಂಡಿದ್ದು ಅಗಾಧವಾದುದು ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಜನರು ಕಳೆದುಕೊಂಡಿದ್ದರ ಆಳ, ಅಗಲ ಮತ್ತು ಪ್ರಮಾಣಗಳನ್ನು ಜನರ ಗಮನಕ್ಕೆ ತರುವ ಪ್ರಯತ್ನವೇ ಈ ಕಾದಂಬರಿ. ಹೇಳಿ, ಕೇಳಿ ಇದು ಮನೋರಂಜನೆಯ ಯುಗ. ಮನೋರಂಜನೆ ಉದ್ದೇಶದಿಂದ ನಾಶವಾಗಿದ್ದನ್ನು, ರಂಜಿಸುವ ಕಾಲ್ಪನಿಕ ಕಥೆಯ ಹಿನ್ನಲೆಯಲ್ಲಿ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಕಾದಂಬರಿಯಲ್ಲಿ ನೇರವಾಗಿ ತೆರೆದಿಟ್ಟಿದ್ದು ಎಷ್ಟಿದೆಯೋ, ಸೂಚ್ಯವಾಗಿ ಬಚ್ಚಿಟ್ಟಿದ್ದೂ ಅಷ್ಟೇ ಇದೆ ಎಂಬುದು ಪ್ರಜ್ಞಾವಂತ ಓದುಗರಿಗೆ ಗಮನಕ್ಕೆ ಬರುತ್ತದೆ. ಭ್ರಷ್ಟ ವ್ಯವಸ್ಥೆಯಲ್ಲಿ ವೃತ್ತಿ ಪಾವಿತ್ರತೆ ಕಾಪಾಡಿಕೊಳ್ಳುವುದು, ಕೆಸರಲ್ಲಿ ಕಮಲವರಳಿದಂತೆ, ಕಷ್ಟ ಸಾಧ್ಯ. ಸಾಧ್ಯವಾದರೆ ಅದೇ ಸುಂದರ. ವೈದ್ಯ-ರೋಗಿ ನಡುವಿನ ನಂಬಿಕೆ ಮತ್ತು ಸಂಬಂಧಗಳ ಮಹತ್ವ ಓದುಗರಿಗೆ ಮನವರಿಕೆಯಾದರೆ ಕಾದಂಬರಿಯ ಉದ್ದೇಶ ಈಡೇರಿದಂತೆ.
ಬಿಡಿಯಾಗಿ ಓದಿದರೆ ಕಥಾಸಂಕಲನದಂತೆಯೂ, ಇಡಿಯಾಗಿ ಓದಿದರೆ ಕಾದಂಬರಿಯ ಹಾಗೆ ಭಾಸವಾಗುವಂತೆ ಪ್ರಯೋಗಾತ್ಮಕ ರಚನೆ ಮಾಡಲಾಗಿದೆ. ಸಾಂದಭರ್ಿಕ ಗಾಂಭೀರ್ಯತೆಯನ್ನು ಹೆಚ್ಚಿಸಲು, ಅಲ್ಲಲ್ಲಿ ಪ್ರಸಿದ್ಧ ಗೀತೆಗಳನ್ನು ಬಳಸಿರುವ ಶೈಲಿ ಓದುಗರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

‍ಲೇಖಕರು G

February 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ನಾನೀಗ ಓದುತ್ತಿರುವ ಪುಸ್ತಕ ಇದು.
    ಒಂದು ಒಳ್ಳೆಯ ಕಾದಂಬರಿ..
    ವೈದ್ಯರ ಬದುಕಿನ ಅನೇಕ ಸತ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಸುಂದರ ಕಥನ ..
    ಆಮೇಲೊಮ್ಮೆ ವಿವರವಾಗಿ ಬರೆಯುವೆ.

    ಪ್ರತಿಕ್ರಿಯೆ
    • ಕಿರಣ್

      ಡಾ ಕುಬಸದ ಸರ್,
      ನಿಮ್ಮ ಬರಹಗಳಲ್ಲಿನ ಮಾನವೀಯತೆ ಪ್ರಗಾಢ.
      ನೀವು ಮೆಚ್ಚಿದೀರ ಎಂದರೆ ಡಾ. ದಯಾನಂದ ಲಿಂಗೇಗೌಡರವರ ಪುಸ್ತಕ ಓದಲೇಬೇಕು!
      ನಿಮ್ಮ ವಿವರವಾದ ಬರವಣಿಗೆಗೆ ಕಾಯುತ್ತೇನೆ.
      ಅಷ್ಟರಲ್ಲಿ ಈ ಪುಸ್ತಕ ಓದಲೂ ಪ್ರಯತ್ನಿಸುತ್ತೇನೆ!
      ಧನ್ಯವಾದಗಳು

      ಪ್ರತಿಕ್ರಿಯೆ
  2. ಕಿರಣ್

    ಡಾ. ದಯಾನಂದ ಲಿಂಗೇಗೌಡರವರಿಗೆ ಅಭಿನಂದನೆಗಳು!
    ಪುಸ್ತಕ ಎಲ್ಲಿ ದೊರೆಯುತ್ತದೆ ಎಂದು ತಿಳಿಸುವಿರಾ?
    ಬೆಂಗಳೂರಿನಿಂದ ಹೊರಗೆ ವಾಸಿಸುವವರಿಗೆ ಅಂಚೆ ಮೂಲಕ ತರಿಸಿಕೊಳ್ಳುವ ವ್ಯವಸ್ಥೆ ಇದೆಯೇ?
    ದಯವಿಟ್ಟು ಉತ್ತರಿಸಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: