ಡೈಲಿಬುಕ್ : ಶಿವಾನಂದ ಕುಬಸದ ಅವರ 'ಇಷ್ಟು ಮಾಡಿದ್ದೇನೆ'

10813_529612257175886_4143871583103794215_n-1

ಸುರೇಶ್ ರಾಜಮಾನೆ

ಕವನಸಂಕಲನ

‘ಇಷ್ಟು ಮಾಡಿದ್ದೇನೆ ‘

ಲೇಖಕರು – ಡಾ.ಶಿವಾನಂದ.ಕುಬಸದ್
User Comments

ಬದುಕಿಗೆ ವೃತ್ತಿ ಎನ್ನುವುದು ಒಂದು ಆಧಾರ ಸ್ತಂಭ ಆದರೆ ವೃತ್ತಿಯೇ ಬದುಕಾದಾಗ ವೃತ್ತಿಗೆ ತನ್ನನ್ನು ತಾನು ಅರ್ಪಿಸಿಕೊಂಡಾಗ ಸಿಗುವ ಸಮಾಧಾನ , ನೆಮ್ಮದಿ ವೃತ್ತಿಯು ಕಲಿಸುವ ಗುರುವಿನ ಸ್ಥಾನದಲ್ಲಿ ನಿಂತಾಗ ಮನುಷ್ಯ ಮತ್ತಷ್ಟು ವಿಶಾಲಗೊಳ್ಳುತ್ತಾನೆ. ವಿಶಾಲ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲೇಬೇಕು ಅಂದಾಗ ಮಾತ್ರ ಒಳಗಿರುವ ಆದರ್ಶಗಳು ಒಳಗಣ್ಣು ಸದಾ ಜಾಗೃತವಾಗಿರುತ್ತದೆ. ಅಂತಹ ಒಬ್ಬ ಆದರ್ಶಮಯ ಮತ್ತು ವೃತ್ತಿಯನ್ನೇ ಲಾಭಕ್ಕಾಗಿ ಬಳಸಿಕೊಳ್ಳದೆ ಜನರ ನಾಡಿಮಿಡಿತವನ್ನರಿತು ಜನಾನುರಾಗದಲ್ಲಿ ಸಹೃದಯತೆಯನ್ನು ಮತ್ತು ದೇವರನ್ನು ಕಂಡುಕೊಂಡು ಸಾರ್ಥಕ ಸೇವೆಯಲಿ ಸಾಮಾಜಿಕ ಬೆಳವಣಿಗೆಯ ಕುರಿತು ಯೋಚಿಸುವ ವ್ಯಕ್ತಿಗಳಲ್ಲಿ ಡಾ.ಶಿವಾನಂದ್ ಕುಬಸದ್ ಸರ್ ಕೂಡಾ ಸೇರುತ್ತಾರೆ. ಏಕೆಂದರೆ, ಅವರ ‘ಇಷ್ಟು ಮಾಡಿದ್ದೇನೆ’ ಎಂಬ ಕವನಸಂಕಲನ ಓದುತ್ತಾ ಹೋದಂತೆ ಒಂದಕ್ಕಿಂತ ಒಂದು ಕವಿತೆಗಳು ಭಿನ್ನವಾಗಿ ಕಾಣುತ್ತವೆ. ಇತಿಹಾಸದಲ್ಲಿ ಹುಸಿನಡೆಗಳು ಇದ್ದರೂ ನಾವೆಲ್ಲ ಹಾಗೆ ಮುನ್ನಡೆಯುತ್ತಿದ್ದೇವೆ ಎಂಬ ಆತಂಕ ಇವರ ಕವಿತೆಯಲ್ಲಿದೆ ನಾವು ಬದಲಾಗಬೇಕೆಂಬ ಭಾವವೀ ಕವಿತೆಯಲ್ಲಿದೆ. ಜೊತೆಗೆವೃತ್ತಿ ಬದುಕಿನಲ್ಲಿ ಉಸಿರು ಪರೀಕ್ಷಿಸಿಕೊಳ್ಳಲು ಬಂದವರೆಲ್ಲರ ಉಸಿರಾಗಿನಿಂತದ್ದು ಕೂಡಾ ಇವರ (ವೈದ್ಯನ ಅರಿಕೆ) ಕವಿತೆಯಲ್ಲಿ ಕಾಣಬಹುದು.

ಸೆರಗೆಂಬ ಅದ್ಭುತ ಆಕಾಶವನೇ ಹೊದಿಸಿ/ ಪ್ರೀತಿಯನೇ ಸುರಿದು ಸುಖಿಸುತ್ತಾಳೆ. ಎಂಬ ಕವಿತೆಯ ಸಾಲುಗಳು ವಾಸ್ತವದ ನೋಟದಲ್ಲಿ ನೋಡಿದರೇ ದೇವರೇನನ್ನೂ ಮಾಡಲಾರ ಎಲ್ಲವನ್ನು ತಾಯಿಯೇ ಮಾಡುವುದು ಅವಳೇ ದೇವರೆಂಬ ಸತ್ಯವನ್ನು ಸರಳೀಕರಿಸಿ ಹೇಳುವುದಲ್ಲದೇ ಭಾವನಾತ್ಮಕ ಸಂಬಂಧಗಳ ಬಗ್ಗೆ ಭಾವತುಂಬಿ ಬರೆಯುತ್ತಾರೆ. ಭಾವತುಂಬಿ ಬರೆದ ಕವಿತೆಗಳೇ ಬೆಲೆಯಿಲ್ಲದಂತಾಗಿ ವ್ಯಾಪಾರಕ್ಕಿಳಿದುಬಿಟ್ಟಿವೆ ಎನ್ನುವ ಮಾತಿನ ಮೂಲಕ ಸಾಹಿತ್ಯಲೋಕದ ಸೂಕ್ಷ್ಮ ತಲ್ಲಣವನ್ನು ‘ಕವನಗಳು ಮಾರಾಟಕ್ಕಿವೆ’ ಕವಿತೆಯಲಿ ಕಾಣಬಹುದು. ಹೀಗೆ ಒಂದಿಲ್ಲ ಒಂದು ವಿಷಯಕ್ಕೆ ಕವಿತೆಗಳು ಮನತಟ್ಟುತ್ತವೆ. ಎಷ್ಟೇ ಬರೆದರೂ ಬರಹದ ದಾಹ ತೀರದು ಇನ್ನೂ ಅಲ್ಲಲ್ಲಿ ಕಾಣದೇ ಇರುವ, ಯಾರೂ ಲೆಕ್ಕಿಸದೇ ಇರುವ , ಕಳೆದುಹೋದ, ಅರಿವಿಗೆ ಬಾರದ ನೋವುಗಳ, ಹಾಗು ಲೋಕದ ಕಣ್ಣಿಗೆ ಕಾಣದೇ ಇರುವ ಹಲವಾರು ವಿಷಯಗಳ ಬಗ್ಗೆ ಇನ್ನೂ ‘ಬರೆಯಬೇಕಿದೆ ನನಗೆ’ ಎಂದು ತಮ್ಮ ಹಂಬಲದೊಂದಿಗೆ ಬರಹದ ದಾರಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಾರೆ. ಕೊಳವೆ ಬಾವಿಗಳಿಂದಾದ ದುರಂತಗಳ ಬಗ್ಗೆ ಹೇಳುವಾಗ ತೆಗೆದುಕೊಳ್ಳಬೇಕಾದ ಸಣ್ಣ ಕಾಳಜಿಯ ಬಗ್ಗೆ ಯೋಚಿಸದೆ ಅನವಶ್ಯಕವಾಗಿ ಬಿಂಬಿತಗೊಳ್ಳುವ ವ್ಯರ್ಥ ಪ್ರಯತ್ನಗಳು, ಖರ್ಚುಗಳು, ಹೇಳಿಕೆಗಳು ಸಾವಿನ ದವಡೆಯಿಂದ ಪಾರುಮಾಡಲಾಗದ ಸ್ಥಿತಿಗೆ ಕವಿಗಳ ಮನಸ್ಸು ಆಕ್ರೋಶದ ಜೊತೆಗೆ ಕೊರಗನ್ನು ವ್ಯಕ್ತಪಡಿಸುತ್ತದೆ. ಮತ್ತೆ ಹೀಗೆ ಮುಂದುವರೆದಲ್ಲಿ ನಾವು ಒಂದಲ್ಲ ಒಂದಿನ ಆ ಕತ್ತಲೆಯ ಕೂಪಕ್ಕೆ ಬೀಳುವುದು ಕಚಿತವೆಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತಾರೆ. ಲೇಖಕರು ಹೇಳುವಂತೆ ಮಾದ್ಯಮಗಳು ಯಾವುದೇ ಇರಲಿ ಅದರ ಮೂಲಕ ಸಿಷ್ಟ ಆಚಾರವಿಚಾರಗಳು ಹೊರಬಂದರೆ ತಪ್ಪಿಲ್ಲ ಎಂಬ ಮಾತು ತುಂಬಾ ಸತ್ಯವಾದದ್ದು ಇದಕೆ ಸಾಕ್ಷಿಯಂಬಂತೆಯೇ ‘ಪೇಸ್ಬುಕ್ ಚರಿತೆ 1&2’ ಕವಿತೆಗಳು ಬಹುವಿಶೇಷತೆಯಿಂದ ಕೂಡಿದ ಸಾಕ್ಷಿಗಳಾಗಿ ನಿಲ್ಲುತ್ತವೆ.

11873451_952457641464604_8588628347365796834_n

‘ಕವನಕೊಂದು ವಸ್ತು’ ಕವಿತೆಯು ಕವಿಗಳಾದವರಿಗೆ ಕವಿಗಳಾಗಬಯಸುವವರಿಗೆ ಉತ್ತಮವಾದ ಒಂದು ಮಾದರಿಯಾಗಿ ನಿಲ್ಲುತ್ತದೆ. ಡಾಕ್ಟರ್ ಸರ್ ಅವರ ಕವಿತೆಗಳು ವಿಚಾರಕ್ಕಿಳಿಯುವಂತೆ ಮಾಡುವದರ ಜೊತೆಗೆ ಹೌದಲ್ವ ಹೀಗು ಇದೆ, ಹೀಗು ಇರಬೇಕಿತ್ತು ಎಂಬ ಅವರ ಪ್ರಶ್ನೆಗಳಿಗೆ ತಲೆಬಾಗಿ ಒಪ್ಪಿಕೊಳ್ಳುವಂತೆ ಮಾಡುತ್ತವೆ. ಎಲ್ಲ ಯೋಚನೆಗಳು ಎಲ್ಲರ ಮನಸ್ಸಿನಲ್ಲಿದ್ದರೂ ಅವುಗಳನ್ನು ತಮ್ಮ ಹಿಡಿತಕ್ಕೆ ತಂದು ಕವಿತೆಗಳಾಗಿಸಿ, ಹಾಡಾಗಿಸಿ, ಹೊರಹಾಕುವಂತೆ ಮಾಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಸ್ವಾತಂತ್ರ್ಯದ ಸುವರ್ಣಮುಹೊತ್ಸವಕ್ಕೆ, ತಂಬಾಕು ದಿನಕ್ಕೆ, ಹೊಸವರ್ಷಕ್ಕೆ, ನವಂಬರ್ ನಾಯಕನಿಗಾಗಿ, ಹೀಗೆ ಹಲವಾರು ವಿಶೇಷವಾದ ದಿನಗಳಿಗೆ ವಿಶೇಷವಾದ ಕವಿತೆಗಳು ಸಂಕಲನದ ತೂಕವನ್ನು ಹೆಚ್ಚಿಸಿವೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ  ಲೇಖಕರ ಕಾಳಜಿ ಅಪಾರವಾದದ್ದು ಜೊತೆಗೆ ತಾನು ‘ಇಷ್ಟು ಮಾಡಿದ್ದೇನೆ’ ಎಂದು ನಿರ್ಭಯವಾಗಿ ಹೇಳುವ ಮೂಲಕ ಸ್ವಾಭಿಮಾನವನ್ನು ಸ್ಥಾಪಿತಗೊಳಿಸಿದ್ದಾರೆ. ಮನುಷ್ಯರಾದ ನಾವೆಲ್ಲ ಮಾಡಲೇಬೇಕಾದ ಕಾರ್ಯಗಳ ಬಗ್ಗೆ ಕುಟುಕಿ ತಿಳಿಸುತ್ತಾರೆ. ಹೀಗೆ ಸುಂದರವಾಗಿ ಮತ್ತು ಸುಮಧುರವಾಗಿ ಮೂಡಿಬಂದ ಈ ಸಂಕಲನವನ್ನು ಜನಪರ ಕಾಳಜಿ ಇರುವವರು ಸಮಾಜದ ಸುಧಾರಣೆಗೆ ನಿಂತವರು ಮೇಲಾಗಿ ಮನುಷ್ಯರಾಗಿ ನಿರ್ವಹಿಸುವ ಜವಾಬ್ದಾರಿಯ ಬಗ್ಗೆ ತಿಳಿದುಕೊಳ್ಳುವ ಮನುಷ್ಯತ್ವವುಳ್ಳವರು ಒಮ್ಮೆ ಓದಲೇಬೇಕೆಂದು ನನ್ನ ಅಭಿಪ್ರಾಯ.

‍ಲೇಖಕರು G

September 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಡಾಶಿವಾನಂದ ಕುಬಸದ

    ಧನ್ಯವಾದಗಳು.”ಅವಧಿ” ಗೂ, ಸುರೇಶರಿಗೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: