ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಕನಸುಗಳನು ಬೊಗಸೆಯೊಳಗೆ ಹಿಡಿ ಹಿಡಿದು..' – ರೇಣುಕಾ

ಬೊಗಸೆ ತುಂಬ ಬೆಳಕು - ರೇಣುಕಾ ಎ ಕಠಾರಿ ಕನಸುಗಳನು ಬೊಗಸೆಯೊಳಗೆ ಹಿಡಿ ಹಿಡಿದು ನೆಲಕ್ಕೆ ಹಣೆ ಹಚ್ಚಿ ಬೇಡುತ್ತಿದ್ದೇನೆ   ಸಂಜೆ ತಂಬೂರಿಯ ನಾದವು ಹುರಿಗೊಂಡು ಹೆಜ್ಜೆ ಬಿಚ್ಚಿವೆ ಅರುಣನ ಮುಂದೆ ನಾಳೆಗಳ ಬೊಗಸೆ ಹೂಗೊಂಚಲಿಡಿದು ಕಾಯುತಿವೆ ನನ್ನವನಿಗಾಗಿ   ರೇಣುವಿನ ಕೂಗು ಸಾವಿರ ಸಾವಿರವಾಗುತಿದೆ ದೀಪದ ಬೆಳಕ ಮುಂದೆ...

read more
ಆನಂದ ಭೋವಿ ಬರೆದ ಸಣ್ಣಕಥೆ ’ಸುರುಳಿ’

ಆನಂದ ಭೋವಿ 'ನಕ್ಷತ್ರ' ಆತ ತನ್ನ ಶರಟಿನ ಗುಂಡಿಯನ್ನು ನೇರವಾಗಿ ಆಕೆಯ ಮುಖದ ಕಡೆ ಹೊರಳಿಸಿದ. 'ಹೊಳೆಯುತ್ತಿದೆ' ಆಕೆ ತನ್ನ ಕಣ್ಣ ಕಾಡಿಗೆಯನ್ನು ತಿಡಿಕೊಂಡು ಅವನನ್ನೆ ದಿಟ್ಟಿಸಿದಳು. 'ನಾನು ಕನಸಿನಲ್ಲೂ ಉಹಿಸಿರಲಿಲ್ಲ,ಆನಂದದಿಂದ ತುಡಿಯುತ್ತಿದ್ದೆನೆ.' 'ಕಣ್ಣು ಮುಚ್ಚದ ರಾತ್ರಿಯ ನಿಶಬ್ಧತೆ ಮತ್ತೆ ಚುಚ್ಚುತ್ತಿದೆ' 'ನಿನ್ನಲ್ಲಿ ಈ...

read more
ಬೇಲೂರು ರಘುನಂದನ್ ಕಾಲಂ : ಪುಟ್ಟಮಲ್ಲಿ ಅಂದರೆ ಅಮ್ಮನ ವಾತ್ಸಲ್ಯ, ಮಗಳ ಪ್ರೀತಿ

”ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೇ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೋ. ದೇವರು ಕೊಡುವ ವರಕ್ಕಿಂತ ಆ ಹತ್ತು ಜನರನ್ನು ಉದ್ಧಾರ ಮಾಡಿದ ಪುಣ್ಯ ದೊಡ್ಡದು. ಸಂತೋಷವಾಗಿದ್ದಾಗ ಯಾರಿಗೂ ವಾಗ್ದಾನ ಮಾಡಬಾರದು. ಕೋಪ ಬಂದಾಗ ಪ್ರತಿಕ್ರಿಯಿಸಬಾರದು. ದುಃಖದಲ್ಲಿದ್ದಾಗ ನಿರ್ಧಾರ ತೆಗೆದುಕೊಳ್ಳಬಾರದು....

read more
’ಮಾಗಿಯ ಚಳಿಯೆಂದರೆ….’ – ಜಯಶ್ರೀ ಕವಿತೆ

ಜಯಶ್ರೀ ಬಿ ಕದ್ರಿ ಮಾಗಿಯ ಚಳಿಯೆಂದರೆ ಬೆಚ್ಚನೆಯ ನೆನಪುಗಳು ಎದೆಯ ತಾಕುವ ಸಮಯ ಮುಗಿಲ ಮಲ್ಲಿಗೆ ಹೂವು ಹಸಿಯ ಮಣ್ಣಲ್ಲಿ ಟಿಸಿಲೊಡೆದು ತೊನೆವ ಸಮಯ     ಮಂದ ಮಾರುತಕು ಲಜ್ಜೆ ಕಂಪಿಸುವ ಮೌನ ಬಾನಿಗೂ ಭೂಮಿಗೂ ನಲ್ಮೆ   ಮಾಗಿಯ ಚಳಿಯೆಂದರೆ ಕೊರೆವ ಶೈತ್ಯದಲು ಹಿಮದ ಬೆಳ್ಳನೆ ಮಂಜು ಸುರಿವ ಕಾಲ   ಮಾಗಿಯ...

read more
ಭಾನುವಾರದ ಸಣ್ಣ ಕಥೆ

ಮನದ ಮರ ಸಿದ್ದು ಸತ್ಯಣ್ಣವರ ಸದಾ ಮಂಕು ಬಡಿದವನಂತಿರುತ್ತಿದ್ದ ತಿಮ್ಮಣ್ಣ ಈಚೆಗೆ ಕೆಲದಿನಗಳಿಂದ ತನ್ನ ಗುರುತು ತನಗೇ ಗೊತ್ತಿಲ್ಲದಂತಾಡುತ್ತಿದ್ದ. ದಾರಿ, ಮನೆ ಹೀಗೆ ಎಲ್ಲಾದರೂ ಇದ್ದಾಗ ಯಾರೋ ಯಾರನ್ನೋ ಕೂಗಿದರೆ ತಿಮ್ಮಣ್ಣ ಏನು ಎನ್ನುತ್ತಿದ್ದ, ಆತನ ಹುಬ್ಬು ಗಂಟಿಕ್ಕಿ ತಿರುಗಿ ಕೇಳಿದ್ದನ್ನು ಕಂಡು, ಕೂಗಿದವರು ನೀವಲ್ಲ...

read more
’ಪ್ರೇಮದಲ್ಲಿನ ಸ್ನೇಹ ಮತ್ತು ಸ್ನೇಹದಲ್ಲಿನ ಪ್ರೇಮ’ – ಹೇಮಲತಾ

ಹೇಮಲತಾ ಒಂದೇ ಬದಿಗೆ ಕೂತು ಅಭ್ಯಾಸವಿರದ ನಾನು ಆಯತಪ್ಪುವ ದಿಗಿಲಿಗೆ "ಭುಜದಮೇಲೆ ಕೈ ಇಟ್ಟುಕೊಳ್ಳಲೇನೋ?" ಸಂಕೋಚಿಸುತ್ತ ಕೇಳಿದೆ.ಎಂದಿನಂತೆ ಒಂದು ಕೈ ಗಾಡಿಯ ಬೆನ್ನುಮೂಳೆ ಹಿಡಿದಿತ್ತು .ಸರಕ್ ಎಂದು ಬೀಳುವ ಬ್ರೇಕ್ ಗಳಲ್ಲಿ ಹೊಡೆಯುವ ಡಿಕ್ಕಿ ತಪ್ಪಿಸಲು ಮೊದಲಿನಿಂದಲೂ ಮಾಡಿಕೊಂಡಿದ್ದ ರೂಢಿ.ಅಪ್ಪನು ಗಂಡಸೇ.ಯಾರಿಗೂ...

read more
’ಮತ್ತೆ ಬಟ್ಟೆ ಮೇಲೆ ಕುಂಕುಮದ ಕಲೆ…’ – ರಶ್ಮಿ ಕಾಸರಗೋಡು ಕವಿತೆ

ಬಟ್ಟೆ ಬಿಡಿಸಿದ ಕಲೆ - ರಶ್ಮಿ ಕಾಸರಗೋಡು ಕಲ್ಲಮೇಲೆ ಚೆನ್ನಾಗಿ ತಿಕ್ಕಿ ಆಮೇಲೆ ಎತ್ತಿ...ಶ್ಶೋ... ರಭಸದಿಂದ ಒಗೆಯುವಾಗ ಅದು ಬಟ್ಟೆಯಲ್ಲ! ನನ್ನೊಳಗಿನ ಸಿಟ್ಟು   ನೊರೆಯಂತಹ ಭಾವನೆಗಳು ಒಮ್ಮಿಂದೊಮ್ಮೆಲೆ ತೇಲಿ, ಹಾರಾಡಿ ಬೆಳಕ ಪ್ರತಿಫಲಿಸಿ ಗಾಳಿಗೆ ಗುದ್ದಿ ಒಡೆದು ಹೋಗುವಾಗ ಸದ್ದು ಕೇಳುವುದೇ ಇಲ್ಲ   ನೆತ್ತಿ ಮೇಲೆ...

read more
'ದಾಂಪತ್ಯದನುಸಂಧಾನ…’

- ಡಾ ಆನಂದ್ ಋಗ್ವೇದಿ ಹಳೆಯ ಕನ್ನಡ ಚಲನಚಿತ್ರದ ಮಧುರ ಹಾಡು 'ಮೆಲ್ಲುಸಿರೇ ಸವಿಗಾನ. . ಎದೆ ಝಲ್ಲನೇ ಹೂವಿನ ಬಾಣ' ಇದರ ಕೊನೆಯ ಚರಣ ಹೀಗಿದೆ; 'ಈ ದೇಹ ರಸಮಯ ಸದನ ಈ ನೇಹ ಮಧು ಸಂಗ್ರಹಣ ಚಿರನೂತನ, ರೋಮಾಂಚನ ದಾಂಪತ್ಯದನುಸಂಧಾನ' ನಿಜ, ದಾಂಪತ್ಯವೆಂಬುದು ಒಂದು ಅನುಸಂಧಾನ. ಅದೊಂದು ಕರಾರು ಮಾತ್ರವಲ್ಲ, ಒಪ್ಪಂದವಷ್ಟೇ ಅಲ್ಲ. ....

read more
ಗುರುರಾಜ ಕೊಡ್ಕಣಿ ಬರೆದ ಸಣ್ಣಕಥೆ ’ಅವಾಸ್ತವಿಕ’

- ಗುರುರಾಜ ಕೊಡ್ಕಣಿ ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡುಗಳ ನಡುವೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು ಕತ್ತಲು ಹೊದ್ದು ಮಲಗಿದ೦ತೆ...

read more
ಸಂಧ್ಯಾರಾಣಿ ಕಾಲಂ : ಮಹಾನಗರಗಳು ಮತ್ತು ಶಿಶಿರ ಋತುವೂ

ಬೆಳಗ್ಗೆ ಎಳ್ಳು ಬೆಲ್ಲ ತಿನ್ನುವುದಕ್ಕೂ ಮೊದಲು ಸಂಕ್ರಾಂತಿಗೊಂದು ಶುಭಾಶಯ ಬರೆದು, ಅದಕ್ಕೆ ಸ್ನೇಹಿತರ ಹೆಸರುಗಳನ್ನು ಸೇರಿಸುತ್ತಾ ಹೋದೆ, ಇತ್ತೀಚಿಗೆ ಪರಿಚಯ ಆದ ಅವರ ಹೆಸರು ಕಣ್ಣಿಗೆ ಬಿತ್ತು. ಅದನ್ನೂ ಸೇರಿಸಿದೆ. ಮತ್ತಷ್ಟು ಹೆಸರುಗಳನ್ನು ಪೋಣಿಸಿ, ಜೊತೆ ಮಾಡಿ ಶುಭಾಶಯ ಕಳಿಸಿದೆ. ಚಳಿಯ ನಡುವೆ ಮನೆಗೆ ಕಾಲಿಡಲು...

read more
’ಮುಳ್ಳು ಹೊಕ್ಕ ಪಾದಕ್ಕೆ ರಕ್ತ ಒರೆಸಲು ಬೇಲಿ ಎಲೆ…’ – ಉಮಾರಾವ್ ಕವಿತೆ

ಹಾದಿ ತಪ್ಪಿ - ಉಮಾ ರಾವ್ ಹಾದಿ ತಪ್ಪಿದಾಗ ಎಲ್ಲೆಲ್ಲೂ ಸಂಜೆ ಮಬ್ಬು ಕೈಯ್ಯಲ್ಲಿ ದೀವಿಗೆಯಿಲ್ಲ ಕತ್ತಲು ಕತ್ತಲು ಧುತ್ತನೆ ಎದುರಾಗುವ ಬಂಡೆ ಪಕ್ಕದಲ್ಲೇ ಮೈತಳೆದು ಹೆದರಿಸುವ ಬೃಹತ್ ವೃಕ್ಷ ಕತ್ತು ಹಿಸುಕಲು ಬಾಗುವ ದೀರ್ಘಬಾಹು ಬಿಳಲು ಎಲ್ಲೋ ಒಂದು ಜೀರುದುಂಬಿ ಒಂದು ವಿರಹಿ ಕೋಗಿಲೆ ಅರಸುತ್ತಾ ಹೋದರೆ ಸಿಕ್ಕಿದ್ದು ಹಾಳು ದೇಗುಲ...

read more
ರಾಜಶೇಖರ ಬಂಡೆ ಕವಿತೆ

- ರಾಜಶೇಖರ್ ಬಂಡೆ ನನ್ನ ಬದುಕಿನ ಬಣ್ಣಗಳು, ನಾದಗಳು, ವೈವಿಧ್ಯಮಯ ತಿರುವುಗಳು, ಸಾಂದ್ರೀಕೃತಗೊಂಡ ನೆನಪುಗಳು, ಲಯಬದ್ಧ ಸೋಲುಗಳು, ರಾತ್ರಿಗಳನ್ನ ಕಣ್ತುಂಬಿಕೊಂಡು ತುಳುಕುವ ಕಣ್ಣಾಲಿಗಳು, ಎದೆಗಿಳಿವ ಪದ್ಯಗಳೂ, ಗಜ಼ಲ್ಗಳೂ, ನನ್ನನ್ನು ಕುಡಿಯುವಂತೆ ಪ್ರೇರೇಪಿಸುತ್ತವೆ, ನಾನೇನು ಹುಟ್ಟಿನಿಂದಲೇ ಕುಡುಕನಲ್ಲ, ನೀವದನ್ನು ಒತ್ತಿ...

read more
ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಋಣಮುಕ್ತತೆಯನ್ನು ಹಂಬಲಿಸಿ ಬಂದವಳು

ಸುಮಾರು ಒಂದು ವರ್ಷದ ಹಿಂದೆ ಒಂದು ಅಮಾವಾಸ್ಯೆಯ ದಿನ. ಪೇಶಂಟ್ ಗಳನ್ನು ನೋಡುವುದು ಬೇಗ ಮುಗಿದಿತ್ತು. ಅಮಾವಾಸ್ಯೆ, ಹುಣ್ಣಿಮೆ, ‘ಕರಿ’ ಮತ್ತು ಹಬ್ಬಗಳಂದು ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಎಲ್ಲರೂ ಆರೋಗ್ಯದಿಂದಿರಲು ದಿನವೂ ಹಬ್ಬಗಳಿರುವುದು ಒಳ್ಳೆಯದೇನೋ ಎಂದು ಹಲವು ಬಾರಿ ಯೋಚಿಸಿದ್ದೇನೆ...!! ನಾನು ನನ್ನ...

read more
ಲಕ್ಷ್ಮಿಕಾಂತ್ ಇಟ್ನಾಳ್ ಅನುವಾದಿಸಿದ ಗುಲ್ಜಾರ್ ಕವಿತೆ

ವಿಳಾಸ (ಏಕ್ ಪತಾ) ಅನು: ಲಕ್ಷ್ಮೀಕಾಂತ ಇಟ್ನಾಳ ಮೂಲ- ಗುಲ್ಜಾರ್ ಸಾಹಬ್ ಇಲ್ಲಿಂದ ಒಂದಿಷ್ಟು ಮುಂದೆ ನಡದರೆ ಹರಿದ ಜಮಖಾನೆಯ ಮೇಲೆ ಪೂರಾ ಹಲ್ಲಿಯ ಹಾಗೆ ಸೊರಗಿದಂಥ ಮನುಷ್ಯನಂತಹ ಆಕೃತಿ ಸಿಗುವುದು ಚೆಹರೆ ಮಾತ್ರ ಪೂರ್ತಿನೋಡಲಿಕ್ಕಾಗುದಿಲ್ಲ ಬೋರಲು ಮಲಗಿ, ಭಿಕ್ಷಾ ಪಾತ್ರೆ ಇಟ್ಟುಕೊಂಡ ಭಿಕ್ಷುಕನೊಬ್ಬ ಸಿಗುತ್ತಾನೆ, ಆದರಂವ ಎಂದೂ...

read more
’ಪ್ರೂಫ್ ಏನದ ನಿನ್ ಕಡೆ ?’ – ಜಯಶ್ರೀ ದೇಶಪಾಂಡೆ

- ಜಯಶ್ರೀ ದೇಶಪಾಂಡೆ "ಪ್ರೂಫ್ ಅದ ಏನು? " ನನ್ನ ಈ ಪ್ರಶ್ನಿ ಕೇಳಿದ್ರು. ಹೌದು, ಪ್ರೂಫ಼್ ಏನಿತ್ತು ನನ್ಕಡೆ? ಏನೂ ಇದ್ದಿದ್ದಿಲ್ಲ ಮತ್ತ ಈ ಪ್ರೂಫ಼್ ಅ೦ಬ೦ಥಾ 'ಪುರಾವೆ ' ಕೇಳಿದವರು ಬ್ಯಾರೆ ಯಾರೂ ಅಲ್ಲ.. ಒಬ್ಬ ಪೋಲೀಸ್ ಅಧಿಕಾರೀನೇ!! ನಮ್ಮಪ್ಪ ಆಗಿದ್ರ ಏನಾತು? ..ಅವರಿಗೆ ಪ್ರೂಫ್ ಬೇಕಾಗಿತ್ತು..ಅದೇ ನನ್ನ ಹತೀಲೆ...

read more

Pin It on Pinterest

Share This