'ಮಲೆನಾಡಿನ ಮದುಮಗಳೇ, ನೀ ಮತ್ತೊಮ್ಮೆ ತಿರುಗಿ ಬಾರೆ…' – ಭವ್ಯ ಕೆ ಎಸ್

ಯಾರ ಹೊಗಳಲಿ ..

–  ಭವ್ಯ ಕೆ ಎಸ್

– ಫೋಟೋ : ರವಿ ಕುಲಕರ್ಣಿ

“ಶರಣೆಂದೇವೋ” ಎಂದು ಶುರುವಾದ ಬೆಳಕಿನಾಟ, ನಾಲ್ಕುದಿಕ್ಕುಗಳನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಬಿಂಬಿಸುವಂಥ ನಾಲ್ಕು ಬಯಲು.

ಪ್ರತಿ ಬಯಲಿನಲ್ಲೂ ಕುವೆಂಪುರವರ ‘ಕಲ್ಪನೆಗೆ ಹಿಡಿದ ಕನ್ನಡಿಯಂತಿದ್ದ ಪಾತ್ರಗಳು, ಯೋಚನೆಗೂ ಸಿಗದಷ್ಟು ಎತ್ತರದ ವಿಚಾರವೊಂದಿದ್ದರೆ ಅದು ಪುಟ್ಟಪ್ಪನವರ ಕಲ್ಪನಾ ಶಕ್ತಿ.
ಪ್ರತಿ ಪಾತ್ರಕ್ಕೊಂದು ತೂಕ, ಪಾತ್ರದಲ್ಲೊಂದು ಪಾಠ, ತರ್ಕಕ್ಕೆ ನಿಲುಕದ ಅವ್ಯಕ್ತ ಭಾವನೆ.
ಈ ಮಾತಿಗೆ ಸವಾಲೆಂಬಂತೆ ಕಂಡಿದ್ದು ಗುತ್ತಿ ನಾಯಿಯ ಪ್ರೀತಿ. ಮೌನದಲ್ಲೇ ಭಾವನೆಗಳ ವಿನಿಮಯ, ಪ್ರತಿ ಭಾವನೆಗು ಮೌನದಲ್ಲೇ ಸ್ಪಂದನೆ (“ಮೌನಸ್ಪಂದನ”).
ಈ ರೀತಿಯದ್ದೊಂದು ಪ್ರೀತಿಯ ಪರಿಯನ್ನು ಯೋಚಿಸುವುದೊಂದು ಸಾಧನೆಯಾದರೆ, ಅದನ್ನು ಪಾತ್ರದ ರೂಪದಲ್ಲಿ ಪ್ರೇಕ್ಷಕನಿಗೆ ಅರ್ಥೈಸುವುದು ಸಾಧನೆಗೆ ಸಲ್ಲುವ ಪದವಿಯಿದ್ದಂತೆ.
ಜೋಗಯ್ಯರ ಪಾತ್ರಗಳಿಂದಲೇ ಒಬ್ಬರಿಗೊಬ್ಬರು ಸವಾಲಿಗಿಳಿದಂತೆ ವೇದಿಕೆಗಿಳಿದ ಪಾತ್ರಧಾರಿಗಳು, ಮುಂದೆ ವ್ಯಾಗ್ರಿಗಳಂತೆ ಕಾಣ ಸಿಗುವಲ್ಲೂ ಸಮಾನ ತೂಗುವ ತಕ್ಕಡಿಗಳೇ ಚೀಂಕ್ರ ಹಾಗು ವೆಂಕಣ್ಣ.
ಆತ್ಮ ಒಳಹೊಕ್ಕಿದಂತೆ ನಟಿಸುವುದೆಂದರೆ, ಇದೇ ಇರಬಹುದು..!
ಮಲೆನಾಡಿನ ಮಗಳ ಮುಗ್ದತನ, ಮೀನಿನೆಜ್ಜೆಗಿಂತಲೂ ಸೂಕ್ಷ್ಮವಾಗಿ ಇಡುವ ಅವಳ ಹೆಜ್ಜೆ, ಸೌಂದರ್ಯಕ್ಕೊಂದು ಗರಿಯಿಟ್ಟಂತೆ ಪಾದಗಳಿಗೆ ಕಟ್ಟಿದ ಗೆಜ್ಜೆ.
ಈ ಸಾಲುಗಳಿಗೆ ಉಪಮೇಯಗಳಿದ್ದಂತೆ ನಾಗಕ್ಕ, ತಿಮ್ಮಿ, ಚಿನ್ನಮ್ಮ ಮತ್ತು ಪೀಂಚಲು.
ಮಲೆನಾಡಿನ ಗಂಧವನ್ನು ಪರಿಪರಿಯಾಗಿ ವರ್ಣಿಸುವ ಬಗೆಗಳಲ್ಲಿ ಇದೂ ಒಂದು. ಈ ಪಾತ್ರಗಳ ಆಳ್ವಿಕೆ ಮಾತುಗಳಲ್ಲಿ ಕಡಿಮೆ ಎಂದರೆ ತಪ್ಪಾಗದು.
ಡಿ.ವಿ.ಜಿಯವರ,
“ದರಿಯಿರದೆಗಿರಿಯಿಲ್ಲ, ನೆರಳಿರದೆಬೆಳಕಿಲ್ಲ ।
ಮರಣವಿಲ್ಲದೆ ಜನನಜೀವನಗಳಿಲ್ಲ॥”
ಎಂಬ ಮಾತಿಗೆ ಸರಿ ಹೊಂದುವಂತೆ ಕಂಡು ಬಂದ ಮೂರನೇ ವೇದಿಕೆ, ಮತ್ತದರ ಪಾತ್ರಧಾರಿಗಳು.
ಹುಟ್ಟು ಸಾವಿನ ಗುಟ್ಟು, ಇದರ ಜೊತೆ ಸಂಬಂಧಗಳ ಸೆಳೆತವನ್ನು ಬಯಲಿಗಿಟ್ಟು, ಮನವ ತಟ್ಟಿ ಕಣ್ಣು ಬೆಚ್ಚಗೆ ಮಾಡಿದ ಅಂತಕ್ಕ, ಕಾವೇರಿ, ಸುಬ್ಬಣ್ಣಹೆಗಡೆ, ಧರ್ಮುಪಾತ್ರಧಾರಿಗಳು.
ಯಾರೂ ಕುರೂಪಿಗಳಲ್ಲ ಎಂಬ ಮಾತನ್ನು ಸಾರಿ ಹೇಳುವಂತೆ ಕಾಣಿಸಿದ್ದು ತಿಮ್ಮಪ್ಪ ಹೆಗಡೆ (“ಮೋಹನಾಂಗ”). ತಮ್ಮದೇ ಶೈಲಿಯಲ್ಲಿ ನೋಡುವವರನ್ನು ಹಾಸ್ಯದಲ್ಲಿ ತೇಲಿಸಿದ ಮೋಹನಾಂಗ ಹಾಗೂ ಐತ.
ಇದಿಷ್ಟೂ ಕೆಲವು ಪಾತ್ರಗಳಾದರೆ…
ಪ್ರತಿ ಪಾತ್ರದ ನೋವು-ನಲಿವುಗಳನ್ನು ತನ್ನದೇ ರೀತಿಯಲ್ಲಿ ಮುದ ನೀಡಿದ ಗೀತೆಗಳು.
ತಾಯಿ ಸರಸ್ವತಿಗೂ, ಭೂತಾಯಿಗೂ ಗೀತೆಯ ಮೂಲಕ ನಮಿಸಿ ಹೊರಟ ಸಂಗೀತದ ದಿಬ್ಬಣ.
ಕಿನ್ನೂರಿಯ ಕಿರುದನಿಯಿಂದ ಮೂಡಿಬಂದ “ಮಲೆಗಳಲ್ಲಿ ಮದುಮಗಳ” ಮುಖ್ಯಗೀತೆ ಮನ ತಟ್ಟುವುದು ಖಂಡಿತ.

– ಫೋಟೋ : ರವಿ ಕುಲಕರ್ಣಿ

ಸಿಂಬಾವಿಯ ನಾಯಿಗುತ್ತಿ, ವೆಂಕಣ್ಣ, ತಿಮ್ಮಪ್ಪರವರ ಪರಿಚಯ ಗೀತೆಗಳು …
“ಫಲತುಂಬಿದಹೊಲ”, “ಬರುವೆನೆಂದನಲ್ಲ…” ಈಗೆ ಭಾವಕ್ಕೊರಗಿದ ಸಾಲುಗಳು.
ಕಾಲಕ್ಕೊಲಿಸಿ ಕಟ್ಟಿದ “ಬೀಸೊಕಲ್ಲಿನ (ಬ್ಯೆಸಿಕಲ್)” ಹಾಡು.
ಸಮಾನತೆಯ ಸಂಕೇತದಂತಿದ್ದ “ಇಲ್ಲಿ ಯಾರೂ ಮುಖ್ಯರಲ್ಲ”, “ದೇವರೆಂಬುದೊಂದುರುಳು” .
ಹುಟ್ಟು ಸಾವಿನ ಪರಿಯ ವಿವರಿಸುವ “ಕಾಲದ ಕಾಲುದಾರಿಯೇ”, “ಬದುಕಿರುವವರು ಸಾಯುವರು”.
ಹಾಗೆ ಕಾವಿಯನ್ನೂ ಬಿಡಲಿಲ್ಲ “ಲೋಕಾನೇ” ಎಂಬ ಗೀತೆ.
ಹೀಗೆ ಜೀವನದ ಬಹುಬಗೆಯ ಅಂಶಗಳನ್ನು ವಿಸ್ತರಿಸುವ ವಿಚಾರಧಾರೆ, ಹಾಡುಗಳಲ್ಲಿ ವ್ಯಕ್ತವಾಗಿದೆ.
ತೂಕಡಿಸುತ್ತಿದ್ದ ಜನಪದವನ್ನು ಬಡಿದೆಬ್ಬಿಸಿದ ಸಂಗೀತ ಮಾಂತ್ರಿಕ, ಹಂಸಲೇಖ.
ಇದಿಷ್ಟೂ ಹಾಡುಪಾಡುಗಳಾದರೆ…
ದೇವರ ಹರಕೆ ಪೂರೈಸಿದಷ್ಟೇ ನಿಷ್ಟೆಯಿಂದ, ೧೯೬೭ ರಲ್ಲಿ ಹುಟ್ಟಿದ ಮಲೆನಾಡಿನ ಮಧುಮಗಳ ಬಣ್ಣ ಎಲ್ಲೂ ಪೇಲವವಾಗದಂತೆ ಜವಾಬ್ದಾರಿ ತೋರಿರುವ ನಿರ್ದೇಶನ ಹಾಗೂ ಕಾದಂಬರಿಯ ರೂಪಾಂತರ.
ವೇದಿಕೆಯಿಂದ ವೇದಿಕೆಗೆ ಕುತೂಹಲವನೆಚ್ಚಿಸುವ ಪರಿ, ನಿರ್ದೇಶಕರ ಜಾಣ್ಮೆಯೇ ಸರಿ.
ಸೂರ್ಯನ ಬೆಳಕಿನಷ್ಟೇ ಸ್ಪಷ್ಟ ಸಂಭಾಷಣೆ, ಪಾತ್ರಗಳ ವೈಖರಿ, ಭಾವ, ವೇಷ-ಭೂಷಣಗಳನ್ನು ತೀರ್ಮಾನಿಸಿ ಅಸಂಖ್ಯಾತ ಪ್ರೇಕ್ಷಕರೆದಿರು ಪ್ರದರ್ಶಿಸುವುದು ಸಾಮಾನ್ಯವಲ್ಲ.
ಉಂಗುರದ ಸುತ್ತ ಬಿಚ್ಚಿ ಕೊಳ್ಳುವ ಕಥೆಯ ಹಂದರ, ಕಾದಂಬರಿಯ ಪ್ರತಿ ಮುಖ್ಯ ವಿಷಯಗಳನ್ನು ತಮ್ಮದೇ ರೀತಿರೂಪದಲ್ಲಿ ಸಂದರ್ಶಿಸಿದ್ದಾರೆ.
“ಕ್ರ್ಯೆಸ್ಥ ಧರ್ಮ ಮತಾಂತರ, ಸಾಬರ ಅಬ್ಬರ” … ಅಂದಿನ ಕಾಲದ ನೈಜಸ್ಥಿತಿಗಳಾಗಿದ್ದವು ಎಂದು ಸತ್ಯದರ್ಶನವಾಗುವ ರೀತಿ ವಿಚಾರ ಮಾಡುವಂತಿದ್ದವು.
“ದೇವರ್ಕಳುದಿಸಿ ಮರೆಯಹರು; ದೇವತ್ವಚಿರ ।
ಜಾವದಿನ ಬಂದು ಪೋಗುವುವು; ಕಾಲಚಿರ ॥
ಜೀವದವ್ಯಕ್ತಿಸಾಯ್ವುದು; ಜೀವಸತ್ತ್ವಚಿರ ।
ಭಾವಿಸಾಕೇವಲವ – ಮಂಕುತಿಮ್ಮ ॥”
ಜೀವಿಗಳಿಗೆ ಕೊನೆಯಿದ್ದರು, ಜೀವಸತ್ವಕ್ಕೆ ಕೊನೆಯಿಲ್ಲ ಎಂಬ ಮಾತನ್ನು ಸಾರ್ಥಕಪಡಿಸಿದ ಪುಟ್ಟಪ್ಪನವರ ಇರುವಿಕೆ ಅಮರ-ಚಿರ ಎಂದು ಸಾರಿ ಹೇಳುವ ನಿರ್ದೇಶನ.
‘ಮರೆತು ಮರೆಯಾಗಿದ್ದ ಸಾಹಿತ್ಯ ಪ್ರಪಂಚದ ದರ್ಶನ,
ನಿರ್ದೇಶಕರಿಗೊಂದು ನಮನ’
ನೀವೇಹೇಳಿ..!
ಯಾರಹೊಗಳಲಿ ..???
ದೇವರ ಹರಕೆ ಪೂರೈಸಿದ, ಪ್ರೇಕ್ಷಕರ ಸಮಯಕ್ಕೆ ಸಾರ್ಥಕತೆ ಕೊಟ್ಟ ನಿರ್ದೇಶಕರನ್ನೋ …?
ಬೆಳದಿಂಗಳಲಿ ಪದನಾದದಲೆಗಳ ಮೇಲೆ ನಮ್ಮನ್ನು ತೇಲಿಸಿದ ಗೀತರಚನೆಕಾರರನ್ನೋ …?
ನಿಜಪಾತ್ರಗಳೇ ತಾವೆಂಬಂತೆ ನೈಜತೆ ಮೆರೆದ ಕಲಾವಿದರನ್ನೋ…?
 
ಅಹುದು… ತೀರ್ಥವೂ ನೀರೇ.
ಮಲೆನಾಡಿನ ಮದುಮಗಳೇ… ನೀ ಮತ್ತೊಮ್ಮೆ ತಿರುಗಿ ಬಾರೆ…
 

‍ಲೇಖಕರು G

March 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. shivaprakash

    Amazing…Amazing Bhavya…..The way you captured moments is awesome……and Good writing…

    ಪ್ರತಿಕ್ರಿಯೆ
  2. Venkataswamy

    ಕನ್ನಡದ, ಕರ್ನಾಟಕದ ವೈಶಿಷ್ಟ್ಯಗಳು ಒಂದೆರಡಲ್ಲ. ಅಸಂಖ್ಯ. ಅವುಗಳಲ್ಲಿ ಒಂದು ಮಲೆನಾಡ ಕಾದಂಬರಿ ಕಾವ್ಯ‘ಮಲೆಗಳಲ್ಲಿ ಮದುಮಗಳು’. ಹಾಗೆ ಅದನ್ನು ನಾಲ್ಕು ವೇದಿಕೆಗಳಲ್ಲಿ ಅಹೋರಾತ್ರಿ ಪ್ರದರ್ಶನದ ರಂಗರೂಪಕ್ಕೆ ಇಳಿಸಿದ ಬಸವಲಿಂಗಯ್ಯನವರ ರಂಗಸಾಹಸ. ಭವ್ಯರವರ ಭಾವನಾತ್ಮಕ ಪ್ರಶಂಸೆ ಎಲ್ಲರ ಮನದ ಮಾತುಗಳ ಅಭಿವ್ಯಕ್ತಿಯಾಗಿದೆ.

    ಪ್ರತಿಕ್ರಿಯೆ
  3. ARUN

    “ಮಲೆಗಳಲ್ಲಿ ಮದುಮಗಳು”ಎಂಬ ಒಂದು ನಾಟಕ ರಾಷ್ಟ್ರಪ್ರಶಸ್ತಿ ಪಡೆದ ನೂರು ಕಲಾತ್ಮಕ ಚಲನಚಿತ್ರಗಳಿಗೆ ಸಮ ಎಂದರೆ ಅತಿಶಯೋಕ್ತಿ ಆಗಲಾರದು.
    ಕುವೆಂಪು ರವರ ಕಾದಂಬರಿ ಎಂದು ನಾಟಕ ನೋಡಲು ಬರುವ ಪ್ರೇಕ್ಷಕರನ್ನು ಅಲ್ಲಿನ ಪಾತ್ರಗಳು ಆವರಿಸಿಕೊಳ್ಳುತ್ತವೆ.
    ಗುತ್ತಿಯ ಪಾತ್ರ ಗಮ್ಮತ್ತಾಗಿದೆ,ದೇವಯ್ಯ,ನಾಗಕ್ಕ,ನಾಗತ್ತೆ,ಚಿಂಚಲು,ಐತಾ,ಸುಬ್ಬಣ್ಣ ಶೆಟ್ಟಿ,ಕುಂಟ ವೆಂಕಟಪ್ಪ, ತಿಮ್ಮಿ,ಹುಲಿಯಾ,ಕಾವೇರಿ ಹೇಳುತ್ತಾ ಹೋದರೆ… ಪಾತ್ರಗಳ ಸರಮಾಲೆಯನ್ನೇ ಪೋಣಿಸಿದ್ದಾರೆ ಪುಟ್ಟಪ್ಪನವರು. ನಾಲ್ಕು ರಂಗಗಳಲ್ಲಿ ನಡೆಯುವ ಈ ನಾಟಕ ನೋಡಲು ಮಧ್ಯರಾತ್ರಿಯಲ್ಲಿ ನಿದ್ರೆಯನ್ನು ಮರೆತು ಮಲ್ಲತ್ತಹಳ್ಳಿಯ ಕಲಾಗ್ರಾಮದ ಕಾಡಿನೊಳಗೆ ಅಲೆಯುವ ರಂಗಾಸಕ್ತರನ್ನು ನೋಡುವುದೇ ಖುಷಿ.ಬಸವಲಿಂಗಯ್ಯನವರ ಶ್ರಮ,ಹಂಸಲೇಖರ ಸಂಗೀತ,ಎಲ್ಲಕ್ಕಿಂತ ಮುಖ್ಯವಾಗಿ ಕಲಾವಿದರ Extraordinary performance ನೋಡಿ ನನಗನ್ನಿಸಿದ್ದು ಪೈಸಾ ವಸೂಲ್..

    ಪ್ರತಿಕ್ರಿಯೆ
  4. nsd bengaluru

    Bhavy avare,nimma barahavu hosa arivina vistasradantide.m3 balagada paravaagi dhanyavadagalu…

    ಪ್ರತಿಕ್ರಿಯೆ
  5. Nagendra Sastry

    Really good interpretation and language. Even without seeing the play, I could feel the expressions

    ಪ್ರತಿಕ್ರಿಯೆ
  6. R.S.Shashidhar

    bhavyaa..
    i have become your fan.. now you are sure that i have gone through your article:)
    bhaasheya mele utthama hiditha ide… ishtu chicka vayassinalli.. adooo IT yemba maayalokadalli iddu.. kannada maathaduvude ondu aparaadha yennuvantha janara madhyadalliddu.. DVG.. G.P.R.. mathu avaribbarnnu KUVEMPUT jothe serisi.. wow superrr bhavyaa..

    ಪ್ರತಿಕ್ರಿಯೆ
  7. Anonymous

    THE WAY U EXPRESED IS EXCELLENT….
    ಯಾರಹೊಗಳಲಿ ..???
    ನಿರ್ದೇಶಕರನ್ನೋ …?
    ಗೀತರಚನೆಕಾರರನ್ನೋ …?
    ಕಲಾವಿದರನ್ನೋ…?
    ATHAVA
    EDANU BAREDA NENANOO… (BHAVYA)

    ಪ್ರತಿಕ್ರಿಯೆ
  8. Bhavya K.S

    Nanna barahakke samaya kottu, odi-mechi-prothsahisida yellarigu dhanyavaadagalu.

    ಪ್ರತಿಕ್ರಿಯೆ
  9. Lalitha Shankar.

    Hi Bhavya,
    Very Good, narration on various charecters was impressive.
    I am a great fan of Kuvempu, your articles has taken me 20 years back when I was reading and enjoying KVPs Nenapina Doniyalli. DVG’s quotations inbetween yr narration gave a good feeling. I have partially ready Malegallalli madhumagalu, Now I am feeling to read after viewing your article.
    All the best.
    Regards
    Lalitha

    ಪ್ರತಿಕ್ರಿಯೆ
  10. Bhavya K.S

    Lalitha ma’am, thanks a lot
    Nanna baraha odi nimage kadambari oduva manasagide andre idakkinta dodda sarthakate berondilla.

    ಪ್ರತಿಕ್ರಿಯೆ
  11. sanketh

    ಯಾರಹೊಗಳಲಿ ..???
    ನಿರ್ದೇಶಕರನ್ನೋ …?
    ಗೀತರಚನೆಕಾರರನ್ನೋ …?
    ಕಲಾವಿದರನ್ನೋ…?
    Athava kalege bele kottu bareda bhavya ranno. nice writing

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: