ಸಣ್ಣಕಥೆ ’ಸಾವು’

ಈ ಸಾವು, ನೋವು ನ್ಯಾಯವೆ?

ಕೆ.ಎಂ.ವಿಶ್ವನಾಥ

ಇಂದು ಅಮ್ಮ ಬರುವಳೆ? ಇಷ್ಟು ಹೊತ್ತಾದರು ಏಕೆ? ಬರಲಿಲ್ಲಾ, ಅಮ್ಮನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಯಿತೆ? ಇಲ್ಲ ಅವಳು ಅಂತಹವಳಲ್ಲ, ನನ್ನ ಮರೆತು ಇರುವುದಿಲ್ಲ, ಇಷ್ಟು ವರ್ಷ ಅಪ್ಪ ಇಲ್ಲದಿದ್ದರೂ, ನನಗೆ ಯಾವ ಕಡಿಮೆಯೂ ಮಾಡದೇ ಇರುವಳು. ಇಂದು ಅವಳು ಬಂದೆ ಬರುವಳು. ಹೀಗೆ ಅನೇಕ ಆಲೋಚನೆಗಳನ್ನು ಮಾಡುತ್ತ ಸರಕಾರಿ ಹಾಸ್ಟೆಲ್ ಮುಂದಿನ ಗಾರ್ಡನ್ವೊಂದರಲ್ಲಿ ಕುಳಿತಿರುವಳು ಅರ್ಚನಾ. ಈ ಹುಡುಗಿ ಇದೀಗ ಹತ್ತನೆ ತರಗತಿ ಓದುತ್ತಿರುವಳು. ನೆಲದಮೇಲಿನ ಹುಲ್ಲನ್ನು ಮಾತನಾಡಿಸುತ್ತ, ನಿನ್ನ ಹಾಗೆ ಸದಾ ಹಸಿರಾಗಿರುವಂತೆ ನನ್ನ ಬದುಕನ್ನು ಕೂಡ ಮಾಡು, ನನ್ನ ತಾಯಿಗೆ ಉತ್ತಮವಾದ ಶಕ್ತಿಯನ್ನು ಕೊಡು, ಅದರಿಂದ ನನ್ನ ಅವ್ವ, ನಾನು ಸುಖದಿಂದ ಇರುವಂತೆ ಮಾಡುವಿಯಾ ಎಂದು ಅಮ್ಮನ ಬರಮೆಗಾಗಿ ಕಾಯುತ್ತಿದ್ದಾಳೆ ಈ ಅರ್ಚನಾ.
ಆ ಕಡೆಯಿಂದ ಕಾರ್ ಸರ್ಕ್ಕೆನೆ ಬಂದು ಹಾಸ್ಟಲ್ ಮುಂದೆ ನಿಂತಿತು. ಆ ಕಾರ್ನಿಂದ, ಅದ್ಭುತ ಸುಂದರಿಯೊಬ್ಬಳು ಇಳಿಯುವಳು. ಕೆಂಪು ಗುಲಾಬಿ ಸೀರೆ, ಕಪ್ಪು ಕುಪ್ಪಸ, ಕಪ್ಪು ಕನ್ನಡಕ, ಎತ್ತರವಾದ ಚೆಪ್ಪಲಿ, ಸೊಂಟದಿಂದ ಜಾರಿ ಬೀಳುವಂತೆ ಉಟ್ಟ ಸೀರೆ, ಕೈಯಲ್ಲಿ ಗೊಲ್ಡ್ ವಾಚು, ಪಸರ್ು, ಕಾರಿನಿಂದ ಜಾರಿ ಬಂದ ಇವರು ನಮ್ಮ ಹಾಸ್ಟಲ್ ಒಳಗೆ ನುಗ್ಗಿದ್ದು ನನಗೆ ಆಶ್ಚರ್ಯವಾಯಿತು. ಇಂತಹ ಹೆಣ್ಣುಮಗಳು ಯಾರು? ನಮ್ಮ ಹಾಸ್ಟೆಲ್ಗೆ ಚೆಕ್ ಮಾಡುವವರು ಏನಾದರು ಬಂದಿರಬಹುದೇ ಎಂದೆನಿಸಿತು. ಹೀಗೆ ಯೋಚಿಸಲು ಆ ಕಾರಿನತ್ತ ನನ್ನ ಗೆಳತಿಯರ ತಂಡವೇ ಓಡಿತು. ಅವರ ಹಿಂದೆ ಹೋದ ನನಗೆ ಅರ್ಧ ದಾರಿಯಲ್ಲಿ ಸಿಕ್ಕ ನನ್ನ ಗೆಳತಿಯರು ಹೇಳಿದರು ಲೇ.. ಅರ್ಚನಾ ಅವರು ನಿಮ್ಮ ಅಮ್ಮ ಕಣೆ ಏನ್ ಸಖತ್ ಕಾಣತ್ತಿದ್ದಾರೆ ಗೊತ್ತಾ? ಸೂಪರ್ ಅವರು ಎಷ್ಟು ಬದಲಾದರು ನೀನು ಮಾತ್ರ ಇನ್ನು ಹಳೆ ಗುಜರಿ ಐಟಂ ತರಹ ಉಳಿದೆಲ್ಲೆ ನೋಡು ಹೋಗೆ ಎಂದು ನನ್ನ ಗೆಳೆತಿಯರು ಹೇಳಿದರು.
ಆ ಎತ್ತರದ ಸುಂದರ ಹೆಣ್ಣು ನನ್ನ ಹತ್ತಿರ ಬಂದಾಗ ತಿಳಿಯಿತು. ಅವಳು ನನ್ನ ಹಡೆದು ಬೆಳೆಸಿದ ನನ್ನ ಸತ್ತ ತಂದೆಯ ಏಕಮಾತ್ರ ಹೆಂಡತಿ ಸರಸಮ್ಮ. ಸಮೀಪ ಬಂದದ್ದೆ ತಡ ಲೇ.. ಅಚ್ಚು ಹೇಗಿದ್ದೀಯಮ್ಮ ಎಂದಳು. ಮಾತಿನ ಧಾಟಿಯು ಬದಲಾಗಿತ್ತು. ಅಮ್ಮ ಏನಮ್ಮ ಇದೆಲ್ಲಾ ಏನಾಯಿತು ಇಷ್ಟು ಶ್ರೀಮಂತ ಹೇಗಾದೆ? ಎನ್ನುತ್ತ ನಾನು ಕೇಳಿದೆ ಅದಕ್ಕೆ ಅಮ್ಮ ಹೇಳಿದಳು ಅದೆಲ್ಲಾ ಈಗ ಬೇಡ ನಡೆ ನಿನ್ನ ಲಗೇಜ್ ಪ್ಯಾಕ್ ಮಾಡಿಕೊ ನಾವು ಇನ್ನು ಮುಂದೆ ಒಂದೆ ಕಡೆಗೆ ಇರೋಣಾ ಈ ಹಾಸ್ಟಲ್ ವ್ಯವಸ್ಥೆ ಸಾಕು ನೀನು ದೊಡ್ಡವಳಾಗಿರುವೆ. ಎಂದಳು. ಅದು ಹೇಗ ಸಾಧ್ಯ ಅಮ್ಮ ನಾವು ಬಡವರು ನಮಗಾಗಿಯೇ ಈ ಹಾಸ್ಟ್ಲ್ಯಿದೆ ಇದನ್ನು ಸರಿಯಾಗಿ ಬಳಸಬೇಕು ಎಂದು ನೀನುತಾನೆ ಹೇಳಿದ್ದು. ಅದಕ್ಕೆ ಅವಳು ಅದೆಲ್ಲಾ ಹಳೆಯ ಮಾತು, ಈಗ ನಾನು ಹೇಳಿದಷ್ಟು ಕೇಳು ಎಂದು ಮರು ಮಾತನಾಡದೆ ವಾರ್ಡನ್ ಆಂಟಿ ಹತ್ತಿರ ಹೋಗಿ ಅದೇನೊ ಮಾತನಾಡಿ ನನ್ನ ಲಗೇಜ್ ತೆಗೆದುಕೊಂಡು ನನಗೆ ಕಾರ್ಲ್ಲಿ ಕೂಡಿಸಿಕೊಂಡು ಹೊರಟೆಬಿಟ್ಟಳು. ಅಮ್ಮ ಎಲ್ಲಿಗೆ? ಈ ಕಾರ್ ಯಾರದು? ನಿನ್ನ ಮೈಮೇಲೆ ಅದೆಷ್ಟು ಶ್ರೀಮಂತ ಬಟ್ಟೆಗಳು ಹೇಗೆ ಬಂದವು? ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಗಲಿಲ್ಲಾ ಹಾಗೆ ಆರಾಮವಾಗಿ ಕಾರ್ಲ್ಲಿ ನಿದ್ದೆ ಮಾಡತೊಡಗಿದೆ. ನನಗೆ ಅಮ್ಮನದ್ದೆ ಚಿಂತೆಯಾಗಿದ್ದರಿಂದ ಅವಳದೆ ಹಳೆಯ ಕನಸು ಕಂಡೆ.
ನೋಡು ಅಚ್ಚು ನಿಮ್ಮಪ್ಪ ನನಗೆ ಬಿಟ್ಟು ಹೋದಾಗ, ನೀನು ಇನ್ನು ಹಸುಗೂಸು ಅವಾಗ ನನಗೆ ಯಾರ ಆಸರೆಯೂ ಇರಲಿಲ್ಲಾ, ನಿಮ್ಮ ಚಿಕ್ಕಪ್ಪ ದೊಡ್ಡಪ್ಪ ಎಲ್ಲರೂ ನನಗೆ ದೂರಾದರು, ನಿನ್ನ ತಂದೆಯ ಕೊಂದ ಪಾಪಿಯಂದು ಹೊರಹಾಕಿದರು ಆದರೆ ನೈಜವಾಗಿ ಯಾವ ತಪ್ಪು ಮಾಡದ ನನಗೆ ಹಲವು ರೀತಿಯಲ್ಲಿ ಕಿರುಕುಳ ಕೊಟ್ಟರು. ನಿಮ್ಮ ತಂದೆ ಅವರ ಕೆಟ್ಟ ಚಟಕ್ಕೆ ಬಲಿಯಾಗಿ ಮೋಸದಿಂದ ಸತ್ತರು ಆದರೆ ನಿಮ್ಮ ಮನೆಯವರೆಲ್ಲರೂ ನಾನೆ ಅಪರಾಧಿ ಎನ್ನುವಂತೆ ಬಿಂಬಿಸಿದರು. ಈ ವೇದನೆ ತಾಳದೆ ನನಗೆ ತುಂಬಾ ಸಂಕಷ್ಟ ಎದರಾಯಿತು. ನಾನು ಯಾವುದಕ್ಕೂ ಹೆದರದೆ ಮುಂದುವರೆದು ನಿನಗೆ ಬಾಲ್ಯದಲ್ಲಿ ಸಿಗಬೇಕಾದ ಎಲ್ಲಾ ಹಕ್ಕುಗಳು ಕೊಟ್ಟಿರುವೆ. ನಾನು ನನಗಿಂತ ನಿನಗೆ ಚೆನ್ನಾಗಿ ಬೆಳೆಸಿದ್ದೀನಿ ಎಂದು ಭಾವಿಸಿರುವೆ. ನೀನು ದೊಡ್ಡ ವ್ಯಕ್ತಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿರುವೆ, ಅದರಂತೆ ನೀನು ಕೂಡಾ ಚೆನ್ನಾಗಿ ಓದಬೇಕು ಒಳ್ಳೆಯ ಹೆಸರು ತರಬೇಕು. ಆಯಿತಾ ಅಂತಾ ಕಣ್ಣೀರು ಹಾಕಿದಳು. ಅಮ್ಮ ಸರಿ ನೀನು ಹೇಳಿದಂತೆ ಆಗಲಿ ಅಂದಾಗ ತಬ್ಬಿಕೊಂಡು ಮುತ್ತಿಟ್ಟು ನನ್ನ ಎದೆಗೆ ತಣ್ಣನೇಯ ನೀರು ಸವರಿದಂತಾಯಿತು. ಇಷ್ಟರಲ್ಲಿ ಕಣ್ಣು ಬಿಟ್ಟಾಗ ಮತ್ತೊಂದು ವಿಚಿತ್ರ ಎದುರಾಯಿತು.

ಆಗ ನಮ್ಮ ಕಣ್ಣ ಮುಂದೆ ದೊಡ್ಡದೊಂದು ಬಂಗಲೆ, ಅದರ ಮುಂದೆ ಕಾರು, ಅಲ್ಲೆ ಓಡಾಡುವ ಹತ್ತಾರು ಆಳುಗಳು, ಅಮ್ಮ ಕಾರಿನಿಂದ ಇಳಿದ ತಕ್ಷಣ ಆಳುಗಳು ಬಂದು ಲಗೇಜ್ ತೆಗೆದುಕೊಂಡರು ಇದೆಲ್ಲ ನೋಡಿದ ನಂತರ ನಾನು ಎಲ್ಲಿಗೆ ಬಂದಿರುವೆ ಎಂಬುವುದು ತಿಳಿಲೇಯಿಲ್ಲ, ನಮ್ಮ ಹಳೆ ಹರೆದ ಚೆಪ್ಪರದೇ ನೆನಪು, ಅಮ್ಮ ಸಧ್ಯಕ್ಕೆ ಯಾವ ಉತ್ತರ ಕೊಡುವ ಮೂಡಲ್ಲಿ ಇರಲಿಲ್ಲಾ ಅದಕ್ಕೆ ನಾನು ಸುಮ್ಮನಾದೆ. ಅಂದಿನ ರಾತ್ರಿ ಊಟಕ್ಕೆ ನಮಗಾಗಿ ಮೃಷ್ಠಾನ್ನವೆ ಕಾಯಿದಿತ್ತು. ಹಾಗೆ ಊಟವ ಮಾಡಿ ಮಲಗಲು ಕೋಣೆಗೆ ಹೋದಾಗ, ಅಮ್ಮ ತುಂಬಾ ಸುಂದರವಾಗಿ ತಯಾರಾಗಿ ಈ ರಾತ್ರಿ ಎಲ್ಲಿಗೋ ತುಂಬಾ ಕೆಲಸಾಯಿದೆ ಹೋಗಬೇಕು ಎಂದು ತಯಾರಾಗುತ್ತಿದ್ದಳು. ಅಮ್ಮ ರಾತ್ರಿ ಆಗಿದೆ ಅದೆಂತ ಕೆಲಸ ಬೆಳೆಗ್ಗೆ ಹೋಗೋಣಾ ನಾನು ಬರತೀನಿ ಎಂದೆ ಆದರೆ ಅವಳು ಅದೆಲ್ಲಾ ಬೇಡ ಊಟ ಮಾಡಿದ್ದೀಯಾ ಈಗ ಆರಾಮವಾಗಿ ಮಲಗಿ ರೆಸ್ಟ್ ಮಾಡು ಎಂದಳು. ನಾನು ಹೆಚ್ಚಿಗೆ ಕೇಳದೆ ಇರಲಿ ಎಂದು ಸುಮ್ಮನಾದೆ. ಅಮ್ಮ ಇಡಿ ರಾತ್ರಿ ಬರಲೇಯಿಲ್ಲ ಆದರೆ ನನಗೆ ನಿದ್ದೆ ಬಂದಿತು ಮಲಗಿದೆ.
ಅಮ್ಮ ದಿನಾಲು ಇಡಿ ಹಗಲು ಮನೆಯಲ್ಲೇ ಇರುವಳು, ರಾತ್ರಿ ಮಾತ್ರ ಕೆಲಸ ಅಂತ ಹೋಗುವಳು ಅವಳ ಈ ಕೆಲಸ ಯಾವುದು? ಎಂದು ನಾನು ಕೇಳಿದಾಗಲೆಲ್ಲ ಏನೊ ಒಂದು ಕಾರಣ ಹೇಳಿ ಹೋಗುವಳು. ನನಗೂ ಅವಳ ಕಾರಣಗಳು ಕೇಳಿ ಕೇಳಿ ಸಾಕಾಗಿತ್ತು ಏನು ಹೇಳುವುದು ತಿಳಿಯುತ್ತಿರಲಿಲ್ಲಾ ಹೀಗೆ ಸುಮಾರು ದಿನಗಳು ಕಳೆದವು ದಿನಗಳು ಹೋಗಿ ತಿಂಗಳಾದವು ನನಗೆ ಅವಳ ಕೆಲಸ ನೋಡಬೇಕು ಎನ್ನುವ ಹಂಬಲ ಹೆಚ್ಚಾಯಿತು. ಅಮ್ಮ ಎಲ್ಲಿಗೆ ಹೋಗುವಳು ಏನು ಮಾಡುವಳು ಎನ್ನುವ ಕೂತುಹಲ ನನ್ನಲ್ಲಿ ಹೆಚ್ಚಾಗತೊಡಗಿತು.
ಅಂದು ಅಮವಾಸ್ಯೆಯ ರಾತ್ರಿ ಕತ್ತಲಿಲ್ಲಿ ಚೆಂದಿರನ ಹುಡುಕುವ ಹಠ ಮಾಡಿದೆ. ಕತ್ತಲನ್ನೇ ಬಳಿಸಿಕೊಂಡು ಬೆಳದಿಂಗಳ ಬಾಲೆಯೆಂಬ ಸಿನಿಮಾ ನೋಡಿ ನಿದ್ದೆಯತ್ತ ನವಿರಾಗಿ ಜಾರಬೇಕು ಎಂದು ಯೋಚಿಸುವಾಗ ಅಮ್ಮ ಎಂದಿನಂತೆ ತಯಾರಾಗತೊಡಗಿದಳು. ಅದ್ಯಾಕೊ ನನ್ನೊಳಗಿನ ಸಂಶಯ ಹೆಚ್ಚಾಗಿ, ಅಮ್ಮಳನ್ನು ಹಿಂಬಾಲಿಸಿದೆ. ಮನೆಯ ಆಳುಗಳೆಲ್ಲ ಮಲಗಿದ್ದರಿಂದ ನನಗೆ ಅನುಕೂಲವಾಯಿತು. ಅಮ್ಮ ಅದೇ ರಾತ್ರಿ ತಯಾರಾಗುತ್ತಿರುವ ದೃಶ್ಯ ಕಂಡಿತು ಹೊಸ ಸೀರೆ, ಹೂವು ಮುಡಿದುಕೊಂಡಳು, ಮೈಯೆಲ್ಲಾ ಸೆಂಟ್ ಹಾಕಿಕೊಂಡಳು, ಹಾಗೆ ತನ್ನ ಹೊಕ್ಕಳು ಕಾಣುವಂತೆ ಸೊಂಟದ ಕೆಳಗೆ ಸೀರೆ ಸರಿಸಿದಳು, ಆಗ ನಿಜವಾಗಿ ನನ್ನ ಅಮ್ಮ ಇನ್ನು ಎಷ್ಟು ಯಂಗ್ ಇದ್ದಾಳೆ ಎನ್ನುವುದು ನನಗೆ ಅರ್ಥವಾಗಿದ್ದು ಆದರೆ ಇಷ್ಟೆಲ್ಲ ತಯಾರಾಗಿ ಅಮ್ಮ ಹೋಗಿ ಮಾಡುವ ಕೆಲಸ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಈ ಅಮವಾಸ್ಯೆಯ ಕರಾಳರಾತ್ರಿಯಲ್ಲಿ ಮಾತ್ರ.
ಕತ್ತಲು ಕವಿದಿದೆ, ಅವಳು ಕಾರಿನಲ್ಲಿ ಹೋಗುವಳು ಎಂದು ತಿಳಿದಿದ್ದೆ ಆದರೆ ನಡೆದುಕೊಂಡೆ ಹೊರಟಳು, ಅದು ನನಗೆ ಇನ್ನಷ್ಟು ಅನುಕೂಲವಾಯಿತು. ಹಾಗೆ ಭಯವಾದರು ನೋಡಬೇಕು ಎನ್ನುವ ಹಂಬಲದಲ್ಲಿ ಅವಳನ್ನು ಹಿಂಬಾಲಿಸಿದೆ ಅಂದು ತುಂಬಾ ಕತ್ತಲಾದ್ದರಿಂದ ಅವಳು ನನಗೆ ಗಮನಿಸಿಲಿಲ್ಲ ಅವಳು ಸುಮಾರು ದೂರಾ ನಡೆದು ಹೋದಾಗ ದೂರದಲ್ಲಿ ಒಂದು ದೊಡ್ಡ ಮನೆಯಿತ್ತು ಆ ಮನೆಯನ್ನು ಹೊಕ್ಕಳು, ಅಲ್ಲಿ ಯಾರೊ ಗಂಡಸು ಹೊರಬಂದು ಅವಳನ್ನು ಸೊಂಟದಲ್ಲಿ ಬಳಸಿ ಮನೆಯ ಒಳಗೆ ಕರೆದುಕೊಂಡು ಹೋದಂತೆ ಭಾಸವಾಯಿಸಿತು. ಇನ್ನು ಕುತುಹಲ ಹೆಚ್ಚಾಗಿ ಮುಂದುವರೆದು ಆ ಮನೆಯ ಹತ್ತಿರ ಹೋದೆ. ಇನ್ನು ಯಾರು ಆ ಮನೆಯಲ್ಲಿ ಕಾಣಲೇಯಿಲ್ಲ ಅಮ್ಮ ಯಾರು ಇಲ್ಲದ ಮನೆಯಲ್ಲಿ ಏನು ಕೆಲಸ ಅಂತ ನನಗೆ ಇನ್ನು ಅರ್ಥವಾಗಲಿಲ್ಲ ಇನ್ನು ಹತ್ತಿರ ಹೋಗಲೇಬೇಕು ಎನ್ನುವ ಬಯಕೆ ಹೆಚ್ಚಾಯಿತು. ಹಾಗೆ ಹಿಂದಿನ ಮನೆಯ ಕಿಟಕಿ ಹತ್ತಿದೆ.
ಅಮ್ಮ ಹಾಗೂ ಒಬ್ಬ ಗಂಡಸು ತಬ್ಬಿಕೊಂಡ ದೃಶ್ಯ ಕಂಡಿತು. ಇದು ಮೊದಲು ಏನು ಎಂದು ಅರ್ಥವಾಗದ ನನಗೆ ಮುಂದಿನ ಹಲವು ದೃಶ್ಯ ನೋಡಿದ ನಂತರ ನನ್ನ ಮೇಲೆ ನನಗೆ ಅಸಯ್ಯವೆನಿಸಿತು. ಕೊನೆಯಲ್ಲಿ ಅಮ್ಮ ಆ ಗಂಡಸಿನಿಂದ ಗರಿ ಗರಿ ನೋಟು ಎಣಿಸುವ ದೃಶ್ಯ ನೋಡಿದ ನಂತರ ತಿಳಿಯಿತು ಅಮ್ಮ ಇಷ್ಟು ಬೇಗಾ ಹೇಗೆ ಇಷ್ಟು ಶ್ರೀಮಂತಳಾದಳು ಎಂದು ಅಲ್ಲಿಂದ ನೇರವಾಗಿ ಮನೆಗೆ ಹೋಗಿ ಇಡಿ ರಾತ್ರಿ ತುಂಬ ವಿಚಾರಗಳು ನನ್ನ ತಲೆಯಲ್ಲಿ ಬಂದು ಹೋದವು. ಅಮ್ಮ ಮಾಡುತ್ತಿರುವ ಈ ಕೆಲಸ ಸರಿಯೆ? ಅಮ್ಮ ನನಗಾಗಿ ನನ್ನ ಓದಿಗಾಗಿಯೇ ಮಾಡುತ್ತಿರುವಳೆ? ಹೀಗೆ ಹತ್ತಾರು ಪ್ರಶ್ನೆಗಳು ಬಂದು ಹೋದವು.
ಹೀಗೆ ಹಲವು ದಿನಗಳು ಕಳೆದವು. ಸರಸಮ್ಮ ದಿನನಿತ್ಯದಂತೆ ಬೆಳೆಗ್ಗೆ ತನ್ನ ರಾತ್ರಿ ಕಾರ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಬಂದಾಗ ಅರ್ಚನಾ ಇನ್ನು ಹಾಸಿಗೆಯಿಂದ ಎಚ್ಚರವಾಗಿರಲಿಲ್ಲ ಎಂದು ತಿಳಿದು ನೇರವಾಗಿ ಜಳಕ ಮಾಡಿ ಅವಳ ರೂಂಗೆ ಹೋದಳು. ಅವಳಿನ್ನು ಘಾಢ ನಿದ್ರೆಯಲ್ಲಿ ಮಲಗಿದಂತೆ ಭಾಸವಾಯಿತು. ಅವಳನ್ನು ಇನ್ನು ಸ್ವಲ್ಪ ಎಚ್ಚರಿಸುವುದು ಬೇಡ ಅನಿಸಿತು ನಾನು ಕೂಡ ಸ್ವಲ್ಪ ರೆಸ್ಟ್ ಮಾಡಿದೆ. ಆದರೂ ನನ್ನ ಮಗಳು ದಿನಾಲು ಎದುರಿಗೆ ಓಡಾಡುತ್ತಾ ಇದ್ಳು ಇಂದೇಕೆ? ಇಷ್ಟು ಮಲಗಿರುವಳು ಎಂದು ಸಂಶಯ ಪ್ರಾರಂಭವಾಯಿತು. ಅವಳನ್ನು ಎಬ್ಬಿಸಲು ಹೋದೆ ಅವಳು ಈ ಮೊದಲಿನ ಸ್ಥಿತಿಯಲ್ಲೆ ಮಲಗಿದ್ದಳು. ಅಚ್ಚು ಅಚ್ಚು ಎಂದು ಅಲುಗಾಡಿಸಿದೆ. ಮೈ ತಣ್ಣಗಾಗಿತ್ತು. ನನ್ನ ಎದೆ ಒಂದುಕ್ಷಣ ಮೌನ ತಾಳಿತು. ಮಗಳೆ ಮಗಳೆ ಅಚ್ಚು ಅಚ್ಚು ಎಂದು ಕೂಗಿದೆ ಆದರೆ ಅವಳು ಮಾತು ಆಡಲಿಲ್ಲ ಏಕೆಂದರೆ ಅವಳು ಈಹ ಲೋಕದಲ್ಲಿ ಇರಲಿಲ್ಲಾ. ನನ್ನ ಮಗಳು ನನ್ನ ಬದುಕಿನಿಂದ ದೂರ ಹೋಗಿದ್ದನ್ನು ಅರಿತ ನಾನು ನನಗಾಗಿ ಯಾರು ಎಂದು ದು:ಖ ತಾಳದೆ ಅಯ್ಯೋ ನಾನು ಏನು ಮಾಡಲಿ, ನನ್ನ ಮಗಳಿಗೆ ಏನಾಯಿತು ಎಂದು ರೋದಿಸತೊಡಗಿದೆ. ಇಂದು ಭಾನುವಾರ ಆದ್ದರಿಂದ ಮನೆಯಲ್ಲಿ ಆಳುಗಳು ಯಾರು ಇರಲಿಲ್ಲಾ ನಾನು ಹಾಗೆ ಒಂದು ಮಗ್ಗಲು ತಿರುಗಿದಾಗ ಚಿಕ್ಕದೊಂದು ಹಾಳೆ ಹಾರಾಡುತಿತ್ತು. ಅದನ್ನು ಗಮನಿಸಿದಾಗ…..
ಪ್ರೀತಿಯ ಅಮ್ಮ
ದಯವಿಟ್ಟು ನನ್ನ ಕ್ಷಮಿಸು, ನಿನ್ನ ಬಾಳಿನಲ್ಲಿ ಅದೆಷ್ಟು ಕಷ್ಟಗಳು ಬಂದವು, ನೀನು ನನಗಾಗಿಯೇ ಸಹಿಸುತ್ತಿರುವೆ. ನಾನು ನಿನಗೆ ನಿನ್ನ ಜೀವನಕ್ಕೆ ಭಾರವಾಗಿಯೇ ಇರುವೆ ಅದನ್ನು ನಾನು ಗಮನಿಸಿದೆ. ನೀನು ನನಗಾಗಿಯೇತಾನೆ ನಿನ್ನ ಈ ಕಷ್ಟ ನನಗೆ ನೋಡಲು ಆಗುವುದಿಲ್ಲ ಅಮ್ಮ ನೀನು ಮಾಡುತ್ತಿರುವ ದುಡಿಮೆ ನನಗಾಗಿಯೆತಾನೆ? ನಿನ್ನ ಬದುಕಿನಲ್ಲಿ ನಾನು ಇಲ್ಲದಿದ್ದರೆ ನಿನಗೆ ಯಾವ ಕೆಲಸವೂ ಮಾಡುವ ಅನಿವಾರ್ಯ ಅವಶ್ಯಕತೆಯಿರುವುದಿಲ್ಲ ಅಲ್ಲವಾ? ಅಮ್ಮ ಅದಕ್ಕೆ ನಾನು ಈ ನಿಧರ್ಾರ ಮಾಡಿದೆ. ನೀನು ನನಗಾಗಿ ನನ್ನ ಭವಿಷ್ಯಕ್ಕಾಗಿ ಹಿಡಿದ ಈ ದಾರಿ ಅದೆಕೊ ನನಗೆ ಸರಿ ಅನಿಸಲಿಲ್ಲಾ, ನಾವು ಉಪವಾಸ ಇದ್ದರು ಒಳ್ಳೆಯದು ಅನಿಸಿತು ಆದರೆ ನಿನಗೆ ಬುದ್ದಿ ಹೇಳುವಷ್ಟು ದೊಡ್ಡವಳು ನಾನಲ್ಲ ಅದಕ್ಕೆ ನೀನು ನನಗಾಗಿ ಇಷ್ಟು ಮಾಡುತ್ತಿರುವಾಗ ನಾನು ನಿನಗಾಗಿ ಇಷ್ಟು ಮಾಡಲು ಮಾತ್ರ ಸಾಧ್ಯ ಎನಿಸಿತು. ಇನ್ನು ಮುಂದೆ ನೀನು ಆ ರಾತ್ರಿ ಕೆಲಸ ಮಾಡಬೇಡ ಎಲ್ಲಿಯಾದರು ಕೂಲಿ ಕೆಲಸ ಮಾಡಿ ಬದುಕು, ನನ್ನ ಯಾವುದೇ ಜಂಜಾಟ ನಿನಗಿಲ್ಲ ಕೂಲಿಯಿಂದ ನಿನ್ನ ಹೊಟ್ಟೆ ತುಂಬುತ್ತದೆ. ನನ್ನ ಬೆಳೆಸುವ ಹಾಗೂ ಭವಿಷ್ಯದ ಚಿಂತೆಯಿಂದ ನೀನು ಹೊಟ್ಟೆ ತುಂಬಿಕೊಂಡು ಇರುವುದು ನನಗೆ ಇಷ್ಟವಾಗಲಿಲ್ಲ ಅಮ್ಮ ಅದಕ್ಕಾಗಿಯೇ ಈ ನಿಧರ್ಾರ ಮಾಡಿರುವೆ ದಯವಿಟ್ಟು ಇನ್ನಾದರು ಆ ಕೆಲಸ ಬಿಟ್ಟು ಮತ್ತೆ ಮೊದಲಿನಂತೆ ಆದರೆ ಮಾತ್ರ ನನಗೆ ಸಂತೋವಾಗುತ್ತದೆ.
ಇಂತಿ ನಿನ್ನ ಮಗಳು
ಅಚ್ಚು .. ..
ಈ ಪತ್ರ ಓದಿದ ನಂತರ ನನ್ನ ಕೆಟ್ಟ ದಾರಿಯ ಅರಿವು ನನಗಾಗಿಯಿತು. ಒಂದಡೆ ಅವಳನ್ನು ಕಳಿದುಕೊಂಡ ದು:ಖ ಇನ್ನೊಂದಡೆ ನಾನು ಎಂತಹ ಹೀನಾಯ ಕೆಲಸಕ್ಕೆ ಇಳಿದೆ ಎನ್ನುವ ನೋವು ಜೊತೆಗೆ ನನ್ನ ಮಗಳು ನನ್ನ ಈ ಕೆಲಸ ಅರೆತು ಅವಳೂ ಕೂಡ ನನ್ನ ತೊರೆದಳಲ್ಲ ಎನ್ನುವ ಭಾವನೆ ನನಗೆ ಇದ್ದು ಸತ್ತ ಅನುಭವ ನೀಡಿತು. ನನ್ನದು ಒಂದು ಬದುಕೆ? ಎನ್ನುವ ಪ್ರಶ್ನೆ ನನ್ನ ಪ್ರತಿಕ್ಷಣ ಕಾಡಿತು. ಈ ನನ್ನ ಜೀವನದಲ್ಲಿ ನನ್ನ ಮಗಳಾದ ಅಚ್ಚು ಅವಳು ಒಮ್ಮೆ ಸತ್ತಳು ನಾನು ಪ್ರತಿಕ್ಷಣ ಸತ್ತೆ……
 

‍ಲೇಖಕರು G

March 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: