’ಮಲೆಗಳಲ್ಲಿ ಮದುಮಗಳ ದಿಬ್ಬಣದಲ್ಲಿ ಕಂಡ ಚೀಂಕ್ರ’ – ಉಷಾ

ಸದ್ದು ಗದ್ದಲವಿಲ್ಲದ ಚೀಂಕಾರ

ಉಷಾ ಎಚ್ ಯು

ಫೋಟೋ : ರವಿ ಕುಲಕರ್ಣಿ

ನಾನು ಹೋಗಿದ್ದೆ ಮಲೆಗಳಲ್ಲಿ ಮದುಮಗಳನು ನೋಡುವುದಕ್ಕೆ. ಪುಟ್ಟಪ್ಪನ ಕನಸಿನ ಕೂಸು ಕಥೆಯಾಗಿ, ನಾಟಕವಾಗಿ ಎಲ್ಲರ ಮನಸೆಳೆಯುತ್ತಿದೆ ಎನ್ನುವುದನ್ನು ಕೇಳಿ 9 ಘಂಟೆಯ ಒಂದು ನಾಟಕ ನನ್ನ ನಿದ್ದೆಗೆ ಸವಾಲ್ ಹಾಕಬಹುದೇ ಎಂಬ ಕುತೂಹಲದಿಂದ, ಕಾತರಳಾಗಿ ನೋಡುತ್ತಿದ್ದೆ.
ನಾಟಕ ಪ್ರಾರಂಭವಾದಾಗ ಜೋಗಯ್ಯನಾಗಿ ಮುಂದೆ ನಿಂತಿದ್ದವನು, ಕಥೆ ಬಿಚ್ಚಿಕೊಳ್ಳುವಾಗ ಪಾತ್ರಧಾರಿಯಾಗಿ ಬಂದ. ಅವನ ವೇಷ ಬದಲಾಗಿತ್ತು, ಜೋಗಯ್ಯನಾಗಿ ಉಳಿದಿರಲಿಲ್ಲ. ಅವನ ಹಾವ, ಭಾವ, ಕೂದಲಿನ ಜಡೆಗೆ ಸುತ್ತಿದ ಹೂವು, ಎಲ್ಲೆ ಕುಳಿತರು ನಿಂತರೂ ಬದಲಾಗುತಿದ್ದ ಅವನ ಭಂಗಿ, ಬಾಯಿ ತುಂಬ ಸದಾ ಎಲೆ-ಅಡಿಕೆ. ಹೌದು ಇಷ್ಟೆಲ್ಲಾ ಹೇಳಿದ ಮೇಲೆ ನಿಮಗೆ ಅವನನ್ನು ಗುರುತಿಸುವುದು ಕಷ್ಟವೇನಲ್ಲ. ಚೀಂಕ್ರಾ ಸೆರೆಗಾರನ ಪಾತ್ರಕ್ಕೆ ನಿಜವಾಗಿಯೂ ಜೀವ ತುಂಬಲಾಗಿತ್ತು.
ಯಾವುದಾದರು ಸಿನಿಮಾ ಅಥವಾ ಧಾರಾವಾಹಿ ನೋಡುವ ನಮಗೆ ಒಳ್ಳೆಯದನ್ನು ಮಾಡುವ ಹೀರೋ ಇಷ್ಟವಾಗುತ್ತಾನೆ ವಿನಃ ಕೆಟ್ಟದು ಬಯಸುವ ವಿಲನ್ ಅಲ್ಲ. ಈ ನಾಟಕದಲ್ಲಿ ಬಹುಶಃ ಹೆಚ್ಚಿನ ಜನರ ಬಾಯಲ್ಲಿ ಚರ್ಚೆಯಾಗುವ ಪಾತ್ರ ಚೀಂಕ್ರಾ. ನಾಟಕದಲ್ಲಿ ವಿಕೃತ ಮನಸ್ಥಿತಿ ಹೊಂದಿರುವ ಈ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಲಾಗಿದೆ.
ಪಾತ್ರಕ್ಕೆ ಎಷ್ಟರ ಮಟ್ಟಿಗೆ ಒತ್ತು ನೀಡಿದ್ದಾರೆ ಎಂಬುದಕ್ಕೆ ಉದಾಹರಣೆ ಎಂದರೆ ಕಥೆಯಲ್ಲಿ ಚೀಂಕ್ರಾ ಲಾಟೀನು ಹಿಡಿದು ಕಾವೇರಿ ಎಂಬ ಹುಡುಗಿಯನ್ನು ಮೋಸದಿಂದ ಕತ್ತಲೆಯಲ್ಲಿ ಹೊರಕರೆದೊಯ್ಯುವ ದೃಶ್ಯದಲ್ಲಿ ಕೇವಲ ಲಾಟೀನು ಬೆಳಕಿನಲ್ಲಿ ಆಗಾಗ್ಗೆ ಕಾಣುವ ಚೀಂಕ್ರಾ ಪಾತ್ರಧಾರಿಯ ಮುಖದಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಒಬ್ಬ ವಿಕಾರ ಮನಸ್ಥಿತಿಯ ಮನುಷ್ಯ ಹೇಗೆ ತನ್ನನ್ನು ತಾನು ಒಳ್ಳೆಯವನೆಂದು ತೋರಿಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಂಚು ಹಾಕಿ ಕೆಟ್ಟ ಕೆಲಸ ಮಾಡುತ್ತಾನೆ ಎಂಬುದನ್ನು ಕೇಳಿದ್ದೇವೋ ಹಾಗೆಯೇ ಚೀಂಕ್ರಾ ನೆಡೆದುಕೊಳ್ಳುತ್ತಾನೆ. ಅಲ್ಲಲ್ಲಿ ನಾವು ಕಣ್ಣು ಮಿಟುಕಿಸದಂತೆ ತನ್ನೆಡೆಗೆ ದೃಷ್ಟಿ ನೆಟ್ಟಿಸಿಕೊಳ್ಳುವಂತಹ ಪಾತ್ರ ಚೀಂಕ್ರಾ.
ಕಥೆಯೊಳಗೆ ಹಲವಾರು ಪಾತ್ರಧಾರಿಗಳಿದ್ದರೂ ಎಲ್ಲರೂ ತಮ್ಮ ಪಾತ್ರಕ್ಕೆ ತಕ್ಕಂತೆ ಸದಾ ಎಚ್ಚರ ವಹಿಸಿ ಅಭಿನಯಿಸುವುದನ್ನು ನೋಡಿದರೆ ಕೆಲವೊಮ್ಮೆ ಎತ್ತ ನೋಡುವುದೆಂಬ ಗೊಂದಲ ಉಂಟಾದರೂ ಕಣ್ಣು ಎಲ್ಲಾ ಕಡೆ ಹರಿದಾಡುತ್ತಾ ಮುದ ನೀಡುತ್ತದೆ. ನಾಟಕ ಮುಗಿದರೂ ಕೇವಲ ಕಣ್ಣಿಗಲ್ಲದೆ ಮನಸ್ಸನ್ನು ಕಾಡುವ ಕೆಲ ಪಾತ್ರಗಳನ್ನು ಸೃಷ್ಠಸಿದವರಿಗೂ ಅವುಗಳನ್ನು ನಮ್ಮೆದುರು ಜೀವಂತವಾಗಿಸಿ ತೋರಿಸಿದ ನಿದರ್ೆಶಕರಿಗೂ ಕನ್ನಡಿಗರಿಂದ ಹೃದಯಪೂರ್ವಕ ನಮನ.
ಡಿಸ್ಕೊ ಸಮಯದಲ್ಲಿ ನಮ್ಮನ್ನೆಲ್ಲಾ ಜಾನಪದ ಹಾಡುಗಳ ಸೊಗಡಿಗೆ ಪರಿಚಯಿಸುವ ಪ್ರಯತ್ನ ಮಾಡಿದವರಿಗೂ ನಮ್ಮ ನಮನ. ಒಮ್ಮೆ ಮದುಮಗಳನ್ನು ನೋಡಿದ್ದು ಮನಸ್ಸಿಗೆ ಸಾಕಾಗಿಲ್ಲವೇನೋ, ಮತ್ತೊಮ್ಮೆ ನೋಡಬಯಸುತ್ತಿದೆ ಮದುಮಗಳನ್ನು, ನಾನು ಮಿಸ್ ಮಾಡ್ದೆ ಸರಿಯಾಗಿ ನೋಡ್ತೀನಿ ಮತ್ತೊಮ್ಮೆ ಚೀಂಕ್ರಾನನ್ನು, ನೀವು ಹೇಳಿ ಬರ್ತೀರ ತಾನೆ ನೋಡುವುದಕ್ಕೆ, ನಿಮಗಿಷ್ಟವಾದ ಪಾತ್ರಧಾರಿ/ಪಾತ್ರವನ್ನು…?
 

‍ಲೇಖಕರು G

March 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. samyuktha

    Nija! Cheenkrana paatra kaaduva haage abhivyaktigondide. Well performed by the actor!

    ಪ್ರತಿಕ್ರಿಯೆ
  2. Radhika

    Kaveriya viruddha avana taNNaneya krourya aakrOsha mooDisittu . . . .
    uttama lEKana Usha. heegE bareetaa iri.

    ಪ್ರತಿಕ್ರಿಯೆ
  3. usha

    Shashi sir naanenu jeeva kottilla. Naanu baredirodanna fb alli cheenkra
    Share madida. So odirbodu anno nambike

    ಪ್ರತಿಕ್ರಿಯೆ
  4. Srikanth Manjunath

    ನಾಟಕಗಳು ಅಂದರೆ ನನಗೆ ಅರಿವಿದ್ದದ್ದು ಮತ್ತು ಇಷ್ಟಪಡುತಿದ್ದದು ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳು ಮಾತ್ರ.
    ಮಲೆಗಳಲ್ಲಿ ಮಧುಮಗಳು ರಾತ್ರಿ ಪೂರಾ ನಾಟಕ ಬಯಲು ರಂಗಮಂದಿರ ಟಿಕೆಟ್ಸ್ ಸಿಗುತ್ತಿಲ್ಲ ಎಂತೆಲ್ಲ ಹೇಳಿದಾಗ, ಅರೆ ಒಮ್ಮೆ ಕೈ ನೋಡಿಯೇ ಬಿಡೋಣ ಅಂತ.. ಹೋದೆ.
    ಅದ್ಭುತ ಅನುಭವ.. ನನ್ನ ಲೇಖನದಲ್ಲಿ ಬರೆದಿದ್ದೇನೆ.. ಮಧುಮಗಳು ಮತ್ತೆ ನೋಡಬೇಕೆನಿಸೋಕೆ ಹಲವಾರು ಕಾರಣಗಳಿವೆ ಅದರಲ್ಲಿ ಮೊದಲನೆಯದು ಚೀ೦ಕ್ರಾ, ಮತ್ತು ಪಿಂಚುಲು
    ಚೀoಕ್ರಾ ಪಾತ್ರಧಾರಿಯ ಆ ಕರಾಳ ಮುಖ, ತಣ್ಣಗಿನ ಕ್ರೌರ್ಯ, ತನ್ನ ಹೆಂಡತಿ ಸತ್ತಾಗ ಆಕೆಯನ್ನು ಒದೆಯುವುದು, ನಂತರ ಅಳುವುದು, ಎಲ್ಲರೂ ಹೋದ ಮೇಲೆ, ತಣ್ಣಗೆ ಎಲೆ ಅಡಿಕೆ ಜಿಗಿಯುವುದು, ಆ ಆಂಗೀಕ ಅಭಿನಯ , ಐತನ ಮನದಲ್ಲಿ ಸಂಶಯ ಮೂಡಿಸುವ ಪರಿ, ಕಾವೇರಿಯ ಮೇಲಿನ ದೌರ್ಜನ್ಯ.. ಆಹಾ ಅದ್ಭುತ ಎನ್ನಿಸುತ್ತದೆ.
    ಸುಂದರವಾಗಿ ಪದಗಳಲ್ಲಿ ಕೂರಿಸಿದ್ದೀರಾ.. ಉತ್ತಮ ಲೇಖನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: