ಕಾಲಪಾತ್ರದ ತುಂಬಾ ಬರೀ ನೆನಪುಗಳ ಜಾತ್ರೆ…

ವೃದ್ಧಕಡಲು

ವಾಸುದೇವ ನಾಡಿಗ್

ಹುಚ್ಚು ಹರಯದ ನದಿಗಳೆಲ್ಲ
ಒಳಗೆ ಕರಗಿ
ಬರಸೆಳೆದು ಭಾವಗಳ
ಮೈಚಾಚಿಕೊಂಡು ಮಲಗಿಬಿಟ್ಟ ಮೌನ
ದಣಿದಕನಸುಗಳೆಲ್ಲವೂ
ದಡದಂಗಳದಲಿ ಬೀಡುಬಿಟ್ಟು ನಿಟ್ಟುಸಿರು
ಅರೆಬರೆ ಅರಳಿ ಮಾಗಿ
ಕೈಬೀಸಿ ಕರೆದ ಕರೆಗಳಿಗೆಲ್ಲ ಕೈ ಅಲ್ಲಾಡಿಸಿ
ಮುನಿದು ಮಾತುಬಿಟ್ಟ ಘಳಿಗೆಗಳ ನೆನಪು
ಹೆಣೆದಿಟ್ಟಿದ್ದ ಹೂ ಇರುಳುಗಳೆಲ್ಲ
ಹಗಲಿನಲ್ಲಿ ಬಾಡಿದಕಮಟು

ಎಂತೆಂಥ ಅಲೆಗಳನ್ನು ತಲೆಗೆ ಸುತ್ತಿಕೊಂಡ
ಕಡುಸಾಹಸ
ಉತ್ಸಾಹದ ಗಾಳಿಬಳುಕಿಗೆ ಬಾಗಿ
ದಡಕ್ಕಪಳಿಸುವಾಗೆಲ್ಲ
ಎಡವಿ ಮತ್ತೆ ಕನಸ ಮೆತ್ತಿಕೊಂಡೇ
ತೀರದ ಈಚೆ ಯಾನ
ಮೌನಿ ಮಾಗಿದ ದೇಹ
ಕಂಬಕ್ಕೊರಗಿಕೊಂಡ ಭಂಗಿ
ವೃದ್ಧ ಮನಸುಗಳಲಿ ದಾಂಗುಡಿಯಿಡುವ
ಕಟುಕ ಒರಟು ಒಂಟಿತನದ ಒಂಟೆ ಹೆಜ್ಜೆಗಳು
ನದಿಗಳನ್ನು ಬರಸೆಳೆದುಕೊಂಡು
ಮರಳಿನಲಿ ಗೂಡುಗಟ್ಟುವ
ಮರುಳಗಿರಿ
 
ಮುಳುಗಿಸಿಕೊಂಡದ್ದು ತಳದಲಿ ಉಳಿದು
ತೇಲಿಸಿಕೊಂಡದ್ದು ಬರೀ ನೆನಪಾಗಿ
ನಡುನಡುವೆ ನಡೆದ ನಡೆಗಳೆಲ್ಲಾ
ಲೆಕ್ಕಕ್ಕೆ ಸಿಕ್ಕದೇ
ಆಕಾಶಕೆ ಮುಖ ಮಾಡಿದ್ದು
ಅದೇ ಕಕ್ಕಾಬಿಕ್ಕಿ ನಗು
ವೃದ್ಧಕಡಲಿನ ತುಂಬಾ
ಹರಿದುಹೋದವು ಹಡಗು
ಅದಾವುದೋ ಬಂದರ ಹುಡುಕಿ
ಬಳಿಗೆ ಬಂದವರನು ಹಿಂದಿಕ್ಕಿ
ಸಣ್ಣಪುಟ್ಟ ತೆಪ್ಪಗಳು ಏರಿಳಿತಕೆ
ಹೆದರಿದವು
ಕಾಲಪಾತ್ರದ ತುಂಬಾ ಬರೀ ನೆನಪುಗಳ ಜಾತ್ರೆ

‍ಲೇಖಕರು G

March 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ತುಂಬಾ ಚೆನ್ನಾಗಿದೆ; ಕವನ.

    ಪ್ರತಿಕ್ರಿಯೆ
  2. bidaloti ranganath

    Vruddapyada novu hatashe nenapugala kaduveke hige manushya sambandagala kkuritu bhvanatmakavaagi kavithe bareyuva kavi nadig nammolagini gatti e kavitheyu odidare hrudaya tumbi barutade

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: