ಇಂದು ಅವಧಿಯಲ್ಲಿ...
‘ನೀರು ಮತ್ತು ಪ್ರೀತಿ’ ಎಂಬ ಬೊಂಬಾಟ್ ಬುಕ್
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ. ಅಗ್ರಹಾರಕೃಷ್ಣಮೂರ್ತಿಯವರ ನೀರು ಮತ್ತು ಪ್ರೀತಿ ಕಾದಂಬರಿಗೆ ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಕಾದಂಬರಿ ಕೆಲವೇ ಗಂಟೆಗಳಲ್ಲಿ ಓದಿ...
ಬೆಳಗ್ಗೆ ಫೋಟೋ ಕ್ಲಿಕ್.. ಸಂಜೆ ಪುಸ್ತಕದಲ್ಲಿ..
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಒಮ್ಮೆ ಅಂಕಿತ ಪುಸ್ತಕದಿಂದ ಪ್ರಕಟಿಸಿದ ವಿಶ್ವೇಶ್ವರ ಭಟ್ ಅವರ "ನೂರೆಂಟುಮಾತು 10" ಪುಸ್ತಕ ಮುದ್ರಣದ ಸಮಯ. ಅಂತಿಮವಾಗಿ...
ಬಿ ಡಿ ಜತ್ತಿ ಪಾಲಿಗೆ ಸಿಕ್ಕ ಬುತ್ತಿ- ಕಂಠಿ ಕೊರಳಿಗೆ ಬಿದ್ದ ಕಂಠೀಹಾರ
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಹೊರಗೆ ಸಣ್ಣಗೆ ಮಳೆಮಳೆಯ ಹೊಡೆತಕ್ಕೆ ಆವರಿಸಿದ ಗಾಳಿ ಮೈ, ಮನಸ್ಸುಗಳನ್ನು ಹೆಪ್ಪುಗಟ್ಟಿಸುತ್ತಿದೆ ಎಂಬ ಭಾವ ದಟ್ಟವಾಗುತ್ತಿದ್ದಂತೆಯೇ ಬಿಸಿ,ಬಿಸಿಯಾದ ಕಾಫಿ ಹೀರುತ್ತಾ ನಾನು ಅವರ ಮುಖ ನೋಡಿದೆ. ಅವರು ತಾವು...
‘ಸ್ಪರ್ಶಕ್ಕೆಷ್ಟು ರೂಪಾಯಿ?’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ''ಅದು ಕೈನಸ್ಥೆಟಿಕ್ ಇಂಟಿಲಿಜೆನ್ಸ್'', ಅಂದೆ ನಾನು. ನಾನೇನೋ ಮಹಾಸಂಗತಿಯನ್ನು ಹೇಳಿದೆನೆಂಬಂತೆ ಆತ ಹಾಂ ಎಂದು ರಾಗವೆಳೆದ. ದೇಹವನ್ನೂ ಕೂಡ ಭಾಷೆಯಂತೆಯೇ ಬಳಸಬಹುದು ಎಂಬ ಅರಿವು ಸಾಮಾನ್ಯವಾಗಿ ಬಹಳಷ್ಟು...
ಓಹ್ ಇಂದು ಎಂದಿನಂತಲ್ಲ…
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ದೆವ್ವಗಳ ಊರಿನಲ್ಲೊಂದು ಮಟಮಟ ಮಧ್ಯಾಹ್ನ..
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
Latest
Invite
'ಕವನ ಸ್ಪರ್ಧೆ'ಗೆ ಆಹ್ವಾನ
'ನೇಸರು' ಜಾಗತಿಕ ಕನ್ನಡ 'ಕವನ ಸ್ಪರ್ಧೆ'-2018 ಆತ್ಮೀಯರೇ, ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ...
ಇಲ್ಲ ‘ಅಂದ್ರೆ’ ಇದೆ
ಬಾ ಕವಿತಾ
ಕಿರಣ ಭಟ್ ಹೊಸ ಕವಿತೆ – ಬೆಳ್ಳಿ ಬೆಟ್ಟದ ಹಾದಿ…
ಕಿರಣ ಭಟ್ ಬೆಳಗು ಬೆಳಗು ಚಂದ ಕನಸುಹೊಳೆವ ಬೆಳ್ಳಿ ಬೆಟ್ಟಕಣ್ಣುಜ್ಜಿದರೆ ಕಿಟಕಿಯಾಚೆಅದೇ ಬಿಳಿಯ ಘಟ್ಟ ಪುಟ್ಟಿಗೋ ಬೆರಗು ಬೆರಗುಹತ್ತಬೇಕು ಬೆಟ್ಟಬ್ಯಾಗೇರಿಸಿ ಹೊರಟುಬಿಟ್ಳುಪುಟ್ಟಿ...
ನಾಗರಾಜ ಹರಪನಹಳ್ಳಿ ಹೊಸ ಕವಿತೆ : ಅಲ್ಲಿ – ಇಲ್ಲಿ…
ನಾಗರಾಜ್ ಹರಪನಹಳ್ಳಿ ಅಲ್ಲಿನೀ ಅಂಗಳದ ಕಸ ಗುಡಿಸಿ, ನೆಲಕ್ಕೆ ನೀರಾಕಿ,ಅಂಗಳದ ತುಳಸಿಗೆ ಮನದಲ್ಲಿ ಕೈ ಮುಗಿದುಆಕಾಶ ದಿಟ್ಟಿಸಿ, ಗುಬ್ಬಚ್ಚಿ ಚಿಲಿಪಿಲಿಯ ಕಿವಿಯೊಳಗೇ...
ಪುಸ್ತಕದ ಪರಿಚಯ
Book Shelf
ಎಚ್ ಆರ್ ರಮೇಶ ಓದಿದ ವೈದೇಹಿಯವರ ‘ದೀಪದೊಳಗಿನ ದೀಪ’
ಫೆಮಿನಿಸಿಮ್ಮಿನ ಪೋಷಾಕಿಲ್ಲದ ಹೆಣ್ಣ ಸಹಜ ನೋಟ ಎಚ್ ಆರ್ ರಮೇಶ ಕಾವ್ಯಕ್ಕೆ ಕಾಲದ ಹಂಗಿಲ್ಲ. ಹಾಗಾಗಿ ಅದಕ್ಕೆ ದೇಶಕಾಲದ ಮಿತಿಯೂ ಇಲ್ಲ. ಒಂದು ಪಕ್ಷ ಪರಲೋಕದಲ್ಲಿ/ಏಲಿಯನ್ ಗ್ರಹದಲ್ಲಿ ಜೀವಿಗಳಿದ್ದಲ್ಲಿ ಅಲ್ಲೂ ಸಹ ಇಂತಹದ್ದೇ ಅಂದರೆ ನಮ್ಮ ಲೋಕದಲ್ಲಿರುವಂತಹ ದುಃಖ, ದುಮ್ಮಾನಗಳಿರಬಹುದು. ಅವುಗಳನ್ನು ಕುರಿತು ಕವಿತೆಗಳು ಇಲ್ಲಿಯಂತೆ...
ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ
ಅನಂತರಾಮು ಜೋಳಿಗೆ ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ […]
ಇಂದು ಸಂಜೆ ಮೈಸೂರಿನಲ್ಲಿ..
‘ಅವಧಿ’ recommends-ವಿಶ್ವ ಕಥಾ ಕೋಶ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









