ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸನಾತನಿಗಳೂ ಮತ್ತವರ ಸೀರೆಯೂ…

  ಶ್ರೀಪತಿ ಗೋಗಡಿಗೆ (ಪಿಸುಮಾತು) ​ ಈ ಗಂಡಸರು ಹೆಂಗಸರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಚಪಲ ಇನ್ನೂ ಬಿಟ್ಟಿಲ್ಲ. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾ, ಬೇರೆ ಬೇರೆ ನೀತಿಗಳನ್ನು ಹೇರುತ್ತಾ ಸಾವಿರಾರು ವರ್ಷಗಳಿಂದಲೂ ಗಂಡಿನ ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆ...

read more
ಯಾಕೆ ಕಾಡುತಿದೆ ಸುಮ್ಮನೆ ನನ್ನನು…

’ಅವಧಿ’ಯಲ್ಲಿ ಅಂಕಣ ಬರೆಯಲು ಪ್ರಾರಂಭಿಸಿದಾಗ ಒಂದು ಅಳುಕಿತ್ತು. ಬರೆಯುವುದೆಂದರೆ ಅದು ಜಗದ ಹಾಡೂ ಹೌದು, ಎದೆಯ ಹಾಡೂ ಹೌದು. ಬಹಳಷ್ಟು ಸಲ ನನಗೆ ಕೇಳಿಸಿಕೊಳ್ಳುವ ಭಾಷೆ ಮಾತಾದರೆ, ಆಡುವ ಭಾಷೆ ಮೌನ. ಹೀಗಿರುವಾಗ ನಾನು ಬರೆಯಬಲ್ಲೆನೆ ಎನ್ನುವುದು ನನ್ನ ಆತಂಕ ಆಗಿತ್ತು. ಆ ಹಿಂಜರಿಕೆಯಲ್ಲೇ ಬರೆಯಲು ಶುರು ಮಾಡಿದೆ. ಆ ನಂತರ...

read more
'ಇಹ'ದ ಇರುಳಿನಲಿ ’ಪರ’ದ ಪ್ರಣತಿ

ರಮೇಶ್ ಮೇಗರವಳ್ಳಿ ನನ್ನ ಕನಸಲ್ಲಿ ಕಾವಿಧಾರಿ ದಾರ್ಶನಿಕ ನೊಬ್ಬ ಬ೦ದು ನೀಳ ಗಡ್ಡ ನೀವುತ್ತಾ ಅ೦ದ -   "ಇಹ"ವನ್ನು ಮರೆತು "ಪರ"ವಶನಾಗಿ ನೀನು ಪರಮಹ೦ಸನಾಗೆ೦ದು ನಾನು ಹೇಳುವುದಿಲ್ಲ!   ಮು೦ಜಾವಿನಿ೦ದ ಮುಸ್ಸ೦ಜೆ ವರೆಗೆ "ಇಹ"ದ ಹಗಲಿನಲಿ ತು೦ಬು ಬದುಕಿಗೆ ವಿವಿಧ ಬಣ್ಣಗಳ. ತು೦ಬುತ್ತಾ ಬಣ್ಣಗಳ ಬಿಡಿಸು ವಿವಿಧ ಮುಖದ...

read more
’ವ್ಯಾಸರ ಬದುಕಿನ ಒಂದು ಪುಟ ’ – ಅನುಪಮಾ ಪ್ರಸಾದ್

’ಅವಧಿ’ಯಲ್ಲಿ ಬೆಸಗರಹಳ್ಳಿ ರಾಮಣ್ಣ ಹಾಗು ರವಿಕಾಂತೇ ಗೌಡರ ಅನುಬಂಧದ ಬಗ್ಗೆ ಜಿ ಎನ್ ಮೋಹನ್ ಬರೆದ ಲೇಖನ ಓದಿದ ಅನುಪಮಾ ಪ್ರಸಾದ್ ಅವರು ಎಂ ಎನ್ ವ್ಯಾಸರ ಕುರಿತು ಅವರು ಬರೆದ ’ಅರ್ಧ ಕಥಾನಕ’ದ ಒಂದು ಅಧ್ಯಾಯವನ್ನು ’ಅವಧಿ’ಗಾಗಿ ಪ್ರೀತಿಯಿಂದ ಕಳಿಸಿದ್ದಾರೆ. ವ್ಯಾಸರ ಬದುಕಿನ ಒಂದು ಪುಟ ’ಅವಧಿ’ ಓದುಗರಿಗಾಗಿ ***ಅನುಪಮಾ ಪ್ರಸಾದ್...

read more
'ಮೌನಗಳ ತುದಿಗೆ ಮಾತು ಮೂಡುವುದೇ ಇಲ್ಲ…' – ಮಂಜುಳಾ ಹುಲಿಕುಂಟೆ

ದೀರ್ಘ ಏಕಾಂತ.... ಮಂಜುಳಾ  ಹುಲಿಕುಂಟೆ ದೀರ್ಘ ಏಕಾಂತವೊಂದರ ಧ್ಯಾನಕ್ಕಿಳಿದಿದ್ದೇನೆ ಈ ಇಳಿಸಂಜೆಗಳಲ್ಲಿ ನೆನಪುಗಳ ಜಪವಿಡಿದು ಕೂರುತ್ತೇನೆ ಇಲ್ಲ ನೀನೇಳುವಂತೆ ಮೌನಗಳ ತುದಿಗೆ ಮಾತು ಮೂಡುವುದೇ ಇಲ್ಲ ನಾನೀಗ ನಿರ್ಲಿಪ್ತಳಾಗಿಯೂ ಇಲ್ಲ ಎಂದಿಗೂ ಗುರುತಿಸಿಕೊಳ್ಳದ ನನ್ನ ಕಂಡುಕೊಳ್ಳುತ್ತಿದ್ದೇನೆ...   ನನ್ನ ಎದೆಬಡಿತದ...

read more
ನೀನು ಬರಬೇಡ ಚಂದ್ರ ಈ ಭುವಿಗೆ

- ಜೀ ಕೇ ನವೀನ್ ಕುಮಾರ್ ನಾ ನಿನ್ನ ಗೆಳತಿ ನಿಜ, ಆದರೇ ನೀನು ಬರಬೇಡ ಚಂದ್ರ ಈ ಭುವಿಗೆ ನನಗಾಗಿ ಬಾನು ಬಿಡುವಷ್ಟು ಮೋಹವಿದ್ದರೂ.   ನೀ ಮೇಲಿಂದ ಕಂಡಂತಲ್ಲ ನನ್ನ ಸುತ್ತಲಿನ ಈ ಜನ, ಬೆಳಕು ನೀಡುವ ಶಕ್ತಿ ನಿನಗಿಲ್ಲವೆಂದು ಮೂದಲಿಸುವರು, ನೀ ಬರಿಯ ಕಲ್ಲು ಗುಂಡೆಂದು, ವ್ಯಂಗಿಸಿ ಗಹಗಹಿಸಿ ನಗುವರು, ನೀನು ಬರಬೇಡ ಚಂದ್ರ ಈ...

read more
ಈ ಹುಲಿ ಗುಳ್ಳೆನರಿಯ ಸಹವಾಸಕ್ಕೇ ಹೋಗದು!

ನಾ ದಿವಾಕರ್ ಮೈಸೂರು ನಗರದಲ್ಲೊಂದು ಹುಲಿ ಪ್ರತ್ಯಕ್ಷವಾಗಿದೆ. ಸಾರ್ವಜನಿಕರ ಆಕ್ಷೇಪಕ್ಕೆ ಮಣಿದು ಈ ಹುಲಿ ತನ್ನ ಒಡೆಯನ ಅಪ್ಪಣೆಯ ಮೇರೆಗೆ ವನವಾಸಕ್ಕೆ ತೆರಳಿತ್ತು. ಆದರೆ ಒಡೆಯ ಪುನಃ ಆಜ್ಞಾಪಿಸಿದ್ದಾನೆ. ಹುಲಿ ಮತ್ತೊಮ್ಮೆ ಪ್ರತ್ಯಕ್ಷವಾಗಿ ತನ್ನ ಆಟಾಟೋಪ ಮುಂದುವರೆಸಿದೆ. ಇದು ಎಲ್ಲಿ ಯಾವಾಗ ಪ್ರತ್ಯಕ್ಷವಾಗುತ್ತದೆ ಎಂದು...

read more
ಬೇಲೂರು ರಘುನಂದನ್ ಕಾಲಂ : ಹಿರಿಯರನ್ನು ಕಂಡರೆ ಮಮ್ಮಲ ಮರುಗುವ ಸಾಕವ್ವ

ವಯಸ್ಸಾದ ಹಿರೀ ಜೀವಗಳನ್ನು ಗೌರವಿಸುವುದೆಂದರೆ ನಾವು ನಾವು ನಂಬಿರುವ ದೇವರುಗಳನ್ನು ಗೌರವಿಸಿದಂತೆ. ಇನ್ನು ಅವರ ಕೆಲಸಗಳನ್ನು ಮಾಡುವುದು ಮತ್ತು ಅವರನ್ನು ಕಾಳಜಿ ಮಾಡಿ ನಿಗಾವಹಿಸುವುದು ಪ್ರತಿಯೊಬ್ಬ ಮನುಷ್ಯನ ಆದ್ಯ ಕರ್ತವ್ಯವೇ ಸರಿ. ಅನುಭವಗಳು ಮುಪ್ಪುರಿಗೊಂದು ಇಡೀ ಬದುಕನ್ನು ಸವೆಸಿ ಹಿಡಿಯಾಗಿರುವ ಜೀವಗಳ ನಿರೀಕ್ಷೆಗಳು ತುಂಬಾ...

read more
ಭಾನುವಾರದ ನೀಳ್ಗತೆ ’ದ್ರೌಪದಿ ಸಿಂಹಾಸನಾರೋಹಣಂ’

ಸವಿ ರಾಜ್ ಎ ಎಸ್ ನಾನು ಮಣಿಪುಷ್ಪಕ. ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಯಕಶ್ಚಿತ್ ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹುದು, ಅವರ ಕೃತಿಯಂತೆಯೇ ಅಗಾಧವಾದುದು....

read more
ಸುತ್ತಿದ್ದು ತನ್ನ ಸುತ್ತ ತಾನೇ ಅಂತ ಗೊತ್ತಾಗುವಷ್ಟರಲ್ಲಿ

ಭ್ರಮೆ! ಕು ಸ ಮಧುಸೂದನ್ ನಾಯರ್ ಎಲ್ಲವನ್ನೂ ನೋಡಿದೆವೆಂದು ಕೊಂಡವು ಕಣ್ಣುಗಳು ಎಲ್ಲವನ್ನ್ನೂ ಮುಟ್ಟಿದೆವೆಂದುಕೊಂಡವು ಕೈಗಳು ಎಲ್ಲವನ್ನೂಕ್ರಮಿಸಿದೆವೆಂದುಕೊಂಡವು ಕಾಲುಗಳು ಅರಿವಾದಾಗ ತಡವಾಗಿತ್ತು ಏನನ್ನೂ ನೋಡಿರಲಿಲ್ಲ ಮುಟ್ಟಿರಲಿಲ್ಲ ಕ್ರಮಿಸಿರಲಿಲ್ಲ ಸುತ್ತಿದ್ದು ತನ್ನ ಸುತ್ತ ತಾನೇ ಅಂತ ಗೊತ್ತಾಗುವಷ್ಟರಲ್ಲಿ ಮನುಷ್ಯ...

read more
ಸೌರಮಂಡಲದ ಅಂಡರ್‌ಡಾಗ್ ’ಪ್ಲೂಟೋ’ – ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಅವಧಿಗಾಗಿ ಬರೆದ ವೈಜ್ಞಾನಿಕ ಲೇಖನಗಳ ಸರಣಿಯ ಮುಂದಿನ ಭಾಗ (ಯಾಮಿನಿಯ ಯಾತ್ರಿಕರು - ೨) ಪಾಲಹಳ್ಳಿ ವಿಶ್ವನಾಥ್ (ಈ ವಾರ ಗುರು ಗ್ರಹದ ಬಗ್ಗೆ ಬರೆಯುವುದಿತ್ತು. ಆದರೆ ಪ್ಲೂಟೊ ಬಗ್ಗೆ ಇ೦ದು ಬಹಳ ಸುದ್ದಿಗಳಿವೆ ..) ನಿನ್ನೆ (೧೪ ಜುಲೈ) ಮಾನವ ನಿರ್ಮಿತ ಬಾಹ್ಯಾಕಾಶ ನೌಕೆಯೊ೦ದು ದೂರದ ಪ್ಲೂಟೊವಿನ ಹತ್ತಿರ ಹೋಗಿ...

read more
ನನಗಿವತ್ತೂ ಚಂದ್ರದರ್ಶನವಾಗಿಲ್ಲ….

ದರ್ಶನ! ಬಿ ಎಂ ಬಶೀರ್ ಇಫ್ತಾರಿನ ಹೆಸರಲ್ಲಿ ಚೆಲ್ಲಿ ಹೋದ ಮೃಷ್ಟಾನ್ನದ ಅಗುಳುಗಳು ಇನ್ನೂ ಮೋರಿಯಲ್ಲಿ ತೇಲುತ್ತಿವೆ ಹಬ್ಬಕ್ಕೆಂದು ಕೊಂಡ ಗರಿಗರಿಯಾದ ಹೊಸ ಕರವಸ್ತ್ರದಲ್ಲಿ ಅಷ್ಟೂ ಕಣ್ಣುಗಳ ಕಣ್ಣೀರು ಹೇಗೆ ಒರೆಸಲಿ? ನನ್ನ ಚೀಲದೊಳಗಿರುವ ಅಕ್ಕಿ ನೆರೆಯವನ ಹಸಿವಿನ ಚೀಲ ತುಂಬಲು ಸಾಲುತ್ತಿಲ್ಲ ಹಸಿದವನು ರೊಟ್ಟಿಯ ಚೂರಿಗೆ...

read more
ಹಸಿದ ಹೊಟ್ಟೆ ಅನ್ನವನ್ನು ಮಾತ್ರ ಹುಡುಕುತ್ತದೆ

-ಡಾ ಎಸ್ ಬಿ ಜೋಗುರ ಅನ್ನ ಭಾಗ್ಯ ಯೋಜನೆಯ ಬಗ್ಗೆ ಅನೇಕ ಹೊಟ್ಟೆ ತುಂಬಿದವರು ಮಾತನಾಡಿದ್ದಾಯಿತು. ಹಾಗೆಯೆ ಜನ ಸೋಮಾರಿಗಳಾಗುತ್ತಾರೆ ಎನ್ನುವ ಕಳಕಳಿಯನ್ನೂ ತೋರಿದ್ದಾಯಿತು. ಸೋಮಾರಿಗಳಾಗಿದ್ದವರು ಎಲ್ಲ ಭಾಗ್ಯಗಳನ್ನು ಮೀರಿಯೂ ಸೋಮಾರಿಗಳಾಗಿರುತ್ತಾರೆ. ನಿರಂತರವಾಗಿ ದುಡಿಯುವವರು ಎಲ್ಲ ವರ್ಗಗಳಲ್ಲಿ ಇರುವ ಹಾಗೆ, ಎಲ್ಲ...

read more
ವಿದ್ಯಾರಶ್ಮಿ ಬರೆದ ಮಳೆ ಕಥೆಗಳು

ವಿದ್ಯಾರಶ್ಮಿ ಪೆಲತ್ತಡ್ಕ ಜೂನ್ ತಿಂಗಳು ಬಂತು. ಜತೆಗೆ ಮಳೆಗಾಲವೂ. ಅಣ್ಣ-ತಂಗಿ ಇಬ್ಬರೂ ಶಾಲೆಗೆ ಹೊರಟರು. ಅಪ್ಪ ಇಬ್ಬರಿಗೂ ಒಂದೊಂದು ಒಳ್ಳೆಯ ಕೊಡೆ ತೆಗೆದುಕೊಟ್ಟರು. ಒಂದನೇ ಕ್ಲಾಸಿಗೆ ಸೇರಿದ್ದ ತಂಗಿಗೆ ಅದು ಮೊದಲ ಕೊಡೆ. ತನ್ನ ವಸ್ತುಗಳನ್ನೆಲ್ಲ ಜೋಪಾನವಾಗಿಟ್ಟುಕೊಳ್ಳುವ ಆ ಕೂಸಿಗೆ ಕೊಡೆ ಹಿಡಿದು ನಡೆಯುವುದೇ ಸಂಭ್ರಮ. ಅವಳು...

read more
’ಸಮಗ್ರ, ಸಂಕಲಿತ, ವಾಚಿಕೆ ಇತ್ಯಾದಿ’ – ಎಸ್ ದಿವಾಕರ್

ಎಸ್ ದಿವಾಕರ್ ಒಂದು ಭಾಷೆಯ ಲೇಖಕನ ಕೃತಿಗಳಲ್ಲಿ ಅತ್ಯುತ್ತಮವಾದುದನ್ನು ಗುರುತಿಸಿ, ಅವುಗಳ ಬೆಲೆಕಟ್ಟಿ, ಮುಂದಿನ ಪೀಳಿಗೆಯ ಓದುಗರಿಗೆ ಪರಿಚಯಿಸುವ ಜವಾಬ್ದಾರಿಯುಳ್ಳವರು ವಿಮರ್ಶಕರು. ಅವರು ಸಾಂಸ್ಕೃತಿಕ ಮಹತ್ವವುಳ್ಳ ಇಂಥ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿರುವ ಅನೇಕ ನಿದರ್ಶನಗಳುಂಟು. ಉದಾಹರಣೆಗೆ ಅಮೆರಿಕದ ಶ್ರೇಷ್ಠ...

read more
ವಿಜಯಲಕ್ಷ್ಮಿ ಬರೆದ ’ರಾಮಾಚಾರಿ ಕಥೆ’

ಹೀಗೊಬ್ಬ ರಾಮಾಚಾರಿ ಕಥೆ ಎಸ್ ಪಿ ವಿಜಯಲಕ್ಷ್ಮಿ ' ಏ ಸರೂ ', ಕಿವಿಗೆ ಬಿದ್ದ ಆ ದನಿ ಇಡೀ ದೇಹವನ್ನು ಚಕ್ಕನೆ ವ್ಯಾಪಿಸಿಬಿಟ್ಟಿತು . ಅಡಿಯಿಂದ ಮುಡಿಯವರೆಗಿನ ನರಗಳನ್ನು ನವಿರುಕಂಪನದಲ್ಲಿ ಮೆಲ್ಲಗೆ ಅಲ್ಲಾಡಿಸಿತು . 'ಇದು ಅವನದೇ ದನಿ ', ಗಕ್ಕನೆ ತಿರುಗಿದೆ . ಅರೆಕ್ಷಣ ಗೊಂದಲವಾಯಿತು . 'ಏಯ್ ಗೊತ್ತಾಗ್ಲಿಲ್ಲೇನೆ ....' ಕೈ...

read more
ಮಂಪರಿನಲ್ಲಿರುವ ಸಮುದಾಯ…

ಕನ್ನಡನಾಡಿನ ಸಮಸ್ಯೆಗಳು: ಮಂಪರಿನಲ್ಲಿರುವ ಸಮುದಾಯ! (ಒಂದಷ್ಟು ಒಳನೋಟ) ಅನಿತಾ ಕು ಸ ಮದುಸೂದನ್   ಕರ್ನಾಟಕದ ವಿಶಿಷ್ಟತೆ ದಿನೇದಿನೇ ನಾಶವಾಗುತ್ತಿದೆ. ಇಲ್ಲಿನ ನೆಲ,ಜಲ,ಪರಂಪರಾನುಗತ ವೈಶಿಷ್ಟ್ಯತೆಗಳು ಕಾಲಗರ್ಭದಲ್ಲಿ ಲೀನಾಗುವಂತೆ ಕಾಣುತ್ತಿವೆ. ವಿವಿದ ರೀತಿಯ ಸಮಸ್ಯೆಗಳು ನಮ್ಮನ್ನು ಎಡೆಬಿಡದೆ ಕಾಡುತ್ತಿವೆ. ನಾಡಿನ...

read more
ಸೇತೂರಾಂ ನಾಟಕ ’ಅತೀತ’ – ಸ್ವರ್ಣ ಕಂಡಂತೆ

ಸತ್ಯ -ಸಾಕ್ಷಿ - ಅತೀತ ಸ್ವರ್ಣ ಎನ್ ಪಿ ಧಾರವಾಹಿಗಳನ್ನು ನೋಡುವ ಪ್ರೇಕ್ಷಕರಲ್ಲಿ ವಿಧವಿಧವಾದ ಜನರಿರುತ್ತಾರೆ. ಟಿ.ವಿ.ಯ ಮುಂದೇ ಕೂತು ಪಾತ್ರವೇ ತಾನಾಗಿ ನೋಡುವವರು , ಅಡುಗೆ ಮನೆಯಿಂದ ಯಾವಾಗಲೋ ಹಣುಕು ಹಾಕಿ ಉಳಿದಂತೆ ಮಾತು ಮಾತ್ರ ಕೇಳಿಸಿಕೊಳ್ಳುವವರು , ವಾರಕ್ಕೊಮ್ಮೆ ನೋಡಿ ಎಲ್ಲಿಗೆ ಬಂದಿದೆ ಅಂತ ತಿಳಿಯುವವರು , ನೋಡುತ್ತಾ...

read more
’ಆಹಾರ ಭದ್ರತೆಯ ಅರಿಯಲೆತ್ನಿಸದ ಭೈರಪ್ಪನವರ ಭೌದ್ಧಿಕ ಸೋಮಾರಿತನ’ – ಜಿ ಎನ್ ನಾಗರಾಜ್

ಅನ್ನಭಾಗ್ಯ, ಆಹಾರ ಭದ್ರತೆ, ಅನ್ನಭಾಗ್ಯದ ವಿರೋಧದ ಹೇಳಿಕೆಗಳ ಬಗ್ಗೆ ಈ ಹಿಂದೆ ಜಿ ಎನ್ ನಾಗರಾಜ್ ಬರೆದಿದ್ದರು. ಆ ಬರಹದ ಮುಂದುವರೆದ ಭಾಗ ಇಲ್ಲಿದೆ. ಜಿ ಎನ್ ನಾಗರಾಜ್ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೃಷಿ ಮತ್ತು ಆಹಾರ ಸಂಸ್ಥೆ ಗಳು ವಿವರಿಸಿದಂತೆ ಆಹಾರ ಭದ್ರತೆ ಎಂದರೆ ಎಲ್ಲ ಜನರಿಗೂ ಎಲ್ಲ ಕಾಲದಲ್ಲಿಯೂ ಕ್ರಿಯಾಶೀಲವಾದ...

read more
’ಬಾಹುಬಲಿ’ – ಚಿತ್ರಕಾರನ ಕಣ್ಣ ಕನಸು

ಗೊರೂರು ಶಿವೇಶ್ ಬಿಡುಗಡೆಯಾದ ಮೂರು ದಿನಗಳಲ್ಲಿ ನೂರ ಅರವತ್ತು ಕೋಟಿಗೂ ಮಿಕ್ಕಿ ಸಂಪಾದಿಸಿ ಭಾರತೀಯ ಚಲನಚಿತ್ರರಂಗ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ತೆಲುಗುಚಿತ್ರ 'ಬಾಹುಬಲಿ' ಕನ್ನಡದಲ್ಲೂ ಮೂರು ದಿನಕ್ಕೆ ಹತ್ತು ಕೋಟಿ ಸಂಪಾದಿಸಿ 'ರನ್ನ' ಚಿತ್ರದ (ಅದು ಕೂಡ ತೆಲುಗು ಚಿತ್ರದ ರಿಮೇಕ್ ಎಂಬುದು ಬೇರೆ ಮಾತು)...

read more

Pin It on Pinterest

Share This