ಅಂತೂ ಇಂತೂ ಒತ್ತಡಕ್ಕೆ ಮಣಿಯಿತು ಸಾಹಿತ್ಯ ಅಕಾಡೆಮಿ

kendra sahitya logoಒತ್ತಡಕ್ಕೆ ಮಣಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಂತೂ ಕೊನೆಗೆ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಸಭೆ ನಡೆಸಲು ನಿರ್ಧರಿಸಿದೆ. ಕಲಬುರ್ಗಿ ಅವರ ಕೊಲೆ, ದಾದ್ರಿಯ ಹತ್ಯೆ, ಅಭಿವ್ಯಕ್ತಿ ಸ್ವಾposter humanityತಂತ್ರ್ಯಕ್ಕೆ ಎದುರಾಗಿರುವ ಆತಂಕವನ್ನು ಅಕಾಡೆಮಿ ಪ್ರಶ್ನಿಸುತ್ತಿಲ್ಲ, ಚರ್ಚಿಸುತ್ತಿಲ್ಲ, ಈ ಬಗ್ಗೆ ಹೇಳಿಕೆ ನೀಡುವ ಗೋಜಿಗೂ ಹೋಗಿಲ್ಲ ಎಂದು ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದಲ್ಲಿ ಚಂಪಾ ಅವರು ಪಂಪ ಪ್ರಶಸ್ತಿಯನ್ನು ವಾಪಸ್ ಮಾಡುವ ಮೂಲಕ ದೇಶಾದ್ಯಂತ ಪ್ರಶಸ್ತಿ ವಾಪಸ್ ಚಳವಳಿಗೆ ಕಾರಣರಾಗಿದ್ದರು. ಖ್ಯಾತ ಲೇಖಕಿ ಶಶಿ ದೇಶಪಾಂಡೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಅದರ ಮೌನವನ್ನು ಪ್ರಶ್ನಿಸಿದ್ದರು. ಆ ನಂತರ ಪ್ರಶಸ್ತಿ ವಾಪಸ್ ಹಾಗೂ ಸದಸ್ಯತ್ವಕ್ಕೆ ರಾಜಿನಾಮೆಯ ಚಳವಳಿಯೇ ಆರಂಭವಾಯಿತು .
‘ನಾನೂ ಧಾರವಾಡದವಳೇ, ಕಲಬುರ್ಗಿಯವರನ್ನು ಹತ್ತಿರದಿಂದ ಬಲ್ಲೆ. ಅವರ ಚಿಂತನೆಯ ಕಾರಣಕ್ಕಾಗಿ ಅವರ ಹತ್ಯೆಯಾಗಿದೆ. ಹಾಗಿದ್ದೂ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಏನೂ ಅನಿಸುತ್ತಿಲ್ಲ ಎನ್ನುವುದು ವಿಷಾದಕರ’ ಎಂದು ಶಶಿ ದೇಶಪಾಂಡೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ವಿಶ್ವನಾಥ್ ಪ್ರಸಾದ್ ತಿವಾರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಇದೀಗ ಒತ್ತಡಕ್ಕೆ ಒಳಗಾದ ಅಧ್ಯಕ್ಷ ತಿವಾರಿ ಸಭೆಯನ್ನು ಕರೆದಿದ್ದಾರೆ ಅದೇ ವೇಳೆ ‘ರಾಜಿನಾಮೆ ನೀಡುತ್ತಿರುವುದು ತಪ್ಪು ನಡೆ’ ಅಂದಿದ್ದಾರೆ.
ಪ್ರಶಸ್ತಿ ಹಿಂದಿರುಗಿಸಿದ ಕೆಲವರ ಮಾತುಗಳು ಇಲ್ಲಿವೆ –
I knew Kalburgi. I was upset ever since I heard about his death. I was born and brought up in Dharwad. He also lived in Dharwad. I thought there would be some statement, some regret (by the Akademi) over the manner of his death. It was not an ordinary death. He was killed because of his opinions and ideas. I thought the least I can do now is to move out of the association that does not speak for its members,”

-Shashi Deshpande

“A week after his killing, I participated in a seminar organised by the Sahitya Akademi. I was quite dismayed to see that the seminar began without a word of reference to the recent attack on a scholar honoured by the Akademi.”

– G N Devi

“Our freedom of independent thinking has been violated, and the Prime Minister, chairperson (Akademi) and others have remained silent.”

– Ajmer Singh Aulakh

I am returning this award as no action was taken against Sanatan Sanstha, an outfit whose members were allegedly involved in the killing of rationalists Govind Pansare and Narendra Dabholkar.

– Konkani writer Shivdas

‍ಲೇಖಕರು admin

October 12, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: