ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗೀತಾ ಹೆಗಡೆ ದೊಡ್ಮನೆ ಓದಿದ ವೈದೇಹಿಯವರ ಕವಿತೆ: ಶಿವನ ಮೀಸುವ ಹಾಡು
ಗೀತಾ ಹೆಗಡೆ, ದೊಡ್ಮನೆ ಅಭಿಷೇಕ ಮಾಡಿದಳು ಗೌರಿ ತ್ರಿಲೋಕ ಸಂಚಾರಿಗೆ ಕರೆದೊಯ್ದಳು ಶಿವನ ಶುಭ್ರಸ್ನಾನಕ್ಕೆ.. ಈ ಕವಿತೆ ತೆರೆದುಕೊಳ್ಳುವುದೇ ಇಂಥದೊಂದು ಆಪ್ತ ಸಾಲುಗಳಿಂದ! ವಿಶಿಷ್ಟ ಸಾಹಿತ್ಯ-ಕಸುವಿನ ವೈದೇಹಿ ಅವರ ಕವಿತೆ ಶಿವನ ಮೀಸುವ...
ಮನುಷ್ಯ ಕೇಂದ್ರಿತ ಸಾಹಿತ್ಯ ರಚನೆಯಾಗಬೇಕು: ಪ್ರೊ. ಎಚ್.ಟಿ. ಪೋತೆ
ಸಂದರ್ಶನ: ಕಿರಣ ವಲ್ಲೇಪುರೆ ವಿಜಯಪುರದಲ್ಲಿ ೨೯, ೩೦ ಜುಲೈ ೨೦೨೩ರಂದು ನಿಗದಿಯಾಗಿರುವ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಎಚ್.ಟಿ. ಪೋತೆ ಅವರ ಸಂದರ್ಶನ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದವರಾದ ಪ್ರೊ. ಎಚ್.ಟಿ. ಪೋತೆ ಅವರು ನಾಡಿನ ಸಂವೇದನಾಶೀಲ ಕಥೆಗಾರ, ಕಾದಂಬರಿಕಾರ,...
ಆಶಾ ಜಗದೀಶ್ ಹೊಸ ಕವಿತೆ ಸ್ತಬ್ಧ ಚಿತ್ರ
ಆಶಾ ಜಗದೀಶ್ ಗಡಿಯಾರದ ಮುಳ್ಳುಗಳಿಗೆಬೆಂಕಿ ಹಚ್ಚಿಅವುಗಳ ಅಪರಾಧ:ಸದಾ ಚಲಿಸುತ್ತವೆ ಭೂಮಿಯನ್ನು ಕಟ್ಟಿಸೆರೆಗೆ ಹಾಕಿಅದರ ಅಪರಾಧ:ಸದಾ ತಿರುಗುತ್ತದೆ ಜಗದ ನಿಯಮವನ್ನುಬದಲಾಯಿಸಿಮತ್ತುಯಾರೂ ಚಲಿಸಬಾರದೆಂದುಫರ್ಮಾನು ಹೊರಡಿಸಿ ಮತ್ತೆಚಲಿಸುವ ರಕ್ತವನ್ನು?!ಮಿಡಿಯುವ ಹೃದಯವನ್ನು?!ತುಂಬಿ ಹೊರಚೆಲ್ಲುವ ಉಸಿರನ್ನು?! ಸಾಕು...
ಗಿರಿಧರ ಖಾಸನೀಸ್ ಅವರ ಹೊಸ ಕಥಾನಕಗಳು: ಕಡಲೊಳಗೆ ಹೋದವರು
ಒಂದು ಅರ್ಧ ಘಂಟೆ ಕಾದರೂ ಬೇಟೆ ಸಿಗದೆ ಮುನಿಯನಿಗೆ ಬೇಸರವಾಯಿತು. ಪ್ಲಾಸ್ಟಿಕ್ ಚೀಲದ ಕಡೆ ನೋಡಿದ. ನಾಲ್ಕಾರು ಇಚ್ಕೆ ಪಿಚ್ಕೆ ಮೀನುಗಳು ಕಣ್ಣು ತೆರೆದು ಬಿದ್ದಿದ್ದವು. ಹೆಂಡತಿ ಮಕ್ಕಳಿಗೆ ಏನು ಹೇಳಲಿ ಅಂದುಕೊಂಡ. ಗಾಳ ಎಳೆದಂತಾಯಿತು. ಎಚ್ಚೆತ್ತು ಗಮನಿಸಿದ. ಆಸೆ ಚಿಗುರಿತು. ಶಿವನೇ ಈಗ ಕೈ ಬಿಡಬೇಡ. ಒಂದೇ...
ಅಮೂಲ್ಯ ಪ್ರಕಾಶನದ ಡಾ.ಹೆಚ್.ಸಿ.ಮಹದೇವಪ್ಪ ಅವರ ಸಂವಿಧಾನದ ನೆರಳಲ್ಲಿ ಬಿಡುಗಡೆ
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ರಚಿಸಿರುವ ಸಾಮಾಜಿಕ ಮತ್ತು ರಾಜಕೀಯ ಕುರಿತ ಬರಹಗಳನ್ನು ಒಳಗೊಂಡ 'ಸಂವಿಧಾನದ ನೆರಳಲ್ಲಿ' ಪುಸ್ತಕವು ಶನಿವಾರ ನಗರದ ಕಲಾಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪುಸ್ತಕ ಬಿಡುಗಡೆಗೊಳಿಸಿದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಮಾತನಾಡಿ,...
ಜಿ ಎನ್ ನಾಗರಾಜ್ ಅಂಕಣ: ಕೆರೆಗಳ ವೈದಿಕ ಅನ್ನ ಸಂಸ್ಕೃತಿ Vs ಮುದ್ದೆ, ರೊಟ್ಟಿ ಸಂಸ್ಕೃತಿ
. "ಅವ್ರ ಮನೇಲಿ ದಿನಕ್ಕೊಂದ್ಸರತಿನಾದ್ರು ಅನ್ನ ಮಾಡ್ತಾರಂತೆ ಕಣೋ" ಇದು ನನ್ನ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಮ್ಮ ಗೆಳೆಯರ ನಡುವಣ ಮಾತು. ಕೆಲ ವರ್ಷಗಳ ನಂತರ ನಮ್ಮ ಅಮ್ಮ ಊಟಕ್ಕೆ ಕುಳಿತಾಗೆಲ್ಲ ಹೇಳುತ್ತಿದ್ದ ಮಾತು "ಹೊಟ್ಟೆ ತುಂಬಾ ಹಿಟ್ಟು, ಬಾಯ್ತುಂಬಾ ಅನ್ನ". ಇವು ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಮಾತುಗಳು. ಎರಡು ಸಾವಿರ...
ಇದು ಆಕಾಶವಾಣಿ..
ಬಿ ಕೆ ಸುಮತಿ July 23. ರಾಷ್ಟ್ರೀಯ ಪ್ರಸಾರ ದಿನ.ಇದೇ ದಿನ, ಇಂಡಿಯನ್ broadcasting ಕಂಪನಿ ಮುಖಾಂತರ, ಭಾರತದ ಮೊದಲ ರೇಡಿಯೋ ಪ್ರಸಾರ ಆರಂಭವಾಯಿತು. 1927 ರಲ್ಲಿ. ಬಾಂಬೆ (ಮುಂಬೈ) ಕೇಂದ್ರದಿಂದ. ಆಗ ಪ್ರಾಯೋಗಿಕವಾಗಿ ಎರಡು ಕೇಂದ್ರ ಗಳನ್ನು ನಿರ್ವಹಣೆ ಮಾಡಲು ಕಂಪನಿಗೆ ಅನುಮತಿ ನೀಡಲಾಗಿತ್ತು. 1930 ರಲ್ಲಿ IBC ಎಂದು...
ಬರಗೂರು ಅವರು ‘ಬಿಟ್ಟ ಸ್ಥಾನಗಳ ಸುತ್ತಮುತ್ತ’
ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ಹೆಸರಾದ ಬರಗೂರು ರಾಮಚಂದ್ರಪ್ಪನವರು ತಾವು ನಡೆದು ಬಂದ ಹಾದಿಯ ಬಗ್ಗೆ ಒಂದು ಹಿನ್ನೋಟ ಹರಿಸಿದ್ದಾರೆ. ಇದು ಆಯ್ದ ಅನುಭವಗಳ ಕಥನ. ' ಕಾಗೆ ಕಾರುಣ್ಯದ ಕಣ್ಣು ' ಇದೇ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅಂಕಿತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಭಾಗ ' ಅವಧಿ '...
ಶ್ರೀನಿವಾಸ ಪ್ರಭು ಅಂಕಣ: ನಾಳೇನೇ ಹೋಗಿ ರಾಜೀನಾಮೆ ಕೊಟ್ಟು ಬಾ…
ಅಂಕಣ 104 ಮರುದಿನವೇ ರಘುವೀರನಿಗೆ ಫೋನ್ ಮಾಡಿ "ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿರುವ ಭಾವನವರ ಮನೆಗೆ ಬಂದುಹೋಗಲು ಸಾಧ್ಯವೇ?" ಎಂದು ವಿನಂತಿಸಿಕೊಂಡೆ. ಒಪ್ಪಿಕೊಳ್ಳುತ್ತಾನೆಂಬುದರ ಬಗ್ಗೆ ನನಗೇ ಕೊಂಚ ಅನುಮಾನವಿದ್ದರೂ ಬಹುಶಃ ಅವನಿಗೂ ತಪ್ಪಿತಸ್ಥ ಭಾವನೆ ಒಳಗಿಂದೊಳಗೇ ಕಾಡುತ್ತಿದ್ದಿರಬೇಕು… ಬರುತ್ತೇನೆಂದು ಒಪ್ಪಿಕೊಂಡ. ʻನಾನು...
‘ಮನುಷ್ಯ’ ಒಂದು ಸಣ್ಣ ಗದ್ದಲ ಮಾತ್ರ!
ಗೋಳೂರ ನಾರಾಯಣಸ್ವಾಮಿ ನಮ್ಮ ಕಾಡಿನಲ್ಲಿ ಅಪಾರವಾದ ಜನಪದ ಕಾವ್ಯಗಳು ಜೀವಂತವಾಗಿವೆ. ಇಂತಿಪ್ಪ ಜನಪದ ಕಾವ್ಯಗಳನ್ನು ನಾನಾದರೂ ಪ್ರಜ್ಞಾಪೂರ್ವಕವಾಗಿ ಅಧ್ಯಯನ ಮಾಡಲು ಶುರುವಿಟ್ಟುಕೊಂಡು ಏಳು ವರ್ಷಗಳ ಕಾಲವಾಯಿತು. ಮೊದಲಾಗಿ, ಮಲೆ ಮಾದೇಶ್ವರ ಕಾವ್ಯದ ಹಳೆಯ ಬನಿ ಎಂದೆನಿಸಿಕೊಂಡು ಅದರ ನರನಾಡಿ ಹಿಡಿದು ಹಾಡುವ ಮೈಸೂರು ಮಾದೇವಯ್ಯ ಅವರು...
ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’
ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಮಿಕಿ ಮಿಕಿ ಕಣ್ಣಿನ ಮಿಣಾರಿ ಬೆಕ್ಕು ಸಂತೆಗೆ ಹೊರಟಿತ್ತು. ಪರ್ಸಿನ ತುಂಬಾ ರೊಕ್ಕವ ತುಂಬಿ ಗತ್ತಲಿ ನಡೆದಿತ್ತು. ನೆರಿಗೆಯ ಚಿಮ್ಮಿ ಸರ ಸರ ನಡೆದು ಮಾರ್ಕೆಟ್ ಹೊಕ್ಕಿತ್ತು. ಬ್ಯಾಗಿನ ತುಂಬಾ ತರಕಾರಿಗಳ ಕೊಳ್ಳುವೆನೆಂದಿತ್ತು. ಕೆಂಪನೆ ಹೊಳೆವ ಟೊಮ್ಯಾಟೊ ಹಣ್ಣಿಗೆ ಬಹಳ ಬೆಲೆಯಿತ್ತು. ಮಿರಿ ಮಿರಿ...
ಚೈತ್ರ ಹೊಸ ಕವಿತೆ: ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ
ಚೈತ್ರ ಯಾರೂ ಯಾರಿಗೂ ಇಲ್ಲದ ಪರಿಸ್ಥಿತಿಯೇ? ನಿಜಕ್ಕೂ ದಿನ ಇಷ್ಟು ಕೆಟ್ಟಿದೆಯೇ? ಬರೀ ಬೇಡದ ದಿನಗಳೇ ಬರುತ್ತಿವೆಯೇ? ಹಾಗಿದ್ದರೆ ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ ಬರೀ ಒಣದಿನವೇ, ಬೇಡದ ವಿಚಾರಗಳೇ ತಲೆಗೆ ಬರುತ್ತಿವೆಯೇ? ಹಾಗಿದ್ದರೆ ಇಲ್ಲಿದೆ ಈ ಮರ, ನಿಮಗಾಗಿ. ಕಡಿಯಿರಿ, ಬೇಕಿದ್ದರೆ ಒಣ ಆರಾಮ...
ರವಿಕುಮಾರ್ ಟೆಲೆಕ್ಸ್ ನೋಡಿದ ’ಕಾನೂನಾತ್ಮಕ ಕೊಲೆ’
ದುರಿತ ಕಾಲದಲ್ಲಿ ದುರಿತ ಕಾಲವನ್ನೆ ಮಾತಾಡುತ್ತದೆ ಒಂದು ’ಕಾನೂನಾತ್ಮಕ ಕೊಲೆ’ ಎನ್. ರವಿಕುಮಾರ್ ಟೆಲೆಕ್ಸ್ ತಾನು ಸುಭಿಕ್ಷ ಆಡಳಿತ ನೀಡುವುದಾಗಿ ಕಾಡಿನ ಪ್ರಾಣಿಗಳಿಗೆ ಭರವಸೆ ನೀಡಿ ಅವುಗಳನ್ನು ಒಲಿಸಿಕೊಂಡು ಸಿಂಹದ ವಿರುದ್ದ ಚುನಾವಣೆಯಲ್ಲಿ ಗೆದ್ದು ರಾಜನಾಗುವ ತೋಳ ರಾತ್ರಿ ವೇಳೆ ವೇಷ ಮರೆಸಿಕೊಂಡು ಪ್ರಾಣಿಗಳನ್ನು...
ಗ್ರಾಮೀಣ ಮಹಿಳೆಯ ಗಟ್ಟಿ ಕಥನ- ಕೋಳಿ ಎಸ್ರು
ಮ ಶ್ರೀ ಮುರಳಿ ಕೃಷ್ಣ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆಹಾರದ ಸುತ್ತ ಕ್ಷುದ್ರ ರಾಜಕೀಯವನ್ನು ಸೃಷ್ಟಿಸಿರುವುದು ನಮಗೆ ತಿಳಿದ ಸಂಗತಿಯೇ ಆಗಿದೆ. ಆಹಾರದ ವಿಚಾರದಲ್ಲಿ ಗುಂಪು ಘರ್ಷಣೆ, ಲಿಂಚಿಂಗ್, ಪ್ರಾಣಹಾನಿ, ಅಕ್ರಮಣಗಳು ಇತ್ಯಾದಿ ನಡೆದಿವೆ. ಆದರೆ ಆಹಾರಕ್ಕೆ ಸಾಮಾಜಿಕ, ರಾಜಕೀಯ, ಆರ್ಥಿಕ , ಸಾಂಸ್ಕೃತಿಕ ಮತ್ತು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಬಂಗಾಳದ ಅಂಗಳದಲ್ಲಿ ಭಾಗ: 5 ರಿಷ್ಯಪದಲ್ಲಿ ರಿಷಿಯಾದೆ..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಮಮತಾ ರಾವ್ ನೋಡಿದ- ಸಂಗೀತ ದೇವಬಾಭಳಿ
ಮಮತ ರಾವ್ ನೂರೈವತ್ತು ವರ್ಷಗಳ ಸುದೀರ್ಘವಾದ ಇತಿಹಾಸವಿರುವ ಮರಾಠಿ ಸಂಗೀತನಾಟಕ ಪರಂಪರೆಯಲ್ಲಿ ಮಾನಪಮಾನ, ಸಂಗೀತ ಸೌಭದ್ರ, ಮತ್ಸ್ಯಗಂಧ, ಕಟಾರ್ ಕಾಳಜ್ಯಾತ್ ಘುಸಲಿ, ಮೃಚ್ಛಕಟಿಕಾ ಮುಂತಾದವು ಅಜರಾಮರ. ಇವುಗಳಲ್ಲಿ ಕೆಲವನ್ನು ಮರುರಂಗಪ್ರಯೋಗ ಮಾಡುವ ಪ್ರಯತ್ನವೂ ಸತತವಾಗಿ ನಡೆಯುತ್ತಿದೆ. ಅಂತಿರುವಾಗ ಪ್ರತಿಭಾವಂತ...
‘ಮೈಲ್ಯಾಂಗ್’ನಿಂದ ಆಡಿಯೋ ಸ್ಟೋರಿ ಚಾಲೆಂಜ್
ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ 'ಮೈಲ್ಯಾಂಗ್' ಸಂಸ್ಥೆ ಕನ್ನಡದ ಮೊಟ್ಟ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಅನ್ನು ಜುಲೈ 16ರಿಂದ ಜುಲೈ 25ರವರೆಗೆ ಮೈಲ್ಯಾಂಗ್ ಆಡಿಯೋ ಅಪ್ಲಿಕೇಶನ್ ಅಲ್ಲಿ ಹಮ್ಮಿಕೊಂಡಿದೆ. ಇದರಡಿ ಲೇಖಕರು ತಮ್ಮ ಕತೆಯನ್ನು...
ಸದಾಶಿವ್ ಸೊರಟೂರು ಕಥಾ ಅಂಕಣ -ಕೊನೆಯ ತುತ್ತು..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಬತ್ತಿ ಹೋದ ಹಾಲು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಚಿತ್ರ ನಿರ್ದೇಶಕ ಕೆ ಶಿವರುದ್ರಯ್ಯ ಅವರಿಗೆ ಪ್ರಶಸ್ತಿ
ನೀಲಾ ಪಾಟೀಲ್, ಹನುಮಾಕ್ಷಿ ಗೋಗಿ, ಎಚ್ ಎಸ್ ಅನುಪಮ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರಕಾಶನ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ವಾರ್ಷಿಕ ವಿವಿಧ ದತ್ತಿ ಪ್ರಶಸ್ತಿಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪಟ್ಟಿಯು ಈ ಕೆಳಗಿನಂತಿದೆ. ಕಾಕೋಳು ಸರೋಜಮ್ಮ (ಕಾದಂಬರಿ) ಪ್ರಶಸ್ತಿಗೆ...





















