ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಅಭಿನಯ ತರಂಗ’ದಿಂದ..
ಚಿಗುರಿಯೇ ತೀರುವುದು. ಸರಿಯಲ್ಲವೇ..?
‘ಮಗುವಿನೊಡನೆ ಮಾತು...’ -ವಸುಂಧರಾ ಕದಲೂರು ನೋಡು ಕಂದಾ ರಸ್ತೆ ಬದಿಯಲ್ಲಿ ನಡೆಯುತ್ತಾ ಹೋಗುವಾಗ ನೀನೇನು ಕಾಣುತ್ತೀಯಾ? ಅಕ್ಕಪಕ್ಕದ ಸಾಲು ಮರಗಳನ್ನು ಅಲ್ಲವೇ? ಸರಿ, ಅದೇ ಮರವನ್ನು ಮತ್ತೂ ಸೂಕ್ಷ್ಮ ನೋಡಿ ಹೇಳು ಮತ್ತೇನು ಕಂಡೀತು..? ಆ ಮರದ ಕೈಗೆಟಕುವ ತೊಗಟೆ ಗೀಚಿದ್ದು, ಕೆತ್ತಿದ್ದು, ತೂತು ಮಾಡಿದ್ದು, ಕೈಗೆ ಸಿಕ್ಕ ರೆಂಬೆ...
ನಾಳೆ..
ಜಿ ಪಿ ಬಸವರಾಜು ನಾಳೆ, ಮತ್ತೆ ನಾಳೆ, ಮತ್ತೂ ನಾಳೆ* ತಿರುಗಿಸು ನಾಳೆಯ ಹಾಳೆಗಳ ಕೊನೆಯ ಪುಟ ತಿಳಿಯದು ಯಾರಿಗೂ ದಣಿದರೂ ತಿರುಗಿಸಬೇಕು ಹಾಳೆಯ ನಾಳೆ ನಾಳೆಯ, ತಿಳಿಯದ ಹಾಳೆಯ ರಂಗದ ಮೇಲೆ ನಿಂತವರೊ ರಂಗದ ಕೆಳಗೆ ನಿಂತವರೊ ರಂಗದಿಂದ ದೂರ ಸರಿದವರೊ ಅಂತೂ ಮುಗಿಸಬೇಕು ಆಟ ವೇಷ ಕಳಚಿದ ಮೇಲೆ ಯಾರೂ ಕ್ಯಾರೇ ಎನ್ನದಿದ್ದರೂ ಮುಗಿಸಬೇಕು...
ಎರಡು ಲಾಕ್ ಡೌನ್ ಕವಿತೆಗಳು
ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ...
ಹೊಸದೊಂದು ಕಥೆ : ಸೀರುಡುಕಿ
ಶೋಭಾಮಣಿ ಎಚ್ ಎಂ ಅಡಿಕೆ ಮರದ ಮೇಲಿಂದ ದುಗ್ಗ ಅಡಿಕೆ ಕೊನೆ ತೆಗೆದು ನೇಣಲ್ಲಿ ಜಾರಿಸ್ತಿದ್ದರೆ ಕೆಳಗಡೆಯಿಂದ ಶಂಕರ ಕೊನೆ ಹಿಡಿದು ಪಕ್ಕದಲ್ಲಿ ರಾಶಿ ಹಾಕ್ತಿದ್ದ. ದುಗ್ಗನಿಗೆ ಅರವತ್ತು ವರ್ಷಕ್ಕಿಂತ ಜಾಸ್ತಿನೆ ಆಗಿರಬಹುದೇನೊ, ಆದ್ರು ಮರನ ಸರ, ಸರ ಹತ್ತಿ ಕೊನೆ ತೆಗೆಯೋದು, ಒಂದು ಮರದಿಂದ ಇನ್ನೊಂದು ಮರಕ್ಕೆ ಹೋಗ್ಬೇಕಂದ್ರೆ...
ಮೇ ದಿನ – ಚಿಂತನೆ ಸ್ವರೂಪ ಎರಡೂ ಬದಲಾಗಬೇಕಿದೆ
ನಾ ದಿವಾಕರ ವಿಶ್ವ ಕಾರ್ಮಿಕ ದಿನ (ಇದನ್ನು ಶ್ರಮಿಕ ದಿನ ಎನ್ನೋಣ) , ಅಂದರೆ ಮೇ ದಿನ, ಈ ಬಾರಿ ಮನೆಯೊಳಗೇ ಆಚರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ದಶಕಗಳ ಹೋರಾಟಗಳ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿಯೂ ಸಹ ಮೇಲ್ದರ್ಜೆಗೆ ಬಡ್ತಿ ಪಡೆದಿರುವ ವೈಟ್ ಕಾಲರ್ ನೌಕರರಿಗೆ ಇದೇನೋ ಹೊಸತಲ್ಲ. ಸಾರ್ವಜನಿಕ ರಜೆ...
ಕಂಡೆವು ಆ ದಿನ ರಿಷಿ ಕಪೂರ್ ನನ್ನು..
ಬಾಲಿವುಡ್ ತಾರೆ ರಿಷಿ ಕಪೂರ್ ರ ಭೇಟಿ: ಹೀಗೊಂದು ನೆನಪು. ಶ್ರೀನಿವಾಸ ಜೋಕಟ್ಟೆ, ಮುಂಬಯಿ. ಸುಮಾರು ಮೂರೂವರೆ ವರ್ಷಗಳ ಹಿಂದಿನ ಸಂಗತಿ. (2016). ಬೆಂಗಳೂರಿನಿಂದ ಖ್ಯಾತ ಪತ್ರಕರ್ತ, ಈಗಿನ 'ಕನ್ನಡ ಪ್ರಭ' ಪುರವಣಿಗಳ ಸಂಪಾದಕ (ಆಗ ಅವರು ಉದಯವಾಣಿ ಪುರವಣಿಗಳ ಸಂಪಾದಕರು ), 1988 ರಿಂದ ನನ್ನ ಗೆಳೆಯರಾಗಿರುವ, ಸಾಹಿತ್ಯ ಅಕಾಡೆಮಿ...
ನಮ್ಮೂರಿನ ಚಂದ್ರಮತಿಯರು!
ಸೂರ್ಯಕೀರ್ತಿ ತಲೆತುಂಬಾ ತಾವರೆಮೊಗ್ಗುಗಳ ಮುಡಿದು ಬಟ್ಟೆಯೊಗೆಯಲು ಕೆರೆ ಕೋಡಿಯ ಬಳಿ ಬಂದಾಗ, ಸತ್ಯಹರಿಶ್ಚಂದ್ರರ ಕತೆಗಳ ನೀವೊಮ್ಮೆ ಕೇಳಬೇಕು; ಮೂಗುತಿಗಳ ಮುರಿಸಿಕೊಂಡವರು; ಜುಟ್ಟು ಹಿಡಿದು ಗದ್ದವ ಕಿತ್ತಿಸಿಕೊಂಡವರು, ಕತ್ತಿನಶಿರಕ್ಕೆ 'ಧುಮ್ಮನೇ' ತಟ್ಟಿಸಿಕೊಂಡವರು, ಕುಡಿದ ಗಂಡನ ವಿಕೃತಕಾಮಕ್ಕೆ ಮೊಲೆಗಳ...
ಆತ.. ಲೈನ್‌ಮನ್ ಮಡಿವಾಳರ ಭೀಮಪ್ಪ
ಹಸಿರು ಬಟ್ಟೆಯ ಪಡೆಯಲ್ಲಿ ಬರೆದ ಲೈನ್‌ಮನ್ ಮಡಿವಾಳರ ಭೀಮಪ್ಪನಿಗೆ -ಎಂಬ ಕವಿತೆಯ ಸುತ್ತ ಸತೀಶ ಕುಲಕರ್ಣಿ ಮೇ ೧, ವಿಶ್ವಕಾರ್ಮಿಕರ ದಿನಾಚರಣೆ. ಜಗತ್ತಿನಾದ್ಯಂತ ದುಡಿಯುವ ಕೈಗಳ ವಿರಾಟ ದರ್ಶನದ ದಿನವಿದು. ಆದರೆ ಇದೇ ಮೊದಲ ಸಲ ದುಡಿಯುವ ಕೈಗಳು ನಿತ್ರಾಣಗೊಂಡು ದಿಕ್ಕು ತೋಚದೆ ಸೋತಂತಿವೆ. ಈ ಬಾರಿಯ ಕಾರ್ಮಿಕ ದಿನಾಚರಣೆ ಮೌನಕಾಲದ...
ದೊರೆಗೊಂದು ಪತ್ರ ಬರೆದು ಬಿಡುತ್ತೇವೆ..
ನಿಮ್ಮ ಕತೆ, ಕವಿತೆ ಚುಟುಕು, ಹನಿ , ಹಾರೈಕೆಗಳೆಲ್ಲ ನಮ್ಮ ಗುಡಿಸಲಲ್ಲಿನ ಖಾಲಿ ಗಡಿಗೆಗಳ ತುಂಬುವೆಂದಾದರೆ ಹೇಳಿ ನಿಮ್ಮ ಅಕ್ಷರಗಳೆಲ್ಲವ ಹಣೆಗೊತ್ತಿಕೊಳ್ಳುತ್ತೇವೆ. ಬೋರಲು ಹಾಕಿಬಿಟ್ಟ ಪಾತ್ರೆಗಳ ತೆಗೆದು ಪದ ಪದವ ತುಂಬಿಕೊಂಡು ತಟ್ಟೆ ಮುಂದೆ ಹಸಿದು, ನಿದ್ದೆ ಹೋದ ಕಂದಮ್ಮಗಳ ಎಬ್ಬಿಸಿ ಬಡಿಸಿ ಬಿಡುತ್ತೇವೆ ಮಿಕ್ಕುಳಿದರೆ...
ಕೊರೋನಾ ಕಾರ್ಮಿಕರಿಗೆ ಕಾಡದಿರಲಿ..
ಮಲಿಕಜಾನ ಶೇಖ / ಅಕ್ಕಲಕೋಟ ಪ್ರತಿ ವರ್ಷ ಮೇ 1 ಬಂದಾಗ ಕಾರ್ಮಿಕರ ದಿನ ನೆನಪಾಗುವದು ಸಹಜ. ಅಂದು ಬಹುತೇಕ ರಾಷ್ಟ್ರಗಳು ಕಾರ್ಮಿಕರಿಗೆ ರಜೆ ಕೊಟ್ಟಿರುತ್ತವೆ. ಪಾಪ ಕಾರ್ಮಿಕರು ಕೂಡ ಈ ದಿನ ಸಭೆ, ಆಂದೋಲಕ್ಕೆ ಹೋಗಿ ಕೈಯಲ್ಲಿ ಕೆಂಪು ಧ್ವಜ ಹಿಡಿದು “ಬೇಕೆ ಬೇಕು,. ನ್ಯಾಯ ಬೇಕು”, “ನಮ್ಮನ್ನು ಗುಲಾಮರಂತೆ ಕಾಣಬೇಡಿ” ಎಂದು ಕೂಗಿ ಮನೆಗೆ...
ಕೊರೊನ ಕ್ಯಾಮೆರಾ ದಿನಗಳು..
ಕೊರೊನ ರಜಾದಿನಗಳ ಜ್ಞಾನೋದಯ ಶ್ವೇತಾ ಹೊಸಬಾಳೆ ಈಗ ಒಂದೆರಡು ತಿಂಗಳಿಂದ ಕರೋನಾದೇ ಹಾವಳಿ. ಎಲ್ಲೆಲ್ಲೂ ಅದರದೇ ಸುದ್ದಿ. ಸುದ್ದಿಗೆ ಪರ‍್ಯಾಯ ಪದವೇ ಕರೋನಾ ಎಂಬಂತಾಗಿಬಿಟ್ಟಿದೆ. ಸಡನ್ನಾಗಿ ಎಲ್ಲವೂ ಬದಲಾಗಿದೆ; ಬದಲಾಗಲೇಬೇಕಾದ ಅನಿವಾರ್ಯತೆ ಮನುಷ್ಯನ ಮುಂದೆ ಸೃಷ್ಟಿಯಾಗಿದೆ. ಬದುಕು ಬದಲಾಗಿದೆ; ಜೀವನಶೈಲಿ, ದಿನಚರಿ,...
ಸದ್ದೂ ಬರದಂತೆ ಎದ್ದು ಹೋದ..
ಅಲ್ವಿದಾ 'ಅಲ್ಲಮ' ಗಿರೀಶ ಜಕಾಪುರೆ ಎಲೆಯ ಮೇಲಿನ ಇಬ್ಬನಿಯಂತೆ ಇದ್ದು ಹೋದ ನಸುನಗುತ್ತಲೇ ಜಗದ ಮೋಹ ತೊರೆದು ಹೋದ ಅವನ ಅಭಿನಯ ಎಂದೂ ನಟನೆ ಅನಿಸಲಿಲ್ಲ ಇರುವಷ್ಟು ದಿನ ಎಲ್ಲರ ಮನಸು ಗೆದ್ದು ಹೋದ ಕೊನೆಯುಸಿರಲ್ಲೂ ವಿನಯ ಮೆರೆದ ವಿನಯವಂತ ಹೋಗಿರುವ ಸದ್ದೂ ಬರದಂತೆ ಎದ್ದು ಹೋದ ವಿಧಿ ಬಲವಿರದಿರೆ ಹಸಿರೆಲೆಯೂ ಉದುರುತ್ತದೆ...
ನಿಜಕ್ಕೂ ಧನ್ಯ ಇರ್ಫಾನ್ ಭಾಯ್..
ಕಟ್ಟ ಕಡೆಯ ಬಿಂದು-ಇದ್ದೆಡೆಯೇ ಕಂಡಾಗ ನಾ ದಿವಾಕರ ಇಂದು ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದು ತಿಳಿದಾಗ ಕೆಲವು ಕ್ಷಣ ಮಾತೇ ಹೊರಡಲಿಲ್ಲ. ಇತ್ತೀಚೆಗೆ ಕಂಬನಿ ಬತ್ತಿ ಹೋಗಿದೆ ಇಲ್ಲದಿದ್ದರೆ ಸುರಿದುಹೋಗುತ್ತಿತ್ತೇನೋ ! ಆದರೂ ಕಣ್ಣಾವೆಗಳು ಒದ್ದೆಯಾದ ಅನುಭವ. ನೂರಾರು ಚಿತ್ರಗಳಲ್ಲಿ ನಟಿಸಿದವರಲ್ಲ, ಗಗನದೆತ್ತರದ ಕಟೌಟ್...
ಇದು ಖಾಲಿತನದ ಸಮಯ..
ಸುಮಿತ್ ಮೇತ್ರಿ ಇದು ಖಾಲಿತನಕ್ಕೆ ತಗುಲಿದ ಖಾಲಿತನದ ಸಮಯ ಅವರು ಇವರು ನಾವು ನೀವು ಇದ್ದಾಗ ಅಷ್ಟಾಗಿ ಗಮನಿಸಿರುವುದಿಲ್ಲ ಇಲ್ಲವಾದಾಗ ಮಾತ್ರ ಎಲ್ಲರನ್ನೂ ಸೆಳೆಯುತ್ತದೆ ಗಮನ. ಇಲ್ಲವಾದವರು ನಾವೇ, ಮನುಷ್ಯರು! ಪೋಟೋ ಅಪ್ಲೋಡ್ ಮಾಡಿ ಒಂದು ಹಾಡು ಕೇಳಿ ಸಾವಿಲ್ಲದಂತೆ ಮೌನಾಚರಣೆ ಮಾಡಿ ಕಣ್ಣೀರಾಗಿ ವಿದಾಯಿಸಿಬಿಡುತ್ತೇವೆ....
ಆತ ಹೊರಟೇ ಹೋದ..
ಎಂ. ಪ್ರಜ್ವಲ್ ನೆನ್ನೆ ರಾತ್ರಿ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಅಂತ ಗೊತ್ತಾದಾಗ ಮೌನವಾಗಿದ್ದೆ. ಆದರೆ, ಇವತ್ತು ಬೆಳಗ್ಗೆ ಸುಮಾರು ಹನ್ನೊಂದೂವರೆ ಹೊತ್ತಿಗೆ ಅವನು ತೀರಿಕೊಂಡ ಅಂತ ಸುದ್ದಿ ಬಂತು. ಒಂದು ಕ್ಷಣ ಮನಸ್ಸು ಖಾಲಿ ಆದಂತಾಯ್ತು. 1988ರಿಂದ 2019ರ ತನಕ ಹಲವಾರು ವಿಭಿನ್ನ ರೀತಿಯ ಸಿನಿಮಾಗಳಲ್ಲಿ ಆತ ನಟಿಸಿ ಸೈ...
ಜೋರು ಮಳೆಯ ಮುಂಜಾನೆ ಆತ ಹೊರಟುಹೋದ..
ಇರ್ಫಾನ್ ಇತ್ತೀಚೆಗೆ ಹೇಳ್ಕೊಂಡಿದ್ದ ಮಾತು - ನಾನು ನನ್ನ ಪ್ರೀತಿಯ ಹೆಂಡತಿಗೋಸ್ಕರವಾದ್ರೂ ಬದುಕಬೇಕು ಅಂತ. ಎನ್ ಎಸ್ ಡಿ ಕಾಲದಿಂದಲೇ ಅವರ ಗೆಳೆತನ, ಪ್ರೇಮ. ಇಷ್ಟವಿಲ್ಲದಿದ್ದರೂ ಆಕೆಗೆ ಬಾಯ್ ಮಾಡಿ ಹೋಗೇಬಿಟ್ಟ.. ಮಾತಿನ ಅಗತ್ಯವೇ ಇಲ್ಲದೇ ಕಣ್ಣು, ಚಲನೆಗಳಲ್ಲೇ ಎಲ್ಲವನ್ನೂ ಹೇಳುತ್ತಿದ್ದ ಇರ್ಫಾನ್, ನೆಲದ ಮೇಲೆ ಕೂತು...
ಲಿಬ್ಯಾ, ಕ್ಯೂಬಾದಲ್ಲಿ ಎರಡು ಹಕ್ಕಿಗಳು
ಫೀಡೆಲ್ ಕ್ಯಾಸ್ಟ್ರೋ ಮತ್ತು ಮೌಮರ್ ಗಡಾಫಿ ಎಂಬ ಎರಡು ಫೀನಿಕ್ಸ್ ಹಕ್ಕಿಗಳು ಉದಯ್ ಇಟಗಿ ”ಅವಧಿ’ಯಲ್ಲಿ ಪ್ರಕಟವಾಗಿದ್ದ ನನ್ನ ’’ ಅಂಕಣವನ್ನು 2018 ರಲ್ಲಿ ಪುಸ್ತಕವಾಗಿ’ ಹೊರತರಬೇಕೆಂದುಕೊಂಡಾಗ ಅದಕ್ಕೆ ಮುನ್ನುಡಿಯನ್ನು ಯಾರಿಂದ ಬರೆಸಬೇಕು ಎಂದು ಯೋಚಿಸುತ್ತಿರುವಾಗ ನನಗೆ ಮೊದಲು ಹೊಳೆದ ಹೆಸರು ’ಅವಧಿ’ಯ ಸಂಪಾದಕರಾಗಿದ್ದ...
ಕೊರೊನಾ ವೈರಸ್ ದುಷ್ಪರಿಣಾಮಗಳು ಮತ್ತು ಟೆಲಿಮೆಡಿಸಿನ್ ಅಗತ್ಯತೆ
ಡಾ. ಪ್ರಶಾಂತ ನಾಯ್ಕ, ಬೈಂದೂರು ಅಂದು, ಇಡೀ ರಾಷ್ಟ್ರ ಸ್ಥಗಿತಗೊಂಡಿತ್ತು; ಸಂಘಟನೆಗಳು ಯಾವುದೋ ಒಂದು ನಿರ್ಣಯದ ವಿರುದ್ಧ ಬಂದ್‌ಗೆ ಕರೆ ನೀಡಿದ್ದರಿಂದ, ರಸ್ತೆ ಸಂಚಾರ, ಅಂಗಡಿ-ಮುಂಗಟ್ಟುಗಳು ಎಲ್ಲವೂ ಸ್ತಬ್ಧ. ಒಂದು ಕುಗ್ರಾಮ, ಈ ಪರಿಸ್ಥಿತಿಯಲ್ಲಿ ಬಾಲಕಿಯೊಬ್ಬಳು ತೀವ್ರವಾಗಿ...
ಪಾಪದ ಹೂವಾದರೂ ಆಗಬೇಕಿತ್ತು..
-ಅಭಿಷೇಕ್ ವೈ.ಎಸ್. ಬೆಳಕು ಹರಿಯುವ ಮುನ್ನ ನೆತ್ತರು ಮೆತ್ತಿಕೊಂಡು ಇಬ್ಬರ ಗುಟ್ಟುಗಳನ್ನು ಬಚ್ಚಿಟ್ಟ ರಾತ್ರಿಯಲ್ಲಿ ಯಾರೂ ಕಸಿಯಲಾರದ ಮಾತುಗಳನ್ನಾದರೂ ಆಡಬೇಕಿತ್ತು.. ನನ್ನ ಎದೆಯ ಮಹಲಿನಲ್ಲಿ ಮಹಾಕಾವ್ಯ ಬರೆದ ನಿನ್ನ ಒಣಗಿದ ತುಟಿಗಳನ್ನು ಒಮ್ಮೆಯಾದರೂ ಚುಂಬಿಸಿ ವಿದಾಯ ಹೇಳಬೇಕಿತ್ತು. ನಿನ್ನ ಕಣ್ಣೊಳಗಿನ ಒಡೆದುಹೋದ ನನ್ನ ಬಿಂಬದ...
ಸಾವಿರ ಗಾಯಗಳು ಮಾದಿವೆಯಷ್ಟೇ..
ಅವ್ವ ರಾಜೀವ ಸಖ ಹರಿದ ಜೋಡುಗಳಿಗೆ ಆದೇ ಆಲದ ಬಿಳಲ ಪೋಣಿಸಿ, ಸುಡುಬಿಸಿಲೊಳು ದರಾ ಬರಾ ಎಳಕೊಂಡ ಉಂಗುಟ, ಮತ್ತೆ ಬಿಗಿಯಾಗದಷ್ಟು ಸವೆಸಿದ ಎದೆಯ, ಸಾವಿರ ಗಾಯಗಳು ಮಾದಿವೆಯಷ್ಟೇ.. ಹಸಿದ ಹೊಟ್ಟೆಯಾ ತುಂಬಾ, ಮಾರ್ಜಾಲನೂ ನಾಚಿಸುವಷ್ಟು, ಗೊರ್ರರ್ರೋ ಎನುವಾ.. ಶಬುಧಗಳ ಪೇರಿಸಿಟ್ಟ ಹಸಿವೆಯ ರಾತ್ರಿಗಳಿಗೆ, ಮುದ್ದೆ ಅಂಬಲಿ...





















