ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಿ ಡಿ ಜತ್ತಿ ಪಾಲಿಗೆ ಸಿಕ್ಕ ಬುತ್ತಿ- ಕಂಠಿ ಕೊರಳಿಗೆ ಬಿದ್ದ ಕಂಠೀಹಾರ
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಹೊರಗೆ ಸಣ್ಣಗೆ ಮಳೆಮಳೆಯ ಹೊಡೆತಕ್ಕೆ ಆವರಿಸಿದ ಗಾಳಿ ಮೈ, ಮನಸ್ಸುಗಳನ್ನು ಹೆಪ್ಪುಗಟ್ಟಿಸುತ್ತಿದೆ ಎಂಬ ಭಾವ ದಟ್ಟವಾಗುತ್ತಿದ್ದಂತೆಯೇ ಬಿಸಿ,ಬಿಸಿಯಾದ ಕಾಫಿ ಹೀರುತ್ತಾ ನಾನು ಅವರ ಮುಖ ನೋಡಿದೆ. ಅವರು ತಾವು...
‘ಸ್ಪರ್ಶಕ್ಕೆಷ್ಟು ರೂಪಾಯಿ?’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ''ಅದು ಕೈನಸ್ಥೆಟಿಕ್ ಇಂಟಿಲಿಜೆನ್ಸ್'', ಅಂದೆ ನಾನು. ನಾನೇನೋ ಮಹಾಸಂಗತಿಯನ್ನು ಹೇಳಿದೆನೆಂಬಂತೆ ಆತ ಹಾಂ ಎಂದು ರಾಗವೆಳೆದ. ದೇಹವನ್ನೂ ಕೂಡ ಭಾಷೆಯಂತೆಯೇ ಬಳಸಬಹುದು ಎಂಬ ಅರಿವು ಸಾಮಾನ್ಯವಾಗಿ ಬಹಳಷ್ಟು...
ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..
ಅನುಪಮಾ ಪ್ರಸಾದ್ ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು ವರ್ಷಕ್ಕೆ ಹಿರಿಯಳಾದ ಗೆಳತಿ ಜೊತೆಯಾಗುತ್ತಿದ್ದಳು. ಅವಳ ತಂದೆ ಆಧುನಿಕ ಚಿಂತನೆಯ ಹೆಸರಾಂತ ಕನ್ನಡದ ಬರಹಗಾರ. ನಾನೋ ತೀರಾ ಮಧ್ಯಮ ವರ್ಗದ ಸಂಪ್ರದಾಯಸ್ಥ ರೈತ ಕುಟುಂಬದವಳು. ಆಕೆ...
ವಿಶೇಷ ಸಂದರ್ಶನ: ಎಚ್ ಎಸ್ ಆರ್ ಜೊತೆ ವಾಸುದೇವಮೂರ್ತಿ ಸಂವಾದ
ಭಾಷೆ, ಸಂಸ್ಕೃತಿ, ದಲ್ಲಾಳಿಗಳು, ಆತ್ಮವಿಮರ್ಶೆ ಇತ್ಯಾದಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಹೀಗೆ ಯಾವುದೇ ವಿಚಾರವನ್ನಾದರೂ ಸರಿ, ಗಂಭೀರವಾಗಿ, ವಿಮರ್ಶಾತ್ಮಕಾಗಿ ತೂಗಿನೋಡುವ , ಚಿಂತಿಸುವ ಪ್ರೊ.ಎಚ್.ಎಸ್. ರಾಘವೇಂದ್ರರಾವ್ ವಿಮರ್ಶಕರೆಂದೇ ಖ್ಯಾತರಾಗಿದ್ದಾರೆ. ಅನುವಾದಕರಾಗಿಯೂ ಅವರ ಕೊಡುಗೆ...
ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..
ಎಂ ಆರ್ ಭಗವತಿ ಕೋಳಿ ಮೊಟ್ಟೆಯನ್ನೊಡೆದು, ಮೇಲಿನ ಚಿಪ್ಪನ್ನು ಸ್ವಲ್ಪ ತೆಗೆದು, ಒಳಗೆ ಹತ್ತಿಯನಿಟ್ಟು, ಪಿಳಿಪಿಳಿ ಕಣ್ಣನು ಬರೆದು, ಕೆಂಪು ಕೊಕ್ಕನ್ನು ಮೂಡಿಸಿ, ಹಕ್ಕಿಗಾಗಿ ಕನಸಿದ ದಿನವೊಂದಿತ್ತು. ಈಗ ನಿಂತು ನೋಡಿಕೊಳ್ಳುವಾಗ ಮನಸ್ಸು ಬಾಲ್ಯಕಾಲಕ್ಕೆ ಓಡಿಹೋಗಿ ನಿಲ್ಲುತ್ತದೆ. ಹೀಗೆ ಮೂವತ್ತೈದು ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿ...
ನಟೋರಿಯಸ್ ಕೈದಿಗಳ ಜೊತೆಯಲ್ಲಿ..
ಹುಲುಗಪ್ಪ ಕಟ್ಟೀಮನಿ ಸೆಪ್ಟೆಂಬರ್ 19 ಬಿ.ವಿ.ಕಾರಂತರ ಜನ್ಮದಿನ. ರಂಗಭೂಮಿಯಲ್ಲಿರುವವರಿಗೆ ಕಾರಂತರ ನೆನಪೇ ಒಂದು ರೋಮಾಂಚನ. ಅವರ ನೆನಪಿಗೆ ಮತ್ತು ಗೌರವಕ್ಕೆ ಸಲ್ಲಿಸಿದ ನುಡಿ ನಮನ ಇಲ್ಲಿದೆ. ನಾನು ಮೂಲತಃ ನಟ. ನನ್ನ ಗುರು ಬಿ.ವಿ ಕಾರಂತರು. ಇವರು ಭಾರತೀಯ ಆಧುನಿಕ ರಂಗಭೂಮಿಯ ಆದಿ ಪುರುಷರಲ್ಲೊಬ್ಬರು. ನಟನೆ ಎಂದರೆ ಬರೆದ...
ಊರು ಬಾ ಎಂದು…
ಸುಮಿತ್ ಮೇತ್ರಿ ಹಲಸಂಗಿ ಊರ ಹತ್ತಿರದ ಹಳ್ಳ ಬತ್ತಿದೆ, ಬಾವಿಗಳಿಗೆ ನೀರು, ಮಳೆ ಇಲ್ಲ ಅಂದರೆ ಇಲ್ಲಿ ಎದೆಯ ಅಂಗಳ ಒಣಗಿದಂತೆ ಭಾಸವಾಗುತ್ತದೆ. ಅಪ್ಪ ಸತ್ತ ಮೇಲೆ, ಅಮ್ಮನನ್ನು ಮಗುವಿನಂತೆ ಜೋಪಾನವಾಗಿ ಕಾಪಿಟ್ಟುಕೊಂಡು ಬದುಕುತ್ತಿದ್ದೇನೆ. ಇದೆಲ್ಲ ನನ್ನ ಊರಿನ ಮಣ್ಣಿನ ಸಂಸ್ಕಾರ ಅಂತಲೇ ಹೇಳಬಹುದು ಎನ್ನುತ್ತಾರೆ ಮಧುರ ಚೆನ್ನರ...
ವಿಷವಿಲ್ಲದ ತರಕಾರಿ, ಅಸಲು ಗಿಟ್ಟದ ಮಾರಾಟ..
ಪಿ ಪಿ ಬಾಬುರಾಜ್ ನಾನೊಬ್ಬ ವಕೀಲ. ಅದಕ್ಕಿಂತ ಹೆಚ್ಚಾಗಿ ನಾನು ಗುರುತಿಸಿಕೊಂಡಿರುವುದು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ. ಕೋವಿಡ್ ಹೆಸರಿನಲ್ಲಿ ನಡೆದ ಲಾಕ್‍ಡೌನ್ ಮತ್ತು ಅನಿವಾರ್ಯ ‘ಗೃಹಬಂಧನ’ವು ನಿರಂತರವಾಗಿ ಜನಸಂಪರ್ಕದಲ್ಲಿರುವ ನನ್ನಂಥವರಿಗೆ ಪ್ರಾಣ ಹಿಂಡುವಂತಾಗಿತ್ತು ಎನ್ನುವುದು ಕಟುವಾಸ್ತವ. ಲಾಕ್‍ಡೌನ್...
ಕೋಮು ಸೌಹಾರ್ದತೆ ಕಾಪಾಡುತ್ತಾ..
ಡಾ.ಕೆ.ಷರೀಫಾ ನಮ್ಮ ಸಮಾಜದಲ್ಲಿ ಸೌಹಾರ್ದ ಬದುಕಿಗೆ ಭಂಗ ತರುವಂತಹ ಅನೇಕ ಸಂಗತಿಗಳಿವೆ. ಶಾಂತಿಯ ಮತ್ತು ಸೌಹಾರ್ದ ಬದುಕಿಗೆ ಅಡ್ಡಿಯಾಗುವ ಅನೇಕ ಅಂಶಗಳು ದೇಶದಲ್ಲಿ ತಾಂಡವವಾಡುತ್ತಿವೆ. ಕೋಮುವಾದಿಗಳು ಮೂರು ದಶಕಗಳಿಂದ ಹೆಚ್ಚು ಕ್ರಿಯಾಶೀಲರಾಗುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರು ಮತಾತೀತವಾಗಿ ಸೌಹಾರ್ದ ಸಂದೇಶವನ್ನು...
ನೆಲ ನೆಲ ನೆಲವೆಂದು…
ವಿಜಯಕಾಂತ ಪಾಟೀಲ ಈ ನೆಲಮೋಹಕ್ಕೆ ಮಣ್ಣಮೋಹಕ್ಕೆ ಮರಳಾಗದವರುಂಟೇ..? ರಿಯಲ್ ಎಸ್ಟೇಟ್ ಮಂದಿಯಿಂದ ಹಿಡಿದು ಮಣ್ಣಾಟ ಆಡುವ ಚಿಣ್ಣರವರೆಗೂ ಈ ನೆಲದ ನಂಟು ಬೇಕು. ಮಗು ಜಗದ ಜಗುಲಿಯಲ್ಲಿರುವವರಿಗಂತೂ `ಈ ಮಣ್ಣು ನಮ್ಮದು, ಈ ಅರುಲ ರಾಡಿಯೂ ನಮ್ಮದು..!' ಅನ್ನುವಷ್ಟು ಗುಂಗು. ರೈತಾಪಿ ಮಂದಿಯ ಮಟ್ಟಿಗೆ ಈ ನೆಲವೇ ಎಲ್ಲದೂ; ದೈವ ಅಂದರೂ ಸರಿ,...
ಪಾತ್ರಧಾರಿ
ಅಮರೇಶ ಗಿಣಿವಾರ ವಿರೇಶಪ್ಪಗೌಡ ಹೊರಗಿನಿಂದ ಎದ್ದು ಬಂದವನೇ ``ಲೇ ಗೋವಿಂದ ಇವತ್ತ ಮಲ್ಲನಗೌಡ್ರನ್ನ, ಬಲದಂಡಪ್ಪನನ್ನ ಬಸವಣ್ಣ ಕಟ್ಟಿಗಿ ಬರಬೇಕೆಂದ ಹೇಳಿ ಬಾ" ಎಂದ. ಗೋವಿಂದ `ಮುಂಜಮುಂಜಾನಿ ಸುರುವಾತಿ ಗೌಡಂದು' ಅನಕೋಂತ ಹೇಳಲು ಹೊರಟ. ವೀರೇಶಪ್ಪಗೌಡನ ಆಜ್ಞೆಯಂತೆ ಸಾಯಂಕಾಲ ಊರಮಂದಿ ಸೇರಿದರು. ಊರಿನ ದೈವದ ಮುಂದ ಹೇಳದೇನಂದ್ರ "ಈ ಸಲ...
ಬಿಡಿಸಿಕೊಂಡ ಗೆರೆಗಳು
ಎಂ ಎಸ್ ಮೂರ್ತಿ ಯಾವುದೋ ಒಂದರಿಂದ ಬಿಡಿಸಿ ಸರಳ ರೇಖೆ ಬಿಡಿ, ಬಿಡಿಯಾಗಿ ನವಿರು ಸುರುಳಿಯಾಗಿ ಬಂಧ ಮುಕ್ತ ಮೊನಚುರೇಖೆ ತಾನೊಂದರದರೊಳಗೆ ಜೀವ ದ್ರವ ತಣ್ಣಗೆ ಹರಿದ ಕಾಲುವೆ ನೀರರೇಖೆಯೊಳೊಳಗೆ ತಾನಂಟಿಕೊಂಡ ಕರ್ಮ ಹಿಂಗಲಾರದು ತೃಷೆ ಬಿಡಿಸಿಕೊಂಡ ಗೆರೆಗಳ ನಶೆ ಚಿತ್ತ ಚಿತ್ರ ಬಿಡಿಸಿ ಗೆರೆಗಳು ಚಿತ್ತದಾಚಿತ್ರ ಬಿಂಬ ಬಿಡಿಸಿ...
ಭೂಮಿಗೆ ಇಳಿಬಿದ್ದ ನಕ್ಷತ್ರ ಪುಂಜ
ಕಿರಸೂರ ಗಿರಿಯಪ್ಪ ಸುಡುವ ಬಿಸಿಲಿನು ನೆತ್ತಿಗೆ ಒಕ್ಕರಿಸಿಕೊಂಡು ತಲೆಕೆಳಗಾಗಿ ಬಿದ್ದಕೊಂಡ ಬೀಜದೊಳಗೆ ಚಿಗುರಿನ ಧ್ಯಾನ ತಡೆಯಲು ಅಸಾಧ್ಯ! ಏಕೆಂದರೆ ಅದು ಅಲ್ಲಮನ ಅಂಗಳ ಹೆಗಲಿಗೆ ಮೆತ್ತಿದ ತಗಣಿಗಳ ಕುಟ್ಟಿ ಅಲೆಮಾರಿ ಕಣ್ಣಿನ ಜೋಳಿಗೆಯೊಳಗೆ ಬೆವರಿನ ಮನೆ ಕೆಡವಲು ಅಸಾಧ್ಯ! ಏಕೆಂದರೆ ಅದು ಲಕ್ಕವ್ವನ ಅಕ್ಷಯ ಪಾತ್ರೆ ಹೂ ನಗೆಯ...
ಗದ್ಯ ಕವಿತೆಗಳು: ಜ್ವರ ಬಂದ ದಿನ
ಟಿ ಎಸ್ ಗೊರವರ ಜ್ವರ ಬಂದ ದಿನ ನಾಲಿಗೆಯ ಮ್ಯಾಲೆ ನರ್ತಿಸಿತು ಕಹಿ. ಭಾರವಾದವು ಕಣ್ಣು, ಗಿರಿಗಿಟ್ಲೆಯಾಡಿತು ಕೆಮ್ಮು ಗಂಟಲಲ್ಲೆ. ಕಹಿ ಗುಳಿಗೆ, ಕಾದು ಆರಿದ ನೀರು, ಅನ್ನ-ಹಾಲು, ವೈದ್ಯರು ಹೇಳಿದ ಹಾಸಿಗೆ ಪಥ್ಯ, ನಿಲ್ದಾಣ ತಲುಪಿ ನಿಂತಂತಾದ ಅನುದಿನದ ದಿನಚರಿ... ಎಲ್ಲವೆಲ್ಲವು ತೆಂಗಿನ ಮರದಿಂದ ಕಳಚಿ ಬೀಳುವ ಕಾಯಿ ನೆನಪಿಸಿದವು....
ಖಾಲಿ ಕಾಗದದ ಮೇಲೆ..
ಎಂ ಎಸ್ ರುದ್ರೇಶ್ವರಸ್ವಾಮಿ ಖಾಲಿ ಕಾಗದದ ಮೇಲೆಏನನ್ನಾದರೂಬರೆದುಕೊಡು, ಇಲ್ಲವೆ ಮಳೆಯನ್ನಾದರೂಚಿತ್ರಿಸು, ಎಂದಳು. ಖಾಲಿ ಕಾಗದದ ಮೇಲೆಅಕ್ಷರಗಳನ್ನುಮೂಡಿಸುತ್ತ ಹೋದೆ: ಅಕ್ಷರಗಳು ಬೆಳೆದುಕಪ್ಪು ಚುಕ್ಕಿಗಳಾದವುಪದಗಳು ಅರ್ಥ ಕಳೆದುಕೊಂಡವು. ಅವಳು ಒಂದೊಂದುವಾಕ್ಯವನ್ನು,ಪದಪುಂಜವನ್ನು, ಪದಗಳ ನಡುವಿನನಿಶ್ಯಬ್ದವನ್ನು ಆಲಿಸಿದಳು....
ನೆನಪಿನ ಒಕ್ಕಲು
ಪ್ರವೀಣ ನಮಗೊತ್ತುನಮ್ಮನ್ಯಾರೂ ಕೇಳಾಂಗಿಲ್ಲಾನಮದ್ಯಾರೂ ಹರ್ಯಾಂಗಿಲ್ಲಾ ನಮಗೊತ್ತುತಲೆತಲಾಂತರಗಳಿಂದ ಜೀವಜೀವಗಳದಾಟಿ ನರಕೋಶಗಳಲಿ ಸಂಚರಿಸಿವಂಶವಾಹಿನಿಗಳಲಿ ನೆಲೆಸಿದೆ ನೆನಪುಉಪಯೋಗಿಸಿದರೆ ಬೆಳೆದುನಿರ್ಲಕ್ಷಿಸಿದರೆ ಅಳಿಯುವ ನೆನಪುಪಾಪ ಡಾರ್ವಿನ್ ಅವಯವ ಮಾತ್ರ ಅನಕೊಂಡಿದ್ದ ನಾವು ನೆನಪು ಸರದಾರರುಪ್ರೀತಿಯಿಂದ ನೇವರಿಸಿ...
ಇತಿಹಾಸ ಸೇರಿದವರ ಕತೆ
ಕೈದಾಳ್ ಕೃಷ್ಣಮೂರ್ತಿ ಎಂತಹ ಗಹನವಾದ ವಸ್ತುವಾದರೂ ಎಕ್ಸ್ಪೈರಿಯಾದ ಮೇಲೆ ತಿಪ್ಪೆ ಸೇರಲೇಬೇಕು ಕೊಳೆತರಷ್ಟೇ ಗೊಬ್ಬರ ಎಷ್ಟೇ ಗಹನವಾದ ಜೀವವಾದರೂ ತೀರಿಹೋದ ಮೇಲೆ ಹೆಣವಾಗಬೇಕು ಕೊನೆಗೆ ಮಣ್ಣೋ? ಗಾಳಿಯೋ? ಕೆಲವರು ಮಣ್ಣಲ್ಲಿ ಮಣ್ಣಾಗಿ ಒಂದು ದಿನ ಮರವಾಗಿ ಹೂವ್ವಾಗಿ ಹಣ್ಣಾಗಿ ಆಹಾ ಮತ್ತೆ ಕೆಲವರು ಬೆಂಕಿಯಾಗಿ ಬೂದಿಯಾಗಿ ಗಾಳಿ ಸೇರಿ...
ಕವನ ಹುಟ್ಟಿತು
ಎಲ್.ಎಸ್. ಶಂಕರಸ್ವಾಮಿ ಗರಿಕೆ ಹುಲ್ಲೊಂದುಗಾಳಿಗೆ ತೂಗಿಚೆಲ್ಲಿತು ಮಂಜಿನ ಹನಿಗಳ ನೀರಿನಲೆಯೊಂದುಚಿಪ್ಪನೊಂದನು ಅಪ್ಪಿತುಮಡಿಲ ತೊಟ್ಟಿಲಿಗೆ ಬೆಳಕಿನ ಕಿರಣವೊಂದುಕುಕ್ಕಿ ಕತ್ತಲನುಕೋರೈಸುವ ಒಳನೋಟವಿತ್ತು ಕಂಪಿಸಿ ಗರಿಯೊಂದುಶಾಯಿಯ ಕತ್ತಲಲಿಸಾಲು ಕಟ್ಟುವುದು ವಸ್ತು ಪ್ರಾಸಗಳ ಆ ಕ್ಷಣ ಲಲನೆಯರು ಹಾಡುವರು,...
ಅಂಬೆಯ ಅಳಲು
ರಾಜು ಹೆಗಡೆ ಗೆದ್ದವನೂ ಬಿಟ್ಟಗೆಲ್ಲುತ್ತೇನೆ ಎಂದವನೂಬಿಟ್ಟಆಸೆ ಕನಸುಗಳೆಲ್ಲಕಲಕಿ ಹೋದವು ಕಾಡಿನ ಬೇಡನಕರತಂದೆನಾಡಿನಲ್ಲಿ ಹೊಡೆಯಲಾರದೇಹೋದತಾಯ ಕೊಂದವನೇಬಂದಸೋತೆ ಎಂದುಕೂತ ಈಗ ಸುತ್ತಲೂಧಗಧಗ ನಗುವಬೆಂಕಿ ಹೆಣ್ಣೂ ಅಲ್ಲದಗಂಡೂ ಅಲ್ಲದಶಿಖಂಡಿಯೇ ಆಗಬೇಕೇಇದನೆಲ್ಲ ಎದುರಿಸಲು. ಗಾಳಿ ಮಾತ್ರ ಒಂದು ನಿತಾಂತ ಮೌನನಿಂತು ಬಿಟ್ಟಿದೆಕತ್ತಲೆಯ...
ಸಂಡೇ ಸಂದರ್ಶನ: ಜಿ ರಾಜಶೇಖರ್ ಹಾಗೂ ಕೆ ಫಣಿರಾಜ್ ಸಂವಾದ
ಪರಂಪರೆಯ ನಂಟು ಕಳೆದುಹೋದ ಈ ಹೊತ್ತಿನಲ್ಲಿ ಪ್ರಖರ ಚಿಂತಕರಾದ ಜಿ.ರಾಜಶೇಖರ್ ಅವರು ಮಾತನಾಡುವುದೆಂದರೆ ಅದು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂಗತಿಗಳ ಮೇಲೆ ಬೀಳುವ ಹೊಸ ಬೆಳಕು; ಹೊಸ ದಿಕ್ಕಿನಲ್ಲಿ, ಹೊಸ ನೋಟದಲ್ಲಿ ನೋಡಬೇಕೆಂದು ಒತ್ತಾಯಿಸುವ ಬೌದ್ಧಿಕ ಒತ್ತಡ. ರಾಜಶೇಖರ್ ಅವರ ಆಪ್ತರಾದ ಕೆ. ಫಣಿರಾಜ್ ನಡೆಸಿದ...





















