ಅದೆನೋ ಇತ್ತು ಆಡದೆ ಉಳಿದ ಮಾತುಗಳಲಿ..

-ಸೌಜನ್ಯ ನಾಯಕ

ಬೇಡವೆಂದರೂ ಸಹ
ಇದೇ ದಾರಿಯ ಆಯ್ದುಕೊಳ್ಳುತ್ತೇನೆ
ನಿನ್ನೊಡನೆ ಕಳೆದ ದಿನಗಳ
ಮೆಲಕು ಹಾಕಲು

ನಿನ್ನೊಡಗಿನ ಒಡನಾಟ ಮುಗಿದು
ವರ್ಷಗಳೆ ಕಳೆದಿರಬಹುದು
ಆದರೆ ನಮ್ಮಿಬ್ಬರ ನೆನಪಿಗೆ
ಸಾಕ್ಷಿಯಾದ ದಾರಿ ಮಾತ್ರ
ಇನ್ನು ಇಲ್ಲೇ ಇದೆ

ಹಾಗೆಂದು ಹೇಳಿಕೊಳ್ಳುವಂತಹದ್ದಾದರೂ
ಏನಿತ್ತು ಹೇಳು?
ನಮ್ಮಿಬ್ಬರ ನಡುವೆ
ಹೇಳದವುಗಳೆ
ಜಾಸ್ತಿ ಕಾಡಿದಂತನಿಸುತಿದೆ
ನನಗೆ ಈ ನಡುವೆ

ಆ ಸಮಯಕ್ಕೆ
ಬೇರಾವ ಮಾತು ಕತೆಗಳು
ನನಗೆ ಬೇಕೆನಿಸಲಿಲ್ಲ

ಕಾರಣ
ನಿನ್ನ ಬಿಸಿ ಉಸಿರಿನ
ಶಾಖವೊಂದೆ ಸಾಕಿತ್ತು
ಬೆಚ್ಚಗಿಡುವುದಕೆ ನನ್ನ ದೇಹವನ್ನೆಲ್ಲ

ಅದೆಷ್ಟೋ ವಿಷಯಗಳು
ನೆನಪಾಗಲೆ ಇಲ್ಲ
ನಿನ್ನೊಡನೆ ದಾರಿಗುಂಟ
ಹೆಜ್ಜೆ ಹಾಕುವಾಗ
ನೆನಪಾದವುಗಳೆಲ್ಲ
ಕಣ್ಣಲ್ಲೆ ವಿನಿಮಯವಾದವೆ
ಹೊರತು
ಮೌನ ಮುರಿಯಲಿಲ್ಲ

ನೋಡಲ್ಲಿ‌ ಆ ಮಾವಿನ ಮರ
ನೆನಪಿನ ಕುರುಹಾಗಿ
ನಿನ್ನ ಜೊತೆಯಲ್ಲಿ ನೆಟ್ಟಿದ್ದು
ಇದರ ಹಣ್ಣುಗಳ
ಚಪ್ಪರಿಸಿ ತಿನ್ನುವಾಗಲೆಲ್ಲ
ಅದೆಲ್ಲೊ ಕೂತ ನಿನಗೆ
ನಾ ನೆನಪಾದಂತೆ ಬಿಕ್ಕಳಿಸುತಿದ್ದದ್ದೂ

ಒಮ್ಮೊಮ್ಮೆ ಈ ಹಣ್ಣುಗಳು ಸಪ್ಪೆಯೆ
ನಿನ್ನ ಮಾತಿನ ಸಿಹಿಗೆ ಹೋಲಿಸಿದಾಗ
ಆ ಕಾರಣಕೆ ಏನೋ
ಮೂಗಳಂತೆ ನಟಿಸುತಿದ್ದೆ ನಾ
ನೀ ಮಾತನಾಡುವಾಗ

ಅದೊ ಬಂತು ಶೆಟ್ಟರ
ಚಾಕಲೇಟು ಅಂಗಡಿ
ಇದೊಂದೆ ಜಾಗವಿರಬೇಕು
ನಿನ್ನ ಮಾತನು ಲೆಕ್ಕಿಸದೆ
ನಾ ಮಾತನಾಡುತಿದ್ದದು
ನೀನೊ ಇದ್ದ ಕಾಸುಗಳನ್ನೆಲ್ಲ
ಕಿಸೆ ಬ್ಯಾಗುಗಳಲ್ಲಿ ತಡಕಾಡಿ
ನನಗೆ ಚಾಕೊಲೇಟ್ ಕೊಡಿಸುತಿದ್ದದ್ದು

ಚಾಕಲೇಟ್ ಸಿಕ್ಕರೆ
ನಿನಗೆ ನಾನು ಬೇಡ ನೋಡು
ಎಂದು ನೀ ಗೇಲಿ ಮಾಡಿದ್ದು ಇದೆ
ನೀ ನುಡಿದ ಮಾತಿಗೆ
ಅಂದು ಅಸ್ತು ಅಂದನೆನೋ
ಭಗವಂತ
ಅದಕೆ ಒಬ್ಬರಿಗೊಬ್ಬರು ಸಿಗದಷ್ಟು ದೂರ
ನಾವಿಂದು ಬಂದಾಗಿದೆ

ಕೊನೆಗೂ ಬಂದು
ನಿಂತಿಹೆ ನೋಡು
ಅದೆ ರಸ್ತೆಯ ತಿರುವಿನಲಿ
ಕೊನೆಯದಾಗಿ ಸಂಧಿಸಿದ ಕಣ್ಣುಗಳು
ನಿನ್ನ ನನ್ನಿಂದ ಬಹುದೂರ ಕರೆದೊಯ್ದಲ್ಲಿ

ಅದೆಕೊ ತಿಳಿದಿಲ್ಲ
ಈ ರಸ್ತೆಯ ತಿರುವಿಗೆ ಬಂದಾಗಲೆಲ್ಲ
ಅರ್ಧ ತಾಸು ನಿಂತು ಹೊರಡುತ್ತೇನೆ
ನಿನ್ನ ಕಂಗಳು ಮಗದೊಮ್ಮೆ ನನ್ನ
ಕಂಗಳ ಸಂಧಿಸಬಹುದೆಂಬ ಕಾರಣಕೊ ಏನೋ

ಈಗೀಗ ಅನಿಸುತಿದೆ
ಅದೆನೋ ಇತ್ತು
ಆಡದೆ ಉಳಿದ ಮಾತುಗಳಲಿ
ನನ್ನ ಒಬ್ಬಂಟಿಯಾಗಿ
ಬಿಟ್ಟು ಹೋಗುವ ಮುನ್ನ
ನಮ್ಮಿಬ್ಬರ ನಡುವಿನಲಿ…

‍ಲೇಖಕರು nalike

August 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Gangamma sanjeevaiah

    ಚೆಂದದ ಉಲ್ಲಾಸ ತುಂಬುವಂತ ಕವನ,ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: