ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆಕೆ..
ಆಕೆ..

ರೂಪಾ ಮಂಜಪ್ಪ ಹೇಳಲೇ ಬೇಕೆಂದು ಹೋದವಳು..ಬರೆಯಲು ಕೂತಳು..ಹೇಳಲು ಅವಕಾಶ ಸಿಗಲಿಲ್ಲವೆಂದಲ್ಲ..ಜೋರು ಬಾಯಿಗಳ ನಡುವೆ..ಕೇಳುವವರಿಲ್ಲವೆಂದರಿತು ಸುಮ್ಮನಾದಳು.. ಆಸ್ತಿ ಐಶ್ವರ್ಯ ಕೇಳಿದವಳಲ್ಲ..ತುಸು ಗೌರವ ಕೇಳಿದವಳು..ಸಾಕಷ್ಟು ಜೀವನ ಒಲೆಯ ಮುಂದೆ ಕಳೆದು..ತುಸು ಪ್ರೀತಿ,ಸ್ವಾತಂತ್ರ್ಯ ಬಯಸಿದವಳು..ಅಂದ್ಕೊಂಡದ್ದೆಲ್ಲ...

read more
ಡಾಕ್ಟರ್ ನಾರಾಯಣ ಸ್ವಾಮಿ ಎಂಬ ಹೆಸರು..
ಡಾಕ್ಟರ್ ನಾರಾಯಣ ಸ್ವಾಮಿ ಎಂಬ ಹೆಸರು..

ಸುಮಾರು ದಿನಗಳ ನಂತರ ನಿನ್ನೆ ದಿನಸಿಕೊಳ್ಳಲು ಅಂಗಡಿಯಲ್ಲಿ ಸಿಕ್ಕ ನಾರಾಯಣ ಸ್ವಾಮಿಯವರು ಅದೇ ಎತ್ತರದ ನಿಲುವಿನಲ್ಲಿ ಶಿಸ್ತಿನ ಕಾಮ್ರೇಡ್ ತರಹ ಕಂಗೊಳಿಸಿದರು. ನೋಡಿದಾಕ್ಷಣ ಹಳೆಯದೆಲ್ಲ ನೆನಪಿಗೆ ಬರತೊಡಗಿದವು. ನೆಂಪೆ ದೇವರಾಜ್ ಯಡೂರಿನ ದಿವಂಗತ ಡಾ. ವಿಷ್ಣು ಮೂರ್ತಿ ಮತ್ತು ಡಾ. ನಾರಾಯಣ ಸ್ವಾಮಿಯವರು ಗಳಸ್ಯ ಕಂಠಸ್ಯರು. ವಿಷ್ಣು...

read more
ಭವ್ಯ ಕಬ್ಬಳಿ ಹೊಸ ಕವಿತೆ- ಎಷ್ಟೊಂದು ಬೆಳಕು!
ಭವ್ಯ ಕಬ್ಬಳಿ ಹೊಸ ಕವಿತೆ- ಎಷ್ಟೊಂದು ಬೆಳಕು!

ಭವ್ಯ ಕಬ್ಬಳಿ ಅರ್ಧ ಕಣ್ಣು ತೆರೆದುಹಾದಿ ಪೂರ ಕುರುಹುಮೂಡಿಸುವ ನಮಗೆ,ಕಾಣುವ ಬಣ್ಣಕಂಡುಕೊಳ್ಳುವ ಬೆಳಕುಎದೆಗೆ‌ ಅಂಟಿಕೊಂಡ ಭಾವದಕ್ಕುವ ಎಲ್ಲವೂ ಅಪೂರ್ಣ! ಸುದ್ದಿ ಮಾಡುತ್ತಾ ಎಣಿಕೆಗಳಲ್ಲಿಯೇಇದ್ದುಬಿಡುವುದನ್ನು ತುಸು ಹೆಚ್ಚೇಸುಲಭವಾಗಿಸಿಕೊಳ್ಳುವ ನಾವು,ಸುಮ್ಮನೇ ಸಲೀಸಾಗಿ ಜೀವಿಸುವುದುಅಂದುಕೊಂಡಷ್ಟು ಸುಲಭವೂ ಅಲ್ಲಜೇಡದ ಬಲೆಯಷ್ಟು...

read more
ನೂತನ ದೋಶೆಟ್ಟಿ ಕವಿತೆ – ಹುಡುಕು ಉತ್ತರವ…
ನೂತನ ದೋಶೆಟ್ಟಿ ಕವಿತೆ – ಹುಡುಕು ಉತ್ತರವ…

ನೂತನ ದೋಶೆಟ್ಟಿ ಬೆಳಗಾಯಿತು ಅಂತ ಹೇಳೋಕೆಸೂರ್ಯ ಬಂದು ಹೋಗ್ತಾನಾ?ರಾತ್ರೀಲಿ ಕಣ್ಬೆಳಕಿರಲಿ ಅಂತಚಂದ್ರ ಬರ್ತಾನಾ? ಬಿಸಿಲು, ಮಳೆ, ಛಳಿಗೆಏನ್ ಕೆಲ್ಸ ಹಾಗಾದ್ರೆ?ಗಾಳಿ, ಗುಡುಗು, ಮಿಂಚು, ಸಿಡಿಲುಸುಮ್ನೆ ಹೆದ್ರಸಕ್ಕೇನಾ? ಇರುವಿ ಎಂಭತ್ತು ಕೋಟಿ ಜೀವಭೂಮಿ ಮೇಲೆ ಏಕೆ?ಕುರ್ಚಿ ಮೇಲೆ ಕೂತ್ಕೊಳ್ಳೊನೀನೊಬ್ಬನೇ ಸಾಕಿತ್ತಲ್ವಾ? ಇಷ್ಟು...

read more
ಮಲೆಯಾಳಂ ಸಿನೆಮಾ ಜಗತ್ತಿನ ಏಕಮೇವ ‘ಜಗತಿ’
ಮಲೆಯಾಳಂ ಸಿನೆಮಾ ಜಗತ್ತಿನ ಏಕಮೇವ ‘ಜಗತಿ’

ಸಂತೋಷ್ ಅನಂತಪುರ ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದ. ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮೊಳಗಿನ ಕಲಾವಿದ ಅಭಿವ್ಯಕ್ತಿಗೊಳ್ಳುತ್ತಲೇ ಇರುತ್ತಾನೆ. ಅದು ಕಲಾ ನಿಯಮ. ಹಾಗೆ ಅಭಿವ್ಯಕ್ತಿಗೊಂಡ ಕಲೆಯು ಕೆಲವರನ್ನು ಹಿಡಿದು ನಡೆಸಿದರೆ, ಇನ್ನು ಕೆಲವರನ್ನು ಮೇಲಕ್ಕೆತ್ತಿ ಮಿನುಗಿಸಿ ಬಿಡುತ್ತದೆ. ಆದರೆ ಕಲಾದೇವಿ ಎಲ್ಲರಿಗೂ...

read more
ಪಿ ಚಂದ್ರಿಕಾ ಅಂಕಣ- ಕತೆಯಿಂದ ಸಿನಿಮಾ ಕತೆಗೆ ಪಯಣ…
ಪಿ ಚಂದ್ರಿಕಾ ಅಂಕಣ- ಕತೆಯಿಂದ ಸಿನಿಮಾ ಕತೆಗೆ ಪಯಣ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಉಪ್ಪಿಲ್ಲದ ಸತ್ಯಾಗ್ರಹ
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಉಪ್ಪಿಲ್ಲದ ಸತ್ಯಾಗ್ರಹ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ಉಜ್ಜಜ್ಜಿ ರಾಜಣ್ಣ ಹೊಸ ಕಥೆ- ಹೊಲಾದಿ
ಉಜ್ಜಜ್ಜಿ ರಾಜಣ್ಣ ಹೊಸ ಕಥೆ- ಹೊಲಾದಿ

ಉಜ್ಜಜ್ಜಿ ರಾಜಣ್ಣ ಯಾ ನಮ್ಮವ್ಗುಳಾರ ಮುರಕಂಡೋಗುಲಿ ಅಂತವಾ ಕಂಚಾಘಟ್ಟದ ಬಸವಯ್ಯ ಹಲಸಿನ ಮರದ್ ಬುಡ್ಗೆ ಮುಳ್ಳು ನೊರಿದೆ ಹಾಗೇ ಬಿಟ್ಟಿದ್ದ. ವರ್ಷಾವರ್ಷಾ ಆ ಮರ ಹಲಸಿನ ಮುಸುಕು ಬಿಟ್ಟು, ಅವು ಕೆತ್ಗಾಯಿ ಆಗಿ, ಹಲಸಿನ ಹಣ್ಣಾಗೋ ಹೊತ್ಗೆಲ್ಲಾ ಮುಂಗಾರು ಮಳೆ ಉಯ್ಯೋದು. ಭರಣಿ ಮಳಿ ಮುಗುದು, ಅಸ್ವಿನಿ ಮಳಿ ಹುಟ್ಟಿ, ಕುತ್ರಿಕೆ...

read more
‘ಅವ್ವ’ ಯುವ ಸಾಹಿತ್ಯ ಪುರಸ್ಕಾರಕ್ಕೆ ಹಸ್ತಪ್ರತಿಗಳ ಆಹ್ವಾನ
‘ಅವ್ವ’ ಯುವ ಸಾಹಿತ್ಯ ಪುರಸ್ಕಾರಕ್ಕೆ ಹಸ್ತಪ್ರತಿಗಳ ಆಹ್ವಾನ

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ, ಅವ್ವ ಪುಸ್ತಕಾಲಯದಿಂದ ಕೊಡಮಾಡುವ 'ಅವ್ವ ಪ್ರಶಸ್ತಿ - 2021' ಕ್ಕಾಗಿ ನಾಡಿನಾದ್ಯಂತ ಲೇಖಕರಿಂದ ಹಸ್ತಪ್ರತಿ ಹಾಗೂ ಕೃತಿಗಳನ್ನು ಆಹ್ವಾನಿಸಲಾಗಿದೆ. ಅವ್ವ ಯುವ ಸಾಹಿತ್ಯ ಪುರಸ್ಕಾರ 2021 ಕ್ಕಾಗಿ ಹಸ್ತಪ್ರತಿಗಳ ಆಹ್ವಾನ : *...

read more
ಮರೆಯಾದ ಹಾಡಿನ ಹಡಗು ಹನುಮಿ ಗೌಡರೂ ಮತ್ತು ಪಗಡೆಯಾಟದಲಿ ಗೆದ್ದ ರೋಪತಿಯೂ…
ಮರೆಯಾದ ಹಾಡಿನ ಹಡಗು ಹನುಮಿ ಗೌಡರೂ ಮತ್ತು ಪಗಡೆಯಾಟದಲಿ ಗೆದ್ದ ರೋಪತಿಯೂ…

ಸುಧಾ ಆಡುಕಳ ಸುಮಾರು ಐದಾರು ವರ್ಷಗಳ ಹಿಂದೆ ಒಂದು ರಾತ್ರಿ ಕರೆಮಾಡಿದ ವಿಠ್ಠಲ ಭಂಡಾರಿ ಸರ್ 'ನಿಮಗೊಂದು ಹೋಮ್‌ವರ್ಕ ಇದೆ. ಹತ್ತೇ ದಿನಗಳ ಕಾಲಾವಕಾಶ. ಡಾ. ಎನ್. ಆರ್. ನಾಯಕರು ಸಂಗ್ರಹಿಸಿದ ಗ್ರಾಮೊಕ್ಕಲ ಮಹಾಭಾರತ ಕೃತಿಯನ್ನು ಆಧರಿಸಿ ಒಂದು ನಾಟಕ ಬೇಕು. ತಯಾರಿಗಳೆಲ್ಲ ಶುರುವಾಗಿದೆ. ಸ್ಕ್ರಿಪ್ಟ್ ಸಿಕ್ಕ ಕೂಡಲೇ ನಾಟಕ ಮಾಡಿಸೋದೆ....

read more
ತೀರದಾ ಋಣ..
ತೀರದಾ ಋಣ..

ಸೌಮ್ಯ ಕೊಡೆಯಿಂದ ಬೀಳ್ತಿದ್ದ ಮಳೆಹನಿಯ ಬಿಂದುಗಳ,ಎಣಿಸುತ್ತ ಶಾಲೆಗೆ ನಡೆದಿದ್ದ ದಿನಗಳಮರೆತಿಲ್ಲ: ಒದ್ದೆಗೊಂಡಿದ್ದ ಪುಸ್ತಕಕೆ ಅಪ್ಪ ಅಗ್ಗೀಷ್ಟಿಕೆಯಕಾವು ಕೊಟ್ಟು, ಒಣಗಿಸಿದ ದಿನಗಳ ಮರೆತಿಲ್ಲ: ನೆಂದು ಬಂದಾಗ ಮನೆಗೆ, ಅಕ್ಕರೆಯಲಿ ಅಮ್ಮಕೊಟ್ಟ ಬಿಸಿ ಬಜ್ಜಿ ಕಾಫಿಯ ರುಚಿ ಇನ್ನೂ ಮಾಸಿಲ್ಲ: ಬೇಜಾರು ಎಂದಾಗ, ಛಾವಣಿಗೆ...

read more
ವಾಸುದೇವ ಶರ್ಮಾ ಅಂಕಣ – ಮಗುವಿನ ಹಿತದೃಷ್ಟಿಯಿಂದ ‘ದತ್ತು’ ಪ್ರಕ್ರಿಯೆ
ವಾಸುದೇವ ಶರ್ಮಾ ಅಂಕಣ – ಮಗುವಿನ ಹಿತದೃಷ್ಟಿಯಿಂದ ‘ದತ್ತು’ ಪ್ರಕ್ರಿಯೆ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಡಾ ರಾಜ್ ಮನೆಯಲ್ಲಿ ಪಚ್ಚೆ
ಡಾ ರಾಜ್ ಮನೆಯಲ್ಲಿ ಪಚ್ಚೆ

ಪಚ್ಚೆ ನಂಜುಂಡಸ್ವಾಮಿ ಚಾಮರಾಜನಗರ ಜಿಲ್ಲೆಯ ದೊಡ್ಡ ಗಾಜನೂರಿನಲ್ಲಿರುವ ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ನಟ, ನಟಸಾರ್ವಭೌಮ ಡಾ.ರಾಜಕುಮಾರ್ ರವರ ಹುಟ್ಟಿದ ಮನೆ ಮತ್ತು ಅವರು ವೃದ್ಧಾಪ್ಯದಲ್ಲಿ ಕಾಲ ಕಳೆಯಬೇಕೆಂದು ಕಟ್ಟಿಸಿದ್ದ ಎರಡೂ ಮನೆಗಳಿಗೆ ಅಚಾನಕ್ಕಾಗಿ ಭೇಟಿಕೊಟ್ಟೆವು....

read more
ಕಾಗೆ ಮುಟ್ಟಿದ ನೀರಿನೊಂದಿಗೆ ಮತ್ತೆ ಹಸಿರಾದ ‘ಮೊರಿಜಿರಿ’
ಕಾಗೆ ಮುಟ್ಟಿದ ನೀರಿನೊಂದಿಗೆ ಮತ್ತೆ ಹಸಿರಾದ ‘ಮೊರಿಜಿರಿ’

ನಿರುಪಮಾ ಉಚ್ಚಿಲ್ ಅಂದು ಅಡ್ಕ ಶ್ರೀ ಭಗವತೀ ಕ್ಷೇತ್ರದ ಜಾತ್ರೆಯ ಸಂಭ್ರಮ. ದೈವಸ್ಥಾನದ ಪರಿಸರವು ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಝಗಝಗಿಸುತ್ತಿತ್ತು. ಸಂಜೆ ಭಂಡಾರ ಏರಿಭಗವತಿಗಳ ಮೂರ್ತಿಗಳನ್ನು ಕೆಳಗಿನ ಸ್ಥಾನದಿಂದ ತಂದು ಮೇಲಿನ ದೈವಸ್ಥಾನಗಳಲ್ಲಿ ಇರಿಸಲಾಗಿತ್ತು. ಎಲ್ಲೆಲ್ಲೂ ಉತ್ಸಾಹ, ಸಂಭ್ರಮ ಎದ್ದು ಕಾಣುತ್ತಿತ್ತು....

read more
ಶ್ರೀನಿವಾಸ ಪ್ರಭು ಅಂಕಣ- ಗೊತ್ತಿಲ್ಲದಂತೆ ದಾನಶೂರ ಕರ್ಣನಾಗಿಬಿಟ್ಟಿದ್ದೆ..
ಶ್ರೀನಿವಾಸ ಪ್ರಭು ಅಂಕಣ- ಗೊತ್ತಿಲ್ಲದಂತೆ ದಾನಶೂರ ಕರ್ಣನಾಗಿಬಿಟ್ಟಿದ್ದೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸಿ ಎಸ್ ಭೀಮರಾಯರ ಓದಿದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’
ಸಿ ಎಸ್ ಭೀಮರಾಯರ ಓದಿದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’

ಸಿ ಎಸ್ ಭೀಮರಾಯರ ಎಸ್. ದಿವಾಕರ್ ನವೋತ್ತರ ಕನ್ನಡದ ಸಂವೇದನೆಯನ್ನು ವಿಸ್ತಾರಗೊಳಿಸಿದ ಪ್ರಮುಖ ಕವಿ, ಕಥೆಗಾರ, ಅಂಕಣಕಾರ, ಅನುವಾದಕ ಮತ್ತು ವಿಮರ್ಶಕರು. ಅವರದು ದೈತ್ಯ ಪ್ರತಿಭೆ. ದಿವಾಕರ್ ಅವರ ಸಮಗ್ರ ಕನ್ನಡ-ಇಂಗ್ಲಿಷ್ ಸಾಹಿತ್ಯ ಸೃಷ್ಟಿಯಲ್ಲಿ ಅಡಗಿರುವ ಅನುಭವದ ವ್ಯಾಪ್ತಿ ಆಶ್ಚರ್ಯಗೊಳಿಸುವಂಥದ್ದು. ಅವರಲ್ಲಿ ಅನನ್ಯ...

read more

Pin It on Pinterest

Share This