ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಕ್ಯಾಬ್ we met’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಶ್ರೀರಾಂಪುರದ ಗಲ್ಲಿಯಲ್ಲಿ ಮಳೆ ಸುರೀತಿತ್ತು. ಒಂದು ರೂಮ್ ಮತ್ತು ಬಾತ್ರೂಮ್ ಮಾತ್ರ ಇರೋ ಸಣ್ಣ ಮನೇಲಿ ವಾಸವಾಗಿದ್ದ ತಿಮ್ಮೇಶನಿಗೆ ಎಚ್ಚರವಾಗಿ ಸಮಯ ನೋಡಿದಾಗ ಏಳು ಗಂಟೆಯಾಗಿತ್ತು. ಯಾಕೋ ಕೆಲ್ಸ ಮಾಡೋ ಮನಸ್ಸಿರಲಿಲ್ಲ. ನೆಲದ ಮೇಲೆ ಹಾಸಿದ್ದ ಹಾಸಿಗೆ ಮೇಲೇ ಹೊರಳಾಡಿದ. ಕೆಲ್ಸ ಮಾಡಿಯಾದ್ರೂ ಯಾರನ್ನ ಸಾಕ್ಬೇಕು? ೨೭ ವರ್ಷದ ಹಿಂದೆ ಹೆಂಡತಿ ಡೆಲಿವರಿ ಸಮಯದಲ್ಲಿ ಗಂಡುಮಗುವನ್ನ ಕೈಗಿತ್ತು ತೀರಿಕೊಂಡಳು. ‌

ಮಗ ದೊಡ್ಡವನಾದ ಸ್ನೇಹಿತರ ಜೊತೆ ಸೇರಿ ಏನೋ ಬಿಸ್ನೆಸ್ ಮಾಡ್ತೀನಿ ಅಂತ ಮುಂಬೈ ಸೇರಿದ. ತಾನ್ನೊಬ್ಬಂಟಿ ಅನ್ನಿಸ್ತು. ಮುಂದಿನ ಜೀವನ ಏನು? ಇನ್ನೊಂದು ವರ್ಷಕ್ಕೆ ಐವತ್ತೈದಾಗುತ್ತೆ. ವಯಸ್ಸಾಗ್ತಾ ಇದ್ದಂಗೆ ಯಾರು ನನ್ನ ನೋಡ್ಕೋತಾರೆ? ಆರೋಗ್ಯ ಕೆಟ್ರೆ ಏನ್ ಗತಿ ಅನ್ನೋ ಯೋಚ್ನೆಗಳು ತುಂಬಿಕೊಂಡವು. ಕೈಲಿ ದುಡ್ಡಿದ್ರೆ ಸಹಾಯಕ್ಕೆ ಜನ ಸಿಕ್ತಾರೆ, ಕೈಲಾದಷ್ಟು ದುಡಿದಿಟ್ಟುಕೊಳ್ಬೇಕು ಅಂದುಕೊಂಡು ಹಾಸಿಗೆ ಬಿಟ್ಟು ಎದ್ದ.

ಸ್ನಾನ ಮಾಡಿ ರೆಡಿಯಾಗಿ, ಖಾಕಿ ಡ್ರೈವರ್ ಯೂನಿಫಾರ್ಮ್ ನ ತೊಟ್ಟು ಮೈಸೂರು ಚಾಮುಂಡಿಯ ಪಟಕ್ಕೆ ಕೈಮುಗಿದು, ಮನೆಯ ಬಾಗಿಲಿಗೆ ಬೀಗ ಹಾಕಲು ಬಂದಾಗ ಮಳೆ ಇನ್ನೂ ನಿಂತಿರಲಿಲ್ಲ. ಕಿಟಕಿಗೆ ಸಿಕ್ಕಿಸಿದ ಕವರ್ ನ ತಲೆ ಮೇಲೆ ಹಾಕಿಕೊಂಡು, ಚಪ್ಪಲಿ ಮೆಟ್ಟಿ ಹತ್ತಿರದಲ್ಲೇ ನಿಲ್ಲಿಸಿದ್ದ ಹಳೇ ಟಾಟಾ ಇಂಡಿಗೋ ಕಾರ್ ಕಡೆಗೆ ಓಡಿದ. ‘ನಾನ್ ಹೇಗ್ ನನ್ಯಾರೂ ನೋಡ್ಕೊಳ್ಳಲ್ಲ ಅಂದ್ಕೊಂಡೆ? ಈ ಕಾರ್ ತಾನೇ ನನ್ನ ನೋಡ್ಕೋತಿರೋದು’. ಹೈ ಕೋಟ್ ಜಡ್ಜ್ ನ ಪರ್ಸನಲ್ ಡ್ರೈವರ್ ಆಗಿ ೧೨ ವರ್ಷ ಕೆಲ್ಸ ಮಾಡಿದ್ದಕ್ಕೆ ಸಿಕ್ಕ ಫಲ ಇದು. ರಿಟೈರ್ ಆದ್ಮೇಲೆ ಆ ಕಾರ್ ನ ತಿಮ್ಮೇಶನಿಗೇ ಕೊಟ್ಟಿದ್ರು. ‘ಹೈ ಕೋರ್ಟ್ ಜಡ್ಜ್ ಆದ್ರೇನು? ಕಾರ್ ಡೈವರ್ ಆದ್ರೇನು ವಯಸ್ಸಾದ್ಮೇಲೆ ಎಲ್ಲರೂ ಬೇಡವಾದೋರೇ.. ಈ ಕಾರ್ಗೂ ನನ್ ತರಾನೇ ಇಳೀ ವಯಸ್ಸಾಗ್ತಾ ಬಂತು’ ಅಂತ ತನ್ನಷ್ಟಕ್ಕೆ ನಕ್ಕ. 

ಡ್ರೈವರ್ ಸೀಟ್ ಮುಂದೆ ಸಿಕ್ಕಿಸಿದ್ದ ಕಂಪನಿಯ ಮೊಬೈಲ್ ಆಪ್ ನಲ್ಲಿ ಲಾಗ್ ಇನ್ ಆಗಿ ಕಾಯುತ್ತಾ ಕೂತ. ‘ಮಿಸ್ಟರ್ ತಿಮ್ಮೇಶ್ ಯುವರ್ ರೈಡ್ ಇಸ್ ಬುಕ್ಡ್’ ಎರ್ಡೇ ನಿಮಿಷದಲ್ಲಿ ನೋಟಿಫಿಕೇಶನ್ ಬಂದಿತ್ತು. ಮಂತ್ರಿ ಮಾಲ್ ಹತ್ರ ಪಿಕ್ ಅಪ್ ಲೊಕೇಶನ್ ತೋರಿಸ್ತಿತ್ತು, ಏರ್ ಪೋರ್ಟ್ ಡ್ರಾಪ್ ಲೊಕೇಶನ್. ಕಣ್ಣು ಸಣ್ಣ ಮಾಡಿ ಓದಿಕೊಂಡು ದಾರೀಲಿ ಡೀಸಲ್ ಹಾಕಿಸಬೇಕು ಅಂದುಕೊಂಡ. ಕಾರ್ ಚಲಿಸುತ್ತಿದ್ದಂತೆ ಮಳೆ ಕಮ್ಮಿಯಾಯಿತು.

‘ಹಲೋ ಲೊಕೇಶನ್ ಹತ್ರ ಬಂದಿದ್ದೀನಿ.. ಎಲ್ಲಿದಿರಾ ಮೇಡಂ” ಹಲೋ ಎಂದ ಹೆಣ್ಣು ಧ್ವನಿಗೆ ಪ್ರತಿಕ್ರಿಯಿಸಿದ್ದ.’ಅಲ್ಲಿಂದ ಲೆಫ಼್ಟ್ ತೊಗೊಂಡ್ ಬನ್ನಿ ಹತ್ರದಲ್ಲೇ ಅಪಾರ್ಟ್ಮೆಂಟ್ ಇರೋದು ಮನೆ ಮುಂದೆ ನಿಂತಿದ್ದೀನಿ”. ಸರಿಯಾದ್ ಲೊಕೇಶನ್ ಹಾಕೋಕಾಗಲ್ವ ಇನ್ನು ಎಷ್ಟ್ ತಿರುಗ್ಬೇಕೋ ಅಂದುಕೊಂಡ ಕಾರ್ ತಿರುಗಿಸಿದ. ಒಳರಸ್ತೆಯಲ್ಲಿ ಹೋಗ್ತಿರುವಾಗ ಮತ್ತೆ ಕಾಲ್ ಬಂತು. ‘ಮುಂದೆ ಹೋಗ್ಬಿಟ್ರಿ ನಾನ್ ಇಲ್ಲೇ ಇದ್ದೀನಿ ರಿವರ್ಸ್ ತಗೊಳ್ಳಿ’. ರೇರ್ ವ್ಯೂ ಮಿರರ್ ನೋಡಿ ರಿವರ್ಸ್ ಗೇರ್ ಹಾಕಿದ. ಎರ್ಡು ದೊಡ್ಡ ಸೂಟ್ಸ್ಯೂ ಕೇಸ್ ಒಂದು ಕ್ಯಾಬಿನ್ ಕ್ಯಾಗೇಜ್ ಜೊತೆ ಒಂದು ಹ್ಯಾಂಡ್ ಬ್ಯಾಗ್ ಅನ್ನು ಹಿಡಿದುಕೊಂಡು ನಿಂತಿದ್ದನ್ನು ನೋಡಿ ಲಗೇಜ್ ಡಿಕ್ಕಿಗೆ ಇಡಲು ತಿಮ್ಮೇಶ್ ಕಾರ್ ನಿಂದ ಇಳಿದು ಅವಳ ಸಹಾಯಕ್ಕೆ ಮುಂದಾದ. ಹುಡುಗಿ ಕಾರ್ ಹತ್ತಿ ಓಟಿಪಿ ಹೇಳಿದಳು. ಯುವರ್ ರೈಡ್ ಹ್ಯಾಸ್ ಸ್ಟಾರ್ಟೆಡ್. ಟ್ರಾವಲ್ ಟೈಮ್ ಒಂದು ಗಂಟೆ ಹತ್ತು ನಿಮಿಷ ತೋರಿಸಿತು.

‘ಓ ಇವತ್ ನಿಮ್ ಬರ್ತ್ಡೇನಾ.. ಹ್ಯಾಪಿ ಬರ್ತಡೇ’ ತಿಮ್ಮೇಶ್ ಗೆ ಈ ಮಾತು ಕೇಳಿಸಿ ಫೋನ್ ನಲ್ಲಿ ಮಾತಾಡ್ತಿರ್ಬೋದಾ ಅಂತ ಮಿರರ್ ನಲ್ಲಿ ನೋಡಿದಾಗ ಆ ಹುಡುಗಿ ಅವನನ್ನೇ ನೋಡ್ತಾ ಇದ್ಲು. ಮುಖದಲ್ಲಿ ನಗು ಇತ್ತು, ವಯಸ್ಸು ೨೪-೨೫ ಇರಬಹುದು ಬಣ್ಣ ಕಮ್ಮಿ ಇದ್ರೂ ಲಕ್ಷಣವಾಗಿದ್ದಳು. 

ಇವತ್ತಿನ ಹೆಣ್ಣು ಮಕ್ಕಳ ಹಾಗೆ ಜೀನ್ಸ್ ಪ್ಕಾಂಟ್ ಮೇಲೆ ಶರ್ಟ್ ತರ ಏನೋ ಹಾಕೊಂಡು ಅದರ ಮೇಲೊಂದು ಕರೀ ಜ್ಯಾಕೆಟ್ ಹಾಕಿದ್ಲು. ತಿಮ್ಮೇಶ್ ದಿನಾಂಕವನ್ನು ನೆನೆಪು ಮಾಡಿಕೊಂಡ. ‘ಹೇಗ್ ಗೊತ್ತಾಯ್ತು ಮೇಡಂ’ ಒಂದು ಸಣ್ಣ ಮಟ್ಟದ ಉತ್ಸಾಹದಲ್ಲಿ ಕೇಳಿದ. ‘ಇಲ್ಲೇ ಇದ್ಯಲ್ಲ ಸೀಟ್ ಹಿಂದುಗಡೆ ಡ್ರೈವರ್ ಡಿಟೇಲ್ಸ್, ಮ್ಯಾಟ್ರಿಮೋನಿಗೆ ಹಾಕ್ಬೋದಾದ್ ಫಿಫ಼್ಟಿ ಪರ್ಸೆಂಟ್ ವಿಷ್ಯ ಇದ್ರಲ್ಲೇ ಇದೆ’ ಅವಳು ನಗ್ತಾ ಹೇಳಿದ್ದನ್ನು ಕೇಳಿ ಅಪಹಾಸ್ಯ ಮಾಡ್ತಿದ್ದಾಳ ಅಂತ ಒಂದು ಕ್ಷಣ ನೋಡಿದ. ಅವಳ ಮುಖದಲ್ಲಿ ಅಂಥಾ ಭಾವನೆಯೇನೂ ಕಾಣಿಸಲಿಲ್ಲ. ನಿಜವಾಗಿಯೂ ವಿಶ್ ಮಾಡಿದ್ಲು. ‘ಥ್ಯಾಂಕ್ಯೂ ಮೇಡಮ್’. ‘ಇವತ್ ಇಷ್ಟ್ ಬೆಳಗ್ಗೇನೇ ಡ್ಯೂಟಿ ಮಾಡ್ತಿದ್ದೀರಾ.. ಏನೂ ಸೆಲೆಬ್ರೇಶನ್ ಇಲ್ವಾ?.’ ಹಾ.. ಆತರ ಏನಿಲ್ಲ ಮೇಡಮ್’.  ಒಬ್ಬನೇ ಇದ್ದು ಹೊಸಬರ ಜೊತೆ ಮಾತು ಅದರಲ್ಲೂ ಹುಡುಗಿಯ ಜೊತೆ ಮಾತು ಕಷ್ಟ ಅನ್ನಿಸ್ತು. ಎಫ್ ಎಂ ಹಾಕಿದ.

ಆಕೆ ಬ್ಯಾಗನ್ನ ಹುಡುಕಿ ತೊಗೊಳ್ಳಿ ಅಂತ ಡೈರಿ ಮಿಲ್ಕ್ ಚಾಕಲೇಟ್ ನ ಹಿಂದಿನ ಸೀಟ್ ನಿಂದ ಕೊಟ್ಟಾಗ ಅದನ್ನ ತಗೊಳ್ಳೋಕೆ ತಿಮ್ಮೇಶ್ ಮುಜುಗರ ಪಟ್ಟ. ‘ತೊಗೊಳ್ಳಿ ಸರ್ ನಿಮ್ ಹುಟ್ಟಿದ ಹಬ್ಬ, ಬಾಯಿ ಸಿಹಿ ಮಾಡ್ಕೊಳ್ಳಿ’ ಎರಡನೇ ಸಲ ಹೇಳಿದಾಗ ಅದನ್ನ ತಗೊಂಡು ಪಕ್ಕದ ಸೀಟ್ ಮೇಲಿಟ್ಟ. ಅಷ್ಟ್ರಲ್ಲಿ ಆಕೆಗೆ ಫೋನ್ ಬಂತು. ಯಾರ ಜೊತೆಗೋ ಜಗಳ ಮಾಡ್ತಿದ್ದಾಳೆ ಅನ್ನಿಸ್ತು. ಎಫ್ ಎಮ್ ಸೌಂಡ್ ನ ಕಮ್ಮಿ ಮಾಡಿ ಅವರ ಮಾತಿಗೆ ತೊಂದರೆಯಾಗದಂತೆ ಮಾಡ್ಬೇಕೋ ಅಥವಾ ಸೌಂಡ್ ಜಾಸ್ತಿ ಮಾಡಿ ಅವರ ಮಾತನ್ನ ತಾನು ಕೇಳಿಸಿಕೊಳ್ತಿಲ್ಲ ಅನ್ನೋದನ್ನ ಅವಳಿಗೆ ಖಚಿತಪಡಿಸಬೇಕೋ ತಿಳಿಯದೇ ಸುಮ್ಮನಾದ. ಮಳೆ ಹನಿ ಮತ್ತೆ ಶುರುವಾಗಿ ವೈಪರ್ ಆನ್ ಮಾಡಿದ.

‘ಸರ್ ಒಂದ್ ಹತ್ತಿ ನಿಮಿಷ ಕಾಯ್ಬೋದಾ? ನನ್ ಫ಼್ರೆಂಡ್ ಬರ್ತಾರೆ’ ಅಸಮಧಾನದಲ್ಲಿ ಹೇಳಿದಳು. ‘ವೈಟಿಂಗ್ ಚಾರ್ಜಸ್ ಆಗುತ್ತೆ. ಅವ್ರೂ ಏರ್ಪೋರ್ಟ್ ಗೆ ಬರ್ತಾರಾ?’ ‘ಇಲ್ಲ ಮೀಟ್ ಆಗಿ ಹೋಗ್ತಾರೆ. ನಾನು ಬೇರೆ ದೇಶಕ್ ಹೋಗ್ತಿದ್ದೀನಲ್ಲ’. ತಿಮ್ಮೇಶ್ ತಲೆಯಾಡಿಸಿ ಮುಂದೆ ರಸ್ತೆ ಬದಿಯಲ್ಲಿ ಕಾರ್ ನಿಲ್ಲಿಸಿದ. ಆಕೆ ಯಾರಿಗೋ ಫೋನ್ ಮಾಡಿ ಎಲ್ಲಿದ್ದೀಯಾ, ಎಷ್ಟೊತ್ತಾಗುತ್ತೆ? ಅಂತ ವಿಚಾರಿಸುತ್ತಿದ್ಲು. ತಿಮ್ಮೇಶ್ ಕಾರ್ ನಿಂದ ಇಳಿದು ಕಾಯುತ್ತಾ ನಿಂತ. ಕೆಲ ಸಮಯದ ನಂತರ ಮಳೆ ಜೋರಾದ್ದರಿಂದ ಓಡಿ ಬಂದು ಕಾರ್ ಒಳಗೆ ಕೂತ. ಸಮಯ ನೋಡಿ ‘ಮೇಡಮ್ ಅರ್ಧಗಂಟೆಯಾಯ್ತು…’ ಆ ಹುಡುಗಿ ಇನ್ನೂ ಫೋನ್ ಗೆ ಪ್ರಯತ್ನ ಮಾಡ್ತಿದ್ಲು, ಈ ಸಲ ಆ ಕಡೆಯಿಂದ ಕರೆ ಸ್ವೀಕರಿಸ್ತಿಲ್ಲ ಅಂತ ಗೊತ್ತಾಗುತ್ತಿತ್ತು.

‘ಮೇಡಮ್ ಲೇಟ್ ಆಯ್ತು’ ಹುಡುಗಿ ಅದರ ಬಗ್ಗೆ ಗಮನ ಕೊಡದೇ ಅಳೋಕೆ ಶುರುಮಾಡಿದ್ಲು. ಅವಳು ಬಿಕ್ಕಳಿಸುತ್ತಿರಲಿಲ್ಲ ಆದ್ರೆ ಕಣ್ಣಿಂದ ನೀರು ಪ್ರಯತ್ನವಿಲ್ದೇ ಹರೀತಿತ್ತು. ಡ್ರೈವರ್ ನೋಡ್ತಿದ್ದಾರೆ ಅನ್ನೋದು ಅರಿವಿಗೆ ಬಂದಾಗ ಕಣ್ಣು ಒರೆಸಿ ಮುಖವನ್ನ ಕಿಟಕಿಯ ಕಡೆ ಮಾಡಿ. ’ಸಾರಿ ಸರ್, ಹೊರಡಿ”. ತಿಮ್ಮೇಶನಿಗೆ ಅವಳಿಗೆ ಏನು ಕಷ್ಟವೋ ಏನೋ, ಪಾಪ ಅಳ್ತಿದ್ದಾಳೆ ಅನ್ನಿಸ್ತು. ಗೇರ್ ಮೇಲಿದ್ದ ಕೈ ತೆಗೆದು ‘ಬೇಕಿದ್ರೇ.. ಇನ್ನೊಂದ್ ಸ್ವಲ್ಪ ಹೊತ್ತು ಕಾಯ್ಬೋದು ಮೇಡಮ್’. ‘ಇಲ್ಲ ಬಿಡಿ ಸರ್ ಪ್ರಯೋಜ್ನ ಇಲ್ಲ ಹೊರಡಿ’. ನಿಟ್ಟುಸಿರು ಬಿಟ್ಟಳು. ತಿಮ್ಮೇಶ್ ಅವಳನ್ನ ಆಗಾಗ ಗಮನಿಸುತ್ತಾ ಕಾರ್ ಚಲಾಯಿಸಿದ. ಇನ್ನೂ ಅಳ್ತಿದ್ದಾಳೆ ಆಗಾಗ ಕಣ್ಣೀರು ಒರೆಸಿಕೊಳ್ತಿದ್ದಾಳೆ. ಸ್ವಲ್ಪ ಹೊತ್ತಿನ ಮುಂಚೆ ನಗುನಗುತ್ತಾ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿ ಚಾಕಲೇಟ್ ಕೊಟ್ಟ ಹುಡುಗಿಯನ್ನ ಹೀಗೆ ಅಳೋ ಹಾಗೆ ಮಾಡಿದವರ ಬಗ್ಗೆ ಕೋಪ ಬಂತು. ತನ್ನರಿವಿಗೇ ಬಾರದೆ ಅವಳ ಬಗ್ಗೆ ಹುಟ್ಟಿದೆ ಕಾಳಜಿಯ ಬಗ್ಗೆ ಆಶ್ಚರ್ಯವೂ ಆಯಿತು.

ಸಮಯ ೮:೩೦ ದಾಟಿತ್ತು. ಜೊತೆಗೆ ಮಳೆ ಜೋರಾದ ಕಾರಣ ಮೇಕ್ರೀ ಸರ್ಕಲ್ ನಿಂದ ಏರ್ಪೋರ್ಟ್ ರೋಡ್ ಪೂರ್ತಿಯಾಗಿ ಜ್ಯಾಮ್ ಆಗಿದೆ ಅನ್ನೋದನ್ನ ಗೂಗಲ್ ಮ್ಯಾಪ್ಬಲ್ಲಿ ಕೆಂಪಾದ ರಸ್ತೆಗಳು ಹೇಳ್ತಿತ್ತು. ‘ಅಯ್ಯೋ ಇನ್ನೂ ಐವತ್ತೇಳು ನಿಮಿಷ ತೋರಿಸ್ತಿದೆಯಲ್ಲ’. ಗಾಬರಿಯಲ್ಲಿ ಕೇಳಿದಳು. ಈಗ ಕಣ್ಣೀರು ಹಾಕುತ್ತಿಲ್ಲವಾದರೂ ಮೊದಲು ಅವಳು ಅತ್ತಿದ್ದನ್ನ ಅವಳ ಕಣ್ಣುಗಳು ಸಾರುತ್ತಿದ್ದವು. ‘ಪೀಕ್ ಅವರ್ ಅಲ್ವ ಮೇಡಮ್, ಮಳೆ ಬೇರೆ. ಟೋಲ್ ಹತ್ರ ಕ್ಯೂ ಜಾಸ್ತಿ ಇದ್ರೆ ಇನ್ನೂ ಲೇಟ್ ಆಗ್ಬೋದು’. ಆಕೆ ಇನ್ನಷ್ಟು ಗಾಬರಿಯಾದಳು.

‘ಅಯ್ಯೋ ನನ್ ಫ಼್ಲೈಟ್ ಇರೋದು ಹನ್ನೊಂದು ಗಂಟೇಗೆ. ಇಂಟರ್ನ್ಯಾಶನಲ್ ಫ಼್ಲೈಟ್ ಎರ್ಡ್ ಗಂಟೆ ಮೊದ್ಲು ಅಲ್ಲಿರ್ಬೇಕು, ಇಲ್ಲಾಂದ್ರೆ ಚೆಕಿನ್ ಕ್ಲೋಸ್ ಮಾಡ್ತಾರೆ ಬೇಗ ಹೋಗಿ ಒಂಬತ್ತುವರೆಗಾದ್ರೂ ಅಲ್ಲಿರ್ಬೇಕು’. ‘ಟ್ರೈ ಮಾಡ್ತೀನಿ ಮೇಡಮ್. ಕಷ್ಟ’. ಆತ ಹೇಳಿದಂತೆ ಟ್ರಾಫಿಕ್ ನಲ್ಲಿ ಕಾರು ಹೆಜ್ಜೆ ನಮಸ್ಕಾರ ಮಾಡಿಕೊಂಡು ಹೋಗ್ತಿತ್ತು. ‘ಅಯ್ಯೋ ಬೇಗ ಹೋಗಿ, ಸರ್. ನೀವ್ ಇಷ್ಟ್ ಸ್ಲೋ ಹೋದ್ರೆ ಆಗಲ್ಲ. ಇದು ನನ್ ಫ಼್ಯೂಚರ್ ಪ್ರಶ್ನೆ. ನಾನ್ ಎಮ್. ಎಸ್ ಮಾಡೋಕೆ ಅಂತ ನ್ಯೂ ಜರ್ಸಿ ಗೆ ಹೋಗ್ತಿದ್ದೀನಿ. ಐ ಕಾಂಟ್ ಮಿಸ್ ದಿಸ್’. ನಿಮ್ಮಿಂದಲೇ ತಡ ಆಗಿದ್ದಲ್ವಾ ಯಾಕೆ ನನ್ ಮೇಲೆ ಪ್ರೆಶರ್ ಹಾಕ್ತಿದ್ದೀರಾ ಅಂತ ಹೇಳಬೇಕೆನಿಸಿತು. ವಾದ ಮಾಡಿ ಪ್ರಯೋಜನ ಇಲ್ಲ ಅಂದುಕೊಂಡು ಸುಮ್ಮನಾದ. ಅವಳು ಗೊಣಗೋದನ್ನ ನಿಲ್ಲಿಸಲಿಲ್ಲ.

ಯಲಹಂಕ ಹತ್ರ ಬರೋಷ್ಟ್ರಲ್ಲಾಗಲೇ ಗಂಟೆ ೯:೩೦ ತೋರಿಸುತಿತ್ತು. ತಲುಪೋಕೆ ಇನ್ನೂ ಮೂವತ್ತೈದು ನಿಮಿಷ ಅಂತ ಜಿಪಿಎಸ್ ಅಲ್ಲಿ ನೋಡಿ ತನ್ನ ಕನಸು ನುಚ್ಚುನೂರಾಯಿತು ಅಂದುಕೊಂಡ್ಳು. ತಿಮ್ಮೇಶ್ ಬೀಪ್ ಆಗ್ತಿದ್ದ ಫ಼್ಯುಯಲ್ ಇಂಡಿಕೇಟರ್ ನ ನೋಡಿದ. ‘ಮೇಡಮ್ ಒಂದೇ ನಿಮ್ಷ,ಡೀಸಲ್ ಫಿಲ್ ಮಾಡಿಬಿಡ್ತೀನಿ’ ಅವಳೇನಾದರೂ ರೇಗುತ್ತಾಳಾ ಅನ್ನೋ ಭಯದಲ್ಲಿ ನೋಡ್ತಾ ಕಾರ್ ಸ್ಲೋ ಮಾಡಿದ. ಆಕೆ ಏನೂ ಹೇಳಲಿಲ್ಲ.

ಸಾವಿರ ರುಪಾಯಿಗೆ ಡೀಸಲ್ ಹಾಕಿಸಿ ಕಾರ್ ಏರ್ಪೋರ್ಟ್ ಕಡೆ ಚಲಿಸಿತು. ‘ನನ್ ಡೆಸ್ಟಿನೇಶನ್ ಬದ್ಲಾಯ್ಸಿದ್ರೆ ನೀವೇ ಬರ್ಬೋದಾ ಅಥವಾ ಬೇರೆ ಕ್ಯಾಬ್ ಬುಕ್ ಮಾಡ್ಬೇಕಾ?’ ‘ಯಾಕೆ ಮೇಡಮ್ ಏರ್ಪೋರ್ಟ್ಗೆ ಹೋಗಲ್ವಾ’ ‘ಇಲ್ಲ ಟೈಮ್ ಆಯ್ತು’ ‘ಅಲ್ಲಿ ಹೋಗಿ ಪ್ರಯತ್ನ ಮಾಡ್ಬೋದಲ್ವಾ, ಇನ್ನು ೧೦ ನಿಮಿಷದಲ್ಲಿ ತಲುಪಿಸ್ತೀನಿ’. ‘ಪರ್ವಾಗಿಲ್ಲ ನಾನ್ ಅಲ್ಲಿಗೆ ಹೋಗೋದು ತುಂಬಾ ಜನಕ್ ಇಷ್ಟ ಇರ್ಲಿಲ್ಲ, ಅದಿಕ್ಕೆ ಹೀಗೆಲ್ಲಾ ಆಯ್ತು ಅನ್ಸತ್ತೆ’. ತಿಮ್ಮೇಶ್ ಮರು ಮಾತನಾಡದೆ ಕಾರ್ ತಿರುಗಿಸಿದ. ಹೋಗುವಾಗ ಇದ್ದ ಧಾವಂತ ಈಗಿರ್ಲಿಲ್ಲ.

‘ಇವತ್ತು ನನ್ ಹುಟ್ಟುಹಬ್ಬ ಅಂತ ನನಗೇ ಗೊತ್ತಿರ್ಲಿಲ್ಲ ಮೇಡಮ್. ನಿಜ ಹೇಳ್ಭೇಕು ಅಂದ್ರೆ ನೀವ್ ನಂಗೆ ವಿಶ್ ಮಾಡಿರ್ಲಿಲ್ಲ ಅಂದ್ರೆ ನಂಗ್ ಗೊತ್ತಿಲ್ದೇ ಈ ದಿನ ಕಳೆದುಹೋಗ್ತಿತ್ತು. ಹಾಗಂತ ಇದೇನ್ ನಂಗೆ ಹೊಸದಲ್ಲ, ನನ್ ಜೀವನ್ದಲ್ಲಿ ನಂಗೆ ನೆನಪಿಲ್ದೇ ಕಳೆದುಹೋದ ಹುಟ್ಟುಹಬ್ಬಗಳೇ ಜಾಸ್ತಿ’. ಸೀಟ್ ಗೆ ಒರಗಿಕೊಂಡು ಕಣ್ಣು ಮುಚ್ಚಿ ಯೋಚ್ನೆ ಮಾಡ್ತಿದ್ದವಳು ತಿಮ್ಮೇಶನ ಮಾತಿಂದ ವಿಚಲಿತಳಾಗಿ ಪ್ರಶ್ನಾರ್ಥಕವಾಗಿ ಅವನನ್ನೇ ನೋಡಿದಳು.

‘ನನ್ನೋರು ಅಂತ ಹತ್ರದಲ್ಲಿ ಯಾರು ಇಲ್ಲ ಮೇಡಮ್, ತುಂಬಾ ವರ್ಷ ಈ ವಿಷ್ಯ ಇಟ್ಕೊಂಡು ಕೊರಗ್ತಿದ್ದೆ. ಈಗಿಲ್ಲ. ಒಂದ್ ಒಂದ್ ಸಲ ಒಂಟಿ ಅನ್ಸುತ್ತೆ ಆದ್ರೆ ಯಾರಿಲ್ದೇ ಇದ್ರೂ ನಮ್ ಜೀವ್ನ ನಡಿಯುತ್ತೆ ಅಂತ ಅರ್ಥ ಆಗೋಗಿದೆ’. ‘ಎಷ್ಟ್ ವರ್ಷದಿಂದ ಒಬ್ರೇ ಇದ್ದೀರಿ? ಮದ್ವೆ ಆಗಿಲ್ವಾ?’ ಆಸಕ್ತಿಯಿಂದ ಕೇಳಿದಳು. ‘ಆಗಿತ್ತು, ಹೆಂಡತಿ ತೀರ್ಕೊಂಡ್ ಸುಮಾರ್ ವರ್ಷ ಆಯ್ತು, ಮಗ ಕೆಲ್ಸ ಅಂತ ದೂರ ಇದ್ದಾನೆ, ಮೇಡಮ್ ನೀವು ಬೇರೆಯವ್ರಿಗೋಸ್ಕರ ನಿಮ್ ನಿರ್ಧಾರನ ಬದ್ಲಾಯ್ಸಿದ್ರೆ ಅದ್ರಿಂದ ಮುಂದೆ ನಿಮ್ಗೇ ಬೇಜಾರಾಗುತ್ತೆ ನೋಡಿ. ಆಗ್ಲೆ ಹೋಗುವಾಗ ನಿಮ್ ಭವಿಷ್ಯ ಆ ದೇಶದಲ್ಲಿತ್ತು ಅಂದ್ರಿ. ಈಗ ಅದನ್ನೆಲ್ಲಾ ಮರ್ತು ವಾಪಸ್ ಹೋಗ್ತಿದ್ದೀರ’ ಕಾಳಜಿಯಿಂದ ಹೇಳಿದ. ಅವಳು ಉತ್ತರಿಸಲಿಲ್ಲ. ‘ತಿಮ್ಮೇಶ್ ಸರ್, ಒಂದ್ ಎರ್ಡ್ ನಿಮ್ಷ ನಿಲ್ಸ್ತೀರಾ? ತಲೆ ನೋವ್ತಿದೆ ಕಾಫಿ ಕುಡೀಬೇಕು’ ಸರಿ ಎಂದು ರಸ್ತೆ ಬದಿಯಲ್ಲಿದ್ದ ಸಾಗರ್ ಸಾಮ್ರಾಟ್ ಹೋಟೆಲ್ ಮುಂದೆ ಕಾರ್ ನಿಲ್ಲಿಸಿದ. ತಿಮ್ಮೇಶ ಇನ್ನೂ ತಿಂಡಿ ತಿಂದಿಲ್ಲವೆಂದು ತಿಳಿದುಕೊಂಡು ಅವನನ್ನೂ ಹೋಟೆಲ್ ಗೆ ಕರೆದುಕೊಂಡು ಹೋದಳು.

‘ಒಂದು ಕಾಫಿ, ನಿಮ್ಗೆ? ‘ಮಸಾಲೆ ದೋಸೆ, ಕಾಫಿ’ ಅವಳು ಹಣವನ್ನು ಪಾವತಿಸಿದಳು. ತಿಮ್ಮೇಶ ಚೀಟಿ ತೆಗೆದುಕೊಂಡು ಹೋಗಿ ಅವಳಿಗೆ ಕಾಫಿ ತಂದು ಕೊಟ್ಟು , ದೋಸೆ ಪ್ಲೇಟ್ ಹಿಡಿದುಕೊಂಡು ಸುತ್ತ ಮುತ್ತ ನೋಡಿದ. ಬೇರೆ ಟೇಬಲ್ ಗಳು ಖಾಲಿ ಇರಲಿಲ್ಲ. ‘ಇಲ್ಲೇ ಬನ್ನಿ’. ತಿಮ್ಮೇಶ ಎದುರು ಕುಳಿತುಕೊಂಡ. ‘ನಾನಿವತ್ತು ಹೊರಟಿದ್ರೆ ಮತ್ತೆ ಯಾವಾಗ್ ಇಂಡಿಯಾಗೆ ಬರ್ತಿದ್ನೋ ಗೊತ್ತಿಲ್ಲ. ನಿಮ್ಗೆ ವಿಶ್ ಮಾಡೋರ್ ಯಾರೂ ಇಲ್ಲ. ನಂಗೆ ವಿಶ್ ಮಾಡೋರಿದ್ದಾರೆ, ಆದ್ರೆ ಬರ್ಲಿಲ್ಲ’. ‘ನಿಮ್ ಪರ್ಸನಲ್ ವಿಷ್ಯದ್ ಬಗ್ಗೆ ಹೆಚ್ ಕೇಳ್ಬಾರ್ದು ಅನ್ಸತ್ತೆ, ನಂಗೆ ಮಗಳಿದ್ದಿದ್ರೆ ನಿಮ್ ವಯಸ್ಸೇ ಆಗಿರ್ತಿತ್ತು ಮೇಡಮ್. ಅವಳು ನಿಮ್ ಪರಿಸ್ಥಿತಿಯಲ್ಲಿದ್ದಿದ್ರೆ ನಾನು ಅವಳ ಕನ್ಸನ್ನ ಅರ್ಧ ಆಗೋಕೆ ಬಿಡ್ತಿರ್ಲಿಲ್ಲ’ ಅವಳ ಕಣ್ತುಂಬಿಕೊಂಡಳು. ‘ನಮ್ಮಪ್ಪ ಇದ್ದಿದ್ರೆ ಹೀಗೇ ಹೇಳ್ತಿದ್ರೇನೋ. ನಾನ್ ಎಮ್ ಎಸ್ ಮಾಡ್ಬೇಕು ಅಂತ ಹೇಳಿದಾಗ ಅಮ್ಮನೇ ತುಂಬಾ ಸಪೋರ್ಟ್ ಮಾಡಿದ್ದು. ಅವ್ಳೂ ತೀರಿಕೊಂಡು ಇವತ್ತಿಗೆ ೨೫ ದಿನ ಆಯ್ತು. ನನ್ ಅಣ್ಣ ಕೂಡ ಸಪ್ಪೋರ್ಟ್ ಮಾಡ್ತಿದ್ದ ಆದ್ರೆ ಅದು ಬರೀ ಬಾಯಿಮಾತ್ನಲ್ಲಿ ಅಂತ ಇತ್ತೀಚಿಗಷ್ಟೇ ಗೊತ್ತಾಗಿದ್ದು’. ‘ನಾನು ಸ್ಪಂದನಾ ಅಂತ..’

ಬೆಳಗ್ಗೆಯಷ್ಟೇ ಭೇಟಿಯಾದ ತಿಮ್ಮೇಶನ ಹತ್ರ, ಸ್ಪಂದನಾಗೆಯಾಕೋ ತನ್ನ ಬಗ್ಗೆ ಹೇಳಿಕೊಳ್ಬೇಕು ಅನ್ನಿಸ್ತು.

ಸ್ಪಂದನಾ ಎಲೆಕ್ಟಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಇಂಜಿನೀರಿಂಗ್ ಮಾಡಿರೋ ಹುಡುಗಿ. ಮನೆಯಲ್ಲಿ ಹಣದ ಸಮಸ್ಯೆ ಏನಿರಲಿಲ್ಲ. ಆದ್ರೆ ವಿದೇಶದಲ್ಲಿ ಎಮ್.ಎಸ್ ಮಾಡ್ಭೇಕು ಅಂದ್ರೆ ೪೦-೫೦ ಲಕ್ಷ ಬೇಕಾಗಿದ್ದರಿಂದ ಆ ಹಣ ಅವರಿಗೆ ದೊಡ್ಡದ್ದೇ ಆಗಿತ್ತು. ಗೋಲ್ಡ್ ಮೆಡಲಿಸ್ಟ್ ಆಗಿರೋಳ ಕನಸನ್ನ ಪ್ರೋತ್ಸಾಹಿಸೋಕೆ ಅವಳ ತಾಯಿ ಮಲ್ಲೇಶ್ವರಮ್ ನಲ್ಲಿದ್ದ ಅವರ ಫ಼್ಲಾಟ್ ಅನ್ನ ಸ್ಪಂದನಾಳ ಹೆಸರಿಗೆ ಮಾಡಿದ್ದರು. ಅಲ್ಲಿಂದ ಅವಳ ಅಣ್ಣನ ನಡವಳಿಕೆಯಲ್ಲಿ ಬದಲಾವಣೆ ಕಂಡಿತ್ತು. ತಂಗಿಯನ್ನ ಎಲ್ಲದಕ್ಕೂ ಪ್ರೋತ್ಸಾಹಿಸುತ್ತಿದ್ದನಾದರೂ ಅವಳು ಈಗ ಮನೆ ಮೇಲೆ ಸಾಲ ತಗೊಂಡು ಬೇರೆ ದೇಶಕ್ಕೆ ಹೋಗೋದು ಇಷ್ಟವಿರಲಿಲ್ಲ. ಅಮ್ಮ ಇದ್ದಷ್ಟೂ ದಿನ ಸ್ಪಂದನಾ ಪರವಾಗಿ ಮಾತಾಡಿದ್ಲು, ಆಮೇಲೆ ಗಂಟಲಿಗೆ ಕ್ಯಾನ್ಸರ್ ಆಗಿ ಅವಳ ಮಾತೇ ನಿಂತುಹೋಯಿತು. ಸ್ಪಂದನಾ ತಾನು ಓದು ಮುಗಿಸಿ ಕೆಲಸ ಸಿಕ್ಕ ಮೇಲೆ ಮನೆಯ ಮೊತ್ತವನ್ನ ಅಣ್ಣನಿಗೆ ಕೊಡುವುದಾಗಿ ಹೇಳಿದರೂ ಅವನಿಗೆ ನಂಬಿಕೆ ಬರಲಿಲ್ಲ. ಅಂದುಕೊಂಡನ್ನ ಮಾಡದೇ ಇದ್ದರೆ ಅಮ್ಮ ಇಟ್ಟ ನಂಬಿಕೆಗೆ ಬೆಲೆ ಇಲ್ಲದಂತಾಗುತ್ತೆ ಅನ್ನಿಸಿ ಯು.ಎಸ್ ಗೆ ಹೊರಡುವ ನಿರ್ಧಾರ ಮಾಡಿದ್ದಳು.

‘ಅಣ್ಣ ಬರ್ಲಿ ಅಂತ ದಾರಿ ಮಧ್ಯ ಅಷ್ಟು ಹೊತ್ತು ಕಾದ್ರಾ?’ ‘ಇಲ್ಲಾ ಅವ್ರು ನನ್ ಫ಼್ರೆಂಡ್. ನನ್ನ ಬಿಡೋಕೆ ಏರ್ಪೋರ್ಟಿಗೆ ಬರ್ತೀನಿ ಅಂದಿದ್ರು, ನೆನ್ನೆ ಅವ್ರ್ ಜೊತೇನೂ ಯುಎಸ್ ಗೆ ಹೋಗೋದ್ರು ಬಗ್ಗೆ ವಾದ ಆಗಿತ್ತು’. ತಿಮ್ಮೇಶ್ ಮುಂದೆ ವಿಷಯವನ್ನ ಕೆದಕೋದು ಬೇಡ ಅಂತ ಸುಮ್ಮನಾದ. ಅವಳೇ ಮುಂದುವರೆಸಿದಳು.

‘ಪ್ರಜ್ವಲ್ ಅಂತ ನನ್ ಕ್ಲಾಸ್ ಮೇಟ್, ಆಕ್ಚುಲಿ ನಮ್ಮಮ್ಮನ ಸ್ಟೂಡೆಂಟ್. ಸೆಕಂಡ್ ಪಿಯುಸಿ ಟ್ಯೂಶನ್ ಗೆ ಅಂತ ನಮ್ಮನೇಗೆ ಬರ್ತಿದ್ದ. ಆಗ್ಲಿಂದ ಪರಿಚಯ. ಇಂಜಿನೀರಿಂಗ್ ಒಟ್ಟಿಗೆ ಓದಿದ್ವಿ. ಅಮ್ಮನಿಗೂ ಅವನ ಬಗ್ಗೆ ಗೊತ್ತಿತ್ತು, ಅಮ್ಮ ನನ್ ಬೆಸ್ಟ್ ಫ಼್ರೆಂಡ್ ತರ, ಅವಳ ಹತ್ರ ಎಲ್ಲಾ ಹೇಳಿಕೊಳ್ಬೋದಿತ್ತು. ಸ್ಕೂಲಲ್ಲಿ ಟೀಚರ್ ಮೇಲೆ ಕ್ರಶ್ ಆಯ್ತು ಅಂತ ಕೂಡ ಹೇಳ್ಕೊಳ್ತಿದ್ದೆ’. ಮುಂದೆ ಮಾತನಾಡಲಾಗದಂತೆ ಗಂಟಲು ಹಿಡಿದುಕೊಂಡಿತು. ದುಃಖವನ್ನ ತಡೆಹಿಡಿಯಲು ತಣ್ಣಗಾಗಿರೋ ಕಾಫಿಯನ್ನೇ ಕುಡಿದಳು.

‘ಮುಂದಿನ ಫ಼್ಲೈಟ್ ಬುಕ್ ಮಾಡ್ಬೋದಲ್ವಾ?’. ‘ನನ್ ಅಣ್ಣಂಗೆ ಮಾತ್ರ ಅಲ್ಲ, ಪ್ರಜ್ವಲ್ ಗೂ ನಾನು ಹೋಗೋದು ಇಷ್ಟ ಇಲ್ಲ. ಅಲ್ಲಿಗೆ ಹೋದ್ರೆ ನಾನು ಬದಲಾಗ್ತೀನಂತೆ, ಇಲ್ಲ ಆ ದೇಶವೇ ನನ್ನ ಬದಲಾಯಿಸುತ್ತಂತೆ. ನಾವು ಮದ್ವೆ ಆಗೋಕಾಗಲ್ಲ ಅನ್ನೋದನ್ನ ಇಲ್ಲೇ ಖಚಿತಪಡಿಸಿಕೊಂಡು ಹೋಗು ಅಂತಾನೆ, ಇಷ್ಟೆಲ್ಲಾ ಇದ್ಕೊಂಡು ನಾನು ಹೋಗೋಣ ಅಂತಾನೇ ಹೊರಟೆ. ಅಣ್ಣ ಅಂತು ಮುಖ ಕೊಟ್ಟು ಮಾತಾಡ್ಲಿಲ್ಲ, ದಾರಿ ಮಧ್ಯ ಪ್ರಜ್ವಲ್ ನ ಕಂಡು ಹೋಗೋಣ ಅಂದ್ಕೊಂಡೆ, ಅವ್ನೂ ಬರ್ಲಿಲ್ಲ’ ನಿರಾಸೆಯಿಂದ ಹೇಳಿದಳು. ‘ನಿಮ್ ಕೆಲ್ಸಕ್ಕೆ ತೊಂದರೆ ಮಾಡಿದೆ. ಸಾರಿ. ಹೊರಡೋಣ’ ಎಚ್ಚೆತ್ತುಕೊಂಡು ಹೇಳಿದ್ಲು.

ಕಾರಲ್ಲಿ ಕೂತಾಗ ಮಳೆ ನಿಂತಿತ್ತು. ಮೆಸ್ಸೇಜ್ ಟೋನ್ ಕೇಳಿಸಿ ಸ್ಪಂದನಾ ಫೋನ್ ನೋಡಿದಳು. ‘ಈಗ ವಾಪಸ್ ಅದೇ ಲೊಕೇಶನ್ ನಾ ಮೇಡಮ್?’ ಅವಳು ಆಶ್ಚರ್ಯದಿಂದ ಪೋನ್ ನನ್ನೇ ನೋಡ್ತಿದ್ದಳು. ‘ಮೇಡಮ್’? ‘ಮಳೆಯಿಂದ ಫ಼್ಲೈಟ್ ಮೂರು ಗಂಟೆ ಡಿಲೇ ಆಗಿದೆ’ ಗೊಂದಲದಲ್ಲಿ ಹೇಳಿದಳು. ‘ನೋಡಿದ್ರಾ? ದೇವರೇ ನಿಮ್ಗೆ ಇನ್ನೊಂದ್ ಅವಕಾಶ ಕೊಟ್ಟಿದ್ದಾನೆ. ಕಳ್ಕೋಳ್ಬೇಡಿ. ನೀವು ಓದಿ ನಿಮ್ ಕಾಲ್ ಮೇಲೆ ನಿಂತ್ಕೊಂಡ್ರೆ ನಿಮ್ ಅಣ್ಣನ್ ದುಡ್ಡನ್ನೂ ವಾಪಸ್ ಕೊಡ್ಬೋದು, ಮತ್ತೆ ನಿಮ್ಗೆ ಸರಿಯಾದ ಸಂಗಾತಿ ಆಯ್ಕೆ ಮಾಡಿಕೊಳ್ಳೋಕೆ ಇನ್ನೂ ಸಮಯ ಇದೆ. ನಿಜವಾದ ಪ್ರೀತಿಗೆ ತಾಳ್ಮೆ ಇರುತ್ತೆ. ಇನ್ನೊಬ್ಬರಿಗೋಸ್ಕರ ನಿರ್ಧಾರಾನ ಬದಲಾಯ್ಸ್ಬೇಡಿ’. ತಿಮ್ಮೇಶ ಅವಳನ್ನ ಓದೋಕೆ ಕಳಿಸೋದ್ರಲ್ಲೇ ತನ್ನ ಜೀವನದ ಸಾರ್ಥಕತೆ ಅಡಗಿದೆ ಅನ್ನೋ ರೀತಿಯಲ್ಲಿ ಹೇಳಿದ.

ಸ್ಪಂದನಾ ಇನ್ನೂ ಗೊಂದಲದಲ್ಲಿದ್ದಳು. ‘ಬೇಡ ನಾನ್ ಮನೇಗ್ ಹೋಗ್ತೀನಿ’. ‘ನನ್ ಅನುಭವದಲ್ಲಿ ಒಂದ್ ಮಾತ್ ಹೇಳ್ತೀನಿ ಮೇಡಮ್. ಈಗ ನೀವು ಯಾವ್ದೋ ಬೇಜಾರ್ನಲ್ಲಿ ವಾಪಸ್ ಹೋದ್ರೆ ಮನೇಗ್ ಹೋದ್ಮೇಲೆ ಹಾಗ್ ಮಾಡ್ಬಾರ್ದಿತ್ತು ಅಂತ ಖಂಡಿತ ಕೊರಗ್ತೀರ, ಮನ್ಸನ್ನ ಬದಲಾಯಿಸಿಕೊಳ್ಳೋಕೆ ಈಗ ಅವಕಾಶ ಇದೆ. ಆಮೇಲ್ ಇರಲ್ಲ. ನಾವು ಏರ್ಫೊರ್ಟ್ ತಂಕ ಹೋಗೊಣ. ಅಲ್ಲಿಗೆ ಹೋದ್ಮೇಲೂ ನಿಮ್ಗೆ ವಾಪಸ್ ಹೋಗ್ಬೇಕು ಅನ್ಸಿದ್ರೆ ಹೋಗಿ’. ಉತ್ತರಕ್ಕೆ ಕಾಯದೆ ತಿಮ್ಮೇಶ ಕಾರನ್ನ ಏರ್ಪೋರ್ಟಿನ ಕಡೆಗೆ ತಿರುಗಿಸಿದ.

ಮಳೆ ಕಮ್ಮಿಯಾಗುತ್ತಿದ್ದಂತೆ ಕಾರು ವೇಗ ಹೆಚ್ಚಿಸಿಕೊಳ್ತು. ಸ್ಪಂದನಾ ಮನಸ್ಸಿನಲ್ಲಿ ಕವಿದ ಮೋಡವೂ ಸರಿದಂತಿತ್ತು. ಹದಿನೈದು ನಿಮಿಷದಲ್ಲಿ ಏರ್ಪೋರ್ಟ್ ತಲುಪಿದರು. ಕಿಟಕಿಯಿಂದಾಚೆ ನೋಡುತ್ತಿದ್ದ ಸ್ಪಂದನಾಗೆ ಆಗಷ್ಟೇ ಟೇಕ್ ಆಫ್ ಆದ ವಿಮಾನ ಆಕಾಶದೆತ್ತರಕ್ಕೆ ಹಾರುತ್ತಾ ನೀನೂ ನಿನ್ನ ಕನಸಿನ ಕುದುರೆಯನ್ನೇರಿ ಆಕಾಶಕ್ಕೆ ಹಾರು ಅಂತ ಹೇಳಿದಂತೆ ಭಾಸವಾಯಿತು. ಅಮ್ಮ, ನಾನು ಓದಿ ಕೆಲ್ಸಕ್ಕೆ ಸೇರಿದ ಮೇಲೆ ನಿನ್ನನ್ನ ನಯಾಗರಾ ಫ಼ಾಲ್ಸ್ ಗೆ ಕರೆದುಕೊಂಡು ಹೋಗ್ತೀನಿ ನೋಡ್ತಿರು ಅಂತ ಹೇಳಿದ್ದು ನೆನಪಾಗಿ ಪರ್ಸ್ ನಲ್ಲಿದ್ದ ಅಮ್ಮನ ಫೋಟೋ ತೆಗೆದು ಭಾವುಕಳಾಗಿ ನೋಡಿದಳು. ಅವಳ ಮುಖದ ಭಾವವನ್ನು ಕನ್ನಡಿಯಲ್ಲಿ ನೋಡಿ ಕ್ಯಾಬ್ ಗಳು ಹೋಗೋ ದಾರಿಯನ್ನ ಬಿಟ್ಟು ಪಾರ್ಕಿಂಗ್ ಕಡೆ ಕಾರನ್ನು ನಡೆಸಿದ ತಿಮ್ಮೇಶ.

‘ಪಾರ್ಕಿಂಗ್ ನಲ್ಲಿ ಯಾಕೆ ನಿಲ್ಲಿಸ್ತಿದ್ದೀರಾ?’ ‘ಲಗೇಜ್ ತುಂಬಾ ಇದ್ಯಲ್ಲಾ, ಅಲ್ಲಿ ತನಕ ತಂದುಕೊಡ್ತೀನಿ ನಡೀರಿ. ನೀವು ಹೊರಡುತ್ತೀರಲ್ವಾ?’. ಸ್ಪಂದನಾ ಅರ್ಥಪೂರ್ಣವಾಗಿ ನಕ್ಕು ಹೌದು ಅಂತ ತಲೆಯಾಡಿಸಿದಳು. ಡಿಕ್ಕಿ ತೆಗೆದು ಲಗೇಜ್ ಇಳಿಸಿದ. ‘ವ್ಯಾಲೆಟ್ ಇಂದ ದುಡ್ಡು ಕಳಿಸಿದ್ದೀನಿ ನೋಡಿ, ನಾನು ಬರ್ತೀನಿ’ ತಿಮ್ಮೇಶ್ ಲಗೇಜ್ ಗಳನ್ನು ಟ್ರಾಲಿ ಒಳಗೆ ಇರಿಸಿದ. ‘ಹ್ಯಾಪಿ ಜರ್ನಿ ಮೇಡಮ್. ಫ಼ೈವ್ ಸ್ಟ್ರಾರ್ ರೇಟಿಂಗ್ ಕೊಡೋದು ಮರೀಬೇಡಿ’ ನಗುತ್ತಾ ಹೇಳಿದ. ಸ್ಪಂದನಾ ಅವನಿಗೆ ಬೈ ಹೇಳಿ ಹೊರಟಳು.

ಡಿಪಾರ್ಚರ್ ಹತ್ರ ಪ್ರಯಾಣಿಕರನ್ನು ಅವರವರ ಕುಟುಂಬದವರು, ಸ್ನೇಹಿತರು ಅಪ್ಪಿ, ಕೈ ಕುಲುಕಿ, ಕೆಲವರು ಅಳ್ತಾ ಬೀಳ್ಕೊಡುತ್ತಿರೋದನ್ನ ಸ್ಪಂದನಾ ನೋಡ್ತಾ ನಿಂತಳು. ತನ್ನನ್ನಕಳಿಸಿಕೊಡೋಕೆ ನನ್ನೋರು ಯಾರೂ ಬರ್ತಿಲ್ವಲ್ಲ ಅಂತ ಬೇಜಾಯಿತು. ತಿರುಗಿ ನೋಡಿದಳು, ತಿಮ್ಮೇಶ್ ಅವಳು ಹೋಗೋದನ್ನೇ ನೋಡುತ್ತಾ ನಿಂತಿದ್ದ. ಸ್ಪಂದನಾ ‘ತುಂಬಾ ಥ್ಯಾಂಕ್ಸ್’ ಖುಷಿಯಿಂದ ಜೋರಾಗಿ ಹೇಳಿ ಕೈ ಬೀಸಿದಳು.

ಮಾರನೇ ದಿನ ಹೋಟೆಲ್ ನಲ್ಲಿ ತಿಮ್ಮೇಶ ಕಾಫಿ ಕುಡೀತಾ ನಿಂತಿದ್ದಾಗ ಅವನ ವಾಟ್ಸ್ ಆಪ್ ನಿಂದ ಕಾಲ್ ಬಂದಿದ್ದನ್ನ ನೋಡಿ ರಿಸೀವ್ ಮಾಡಿದ. ‘ಈಗ್ ತಾನೇ ಲ್ಯಾಂಡ್ ಆದೆ, ಏರ್ ಪೋರ್ಟ್ ವೈಫ಼ೈ ನಿಂದ ಕಾಲ್ ಮಾಡ್ತಿದ್ದೀನಿ’ ಸ್ಪಂದನಾ ಧ್ವನಿಯಲ್ಲಿ ಅವಳ ಸಂತೋಷ ಗೊತ್ತಾಗುತ್ತಿತ್ತು.

‍ಲೇಖಕರು Avadhi

May 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

71 ಪ್ರತಿಕ್ರಿಯೆಗಳು

    • Basavaraja

      It is very nice. You have ability to become a good writer. I like very much that you maintained some places like Mekri circle, coffee stall and Bangalore traffic. It creates curious till end of the story.

      I am Basavaraj from Vijayanagara your big fan of acting and writing..

      ಪ್ರತಿಕ್ರಿಯೆ
      • Yashu Sandesh

        So interesting….very well written ma’am….. Good luck… loads of love from coorg….

        ಪ್ರತಿಕ್ರಿಯೆ
        • Chaitra hegde

          ಈ ಪುಟ್ಟ ಕಥೆಯಿಂದ ಇನ್ನಷ್ಟು ಜನರ ಹೃದಯ ಗೆದ್ದಿರಿ… ಸ್ವಂತದವರನ್ನು ದೂರ ಮಾಡಿಕೊಳ್ಳುವ ಇಂದಿನ ದಿನಮಾನದಲ್ಲಿ ದೂರದವರನ್ನೂ ಸ್ವಂತ ಎಂದು ತಿಳಿದ ಮುಗ್ಧ ಹುಡುಗಿ ಸ್ಪಂದನ ಪಾತ್ರ ಬಹಳ ವಿಶೇಷ… ನಿಮ್ಮ ಬರವಣಿಗೆ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ.. ಇನ್ನಷ್ಟು ನಿಮ್ಮಿಂದ ಕಥೆಗಳನ್ನು ಬಯಸುವ ನಿಮ್ಮ ಅಭಿಮಾನಿ…..

          ಪ್ರತಿಕ್ರಿಯೆ
      • Vijay kamble

        ಕಥೆ ಚೆನ್ನಾಗಿದೆ ತುಂಬಾ ಕೂತುಹಲಕಾರಿ
        ಆಗಿದೆ .
        ..

        ನಿಮ್ಮ ಅಭಿಮಾನಿ
        ಬೆಳಗಾವಿ. ವಿಜಯ. ಕೆ

        ಪ್ರತಿಕ್ರಿಯೆ
        • Jyoti jain

          Mam story super agide……niv future nalli best writer agtira……nim story odata odata a scene kann munde barta ettu……best of luck mam

          ಪ್ರತಿಕ್ರಿಯೆ
        • Trupti hangargi

          Nivu tumba chennagidere! Nan modalne barii kathe odiddie aadre adu nim kathe matra.

          ಪ್ರತಿಕ್ರಿಯೆ
          • Prema

            Kathe tumba chanagide

        • Shwethasandesh

          Super story … Acutually after my college days i stopped reading stories today i read this because it was written by you because i am big fan of kannadati and i used watch every episode 24 hours before in voot . The way you are talking acting every thing was very nice. Story was very interesting expecting few more stories in coming days thank you once again for such a wounderful story

          ಪ್ರತಿಕ್ರಿಯೆ
      • Veena

        Hi ranjani. I appreciate your interest towards story writing. Usually I dot read stories but your stories creates curiosity to read more. Short and siple. Keep it up you are the gem of this kannadanaadu

        ಪ್ರತಿಕ್ರಿಯೆ
      • Sanjana...

        So interesting story ma’am….. Very well written ma’am….. Good luck… Keep it…..
        Your fan..
        Sanjana…..

        ಪ್ರತಿಕ್ರಿಯೆ
    • Shreyas B N

      ನಿಜವಾದ ಪ್ರೀತಿಗೆ ತಾಳ್ಮೆ ಇರುತ್ತೆ

      ಪ್ರತಿಕ್ರಿಯೆ
      • Shubhasri A

        It’s so pleasant to see your acting on screen n writing skill here..So happy to read this emotional but positive story..pls continue your passion in writing..one among the huge fans of u❤️Gud luck

        ಪ್ರತಿಕ್ರಿಯೆ
        • ಲೀಲಾವತಿ ಬಿ. ಹೆಚ್.

          ನೀವುಬರೆದ ಎಲ್ಲಾ ಕಥೆಗಳೂ ನನಗಿಷ್ಟ ಅದರಲ್ಲಿ ಬರುವ ನಾಯಕಿಯ ಪಾತ್ರಧಾರಿ ನೀವೇ ಅನಿಸುತ್ತದೆ. ಹೀಗೇ ಬರೀತ ಇರಿ.

          ಪ್ರತಿಕ್ರಿಯೆ
    • ಚೈತನ್ಯ

      ನೀವು ಬರೆದಿರುವ ಕಥೆ ಮನಸ್ಸಿಗೆ ಮುಟ್ಟುವತಹದ್ದು ಹಾಗೂ ತುಂಬಾ ಆರ್ಥಪೂರ್ಣವಾಗಿದೆ ನಗ್ತಾ ಇರೀ

      ಪ್ರತಿಕ್ರಿಯೆ
  1. Pragnya

    It’s awesome…. But… I think u can make it interesting still….. Every lines every paragraph should create that curiousity like mundenu mundenu …… All the best Di ❤

    ಪ್ರತಿಕ್ರಿಯೆ
    • ಮನೋಹರ್

      ಕಥೆ ಮತ್ತು ಅದರ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಮುಂದಿನ ಕಥೆಯ ನಿರೀಕ್ಷೆಯಲ್ಲಿ ಇದ್ದೇನೆ.

      ಪ್ರತಿಕ್ರಿಯೆ
    • Pallavi MH

      Hai Ranjani madam
      It’s really very nice story Nam life alli yaru yavag yav reeti help madtaro gottilla adanne neevu nim kathe alli tumba chanag bardidira obba can driver spandana ge heli avalanna avala life kade turn mado reeti tumba chanag ide
      Neevu serials alli matra kathe baritira ankondidde but neevu real life alli tumba chanag bardidira madam
      It’s very nice
      All the best for your future…
      Yours well wisher
      Pallavi………….

      ಪ್ರತಿಕ್ರಿಯೆ
    • Mangala

      Bhuvi akka
      Your parichaya ne eldye friend ship
      Agodu greate it’s true friendship Alva Nim yalla stories like…agive so akka

      ಪ್ರತಿಕ್ರಿಯೆ
  2. Pramod Gowda

    Of everything that has been penned here, the touch of words like “Srirampura, Sagar Samrat, Mekhri cricle, OTP etc has got a lot to do with most of the stuffs that a common man goes through pretty much in his/her life on a regular basis.

    While the ability to write has largely got to do with the kind of passion one has, the ability to write something that has a flavor of some of life’s natural occurrences is an incredible stuff!

    Good going,Ranjani! Nice to see you getting involved in different areas, and I’m sure that’s something that keeps you going all the tine.

    Being a passionate artiste and writer, you’ve been doing really well by keeping it quite simple and what is more important is to enjoy to the fullest possible extent, which, apparently you’ve been doing for quite some time now.

    I’ve always enjoyed seeing people follow their passion, having followed my passion of being a wildlife photographer and cricket analyst.
    I wish you good luck!

    Cheers- Pramod Gowda.
    Instagram ID – Pramodgowda2206

    ಪ್ರತಿಕ್ರಿಯೆ
    • Ranjitha Girish

      ಹಾಯ್ ರಂಜಿನಿ ಮೇಡಂ, ಕತೆ ತುಂಬಾ ಅದ್ಭುತವಾಗಿತ್ತು, ನೀವೊಬ್ಬ ಉತ್ತಮ ಬರಹಗಾರ್ತಿ. ಹೀಗೆ ನಿಮ್ಮ ಬರಹವನ್ನು ಮುಂದುವರಿಸಿ.

      ಪ್ರತಿಕ್ರಿಯೆ
  3. Rasika

    Akka super agi ettu . Nim kateli nanag isht agirodu ,Andre mattobrigoskar yvttu kayabardu annod artha aytu.elli nijavad preeti erutto adu gellutte. Nanagu Kate galleries Andre tumba Ishta . Kaled varad Kate nanu miss madkonde , eg adnu odtini. All the best akka . With lots of love

    ಪ್ರತಿಕ್ರಿಯೆ
    • Ujwal

      ಭಾವನೆಗಳು ಮನ ಮುಟ್ಟುವಂತಿದೆ
      ಕಥೆ ತುಂಬಾ ಇಷ್ಟ ಆಯ್ತು
      ❣️❣️

      ಪ್ರತಿಕ್ರಿಯೆ
  4. ಗೋವಿಂದರಾಜು

    ತುಂಬಾ ಚೆನ್ನಾಗಿದೆ ಮೇಡಂ… ನಿರೂಪಣೆ ಅದ್ಭುತವಾಗಿದೆ

    ಪ್ರತಿಕ್ರಿಯೆ
  5. ಸಿಂಚನ

    ಕಥೆ ತುಂಬಾ ಚೆನ್ನಾಗಿದೆ, ಕೆಲವು ಕಡೆ ಬರವಣಿಗೆಯಲ್ಲಿ ತಪ್ಪಾಗಿದೆ, ಕೆಲವೊಂದು ಪದಗಳು ಗೊಂದಲ ಉಂಟುಮಾಡಿತು ಬರೆಯುವಾಗ ಆದಷ್ಟು ಬಿಡಿಸಿ ಬರೆಯಿರಿ ಅಕ್ಕ..
    ಒಳ್ಳೆಯದಾಗಲಿ ಶುಭದಿನ..

    ಪ್ರತಿಕ್ರಿಯೆ
    • Nisarga m l

      ಕಥೆಗಳಂತೂ ಅದ್ಭುತವಾಗಿ ಬರೆದಿದ್ದೀರಿ ಅಕ್ಕ ❤️ಕಥೆ ಓದುವಾಗ ಅದು ಕಾಲ್ಪನಿಕ ಎಂದು ಸ್ವಲ್ಪವೂ ಭಾಸವಾಗುವುದಿಲ್ಲ…. ಭಾವನೆಗಳ ಮಹಾ ಪೂರಾವನ್ನೆ ಸೇರಿಸಿ ಬರೆದಿದ್ದೀರಿ ನಾನಂತೂ ಮೊದಲೇ ನಿಮ್ಮ ಹುಚ್ಚು ಅಭಿಮಾನಿಯಾಗಿದ್ದೆ, ಈಗಂತೂ ನಿಮ್ಮ ಬಗೆಗಿನ ಗೌರವ, ಪ್ರೀತಿ ಹಿಮ್ಮಡಿಯಾಗಿ ❤️ನನಗಂತೂ ನೀವು ಮುಂದೆ ಒಳ್ಳೆ ಬರಹಗಾರ್ತಿ ಆಗುವುದರಲ್ಲಿ ಸಂದೇಹವೇ ಇಲ್ಲ …. i love u ranjani akka❤️

      ಪ್ರತಿಕ್ರಿಯೆ
      • Anitha Rao

        ಒಂದು ಒಳ್ಳೆಯ ಭಾವನೆ, ಒಳ್ಳೆ ಉದ್ದೇಶ ಎಲ್ಲವೂ ಇದೆ ಈ ಒಂದು ಪುಟ್ಟ ಕಥೆಲಿ ಅನ್ಸ್ತು.

        ನಿಮಗೆ ಒಳ್ಳೆಯದಾಗಲಿ ರಂಜನಿ ಅವರೇ.

        ಪ್ರತಿಕ್ರಿಯೆ
  6. Trupti

    ನಮಗೆನಿಮ್ಮಕತೆತುಂಬಾಇಷ್ಟಆಯ್ತು, ನಾನು ಮೊದಲ ಬಾರಿಗೆ ಕತೆ ಓದಿದ್ದೇ ಆದ್ರೇ ಅದು ನಿಮ್ ಕಥೆ ಮಾತ್ರ! ತುಂಬಾ ಧನ್ಯವಾದಗಳು! ನಂಗೆ ನೀವ್ ಅಂದ್ರೆ ತುಂಬಾ ಇಷ್ಟ.

    ಪ್ರತಿಕ್ರಿಯೆ
  7. ದಿವ್ಯಶ್ರೀ ಆರ್ ಆರ್

    ತುಂಬಾ ಚೆನ್ನಾಗಿ ಇದೆ ಕಥೆ ಭುವಿ ಮೇಡಂ

    ಪ್ರತಿಕ್ರಿಯೆ
      • Annappa.hugar

        Jeevan. Venmbudu novu,
        Nalivin sandook. Iddanga.
        Kathe .adhbhutavagide.
        Ondukade guri.
        Ondukade.thimeshan
        Onti jewna. Super agide
        Adre.
        Kaledidu.avalige.
        Sikkide.
        Adre.
        A waning sigabekagithu.

        ಪ್ರತಿಕ್ರಿಯೆ
    • Vishuu

      Awesome madam. You have all the ability to reach our expectations through your story and words. You did reach in this story. Please dont ever stop reading and writing in Kannada. Hoping and looking forward for more. Big fan of yours and i feel it is worth to be .
      Thank you.

      ಪ್ರತಿಕ್ರಿಯೆ
    • ನಂದ,ಸಾಬನೆ,ಬೆಳಗಾಂ

      ನಿಮ್ಮ ಬರವಣಿಗೆ ಸೂಪರ್ ,ಕಥೆಯಲ್ಲಿ ತೂಕ ಇದೆ .ಎಸ್ತ ಆಯ್ತು.ನೀವೂ ಆಕ್ಟಿಂಗ್ ಲ್ಲೂ ತುಂಬಾ ಚಂಗಿ ಮಾಡಿತಿರಿ.ನಿಮ್ಮ ಅಭಿಮಾನಿ ನಾನು.ಈ ಕಥೆ ಇನ್ನೂ ಮುಂದೇವರೆಸಿದ್ರು ತುಂಬಾ ಚೆನ್ನಾಗಿ ಇರತೆ

      ಪ್ರತಿಕ್ರಿಯೆ
  8. Swathi Gowda Sulya

    Super story mam……
    ಜೀವನದಲ್ಲಿ ಯಾವುದೋ ಕ್ಷಣದಲ್ಲಿ ಪರಿಚಯವಾದ ವ್ಯಕ್ತಿಗಳು ಕೆಲವೊಮ್ಮೆ ನಮ್ಮ ಜೀವನದಲ್ಲಿ ಅಚ್ಚಲಿಯದೆ ಉಳಿದು ಬಿಡ್ತಾರೆ…
    ನಮ್ಮ ಜೀವನದ ದಿಕ್ಕು ಬದಲಾವಣೆಗೆ ಮುಖ್ಯ ಪಾತ್ರರಾಗ್ತಾರೆ…
    ನಮ್ಮವರಿಂದಲೇ ಕಡೆಗಣಿಸಲ್ಪಟ್ಟ ಜೀವಕ್ಕೆ ತಿಮ್ಮೇಶ್ ಅಂಥ ಭರವಸೆಯ ಸಿಕ್ಕಾಗ ಆಗೋ ಬದಲಾವಣೆ ನಿಜಕ್ಕೂ ಬಹಳ ಅತ್ಯುತ್ತಮ ಆಗಿಯೇ ಇರುತ್ತದೆ… ನೊಂದು ತಪ್ಪು ಹೆಜ್ಜೆ ಇಡುವ ಜೀವಗಳಿಗೆ ತಿಮ್ಮೇಶ್ ಅವರಂಥ ಸಹೃದಯಿಗಳು ಸಿಗುವಂತಾಗಲಿ…
    It’s really amazing mam… One of the best story… Wish u for a great success.. expecting like this best moral filled stories.. Thank you mam..

    ಪ್ರತಿಕ್ರಿಯೆ
  9. Kusuma

    super story magalillada timmesha nige magalu tande ellada spanadanage tande sikka kushi nange bantu

    ಪ್ರತಿಕ್ರಿಯೆ
  10. ಆದರ್ಶ್ ಶಿವಮೊಗ್ಗ

    ಮನಸ್ಸಿಗೆ ನಾಟುವಂತೆ ಇದೆ ನಿಮ್ಮ ಬರಹ, ಕೊನೆವರೆಗೆ ನಮ್ಮ ಮನಸ್ಸನ್ನ ಸೇಳೆಡಿದುತ್ತೆ,

    ಪ್ರತಿಕ್ರಿಯೆ
  11. ಉಷಾರಾಣಿ

    ತುಂಬಾ ಚೆನ್ನಾಗಿದೆ….ಎಲ್ಲೋ ಸಿಗುವ ಅಪರಿಚಿತರು ಕೂಡ ಒಮ್ಮೊಮ್ಮೆ ಗೊತ್ತಿಲದೇ ಮನಸಿನಲ್ಲಿ ಅಚ್ಚಳಿಯದೆ ಉಳಿದು ಬಿಡ್ತಾರೆ…ಯಾರು ಇಲ್ಲದ ತಿಮ್ಮೇಶ. ಎಲ್ಲರೂ ಇದ್ದು ಯಾರು ಇಲ್ಲದ ಪ್ರಜ್ವಲ…..ತುಂಬಾ ಕಾಡುವ ಕಥೆ. ಇಷ್ಟ ಆಯಿತು❤️❤️

    ಪ್ರತಿಕ್ರಿಯೆ
    • Srivani

      Wow what an amazing story ranjani raghavan mam, really it was very beautiful story ever I read ❤❤❤

      ಪ್ರತಿಕ್ರಿಯೆ
  12. Geetha

    Thumba chennagide narration…..emotionally touching story…nice story…waiting for ur next article…

    ಪ್ರತಿಕ್ರಿಯೆ
  13. Anusha gowda AR

    Hi mam ur just amazing mam
    Ur story is beautiful just same like you
    While watching stories I just clicked on it to have a look on your story but u made me to love stories…. so involving and I never ever read stories this is the first its really amazing….I really have a confidence that u will be very successful writer as well as actor..god has given u both the qualities….ur at the peak…. nothing n no one can drag you back..
    And I love your serial I never missed it even a day…..
    …keep going n keep growing mam
    Wl be waiting for next week Thank you ❤️
    I Love you ❤️
    I Love you ❤️
    I Love you ❤️
    I Love you ❤️
    I Love you ❤️
    I Love you ❤️
    I Love you so so so so much ❤️❤️
    Wl be waiting for your reply mam ☺️
    Once gain Thank you ❤️

    ಪ್ರತಿಕ್ರಿಯೆ
  14. Sarika Shetty

    It’s penned very nicely with those beautiful kannada words. I’m happy that I spared valuable minutes on this and it’s worth too. I wish you the best in this new journey of yours

    ಪ್ರತಿಕ್ರಿಯೆ
    • Shivaleelagk

      Tumba channagi ede akka……nivu vyakti & bhavanegalanna tumba channagi vyakta padistira….good luck akka❤…….

      ಪ್ರತಿಕ್ರಿಯೆ
  15. km vasundhara

    ಒಳ್ಳೆಯ ನಿರೂಪಣೆಯೊಂದಿಗೆ ಕತೆ ಚೆನ್ನಾಗಿತ್ತು..

    ಪ್ರತಿಕ್ರಿಯೆ
  16. prashanth.

    mam super story mam…
    seriously e tara story odtedree… yeno ontara khushi agute . and story matra tumba intresting agede . some movement ale nam life ale yen agute anta gotagola . but are story na e tara story made odtevala age a story le yeno ontara feeling’$ and emotional attachment erutee.. but a story na nevu janarege odotara madterala really hatsoff mam… e story seriously tumba esta aytu mam. nem next kathe goskara wait madterteve mam. enti nemm abhimanni.

    ಪ್ರತಿಕ್ರಿಯೆ
  17. Lavanya

    Thumba chenagi ide. Nanagu ide reethi kathe bariyalu ista . Prayathnadallidene…..

    ಪ್ರತಿಕ್ರಿಯೆ
    • Dreamliner

      ಅದ್ಬುತವಾದ ರಚನೆ, ತುಂಬಾ ಜನರಿಗೆ ಸ್ಫೂರ್ತಿ ತುಂಬುವ ಕಥೆ.
      ನಿಮ್ಮ ಈ ಕಥಾ ಅಂಕಣಕ್ಕೆ ಒಳ್ಳೆಯದಾಗಲಿ.
      ನಿಮ್ಮ ಮುಂದಿನ ಕಥೆಗೆ ಕಾಯುತ್ತಿರುವೆ.
      ವಂದನೆಗಳು.

      ಪ್ರತಿಕ್ರಿಯೆ
      • Darshini.G

        ಅದ್ಭುತವಾದ ಕಥೆ… ನನಗೆ ತುಂಬಾ ಇಷ್ಟ ಆಯಿತು… ಹೀಗೆ ಕಥೆಗಳನ್ನು ಬರಿಯುತ್ತಿರಿ..♥️

        ಪ್ರತಿಕ್ರಿಯೆ
  18. nagesh nayak

    *ಕ್ಯಾಬ್ ಮೀಟ್*

    ಚಿಕ್ಕದಾಗಿ ಚೊಕ್ಕದಾಗಿ ಎಣೆದಿರುವ ಒಂದು ಸುಂದರ ಸನ್ನಿವೇಶದ ಅದ್ಬುತ ಕಥೆ ಇವತ್ತು ಅವಧಿಯಲ್ಲಿ ರಂಜನಿ ರಾಘವನ್ ಅವರ ನಿರೂಪಣೆಯಲ್ಲಿ ಕೇಳುವ ಭಾಗ್ಯ ನನ್ನದಾಯಿತು.

    ಅಳಸಿದ ಸಂಬಂಧಗಳ ಮದ್ದೆ ಸಂಬಂಧವೇ ಇಲ್ಲದ ಟ್ಯಾಕ್ಸಿ ಚಾಲಕ ಮತ್ತು ಕಸ್ಟಮರ್ ನಡುವಿನ ಅಂತರಾಳದ ಮಾತುಕತೆಗಳು ಅಪ್ಪ ಮಗಳ ಭಾಂಧವ್ಯವನ್ನು ತೋರಿಸಿಕೊಟ್ಟಿದ್ದು ಸತ್ಯ.

    ಅಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವಂತೆ ಈ ಟ್ರಾಫಿಕ್ ಜಾಮ್ ಅವರ ನೋವನ್ನು ಹೇಳಿಕೊಳ್ಳುವಂತೆ ಮಾಡಿತು, ಮಳೆ ಅವರ ಫ್ಲೈಟ್ ಲೇಟಾಗಿ ಅವರ ಕನಸಿಗೆ ಜೀವ ತುಂಬಿತು..

    ಕೊನೆಯಲ್ಲಿ ಯಾರು ಇಲ್ಲದೆ ಫ್ಲೈಟ್ ಹತ್ತುವ ನೋವಿಗೆ ಮುಲಾಮಿನಂತೆ ತಿಮ್ಮೇಶ ಬಂಧುವಾಗಿ ಕಳುಹಿಸಿಕೊಟ್ಟ ಕಥೆ ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಮೇಡಮ್

    ಶುಭವಾಗಲಿ ನಿಮ್ಮ ಎಲ್ಲಾ ಬರಹಗಳನ್ನು ಓದಲು ಕಾತುರದಿಂದ ಕಾಯುತ್ತಿರುತ್ತೇನೆ..

    ನಾಗೇಶ್ ಹುಲಿಹೈದರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: