ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art by Fransisco Fonseca
ಕಿರಣ ಭಟ್ ಕಂಡಂತೆ – ಸೊರದಾಂತಿ ನಲಿಕೆ…
ಸೊರದಾಂತಿ ನಲಿಕೆ ತುಳು ನಾಟಕ ಕಿರಣ ಭಟ್ ಸೊರದಾಂತಿ ನಲಿಕೆ (Dumb dancer)ಅದೊಂದು ಆವೇಶಭರಿತ ಕ್ರಿಯೆ. ನಾಟಕದ ಆದಿ ಭಾಗ. ಯಕ್ಷಗಾನ ಕಲಿಕೆಯನ್ನ ಆಗ ತಾನೇ ಪ್ರಾರಂಭಿಸಿರುವ ಭೀಮ ನಿಗೆ ತಾನೊಂದು ಅದ್ಭುತ ಕಲಾವಿದನಾಗುವ ಬಯಕೆ. ಜೊತೆಗೆ ಇಲ್ಲೊಂದು ವಿಶೇಷವುಂಟು. ಈ ಭೀಮ ಹೆಸರಿಗೆ ಮಾತ್ರ ಭೀಮನಲ್ಲ. ಮಹಾಭಾರತದ ಭೀಮ ತಾನೇ ಎಂಬ...
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ನಿಲ್ಲಲಿ ಯುದ್ದ…
ಎಸ್ ಜಿ ಸಿದ್ದರಾಮಯ್ಯ ಉಕ್ರೇನಿನ ರಣರಂಗದ ಬೀದಿಯಲ್ಲಿಮುರಿದು ಬಿದ್ದ ಮನೆಯ ಒಳಗೆಅರಚುತ್ತಿದೆ ಒಂದೇಸಮ ಮಗುವೊಂದು ಕೇಳುವ ಕಿವಿಗಳು ಸತ್ತಿವೆ ಸುತ್ತಲೆಲ್ಲಬಾಂಬಿನ ಸದ್ದು ಗುಂಡಿನ ಸದ್ದು ಬೇರೇನಿಲ್ಲಅರಚುತ್ತಿದೆ ಒಂದೇಸಮ ಮಗುವೊಂದು ಭಾರತದ ಮನೆ ಮನೆಗಳ ಒಳಗೂಟಿವಿಯಲ್ಲಿ ಬಾಂಬಿನ ಶಬ್ದವ ಕೇಳುತ ಕಾಣುತಸಂಭ್ರಮಿಸುತ್ತಿವೆ ಕೆಲ ಮಕ್ಕಳು...
ಪ್ರಿಯದರ್ಶಿನಿ ಶೆಟ್ಟರ್ ಓದಿದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’
ಪ್ರಿಯದರ್ಶಿನಿ ಶೆಟ್ಟರ್ ನೈಜೀರಿಯಾದ ಬರಹಗಾರ್ತಿ, ಸ್ತ್ರೀವಾದಿ ಚಿಮಮಾಂದ ಗೋಝಿ ಅಡಿಚೆ ಅವರು ಬರೆದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ' ಕೃತಿಯನ್ನು ೨೦೧೯ರಲ್ಲಿ ಡಾ. ಕಾವ್ಯಶ್ರೀ ಎಚ್. ಅವರು ಕನ್ನಡಕ್ಕೆ ತಂದಿದ್ದಾರೆ. ಕಾರ್ಲ್ ಮಾಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ರ ‘ಕಮ್ಯೂನಿಸ್ಟ್ ಮೆನಿಫೆಸ್ಟೊ' ಎಂಬ ತಲೆಬರಹ ನೆನಪಿಸುವ ರೀತಿಯ...
ಜೋಗಿ ಹೊಸ ಕವಿತೆ – ಅಪ್ಪ…
ಜೋಗಿ ಅಂತರ್ಮುಖಿ ಅಪ್ಪ ಹಠಾತ್ತನೆ ಸತ್ತಾಗಎಷ್ಟೊಂದು ಗುಟ್ಟುಗಳು ಉಳಿದುಹೋದವುಅವನ ಮೊದಲನೆಯ ಕ್ರಶ್ಯು, ಈಜು ಕಲಿತ ಬಾವಿಯಾರಿಗೋ ಕೊಟ್ಟ ಸಾಲ, ಎಸ್ಸೆಸ್ಸೆಲ್ಸಿ ಫೇಲಾಗಲು ಕಾರಣಉಪವಾಸ ಇದ್ದ ರಾತ್ರಿ ಕೆನ್ನೆ ತೋಯಿಸಿದ ನಿರಾಕರಣಅಂಗಾಲಿಗೆ ಚುಚ್ಚಿ ಒಳಗೇ ಉಳಿದಿದ್ದ ಮುಳ್ಳುಬೀಡಿ ಬಿಡುತ್ತೇನೆಂದು ಮಾಡಿದ ಪ್ರಮಾಣಉಡುದಾರ ಅಡವಿಟ್ಟು...
ಅಮ್ಮನ ಹೊಸ ಪುಸ್ತಕ…
ರಾಜಕುಮಾರ ಮಡಿವಾಳರ ಈ ಹೂ ನನಗೆ ಒಂಥರ ಇಷ್ಟ, ಇದರ ಇಷ್ಟು ಚೆಂದದ ಹೆಸರು ಕೂಡ ನನಗೆ ಇದುವರೆಗೆ ಗೊತ್ತಿರಲಿಲ್ಲ, ನಾವು ಹೊನ್ನರಿಕೆ-ಹೊನ್ನಂಬ್ರಿ-ಹೊನ್ನಾಂಬರ ಅನ್ನುತ್ತೇವೆ. ನಮ್ಮೂರ ಹೊಳೆಸಾಲಿನಗುಂಟ (ಹೊಳೆ ಬದುವಿಗೆ) ನಡುಮಟ್ಟದ ಎತ್ತರಕ್ಕೆ ಬೆಳೆದ ಗಿಡದ ತುಂಬ ನೋಡಿದ್ದೇನೆ, ಅಂತಹ ಪರಿಮಳವಿಲ್ಲದ, ತೀರ ಹತ್ತಿರಕ್ಕೆ ಹೋಗಿ...
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶ್ರೀನಿವಾಸ ಪ್ರಭು ಅಂಕಣ- ಹೊಸ ಭಾವಲೋಕದ ಹೊಸ್ತಿಲಲ್ಲಿ ನಿಂತಿದ್ದೇನೆ!…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Pic by Karthik S Bhat
ಮಂಗಳಾ ಪ್ರಿಯದರ್ಶಿನಿ ಓದಿದ- ‘ಪೆಣ್ ಕಥನ’
ಡಾ ಮಂಗಳಾ ಪ್ರಿಯದರ್ಶಿನಿ ಸಮಸ್ತ ಸ್ತ್ರೀಕುಲಕ್ಕೆ ತಮ್ಮ ಅನುವಾದದ ಮೂಲಕ ಮಲೆಯಾಳಿ ಭಾಷೆಯಿಂದ ಪೆಣ್ ಕಥೆಗಳನ್ನು ಕನ್ನಡಕ್ಕೆ ತಂದು ಕೊಟ್ಟವರು ನಮ್ಮ ಹೆಮ್ಮೆಯ ಲೇಖಕಿ ಡಾ. ಕಮಲಾ ಹೆಮ್ಮಿಗೆಯವರು. ಈಗಾಗಲೇ ಅವರು 'ಕೇರಳ ಕಾಂತಾ ಸಮ್ಮಿತ' ಎಂಬ ಮಲೆಯಾಳಂ ಲೇಖಕಿಯರ ಕಥೆಗಳನ್ನು ಕನ್ನಡಿಗರ ಕೈಗಿತ್ತಿದ್ದಾರೆ .ಅದಲ್ಲದೆ ಅಲ್ಲಿನ ಪ್ರಮುಖ...
ಡಾ ಕೆ ಷರೀಫಾ ಹೊಸ ಕವಿತೆ- ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು…
ಡಾ ಕೆ ಷರೀಫಾ ದ್ವೇಷದ ಅಗ್ನಿ ಉರಿಯುತ್ತಿದೆ.ಊರು ಮಸಣ ಮಾಡಿತು ಬಾಂಬು ದಟ್ಟ ವಸತಿಗಳ ಅಳಿಸಿ ಹಾಕಿನೆಲಸಮ ಗುಡಿ, ರ್ಚು, ಮಸೀದಿನೋವಿನ ಚಿತ್ಕಾರ ಮುಗಿಲು ಮುಟ್ಟಿಕರಕಲು ಛಿದ್ರ ಮಕ್ಕಳ ದೇಹಗಳು. ಸುರಿವ ಬಾಂಬಿನ ಮಳೆಗೆ ಬೆದರಿದಚಿಣ್ಣರು ಓಡೋಡಿ ಬಂದರು ಬಯಲಿಗೆಜೀರೋ ಡಿಗ್ರಿ ಚಳಿಗೆ ಸೆಟೆದ ಶವಗಳುಕಡು ರಾತ್ರಿ ಸೂರ್ಯ ಹುಟ್ಟುವ...
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಹೇಗೆ ಬರೆಯಲಿ ಕವಿತೆ?…
ಎಸ್ ಜಿ ಸಿದ್ದರಾಮಯ್ಯ ನಾನು ಕವಿತೆ ಬರೆಯುವುದ ಬಿಟ್ಟು ಬಹಳಕಾಲವಾಯಿತು ಗೆಳೆಯ.ರೂಪಕಗಳು ಸತ್ತುನುಡಿಗಟ್ಟುಗಳು ಉಸಿರು ಕಳೆದುಕೊಂಡಿವೆಹೇಗೆ ಬರೆಯಲಿ ಕವಿತೆ? ಭಯ ಆತಂಕ ಅನುಮಾನಗಳು ಅಬ್ಬರಿಸಿವೆಹಾದಿ ಬೀದಿಗಳಲ್ಲಿ ಧರ್ಮಗಳು ಕೇಕೆ ಹಾಕಿವೆಪಡ್ಡೆಗಳು ಕೇಸರಿಯ ಅಡ್ಡದ ದಾಳಗಳಾಗಿವೆಸುಳ್ಳುಗಳು ವೈಹಾಳಿಯಲಿ ಕೆನೆಯುತ್ತಿವೆ ಕೂಡೊಟ್ಟಿನ...
‘ಅಕ್ಕಯ್’ ಎಂಬ ಅದ್ಭುತ…
'ಬಹುರೂಪಿ' ಪ್ರಕಾಶನದ 'ಅಕ್ಕಯ್' ಪುಸ್ತಕದ ನಾಟಕ ರೂಪ ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರದರ್ಶನ ಕುರಿತು ದಯಾ ಗಂಗನಗಟ್ಟ ಬರೆದಿರುವ ಲೇಖನ ಇಲ್ಲಿದೆ. ದಯಾ ಗಂಗನಗಟ್ಟ ಇದೊಂದು ಪ್ರಶ್ನೆ : ವಾಟ್ ಡು ಯು ಹ್ಯಾವ್ ? ಬಾಲ್ಸ್ ಆರ್ ಬ್ರೆಸ್ಟ್ ?ಇದಕ್ಕೆ ಉತ್ತರ : ಎ ಹಾರ್ಟ್ .......ಮೊನ್ನೆ ಮೊನ್ನೆ ಒಂದು ಕಾರ್ಯಕ್ರಮದಲ್ಲಿ...
ನಾಟ್ಯ ರಂಗದ ಹೆಮ್ಮೆ ಹೆಚ್ಚಿಸಿದ ಸಂಭ್ರಮ ಈ ತಿಂಗಳ ಪ್ರದರ್ಶನದಲ್ಲಿ!..
ನೀವೂ ಬಂದು ಜೊತೆಯಾದ್ರೆ ನಮಗೂ ಖುಷಿ…. ನಮಸ್ತೆ… ಎಂದಿನಂತೆ ಈ ತಿಂಗಳು ನೃತ್ಯ ಕಾರ್ಯಕ್ರಮ ನಡೆಯಲಿದೆ. ಆದರೂ ಕೇವಲ ಎಂದಿನಂತಲ್ಲ. ಮಹಿಳಾ ದಿನಾಚರಣೆ ಈ ಮಾಸದ ವಿಶೇಷ! ನಾಟ್ಯರಂಗದ ಕಲಾವಿದೆಯರಾದ ಅನ್ನಪೂರ್ಣ.ಎಸ್.ಕೆ. ರಾವ್, ವಿನೀತಾಶೆಟ್ಟಿ ಹಾಗೂ ವೀಣಾಪ್ರತಾಪ್ ವರ್ಮ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ತ್ರಿಮೂರ್ತಿಗಳ...
Pic by Nick Hanns
ಇನ್ನೂ ಕನಸಾಗಿಯೇ ಉಳಿದ ‘ಸುಲ್ತಾನಾಳ ಕನಸು’
‘ಸುಲ್ತಾನಾಳ ಕನಸ್ಸಿನ' ಸಶಕ್ತ ಮಹಿಳಾ ಲೋಕ ಡಾ ಜ್ಯೋತಿ ಮಾರ್ಚ್ 8 ಪುನಃ ಬಂದಿದೆ. ಈ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷದ ಮಹಿಳಾದಿನದ ಧ್ಯೇಯ ವಾಕ್ಯ 'ಸುಸ್ಥಿರ ನಾಳೆಗಾಗಿ, ಇಂದು ಲಿಂಗ ಸಮಾನತೆ.' ಈ ಸಂದರ್ಭದಲ್ಲಿ, ಮಹಿಳಾ ಸಮಾನತೆಗಾಗಿ 'ತಾರತಮ್ಯ ಮತ್ತು...
ಮಂಜುಳ ಸಿ ಎಸ್ ಲಹರಿ – ಅವಳು ನೀರಿನಂತವಳು !!
ಮಹಿಳಾ ದಿನಾಚರಣೆ ವಿಶೇಷ - ಗುಪ್ತಗಾಮಿನಿ ಮಂಜುಳ ಸಿ ಎಸ್ ಅವಳು ನೀರಿನಂತವಳು !! ಅದೇ ಪ್ರಕೃತಿಯಂತೆ, ಸಹಜತೆ ಅವಳ ರೂಪ. ಸುಲಲಿತ ಲಾಲಿತ್ಯ ಅವಳ ಚಲನೆ. ಕೊನೆಯಿಲ್ಲದ ನಿರಂತರ ದಣಿವರಿಯದ ಏಕಮುಖವಾಗಿ ಪ್ರವಹಿಸುವಾಕೆ. ನಿಂತು ಸಾವರಿಸಿಕೊಂಡಿದ್ದೆ ಇಲ್ಲ. ಹಿಡಿದ ದಾರಿ ತೊರೆದು ಹಿಮ್ಮುಖವಾಗಿ ಹಿಂದಿರುಗುವ ಮಾತಿಲ್ಲ. ಗುಪ್ತ ಗಾಮಿನಿ....
ನಿವೇದಿತಾ ಎಚ್ ಕವಿತೆ – ನಾವು… ಸ್ತ್ರೀಯರು…
ನಿವೇದಿತಾ ಎಚ್ ನಮ್ಮ ಬದುಕು ಹೀಗೆಯೇ ಅಲ್ಲವೇ?ನಿತ್ಯ ವಿನೂತನ, ನಡಿಗೆ ಚಿರಂತನತ್ರಿಶಂಕು ಸ್ವರ್ಗದಲ್ಲಿ ನಮ್ಮ ರಾಜ್ಯಭಾರಭ್ರಮಾ ಸಾಮ್ರಜ್ಯದಲ್ಲಿ ಸಡಗರ ವಿಶಾಲ ಅಂಬರದ ಕೆಳಗೆನೆಲವಲ್ಲದ ನೆಲಅಟ್ಟಣಿಗೆಯ ಮೇಲೆ ನಾಜೂಕಿನ ಪಥಸಂಚಲನಆಯ ತಪ್ಪಿದರೆ ಎಲ್ಲ ನೀರುಪಾಲು ನಮ್ಮ ಬಿಂಬ ಸ್ಪಷ್ಟವೇಆದರೆ ಚಂಚಲ ಪ್ರತಿಬಿಂಬದಬಳುಕುವ...
ನಿಮಗೆ ಗೊತ್ತೇ ಲುಜ್ ಲಾಂಗ್, ಮಾರ್ಟಿ ಮತ್ತು ಸ್ಯಾಮ್?
ಹರೀಶ್ ಗಂಗಾಧರ ಕೆಲವು ಪಂದ್ಯಾವಳಿಗಳು ಅಚ್ಚಳಿಯದೆ ನಮ್ಮ ಮನಸ್ಸಿನಲ್ಲಿ ಹಾಗೆ ಉಳಿದುಬಿಡುತ್ತವೆ. ಬೇರೆಲ್ಲಾ ವಿಶ್ವ ಕಪ್ಗಳಿಗಿಂತ 1996ರ ಕ್ರಿಕೆಟ್ ವಿಶ್ವಕಪ್ ಹಲವು ಕಾರಣಗಳಿಗೆ ಕಾಡುತ್ತದೆ. ಜಾಗತೀಕರಣದ ಪ್ರಭಾವಗಳು, ಹೈಪರ್ ರಾಷ್ಟ್ರವಾದದ ಹುಟ್ಟು, ಕೋಮುವಾದ ಉಲ್ಬಣಗೊಂಡದ್ದು, ಈಡನ್ ಗಾರ್ಡೆನ್ ಕ್ರೀಡಾಂಗಣ ರಣರಂಗವಾಗಿದ್ದು,...
ವಿಭಾ ಪುರೋಹಿತ ಹೊಸ ಕವಿತೆ – ತಾಯಿ…
ವಿಭಾ ಪುರೋಹಿತ ಒಡಲೊಳಗಿನ ಮಮತೆಗಡಲಿಗೆಕಡಗೋಲು ಹಾಕಿ ಕಡೆದಂತೆಧುಮ್ಮಿಕ್ಕಿ ಹರಿದುಬಂದ ನವನೀತರವಿಕೆಯೆಲ್ಲ ಒದ್ದೆಯಾಗಿದ್ದುಮೋಡದೋಟದಿಂದಧಾವಿಸಿದ ತಾಯ ಒಡಲಕುಡಿಯ ಆಕ್ರಂದನಆಕಾಶಮುಟ್ಟಿಮಾರ್ದನಿಗೆ ಮರುಗಿದ ಮುಗಿಲಮ್ಮಹನಿಸುತ್ತ ಬಂದಂತೆ ಕದದಲ್ಲೇ ಬ್ಯಾಗುಬಿಸಾಕಿಕೈಗೆ ಸ್ಯಾನಿಟೈಸರ್ ಹಾಕಿಕದಡದೇ ತಬ್ಬಿದ್ದ ಕಕ್ಕುಲತೆಪನ್ನೀರು...
ಅಮೃತಾ ಹೆಗಡೆ ಓದಿದ – ‘ಬಕುಲದ ಬಾಗಿಲಿನಿಂದ’
ಅಮೃತಾ ಹೆಗಡೆ "ಬಕುಲದ ಬಾಗಿಲಿನಿಂದ" ಇತ್ತೀಚೆಗೆ ನಾನು ಓದಿದ ಅತ್ಯಂತ ಅಪರೂಪದ ಪುಸ್ತಕ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಪುಸ್ತಕದ ಬಗ್ಗೆ ಬರೆಯಲೇ ಬೇಕು ಎಂಬ ಕಾರಣಕ್ಕೆ ನಾನು ಮತ್ತೊಮ್ಮೆ ಓದಿ ಎದೆಗಿಳಿಸಿಕೊಂಡೆ. ಪುರಾಣಗಳ ಕಾಲದಿಂದ ಇಲ್ಲಿಯ ತನಕ ಹೆಣ್ಣು ಸಾಗಿ ಬಂದ ಕಥೆಗಳು ಇಲ್ಲಿವೆ. ಪುರಾಣಕ್ಕೂ ವಾಸ್ತವಕ್ಕೂ ಕೊಂಡಿ ಹಾಕಿ...





















