ಜ್ಯೋತಿ ಇರ್ವತ್ತೂರು ಹೊಸ ಕವಿತೆ – ನನ್ನೊಳಗಿನ ಇರುಳು ಹಗಲು..

ಜ್ಯೋತಿ ಇರ್ವತ್ತೂರು

ನನ್ನೊಳಗೊಬ್ಬಳು ಆಳುವವಳು…
ಕಂಬನಿ ಒರೆಸಿ ಸಂತೈಸುವ ಇನ್ನೊಬ್ಬಳು..
ಸೋತೆನೆಂದು ನೆಲಕ್ಕೊರಗುವವಳೊಬ್ಬಳು…
ಕೈಕೊಟ್ಟು ಗುರಿಯೆಡೆಗೆ ತಳ್ಳುವವಳು
ಇನ್ನೊಬ್ಬಳು..
ಹತಾಶೆಯ ಮುಖ ಹೊತ್ತ ಒಬ್ಬಳು…

ಅಸಹಾಯಕತೆಯ ಪರದೆ ಸರಿಸಿ
ಉತ್ಸಾಹದ ಮಳೆಯ ಸುರಿಸುವವಳು
ಇನ್ನೊಬ್ಬಳು
ಒಬ್ಬಳು ಭೂಮಿಯಾದರೆ
ಮತ್ತೊಬ್ಬಳು ಆಗಸ
ಆಕೆ ಭರವಸೆಯ ಮಳೆ ಸುರಿಸುವವಳು..
ಆನಂತದಾಚೆ ಹಬ್ಬಿ ನಿಂತವಳು..
ಆಕೆ ಎಂದಿಗು ನನ್ನ
ಸೋಲಲು ಬಿಡದವಳು…..
ಜ್ಯೋತಿ ಇರ್ವತ್ತೂರು

‍ಲೇಖಕರು Admin

February 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: