ಅಬ್ಳಿ ಹೆಗಡೆ ಹೊಸ ಕವಿತೆ ಜಂಟಿ-ಯಾನ…

ಅಬ್ಳಿ ಹೆಗಡೆ

ನಿತ್ಯ, ನನ್ನವಳ ಮುನಿಸು,
ಸಿಡಿ-ಮಿಡಿ,…….
ಗೊಂದಲ, ಗೊಣಗು–
“ಯಾವುದೂ ಸರಿಯಿಲ್ಲ.
ಕೆಟ್ಟು ಕೂತಿವೆ ಎಲ್ಲ.”
“ಹೌದು, ನನ್ನೆಲ್ಲ ಒಳಗು,-
ಹೊರಗು, ಇಡಿ-ಬಿಡಿ,
ಪೂರ್ವ-ಅಪರ, ಸುಖ-ದುಃಖ,
ಕನಸು-ನನಸು, ಮಾತು-ಕ್ರತಿ,
ವ್ಯಕ್ತ-ಅವ್ಯಕ್ತ, ಆಲೋಚನೆ,
ವಿವೇಚನೆಗಳು, ಬರೆಯುವ
ಕಥೆ-ಕವಿತೆ,,,, ಎಲ್ಲ…
ಸರಿ ಮಾಡಿಸಬೇಕು,
ರಿಪೇರಿಯವರ ಹುಡುಕಿ.

ಮೊದಲು ಅವಧಿ ಮೀರಿದ,
ಕನ್ನಡಕ ಬದಲಿಸಿ,
ಕಳೆದ ಕೀಲಿಕೈ ಹುಡುಕಿ,
ಮುಚ್ಚಿದ ಬಾಗಿಲ ತೆರೆದು,
ಒಳಬರುವ ಹೊಸಬೆಳಕಲ್ಲಿ,
ರಿಪೇರಿ ಮಾಡಿಸಬೇಕಿದೆ-
ನನ್ನ-ನನ್ನವಳ,….-
ಮುನಿಸ ಕರಗಿಸಿ,
ಮನಸ ಮೆರುಗಿಸಿ,
ಕನಸ ಚಿಗುರಿಸಿ,
ಮುನ್ನಡೆಯುವಾಗ-
ಇಕ್ಕೆಲಗಳಲ್ಲಿ ಸರಿಯುವ
ವಿಚಿತ್ರಸತ್ಯಗಳ,,,,
ಆಸ್ವಾದಿಸಬೇಕಿದೆ,
ನಿತ್ಯ ಬದುಕಿನ,
ಜಂಟಿ ಯಾನದಲ್ಲಿ

‍ಲೇಖಕರು Admin

February 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: