ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಸೌಹಾರ್ದ ಪಥ’
ಪುರುಷೋತ್ತಮ ಬಿಳಿಮಲೆ ದ್ವೇಷ ಭಾಷಣಗಳಿಂದ ಸಂಸ್ಕೃತಿ ನಲುಗುತ್ತಿರುವಾಗ, ನಾಡಿನ ಸೌಹಾರ್ದ ಸಂಸ್ಕೃತಿಯ ಬಗ್ಗೆ ಮಾತಾಡುವವರ ಮತ್ತು ಬರೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸುಮಾರು ಏಳು ನೂರು ಪುಟಗಳ ಸೌಹಾರ್ದ ಪಥ ಗ್ರಂಥದಲ್ಲಿ ಕರ್ನಾಟಕದ ಸೌಹಾರ್ದತೆಯನ್ನು ವಿವರಿಸುವ ೧೦೧ ಅತ್ಯಮೂಲ್ಯ ಲೇಖನಗಳಿವೆ....
ಜಾಹ್ನವಿ ಹಳ್ಳೂರ ಕಥೆ- ಹುತಾತ್ಮ ನಂದಿ…
ಜಾಹ್ನವಿ ಹಳ್ಳೂರ ನಂದಿನಿಗೆ ಎಚ್ಚರಾಗಿ ಅರ್ಧತಾಸಿನ ಮ್ಯಾಲೆ ಆಗಿತ್ತು. ಸಣ್ಣಕೂಸು “ದುದ್ದೂ..” ಅಂತ ಎದ್ದಾಗನ ಅಕಿ ಅದಕ್ಕ ಹಾಲು ಕುಡಿಸಿ ಮಲಗಿಸಿ ಎದ್ದಿದ್ದಳು. ಮನೀಕೆಲಸ ಸಾಲು ಸಾಲಾಗಿ ತಾ ಮುಂದ, ತಾ ಮುಂದ ಅಂತ ಕುಂಡಿ ತೊಳಿಸಿಕೊಳ್ಳಲಿಕ್ಕೆ ನಿಂತ ಹುಡಗೂರ ಹಾಂಗ ನಿಂತಿದ್ದವು. ಎಲ್ಲಾ ಕೆಲಸಗಳೂ ಮುಗಿದು ಮೈದುನಗ ಡಬ್ಬಿಯಾಗಿ...
ಸಂತೋಷ್ ಕೌಲಗಿ ಮೆಲುಕು: ತೇಜಸ್ವಿಯೂ, ಮುಟ್ಟಿದರೆ ಮುನಿಯೂ…
ಸಂತೋಷ್ ಕೌಲಗಿ ೧ ಸುಮಾರು ೩೦ ವರ್ಷದ ಹಿಂದಿನ ಮಾತು. ಜನವರಿ/ಫೆಬ್ರವರಿ ಸಮಯ, ಫುಕುವೊಕಾನ ಕೃಷಿ ವಿಚಾರವೆ ನಮ್ಮೆಲ್ಲರ ಕನಸು ಮನಸಿನಲ್ಲಿ. ಯಾವಾಗಲೂ ಅದರದೇ ಮಾತು. ಅದೇ ಗುಂಗಿನಲ್ಲೇ ಗೆಳೆಯ ಕೆ.ಪಿ.ಸುರೇಶ ಮತ್ತು ನಾನು ಬೈಕಿನಲ್ಲಿ ’ನಿರುತ್ತರ’ ಕ್ಕೆ ಹೋದೆವು. ಆಗಲೇ ’ಒಂದು ಹುಲ್ಲಿನ ಕ್ರಾಂತಿʼ ಓದಿ ’ಸಹಜ ಕೃಷಿ ಒಂದು ಪರಿಚಯ’...
ಕೊಟ್ರೇಶ್ ಅರಸೀಕೆರೆ ಕವಿತೆ- ನಾವೆಂದೂ ಪ್ರೇಮಿಗಳಾಗಲೇ ಇಲ್ಲ…
ಕೊಟ್ರೇಶ್ ಅರಸೀಕೆರೆ ನಾವೆಂದೂ ಪ್ರೇಮಿಗಳಾಗಲೇ ಇಲ್ಲಏಕೆಂದು ಈಗ ಕಾರಣ ಹುಡುಕುತ್ತಿರುವೆ ಕೈ ಹಿಡಿದು ಎಂದೂ ನಡೆಯಲಿಲ್ಲಭುಜ ಭುಜ ಒರಗಿ ಕೂರಲಿಲ್ಲನಗಲಿಲ್ಲ ಒಮ್ಮೆಯೂ ಬೆನ್ನು ಬೆನ್ನುಆನಿಸಿಕೊಂಡು ತುಟಿ ತುಟಿ ಒತ್ತಿಕೊಂಡು ದೀರ್ಘವಾಗಿಚುಂಬಿಸಲಿಲ್ಲಕಳೆದುಕೊಂಡ ತೂಕವ ಲೆಕ್ಕಾಚಾರಹಾಕಲಿಲ್ಲಹಾಸ್ಯಪ್ರಜ್ಞೆಯನು ಬೆಳೆಸಿಕೊಳ್ಳಲಿಲ್ಲ...
ಸುರೇಶ ಎಲ್ ರಾಜಮಾನೆ ಕವಿತೆ- ಎದೆಗೆ ಇರಿದ ಸೂಜಿ…
ಸುರೇಶ ಎಲ್ ರಾಜಮಾನೆ ಮೂಕ ಮಾತಾಡ್ತಾ ಮಾತಾಡ್ತಾ ನಕ್ಕಎದುರಿಗಿದ್ದವನು ಮೌನವಹಿಸಿದಶುರುವಾಯಿತು ಸದ್ದುಲಬ್ ಡಬ್ ಲಬ್ ಡಬ್ಒಳಜಗತ್ತಿನ ತುಂಬೆಲ್ಲ ಬರಿ ಇದೇಕೇಳಿಸುತ್ತಿತ್ತು ಹಾರಿ ಬರುವ ತರಗೆಲೆಯೊಂದುಗಾಳಿಯಲ್ಲಿಯೇ ನಿಂತುಗೋಗರೆಯುತ್ತಿತ್ತುತಂಪಿಲ್ಲ ಇಂಪಿಲ್ಲ ಎಲ್ಲವೂ ಬರಿ ಧೂಳುಯಾರಿಹರುಕೇಳವುದಕಿಲ್ಲಿ ಗೋಳು ಸೋರುತ್ತಿರುವ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ರೂಮು ತೊರೆಯುವ ನಿರ್ಧಾರ
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
Pic by Jimmy Liu
ತೇಜಸ್ವಿ ಸ್ಮರಣೆಗೆ ಕೊನೆಯಿಲ್ಲ…
ನರೇಂದ್ರ ರೈ ದೇರ್ಲ ಇವತ್ತಿಗೂ ಟ್ರಾಫಿಕ್ ಜಾಮ್ ನಡುವೆ ಸಿಕ್ಕಿಹಾಕಿಕೊಳ್ಳುವ ಒಬ್ಬ ಟೆಕ್ಕಿ, ಯಾವುದೋ ಜೂನಿಯರ್ ಕಾಲೇಜಿಗೆ ಕನ್ನಡ ಮೇಷ್ಟ್ರಾಗಿ ಸೇರುವ ಯುವಕ, ಚಾರಣದ ನಡುವೆ ಬೆಟ್ಟದ ಬಂಡೆಗೆ ಬೆನ್ನು ಊರಿ ಹಾಯಾಗಿ ಎದೆಯ ಮೇಲಿಟ್ಟು 'ಚಿದಂಬರ ರಹಸ್ಯ'ವನ್ನು ಓದುವ ಮಹಾನಗರದ ನಯನಾಜುಕಿನ ಹುಡುಗಿ ಇವರೆಲ್ಲ ಸಾಮಾಜಿಕ ಮಾಧ್ಯಮದಲ್ಲಿ...
ಚಂದ್ರಶೇಖರ ಹೆಗಡೆ ಕವಿತೆ- ನನ್ನದೇನಿಲ್ಲ
ಚಂದ್ರಶೇಖರ ಹೆಗಡೆ ಬಿತ್ತಿ ಮಡುಗಟ್ಟಿ ಉಸಿರ ನೀರೆರೆದುತುದಿಗಾಲಿನಲಿ ನಿಂತು ಕಾದಡೆಮುಗಿಲೆತ್ತರ ಬೆಳೆದು ಫಲ ಪುಷ್ಪನೆರಳನೀಯುವಕಾಯಕ ನಿಮ್ಮದೇ, ನನ್ನದೇನಿಲ್ಲಎಣ್ಣೆಯನೆರೆದು ಹೊಸೆದ ಬತ್ತಿಗೆನಿರ್ಮಲ ಚೈತನ್ಯವ ಹೊತ್ತಿಸೆನಿನ್ನೊಳಗೆ ಉರಿದು ಹೊರಗೆಬೆಳಕನೀಯುವಕಾಯಕವು ನಿಮ್ಮದೇ; ನನ್ನದೇನಿಲ್ಲ ಕೊರಡ ಸಂದಿಯಲೊಂದುನೆಲೆಯದೋರಿ...
ದೇವರಾಜ್ ಹುಣಸಿಕಟ್ಟಿ ಕವಿತೆ- ಉನ್ಮತ್ತ ದೊರೆಯೂ ಮತ್ತು ಪಾರಿವಾಳ…!
ದೇವರಾಜ್ ಹುಣಸಿಕಟ್ಟಿ ಗೊತ್ತೇನು ಪಾರಿವಾಳದ ಹಕೀಗತ್ತು…? ಗೆಳೆಯ…! ಅಜ್ಜ ಕಟ್ಟಿದ ಗೂಡಂಗಡಿಯ ಮಾಡಿನಲ್ಲಿ ಪಾರಿವಾಳದ ಗೂಡೊಂದಿತ್ತು….!ಅದು ರೆಕ್ಕೆ ಬಿಚ್ಚಿ ಹಾರಿದಾಗಲೆಲ್ಲಅಜ್ಜನಿಗೋ…! ಬಿಡುಗಡೆಯ….ಬಿಡುಗಡೆಯ…..ಬಂಧನದ ಬಿಡುಗಡೆಯ…ಹಾಡಿನಲಿಬಿಳಿಯ ಬಟ್ಟೆ ತೊಟ್ಟಬುದ್ಧನದೇ ನೆನಪೊಂದಿತ್ತು…!! ಗೊತ್ತೇನು ಪಾರಿವಾಳದ ಹಕೀಗತ್ತು…?...
ಸರೋಜಿನಿ ಪಡಸಲಗಿ ಅಂಕಣ- ಇಲ್ಲ – ಉಂಟುಗಳ ನಡುವಿನ ಬದುಕು…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Pic by Jimmy Liu
ವರದೇಂದ್ರ ಕೆ ಮಸ್ಕಿ ಓದಿದ ‘ಮಕ್ಕಳೇನು ಸಣ್ಣವರಲ್ಲ’
ವರದೇಂದ್ರ ಕೆ ಮಸ್ಕಿ ಮಕ್ಕಳು ಮಗ್ಧರು, ಮಕ್ಕಳು ಚಂಚಲ ಮನಸಿನವರು, ಮಕ್ಕಳು ಸ್ನಿಗ್ಧ ಸೌಂದರ್ಯದ ಸ್ವಚ್ಛ ಮನಸಿನ ತಿಳಿ ನೀರಿನಂತವರು, ಹಿಡಿ ಪ್ರೀತಿ ಕೊಟ್ಟರೆ ಬೊಗಸೆ ಪ್ರೀತಿ ಹಸ್ತಾಂತರಿಸುವವರು, ತುಸು ಕಾಳಜಿಗೆ ಸೇರು ವಿಶ್ವಾಸ ತುಂಬಿಕೊಡುವವರು. ಹೌದ್ಹೌದು.. ಆದರೂ "ಮಕ್ಕಳೇನು ಸಣ್ಣವರಲ್ಲ" ಬಿಡಿ. ವಯೋಮಾನದಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ – ಮನಸ್ಸೆಲ್ಲಾ ಬಿಜಾಪುರದಲ್ಲಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಶಿವಯೋಗಿ ಕಳ್ಳಿಮಠ ಕವಿತೆ- ಕೆಲವು ಶಾಯರಿಗಳು…
ಶಿವಯೋಗಿ ಕಳ್ಳಿಮಠ ನಿನ್ನ ಭೇಟಿಗೂ ಮುನ್ನನನ್ನ ಜೀವನವೇಇರಲಿಲ್ಲ.ಅದಕ್ಕಿಂತ ಮುಂಚೆನಾನು ಬದುಕಿದ್ದೆಎಂಬುದೇ ಪುಕಾರು. ನಿನ್ನ ನಗುವಿನ ತುಣುಕುಗಳಹೆಕ್ಕಿ ಬೆಳದಿಂಗಳೆಂದುದೋಕಾ ಮಾಲು ಹಂಚುತ್ತಿದ್ದಚಂದ್ರ.ನನ್ನ ನೋಡುತ್ತಿದಂತೆ ಸುದ್ದಿಹಬ್ಬಿಸುವನೆಂದುಬೆಳಗೆಳುತ್ತಲೇಪರಾರಿಯಾದ. ಪ್ರೀತಿಯ ಗಾಯಕ್ಕೆಮೂಲಾಮಾಗುತ್ತೆನೆಂದಳು..ಕೆಣಕಿ ಇನ್ನೂ...
ಸುಜಾತ ಹೆಬ್ಬಾಳದ ಕವಿತೆ – ನೆನಪುಗಳೇ ಹಿತವೆನಗೆ…
ಸುಜಾತ ಹೆಬ್ಬಾಳದ ಹೊಗಳಿಕೆಯ ಬೀಸಣಿಕೆಗಿಂತ ತೆಗಳಿಕೆಯ ಅಂಬುಗಳೇ ಹಿತವೆನಗೆಬೀರುವ ಕೃತಕ ಮಂದಹಾಸಕ್ಕಿಂತ ತೋರುವ ನೈಜ ತಿರಸ್ಕಾರಗಳೇ ಹಿತವೆನಗೆ ಅಸ್ಪಷ್ಟ ಭಾವಗಳ ಅರ್ಥಗಳ ಹುಡುಕುತ ದಿಕ್ಕೆಟ್ಟು ಅಲೆಯಲಾರೆಗಾಢಾಂಧಕಾರದಿ ಬೆಳಕನ್ನು ಅರಸುವ ಒಂಟಿ ಪಯಣದ ಹಾದಿಗಳೇ ಹಿತವೆನಗೆ ಹತ್ತಿರವಿದ್ದು ಸವಿನುಡಿಗಳನ್ನಾಡುತ ಹೃದಯ ತಟ್ಟದ...
ಜರ್ಮನಿಯ ಬೀಜ ಸಂರಕ್ಷಕರ ಸಂಗದಲ್ಲಿ…
ಕೃಷ್ಣ ಪ್ರಸಾದ್ ಗೋವಿಂದಯ್ಯ ಪರ್ಯಾಯ ಕೃಷಿ ವಿಧಾನಗಳನ್ನು ನೋಡಲು ಜರ್ಮನಿಗೆ ಬಂದವನಿಗೆ ಇನ್ನಿಲ್ಲದ ನಿರಾಸೆ. ಬರ್ಲಿನ್‌ನ ಸಾಂಪ್ರದಾಯಿಕ ಕಟ್ಟಡಗಳು, ಐಷಾರಾಮಿ ರೈಲು, ಅದ್ದೂರಿ ಮಾಲ್, ಭಾರತೀಯ ಹೋಟೆಲ್‌ಗಳಲ್ಲಿ ಜರ್ಮನಿ ಊಟದ ರುಚಿ ನೋಡುವುದರಲ್ಲೇ ಎರಡು ದಿನ ಮುಗಿದು ಹೋಗಿತ್ತು. ಕೃಷಿಕರ ತೋಟ ನೋಡಲು ಹೋದರೆ ಅವೆಲ್ಲಾ 750...
Pic by Jimmy Liu
ಪುಷ್ಪಾಗೆ ಹುಟ್ಟುಹಬ್ಬದ ದಿನವೇ ಒಲಿದ ವಿಜಯ…
ಫೋಟೋ : ಕಾವ್ಯಶ್ರೀ ಎಚ್ ಇಂದು ಎಚ್ ಎಲ್ ಪುಷ್ಪ ಅವರ ಹುಟ್ಟು ಹಬ್ಬದ ದಿನ. ಬೆಳಗ್ಗೆ ಎಲ್ಲ ಫೇಸ್ ಬುಕ್ ನಲ್ಲಿ ಅವರಿಗೆ ಹುಟ್ಟು ಹಬ್ಬದ ಅಭಿನಂದನೆಯ ಸುರಿಮಳೆ ಸುರಿದಿತ್ತು. ಅದು ಸಂಜೆಯ ವೇಳೆ ಅಭಿನಂದನೆಯ ಮಳೆಯಾಗಿ ಪರಿವರ್ತನೆಯಾಗಿತ್ತು. 'ಅವಧಿ' ಕರ್ನಾಟಕ ಲೇಖಕಿಯರ ಸಂಘದ ಚುನಾವಣೆಯ ಫಲಿತಾಂಶವನ್ನು ಸೋಶಿಯಲ್ ಮೀಡಿಯಾದಲ್ಲಿ...
ಎಚ್ ಎಲ್ ಪುಷ್ಪ ವಿಜಯದ ಫೋಟೋ ಆಲ್ಬಂ…
ಚಿತ್ರಗಳು - ಕಾವ್ಯಶ್ರೀ ಎಚ್ ಹಾಗೂ ಆರ್ ಜಿ ಹಳ್ಳಿ ನಾಗರಾಜ್
ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಚ್ ಎಲ್ ಪುಷ್ಪ ಆಯ್ಕೆ
ಕನಾ೯ಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಚ್ ಎಲ್ ಪುಷ್ಪ ಆಯ್ಕೆ ಅವಧಿಯ ಅಭಿನಂದನೆಗಳು ರಾಜ್ಯದ ಎಲ್ಲೆಡೆಯಿಂದ 699 ಮತಗಳು ಚಲಾವಣೆ ಆದವು. ಈ ಪೈಕಿ 44 ಮತಗಳು ತಿರಸ್ಕೃತಗೊಂಡಿವೆ. ಉಳಿದ ಮತಗಳ ಪೈಕಿ ಎಚ್ ಎಲ್ ಪುಷ್ಪ 342 ಮತಗಳನ್ನು ಪಡೆದು 62 ಮತಗಳ ಅಂತರದಿಂದ ಹಾಲಿ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಅವರನ್ನು ಸೋಲಿಸಿದರು. ವನಮಾಲ...



















