ಬಸವರಾಜ ಕೋಡಗುಂಟಿ ಅಂಕಣ – ಮಯ್ಸೂರು ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಮಯ್ಸೂರು ಜಿಲ್ಲೆಯ ಬಗ್ಗೆ

ಬೆಳಕು ಚೆಲ್ಲಲಾಗಿದೆ.

24

ಮಯ್ಸೂರು

ಮಯ್ಸೂರು ರಾಜ್ಯದ ಸಂಕೀರ‍್ಣ ಬಾಶಿಕ ಪರಿಸರಗಳಲ್ಲಿ ಒಂದಾಗಿದ್ದು ಹೆಚ್ಚಿನ ಸಂಕೆಯ ಬಾಶೆ ಮತ್ತು ತಾಯ್ಮಾತುಗಳನ್ನು ಇಲ್ಲಿ ಗಮನಿಸಬಹುದು. ಜಿಲ್ಲೆಯಲ್ಲಿ ಕನಿಶ್ಟ ಅರ‍್ವತ್ತಾರು ಬಾಶೆಗಳು ಮತ್ತು ಒಂದು ನೂರಾ ಎಂಬತ್ತಾರು ತಾಯ್ಮಾತುಗಳು ದಾಕಲಾಗಿವೆ. ಕನ್ನಡ ಮಯ್ಸೂರು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಅತಿ ದೊಡ್ಡ ಬಾಶೆಯಾಗಿದ್ದು ೮೧% ಮಂದಿ ಕನ್ನಡ ಮಾತಾಡುವವರಾಗಿದ್ದಾರೆ. ಕನ್ನಡದ ಹೊರತಾಗಿ ಉರ‍್ದು ಅತಿದೊಡ್ಡ ಬಾಶೆಯಾಗಿದ್ದು ೧೦% ಮಂದಿ ಉರ‍್ದುಗರು. ತೆಲುಗು ಮತ್ತು ತಮಿಳು ದೊಡ್ಡ ಸಂಕೆಯ ಮಾತುಗರನ್ನು ಹೊಂದಿದ್ದು ಮರಾಟಿ, ಹಿಂದಿ, ಮಲಯಾಳಂ ಇವುಗಳ ಜೊತೆಗೆ ಟಿಬೆಟನ್ ಇವು ಪರಿಗಣಿಸುವಶ್ಟು ಸಂಕೆಯ ಮಾತುಗರನ್ನು ಕಾಣಬಹುದು.

***

ಜನಗಣತಿ ಒದಗಿಸುವ ಮಯ್ಸೂರು ಜಿಲ್ಲೆಯ ಬಾಶಿಕ ಮಾಹಿತಿಯನ್ನು ಕೆಳಗೆ ಪಟ್ಟಿಸಿದೆ. ಮಯ್ಸೂರು ಹೆಚ್ಚು ಬಾಶೆಗಳು ದಾಕಲಾಗಿರುವ ಜಿಲ್ಲೆಯಾಗಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ1309436
ಆಸ್ಸಾಮಿ1289236
ಇತರ220
ಬೆಂಗಾಲಿ1399811588
ಬೆಂಗಾಲಿ1396810586
ಇತರ312
ಬೊಡೊ220
ಬೊಡೊ/ಬೊರೊ220
ಡೋಗ್ರಿ773938
ಡೋಗ್ರಿ773938
ಗುಜರಾತಿ333417021632
ಗುಜರಾತಿ306015591501
ಸವುರಾಶ್ಟ್ರ/ಸವುರಾಶ್ಟ್ರಿ914645
ಇತರ1839786
ಹಿಂದಿ365912014316448
ಅವದಿ413
ಬಂಜಾರಿ401921
ಬದ್ರಾವತಿ110
ಬೋಜ್ಪುರಿ825527
ಚತ್ತೀಸ್‍ಗರಿ110
ಚುರಾಹಿ101
ದುಂಡಾರಿ110
ಗರ‍್ವಾಲಿ202
ಗೊಜ್ರಿ/ಗುಜ್ಜಾರಿ/ಗುಜರ್110
ಹರಿಯಾಣ್ವಿ514
ಹಿಂದಿ274831529812185
ಕೊರ‍್ತಾ/ಕೊತ್ತ101
ಕುಮವುನಿ321
ಲಮಾಣಿ/ಲಂಬಾಡಿ279814141384
ಮಾರ‍್ವಾರಿ476025382222
ಪಹರಿ642
ರಾಜಸ್ತಾನಿ1156660496
ಸುಗಾಲಿ431
ಇತರ24214498
ಕನ್ನಡ242963412205651209069
ಬಡಗ623230
ಕನ್ನಡ242506112182661206795
ಕುರುಬ/ಕುರುಂಬ411620682048
ಪ್ರಾಕ್ರುತ/ಪ್ರಾಕ್ರುತ ಬಾಶಾ532
ಇತರ390196194
ಕಾಶ್ಮೀರಿ964749
ಕಾಶ್ಮೀರಿ914546
ಇತರ523
ಕೊಂಕಣಿ653931183421
ಕೊಂಕಣಿ605328833170
ಕುಡುಬಿ/ಕುಡುಂಬಿ844
ನವಾಯಿತಿ446217229
ಗೊರ‍್ಬೊಲಿ/ಗೊರು/ಗೊರ‍್ವಾನಿ633
ಇತರ261115
ಮಯ್ತಿಲಿ372017
ಮಯ್ತಿಲಿ372017
ಮಲಯಾಳಂ217851051211273
ಮಲಯಾಳಂ217391049011249
ಪಣಿಯ936
ಯರವ351817
ಇತರ211
ಮಣಿಪುರಿ1225666
ಮಣಿಪುರಿ1225666
ಮರಾಟಿ341631716616997
ಆರೆ438215223
ಮರಾಟಿ337081694416764
ಇತರ17710
ನೇಪಾಲಿ1179795384
ನೇಪಾಲಿ1179795384
ಓಡಿಯಾ809463346
ಓಡಿಯಾ792454338
ಇತರ1798
ಪಂಜಾಬಿ635356279
ಪಂಜಾಬಿ609345264
ಇತರ261115
ಸಂಸ್ಕ್ರುತ472918
ಸಂಸ್ಕ್ರುತ472918
ಸಂತಾಲಿ1376
ಸಂತಾಲಿ1275
ಇತರ101
ಸಿಂದಿ723368355
ಕಚ್ಚಿ431
ಸಿಂದಿ718364354
ಇತರ110
ತಮಿಳು666243335533269
ಕೊರವ321
ತಮಿಳು666183335233266
ಇತರ312
ತೆಲುಗು872394375043489
ತೆಲುಗು872114373543476
ಇತರ281513
ಉರ‍್ದು278321139921138400
ಉರ‍್ದು278292139908138384
ಬನ್ಸಾರಿ110
ಇತರ281216
ಆದಿ101
ಆದಿ ಗಲ್ಲಂಗ್/ಗಲ್ಲಂಗ್101
ಅಪ್ಗನ್/ಕಾಬುಲಿ/ಪಾಶ್ತೊ13130
ಅಪ್ಗನ್/ಕಾಬುಲಿ/ಪಾಶ್ತೊ770
ಇತರ660
ಅರಾಬಿಕ್/ಅರ‍್ಬಿ814833
ಅರಾಬಿಕ್/ಅರ‍್ಬಿ814833
ಬಿಲಿ/ಬಿಲೊಡಿ383178205
ಬರೆಲ್110
ಕೊಕ್ನ/ಕೊಕ್ನಿ/ಕುಕ್ನ321
ವಾಗ್ದಿ702644
ಇತರ309149160
ಬೊಟಿಯ1076542
ಬೊಟಿಯ12120
ಇತರ955342
ಚಕೆಸಂಗ್110
ಚಕೆಸಂಗ್110
ಕೂರ‍್ಗಿ/ಕೊಡಗು662731633464
ಕೂರ‍್ಗಿ/ಕೊಡಗು21279911136
ಕೊಡವ450021722328
ದಿಮಾಸಾ532
ದಿಮಾಸಾ532
ಇಂಗ್ಲೀಶು985471514
ಇಂಗ್ಲೀಶು985471514
ಗಾರೊ211
ಗಾರೊ211
ಹಲಬಿ101
ಹಲಬಿ101
ಹಲಂ211
ಹಲಂ211
ಹ್ಮರ್101
ಹ್ಮರ್101
ಕಾಂದೇಶಿ321
ಅಹಿರಣಿ321
ಕರಿಯಾ431
ಕರಿಯಾ431
ಕಾಸಿ330
ಕಾಸಿ330
ಕೆಜಾ532
ಕೆಜಾ532
ಕಿನ್ನವುರಿ24240
ಕಿನ್ನವುರಿ24240
ಕೊಚ್101
ಕೊಚ್101
ಕೊಡ/ಕೊರ17710
ಕೊಡ/ಕೊರ17710
ಕೊಂಡ110
ಕೊಂಡ110
ಕೊರ‍್ಕು312
ಕೊರ‍್ಕು312
ಕೊರ‍್ವ211
ಇತರ211
ಕುಕಿ312
ಕುಕಿ312
ಕುರುಕ್/ಓರಆನ್880
ಕುರುಕ್/ಓರಆನ್880
ಲಡಾಕಿ3553487
ಲಡಾಕಿ3553487
ಲಹಂದ391920
ಇತರ391920
ಲಕೇರ್211
ಮರ211
ಲೆಪ್ಚ220
ಲೆಪ್ಚ220
ಲುಶಾಯಿ/ಮಿಜೊ 211
ಲುಶಾಯಿ/ಮಿಜೊ211
ಮಾಲ್ತೊ541
ಪಹರಿಯ541
ಮಾವೊ862
ಪವಲ862
ಮೊನ್ಪ5725684
ಮೊನ್ಪ5725684
ಮುಂಡ440
ಮುಂಡ440
ಮುಂಡಾರಿ422
ಮುಂಡಾರಿ321
ಇತರ101
ನಿಸ್ಸಿ/ದಪ್ಲ330
ನಿಸ್ಸಿ/ದಪ್ಲ330
ಶೆರ‍್ಪಾ101
ಶೆರ‍್ಪಾ101
ತಮಂಗ್110
ತಮಂಗ್110
ತಂಗ್‍ಕುಲ್202
ತಂಗ್‍ಕುಲ್202
ತಂಗ್ಸಾ523
ಇತರ523
ತಾಡೊ321
ತಾಡೊ321
ಟಿಬೆಟನ್1281384544359
ಟಿಬೆಟನ್1280884524356
ಇತರ523
ತುಳು744736883759
ತುಳು743636853751
ಇತರ1138
ಇತರ20771178899

ಮಯ್ಸೂರು ಜಿಲ್ಲೆಯಲ್ಲಿ ಒಟ್ಟು ಅರ‍್ವತ್ತಯ್ದು ಬಾಶೆಗಳು ದಾಕಲಾಗಿವೆ. ಅದರೊಟ್ಟಿಗೆ ಇತರ ಎಂಬ ಇನ್ನೊಂದು ಗುಂಪು ಕೂಡ ಇದೆ. ಇದರಲ್ಲಿ 2,077 ಮಂದಿ ಇದ್ದಾರೆ. ಇದು ಒಂದು ಬಾಶೆ ಎಂದು ಲೆಕ್ಕಿಸಿ ಮಯ್ಸೂರು ಜಿಲ್ಲೆಯಲ್ಲಿನ ಬಾಶೆಗಳ ಸಂಕೆ ಅರ‍್ವತ್ತಾರು ಎಂದೆನ್ನಬಹುದು. ಜಿಲ್ಲೆಯಲ್ಲಿ ದಾಕಲಾದ ತಾಯ್ಮಾತುಗಳ ಸಂಕೆ ಒಂದು ನೂರಾ ಎಂಬತ್ತಯ್ದು. ಇತರ ಎಂಬ ಬಾಶೆ ಗುಂಪಿನಲ್ಲಿ ಇರುವ ತಾಯ್ಮಾತು ಒಂದು ಎಂದು ಲೆಕ್ಕಿಸಿದರೆ ದಾಕಲಾದ ತಾಯ್ಮಾತುಗಳು ಒಂದು ನೂರಾ ಎಂಬತ್ತಾರು ಆಗುತ್ತವೆ. ಇತರ ಎಂಬ ತಾಯ್ಮಾತಿನ ಗುಂಪನ್ನು ಇಪ್ಪತ್ತಯ್ದು ಬಾಶೆಗಳ ಒಳಗೆ ಕೊಟ್ಟಿದೆ. ಇತರ ಎಂಬ ತಾಯ್ಮಾತನ್ನು ದಾಕಲಿಸಿರುವ ಬಾಶೆಗಳು ಹೀಗಿವೆ. ಆಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಟಿ, ಓಡಿಯಾ, ಪಂಜಾಬಿ, ಸಂತಾಲಿ, ಸಿಂದಿ, ತಮಿಳು, ತೆಲುಗು, ಉರ‍್ದು, ಅಪ್ಗನ್/ಕಾಬುಲಿ/ಪಾಶ್ತೊ, ಬಿಲಿ/ಬಿಲೊಡಿ, ಬೊಟಿಯ, ಕೊರ‍್ವ, ಲಹಂದ, ಮುಂಡಾರಿ, ತಂಗ್‍ಕುಲ್, ಟಿಬೆಟನ್ ಮತ್ತು ತುಳು. ಇವುಗಳನ್ನು ಹೊರತುಪಡಿಸಿ ಹೆಸರಿಸಿರುವ ತಾಯ್ಮಾತುಗಳು ನೂರಾ ಅರ‍್ವತ್ತೊಂದು ಆಗುತ್ತವೆ.

ಮಯ್ಸೂರು ಜಿಲ್ಲೆಯಲ್ಲಿ ದಾಕಲಾದ ಜನಸಂಕೆ 30,01,127. ಇದರಲ್ಲಿ ಹೆಚ್ಚಿನ ಮಂದಿ ಕನ್ನಡ ಮಾತಾಡುವವರಾಗಿದ್ದಾರೆ. ಕನ್ನಡ ಮಾತುಗರ ಸಂಕೆ 24,29,634. ಇದು ಜಿಲ್ಲೆಯ 80.957% ಆಗುತ್ತದೆ. ಕನ್ನಡವು ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆಯಾಗಿದೆ. ಕನ್ನಡದ ನಂತರ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದು ಬಾಶೆ ಉರ‍್ದು. ಉರ‍್ದು ಬಾಶಿಕರ ಸಂಕೆ 2,78,321 (9.273%) ಆಗಿದೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಬಾಶೆಗಳು ಜಿಲ್ಲೆಯಲ್ಲಿ ಒಟ್ಟು ಆರು ಇವೆ. ಅವು, ತೆಲುಗು – 87,239 (2.906%), ತಮಿಳು – 66,624 (2.219%), ಹಿಂದಿ – 36,591 (1.219%), ಮರಾಟಿ – 34,163 (1.138%), ಮಲಯಾಳಂ – 21,785 (0.725%) ಮತ್ತು ಟಿಬೆಟನ್ – 12,813 (0.426%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಗಳು ಆರು ಇವೆ. ತುಳು – 7,447 (0.248%), ಕೊಡವ – 6,627 (0.220%), ಕೊಂಕಣಿ – 6,539 (0.217%), ಗುಜರಾತಿ – 3,334 (0.111%), ಬೆಂಗಾಲಿ – 1,399 (0.046%) ಮತ್ತು ನೇಪಾಲಿ – 1,179 (0.039%). ಇವುಗಳ ಜೊತೆಗೆ ಇತರ ಎಂಬ ಗುಂಪಿನಲ್ಲಿ 2,077 (0.069%) ಮಂದಿ ಇದ್ದಾರೆ. ಇವುಗಳ ನಂತರ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು ಹತ್ತು ಇವೆ, ಇಂಗ್ಲೀಶು, ಓಡಿಯಾ, ಸಿಂದಿ, ಪಂಜಾಬಿ, ಮೊನ್ಪ, ಬಿಲಿ/ಬಿಲೊಡಿ, ಲಡಾಕಿ, ಆಸ್ಸಾಮಿ, ಮಣಿಪುರಿ ಮತ್ತು ಬೊಟಿಯ. ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿರುವ ಬಾಶೆಗಳು ನಲ್ವತ್ತೊಂದು ಇವೆ. ಈಗ ಮಯ್ಸೂರು ಜಿಲ್ಲೆಯ ಈ ಬಾಶೆಗಳನ್ನು ಅವುಗಳ ಮಾತುಗರ ಸಂಕೆಯ ಆದಾರದ ಮೇಲೆ ಚಿತ್ರಿಸಿ ಕೆಳಗಿನಂತೆ ಕೊಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ24,29,63480.957%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು  2,78,321 9.273%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು 87,2392.906%
’’ತಮಿಳು66,6242.219%
’’ಹಿಂದಿ 36,5911.219%
’’ಮರಾಟಿ 34,1631.138%
’’ಮಲಯಾಳಂ21,7850.725%
’’ಟಿಬೆಟನ್ 12,8130.426% 
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತುಳು 7,4470.248%
’’ಕೊಡವ6,6270.220%
’’ಕೊಂಕಣಿ 6,539 0.217% 
’’ಗುಜರಾತಿ 3,334 0.111%
’’ಇತರ2,077 0.069%
’’ಬೆಂಗಾಲಿ 1,3990.046% 
’’ನೇಪಾಲಿ 1,179 0.039% 
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಇಂಗ್ಲೀಶು, ಓಡಿಯಾ, ಸಿಂದಿ, ಪಂಜಾಬಿ, ಮೊನ್ಪ, ಬಿಲಿ/ಬಿಲೊಡಿ, ಲಡಾಕಿ, ಆಸ್ಸಾಮಿ, ಮಣಿಪುರಿ, ಬೊಟಿಯ4,8210.160%
ನೂರಕ್ಕಿಂತ ಕಡಿಮೆ ನಲ್ವತ್ತೊಂದು ಬಾಶೆಗಳು5340.017%
ಒಟ್ಟು ಮಾತುಗರು30,01,127100%

ಮಯ್ಸೂರು ಜಿಲ್ಲೆಯಲ್ಲಿ ದಾಕಲಾದ ತಾಯ್ಮಾತುಗಳನ್ನು ಗಮನಿಸಿದಾಗ ಮೇಲೆ ಸಿದ್ದಪಡಿಸಿದ ಬಾಶೆಗಳ ಗುಂಪಿನಲ್ಲಿ ತುಸು ಹೆಚ್ಚುಕಮ್ಮಿ ಆಗುತ್ತದೆ. ಹಿಂದಿ ಬಾಶೆಯಲ್ಲಿ ಹಲವು ತಾಯ್ಮಾತುಗಳು ದಾಕಲಾಗಿವೆ. ಕರ‍್ನಾಟಕದ ಸಂದರ‍್ಬದಲ್ಲಿ ಮಹತ್ವವೆನಿಸುವ ಹಿಂದಿಯೊಳಗಿನ ಬಾಶೆಗಳನ್ನು ಇಲ್ಲಿ ಕೊಟ್ಟಿದೆ. 

ಹಿಂದಿ 36,591

ಬಂಜಾರಿ 40

ಬೋಜ್ಪುರಿ 82

ಹಿಂದಿ 27,483

ಲಮಾಣಿ/ಲಂಬಾಡಿ 2,798

ಮಾರ‍್ವಾರಿ 4,760

ರಾಜಸ್ತಾನಿ 1,156

ಸುಗಾಲಿ 4

ಹಿಂದಿ ಬಾಶೆಯ ಒಟ್ಟು ಮಾತುಗರು 36,591. ಇದರಲ್ಲಿ ಹಿಂದಿ ಮಾತಾಡುವ 27,483 (0.915%), ಮಾರ‍್ವಾರಿ ಮಾತಾಡುವ 4,760 (0.158%), ಲಂಬಾಣಿ ಮಾತಾಡುವ 2,842 (0.094%) ಮತ್ತು ರಾಜಸ್ತಾನಿ ಮಾತಾಡುವ 1,156 (0.038%) ಮಂದಿ ಇದ್ದಾರೆ. ಲಂಬಾಣಿಯಲ್ಲಿ ಲಮಾಣಿ ಹೆಸರಿನ 2,798, ಬಂಜಾರಿ ಹೆಸರಿನ 40 ಮತ್ತು ಸುಗಾಲಿ ಹೆಸರಿನ 4 ಮಂದಿ ಸೇರಿದ್ದಾರೆ. ಈಗ ಲಂಬಾಣಿ, ರಾಜಸ್ತಾನಿ ಮತ್ತು ಮಾರ‍್ವಾರಿ ಬಾಶೆಗಳು ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳ ಪಟ್ಟಿಯಲ್ಲಿ ಬರುತ್ತವೆ. ಕನ್ನಡ ಮಾತಾಡುವ ಒಟ್ಟು ಮಾತುಗರ ಸಂಕೆ 24,29,634 ಇದೆ. ಇದರಲ್ಲಿ ಕುರುಬ ಮಾತಾಡುವ 4,116 (0.137%) ಮಂದಿ ಇದ್ದಾರೆ. ಈಗ ಕನ್ನಡದೊಳಗಿಂದ ಕುರುಬ ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಕೂರ‍್ಗಿ/ಕೊಡಗು ಇದರಲ್ಲಿ ಒಟ್ಟು ದಾಕಲಾದ ಮಾತುಗರು 6,627. ಇದರಲ್ಲಿ ಕೊಡವ ಹೆಸರಿನಲ್ಲಿ 4,500 ಮಂದಿ ಮತ್ತು ಕೂರ‍್ಗಿ/ಕೊಡಗು ಹೆಸರಲ್ಲಿ 2,127 ಮಂದಿ ದಾಕಲಾಗಿದ್ದಾರೆ. ಆದರೆ ಕೂರ‍್ಗಿ ಮತ್ತು ಕೊಡವ ಇವುಗಳ ನಡುವೆ ರಾಚನಿಕ ವ್ಯತ್ಯಾಸ ಇಲ್ಲವೆ ಬಿನ್ನತೆಗಳ ಬಗೆಗೆ ತಿಳುವಳಿಕೆ ಇಲ್ಲದಿರುವುದರಿಂದ ಅವುಗಳನ್ನು ಒಂದೆ ಎಂದು ಸದ್ಯಕ್ಕೆ ಗಣಿಸಿದೆ. ಈ ಅಂಶಗಳನ್ನು ಸೇರಿಸಿ, ಜಿಲ್ಲೆಯ ತಾಯ್ಮಾತುಗಳನ್ನು ಪರಿಗಣಿಸಿ ಮೇಲಿನ ಬಾಶೆಗಳ ಪಟ್ಟಿಯನ್ನು ಇಲ್ಲಿ ಮತ್ತೊಮ್ಮೆ ಕೊಟ್ಟಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ24,25,06180.805%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,78,2929.272%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು87,2112.905%
’’ತಮಿಳು66,6182.219%
’’ಮರಾಟಿ33,7081.123%
’’ಹಿಂದಿ27,4830.915%
’’ಮಲಯಾಳಂ21,7390.724%
’’ಟಿಬೆಟನ್12,8080.426%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತುಳು7,4360.247%
’’ಕೊಡವ6,6270.220%
’’ಮಾರ‍್ವಾರಿ4,760 0.158%
’’ಕುರುಬ4,116 0.137%
’’ಗುಜರಾತಿ3,334 0.111%
’’ಲಂಬಾಣಿ2,842 0.094%
’’ಇತರ2,077 0.069%
’’ಬೆಂಗಾಲಿ 1,3960.046%
’’ನೇಪಾಲಿ 1,179 0.039% 
’’ರಾಜಸ್ತಾನಿ1,156 0.038%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಮಯ್ಸೂರು30,01,127ಕನ್ನಡ24,25,06180.805%1
ಉರ‍್ದು2,78,2929.272%2
ತೆಲುಗು87,2112.905%3
ತಮಿಳು66,6182.219%4
ಮರಾಟಿ33,7081.123%5
ಹಿಂದಿ27,4830.915%6
ಮಲಯಾಳಂ21,7390.724%7
ಟಿಬೆಟನ್12,8080.426%8
ತುಳು7,4360.247%9
ಕೊಡವ6,6270.220%10

‍ಲೇಖಕರು Admin

August 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: