ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ವರ್ಣ ಓದಿದ ಚಿನುವಾ ಅಚಿಬೆ..

ಸ್ವರ್ಣಾ ಎನ್ ಪಿ ನೈಜಿರಿಯಾದ ಬರಹಗಾರ ಚಿನುವ ಅಚಿಬೆ ಬಗ್ಗೆ ಮೊದಲ ಬಾರಿ ಓದಿದ್ದು ಬಹುಶಃ ಅವಧಿಯಲ್ಲಿ. ಆತನ ಪುಸ್ತಕಗಳಲ್ಲಿ ಮೊದಲು ಓದಿದ್ದು 'Things Fall Apart'. 80 ಲಕ್ಷಕ್ಕೂ ಹೆಚ್ಚು ಮಾರಾಟವಾಗಿರುವ, ಜಗತ್ತಿನ ೧೦೦ ಪ್ರಸಿಧ್ಧ ಕಾದಂಬರಿಗಳ ಪಟ್ಟಿಯಲ್ಲಿ ಸ್ಥಾನಪಡೆದ ಪುಸ್ತಕ. ಈ ಅಂಕಿ ಅಂಶಗಳನ್ನು ಕಾದಂಬರಿಯ ಇನ್ನಿತರ...

read more
ಡ್ರೈವರ್ ಸ್ವಿಚ್ ಆಫ್ ಮಾಡಿದರು, ಮಳೆ ನಿಂತು ಹೋಯಿತು!

ಸ್ವಾತಿ  ಕೆ ಎಚ್ ನಾನಾಗ ಬಹುಶಃ ಒಂದನೇ ತರಗತಿಯಲ್ಲಿದ್ದಿರಬಹುದು. ರಜೆಯಿತ್ತು ಎನಿಸುತ್ತದೆ. ಅಜ್ಜಿಯ ಜೊತೆ ಮೈಸೂರಿನ ಚಿಕ್ಕಮ್ಮನ ಮನೆಗೆ ಹೊರಟಿದ್ದೆ. ನಮ್ಮೂರಿಂದ ಮೈಸೂರಿಗೆ ಪ್ರೈವೇಟ್ ಬಸ್ಸುಗಳಿದ್ದವು.4 ಗಂಟೆಗಳ ಪ್ರಯಾಣ. ಸಾಕು ಸಾಕೆನಿಸುತ್ತಿತ್ತು. ಮೈಸೂರು ಯಾವಾಗ ಬರುತ್ತೆ ಎಂದು ಪದೇ ಪದೇ ಕೇಳಿ ಅಜ್ಜಿಯ ತಲೆ...

read more
ಸಿಗದ ಪ್ರೀತಿಗೆ ಪರತಪಿಸುವವರ ವೇದನೆ..

ಗಜಲ್ ವೀರಣ್ಣ ಮಂಠಾಳಕರ್ ಪ್ರೀತಿಯ ಬಳ್ಳಿ ಮುಳ್ಳಾಗಿ ಚುಚ್ಚದಿರಲಿ ಹಸಿರು ಹೊನಲಾಗಿ ಹರಡುತಿರಲಿ ಎಂದು ಬಯಸಿದೆ ನೀನದನ್ನು ಚಿಗುರುವ ಮುನ್ನವೇ ಚಿವುಟಿ ಹಾಕುವ ಪ್ರಯತ್ನದಲ್ಲಿ ನನ್ನ ದೂರ ಮಾಡಲು ಬಯಸಿದೆ   ನಿನ್ನಿಂದ ಪಡೆದುಕೊಂಡಷ್ಟು ಸುಖಕ್ಕಿಂತ ಮನದಾಳದಲ್ಲಿ ಉಳಿಸಿಕೊಂಡ ನೆನಪುಗಳೇ ಅಮರವಾಗಿರಲಿ ಸಿಗದ ಪ್ರೀತಿಗೆ...

read more
ಸಣ್ಣ ಕಥೆ ’ಕಪ್ಪು ಬಣ್ಣದ ಪರ್ಸು’

ಕಾ. ಹು. ಚಾನ್‌ಪಾಷ ಆ ಬೀದಿಯಲ್ಲಿ ಅನಾಥವಾಗಿ ಬಿದ್ದಿತ್ತು ಒಂದು ಕಪ್ಪು ಬಣ್ಣದ ಪರ್ಸು. ದಷ್ಟ ಪುಷ್ಟವಾಗಿ ಮೈ ಕೈ ಬೆಳೆಸಿಕೊಂಡಿದ್ದರಿಂದ ಅದರ ಹೊಟ್ಟೆ ತುಂಬಿದೆ ಎಂಬುದು ಎಂಥವರಿಗೂ ಆರಿವು ಮೂಡಿಸುವಂತಿತ್ತು. ಯಾರೋ ಒಬ್ಬಿಬ್ಬರು ಓಡಾಡುವ ಈ ಬೀದಿಯ ಎರಡೂ ಬದಿಗಳಲ್ಲಿ ಇಕ್ಕಟ್ಟಿಕ್ಕಟ್ಟಾಗಿ ಬೆಳೆದು ನಿಂತಿರುವ ಸಾಲುಮರಗಳು ತನ್ನ...

read more
’ನನ್ನೊಳಗಿನ ಹಾಡು ಕ್ಯೂಬ’ ಈಗ ತೆಲುಗಿಗೆ

ಜಿ ಎನ್ ಮೋಹನ್ ಹೌದು.. ಇದು "ನನ್ನೊಳಗಿನ ಹಾಡು ಕ್ಯೂಬಾ''. ಕ್ಯೂಬಾದ ಒಳಗೆ ನಾನು ಬರೀ ಹಾಡನ್ನಲ್ಲ, ಬದುಕಿನ ತುಡಿತ ಕಂಡವನು. ನಾನು ಕಂಡ ಕ್ಯೂಬಾವನ್ನು ಓದುಗರ ಮುಂದಿರಿಸಿದಾಗ ಅವರೂ ಅಷ್ಟೇ ಅದನ್ನು ಪ್ರೀತಿಸಿದ್ದಾರೆ ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಿಗೆ ಈ ಕೃತಿ ಟೆಕ್ಸ್ಟ್ ಆಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಕೂಡಾ ಇದರ...

read more
'ಒಮ್ಮೆ ನಲುಗಬಹುದೇ ಉಸಿರು…' – ದಿವ್ಯಾ ಆಂಜನಪ್ಪ ಕವನ

ಕಾವ್ಯ ದಿವ್ಯ ಆಂಜನಪ್ಪ ಬಸಿದುಕೊಂಡ ಕಣ್ಣೀರೆಲ್ಲಾ ಮತ್ತೆ ಹೊರಳಬಹುದೆ ಪ್ರೀತಿ ಪನ್ನೀರಿನೆಡೆಗೆ!   ಅಳಿದು ಹೋದ ಭರವಸೆಗಳೆಲ್ಲಾ ಮತ್ತೆ ಅರಳಬಹುದೆ ಬಯಕೆ ಬೆಸುಗೆಯೆಡೆಗೆ   ಬಿಸುಟುಕೊಂಡ ಬಂಧವೆಲ್ಲಾ ಮತ್ತೆ ಅರ್ಥ ಪಡೆಯಬಹುದೆ ತಿಳಿಗೊಂಡ ಭಾವಗಳೆಡೆಗೆ   ಕಮರಿದ ಕನಸೆಲ್ಲಾ ಮತ್ತೆ ಕೊನರಬಹುದೆ ಕಣ್ಣು ಬಿಂದುವಿನ...

read more
ಮೌಲ್ಯವೇ ಇಲ್ಲದ ಸಮಾಜದಲ್ಲಿ ಪ್ರಜ್ಞೆಯ ಹುಡುಕಾಟ

ನಾ ದಿವಾಕರ ಅಪರಾಧಗಳು ಸಂಭವಿಸದ ಸಮಾಜವನ್ನು ಕಾಣಲಾಗುವುದಿಲ್ಲ. ಸಾಮಾಜಿಕ ಮೌಲ್ಯಗಳು, ನೈತಿಕತೆ, ಸಾಕ್ಷಿ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆ ಎಷ್ಟೇ ಜಾಗೃತವಾಗಿದ್ದರೂ ಸಮಾಜದಲ್ಲಿ ಯಾವುದೋ ಒಂದು ಸ್ತರದಲ್ಲಿ ಅಪರಾಧಗಳು ಸಂಭವಿಸುತ್ತಲೇ ಇರುತ್ತವೆ. ಮಾನವ ಜಗತ್ತಿನ ಅಭ್ಯುದಯದ ಹಾದಿಯಲ್ಲಿ ತನ್ನ ಮುನ್ನಡೆಗೆ ಮನುಕುಲ ಅಪರಾಧಗಳ...

read more
ಶಾಂತಾ ನಾಗರಾಜ್ ಬರೆದ ಒಂದು ಕೌನ್ಸಲಿಂಗ್ ಕಥೆ

ಅಂಗೈಲ್ಲೊಂದು ಅರಿವಿನ ಹಣತೆ ಶಾಂತಾ ನಾಗರಾಜ್ ಮೇಲ್ನೋಟಕ್ಕೆ ಅದೊಂದು ಸುಂದರ ಕುಟುಂಬ. ಉನ್ನತ ಅಧಿಕಾರಿಯಾಗಿರುವ ಗಂಡ, ಮೊದಲ ಮತ್ತು ಕೊನೆಯ ಇಂಜಿನಿಯರಿಂಗ್ ಪದವಿಯಲ್ಲಿ ಓದುತ್ತಿರುವ ಇಬ್ಬರು ಜಾಣ ಗಂಡುಮಕ್ಕಳು, ಹಿಂದೆ ಬಂದರೆ ಹಾಯದ, ಮುಂದೆ ಬಂದರೆ ಒದೆಯದ, ಸತಿಸಾಧ್ವೀಮಣಿ ಹೆಂಡತಿ, ರಸ್ತೆಯಲ್ಲಿ ಹೋಗುತ್ತಿದ್ದವರು ವಾವ್! ಎಂದು...

read more
ಚಡ್ಡಿದೋಸ್ತ್ ಚಂದಪ್ಪನ ದರುಶನ..

ಸಂಗಮೇಶ ಡಿಗ್ಗಿ ಹುಣ್ಣಿಮೆಯ ರಾತ್ರಿಯಲ್ಲಿ ಒಂಟಿಯಾಗಿ ನಡೆಯುತ್ತಿರುವಾಗ ನನಗೆ ಗೊತ್ತಿಲ್ಲದೆ ನನ್ನನ್ನು ಹಿಂಬಾಲಿಸಿ ಬರುತಿದ್ದ ಚಂದಪ್ಪ ನನ್ನ ಚಡ್ಡಿದೋಸ್ತ್ ಆಗಿ ಬಹಳ ವರ್ಷವೇ ಆಗಿದೆ. ಅಜ್ಜಿ ಹೇಳುತ್ತಿದ್ದ ಮೊಲ ಮತ್ತು ಚಂದಪ್ಪನ ಕಥೆ ನನ್ನೆದೆಯೊಳಗೆ ಅಚ್ಚಾಗಿ ಉಳಿದು ತುಕ್ಕು ಹಿಡಿಯುವ ಸ್ಟೇಜ್ಗೆ ಬಂದು ನಿಂತಿದೆ. ಹೇಗಾದರೂ...

read more
ಪ್ರೀತಿ ಎಂದರೆ..

ಪ್ರೀತಿ ಎಂಬ ಅಮರ ಕಾವ್ಯ.. ಸಿದ್ದು ವಗ್ಗನವರ ನೋವಿನಲ್ಲೂ ಆನಂದ ಕೊಡುವ ಅಸಾಮಾನ್ಯ ಭಾವ, ಗಾತ್ರ -ಸ್ವರೂಪವಿಲ್ಲದಿದ್ದರೂ ಎಲ್ಲ ಅಡಗಿಸಿಕೊಂಡ ನಿಧಿ,   ಪ್ರೀತಿ ಎಂದರೆ...! ಮೈತಳೆದು ನಿಲ್ಲುವ ಸಾಹಿತ್ಯ ಸೊಡರಿನ ಮೂಲ ದ್ರವ್ಯ, ಅಳಿಯದೆ ಉಳಿಯುವ ಕಣ್ಣಿದ್ದು ನೋಡಲಾಗದ ದಿವ್ಯ ಶಕ್ತಿ,   ಪ್ರೀತಿ ಎಂದರೆ..!! ಬೆಳಕಿಲ್ಲದ...

read more
ಅರ್ಧನಾರೀಶ್ವರ ಕಥಾ, ಮತ್ತೆ ಮತ್ತೆ ರಿತು ಪರ್ವ – ರಶ್ಮಿ ಕಾಸರಗೋಡು

ರಶ್ಮಿ ಕಾಸರಗೋಡು ಮೈಕಲ್ ಜಾಕ್ಸನ್ ಹುಟ್ಟಿದ್ದು ಕಪ್ಪು ವರ್ಣದ ಜನಾಂಗದಲ್ಲಾಗಿದ್ದರೂ, ಸಂಗೀತ ಲೋಕದಲ್ಲಿ ಆತ ಬೆಳೆದು ನಿಂತದ್ದು ಕಪ್ಪು ಅಥವಾ ಬೆಳ್ಳಗಿನ ತ್ವಚೆಯಿಂದಾಗಿ ಅಲ್ಲ. ಅವನು ಕಪ್ಪು, ಬಿಳುಪು ಎರಡೂ ಆಗಿದ್ದನು. ಅವನು ಹೆಣ್ಣು ಗಂಡೂ ಆಗಿಯೇ ಅಪ್ರತಿಮನೆಂದೆನಿಸಿಕೊಂಡವನು. ಶತಮಾನಗಳಿಂದ ಕೀಳರಿಮೆಗೊಳಪಟ್ಟ ವರ್ಣಬೇಧ ನೀತಿಯಿಂದ...

read more
ತನುವಿನೊಳಗಿದ್ದೂ ತನುವ ಮೀರುವ ಕಾಯಕ

ಪುಸ್ತಕದ ಒಂದು ಅಧ್ಯಾಯ ’ಅವಧಿ’ ಓದುಗರಿಗಾಗಿ ನಾಟ್ಯಶಾಸ್ತ್ರದ ತುಂಬಾ ಮುಂದಿನಕಾಲದ ಚಿಂತಕರು ಬ್ರಹ್ಮಾಂಡವೆಲ್ಲ ಭಗವಂತನ ಆಂಗಿಕಾಭಿನಯವೆಂದು ನೋಡುವ ದೇವತಾಶಾಸ್ತ್ರೀಯ ಬ್ರಹ್ಮಾಂಡಕಾಯವೊಂದರ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದಿದ್ದಾರೆ. ಆದರೆ ಸ್ವತಃ ನಾಟ್ಯಶಾಸ್ತ್ರವು ಇಂಥ 'ವಿಶ್ವದೇಹ' ತತ್ತ್ವವನ್ನು ಬೆಳೆಸಿದ್ದು...

read more
’ಮತ್ತೊಂದು ಮುಂಜಾವಿಗಾಗಿ ಮರುಗುತ್ತಲೇ..’ ಮಂಜುಳಾ ಹುಲಿಕುಂಟೆ

ಮಂಜುಳಾ ಹುಲಿಕುಂಟೆ ಬಣ್ಣ ಕಟ್ಟಿಕೊಂಡ ಬಾನು ಈ ಸಂಜೆಗೆ ತಣ್ಣಗಾದ ಸೂರ್ಯ ಹಾರಿ ದಣಿವಾಗಿ ಗೂಡಿಗೆ ಇಂತಿರುಗುತ್ತಿರುವ ಬಾನ ಹಕ್ಕಿಗಳ ಸಾಲು ನನ್ನೊಳಗೆ ನಿನ್ನ ನಿರೀಕ್ಷೆಯನ್ನ ಮತ್ತೆ ಚಿಗುರಿಸುತ್ತವೆ ರೆಕ್ಕೆ ಕತ್ತರಿಸಿಕೊಂಡು ಮೂಲೆ ಹಿಡಿದ ಒಂಟಿ ಹಕ್ಕಿ ನಾನು ಅದ್ಯಾಕೋ ಈ ಸಂಜೆಗಳು ಹಿತವೆನಿಸುತ್ತಿವೆ ಪ್ರತೀ ಸಂಜೆ ನೀನು ಮರಳಿ...

read more
ಸಂಧ್ಯಾರಾಣಿ ಕಾಲಂ : ’ಲೇಡಿಸ್ ಕೂಪೆ’ಯಲ್ಲಿ ಸಿಕ್ಕ ಅಖಿಲಾಂಡೇಶ್ವರಿ

ಪ್ರತಿಯೊಬ್ಬರೂ ಇಲ್ಲಿ ಎರಡೆರಡು ರೀತಿಯ ಹೋರಾಟಗಳನ್ನು ನಡೆಸುತ್ತಿರುತ್ತಾರೆ. ಒಂದು ಬದುಕಿನೊಡನೆ, ಮತ್ತೊಂದು ತಮ್ಮೊಡನೆಯೇ. ಬದುಕಿನೊಡನೆ ಹೋರಾಟ ನಿರಂತರ, ಬದುಕಿರುವವರೆಗೂ. ಆದರೆ ನಮ್ಮೊಳಗಿನ, ನಮ್ಮೆಡೆಗಿನ ನಮ್ಮ ಹೋರಾಟ ಹಾಗಲ್ಲ. ನಮ್ಮ ನಮ್ಮ ಗ್ರಹಿಕೆ, ಅನುಭವ ಮತ್ತು ತಿಳುವಳಿಕೆಗನುಗುಣವಾಗಿ ಬದುಕಿನ ಯಾವುದೋ ಒಂದು ಹಂತದಲ್ಲಿ...

read more

Pin It on Pinterest

Share This