ಇಂದು ಅವಧಿಯಲ್ಲಿ...
ಸೆದಕಲಲ್ಲೊಂದು ಮನೆಯ ಮಾಡಿ…
ಸಮತಾ ಆರ್ ಒಂದು ಭಾನುವಾರ ಮಧ್ಯಾಹ್ನ ಮನೆಗೆಲಸವನ್ನೆಲ್ಲಾ ಮುಗಿಸಿ, ಹಣ್ಣಾಗುತ್ತಿರುವ ತಲೆಗೆ ಬೆಳಿಗ್ಗೆಯಿಂದಲೇ ಮೆತ್ತಿಕೊಂಡಿದ್ದ ಮೆಹಂದಿಯಿಂದ ಮುಕ್ತಿ ಕಾಣಿಸಲು ನೀರುಮನೆಗೆ ಹೋಗುವಷ್ಟರಲ್ಲಿ, 'ಅಮ್ಮ! ಇಲ್ನೋಡು ಬಾ, ಮನೆ ಹತ್ತಿರ ಯ್ಯಾರ್ ಬಂದವ್ರೆ ಅಂತ!' ಎಂದು ಮನೆ ಹೊರಗೆ ಆಡುತ್ತಿದ್ದ ಮಕ್ಕಳಿಬ್ಬರೂ ಕಿರುಚಿದರು. 'ಅಯ್ಯೋ,...
2021 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೧' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು...
ಪ್ರತಿಭಾ ನಂದಕುಮಾರ್ ಅಂಕಣ– ಹೈದರ್ ಮತ್ತು ಹೆಣ್ಣುಗಳು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಹುರುಳಿ ವಡೆ ಮತ್ತು ನಾನು
ಸ್ಪೂರ್ತಿ ಎಸ್ ಎಂ ದಿನಂಪ್ರತಿ ಸಾಮಾನ್ಯವಾಗಿ ಮಾಡುವ ಅಡುಗೆಗಳಿಗಿಂತ ಏನನ್ನಾದರೂ ಹೊಸದಾಗಿ, ಹಿಂದೆ ಮಾಡಿರದ ಹೊಸ ಅಡುಗೆ, ತಿಂಡಿಗಳನ್ನು ಮಾಡಲು ನನ್ನ ಮನಸು ಸದಾ ಸಕಾರಾತ್ಮಕವಾಗಿರುತ್ತಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಎಂದೋ ಸವಿದಿದ್ದ ಹುರುಳಿ ಕಾಳಿನ ವಡೆ ನನ್ನ ನೆನಪಿಗೆ ಬಂತು. ನಾನಾಗ ನಾಲ್ಕನೇ ತರಗತಿ ಮುಗಿಸಿ...
ನವೀನ್ ಹಳೆಮನೆ ನೋಡಿದ ‘ಶೇರ್ನಿ’
ನವೀನ್ ಹಳೆಮನೆ ವಿಷ ತಯಾರಿಸುವುದು ಕೇಕ್ ತಯಾರಿಸುವಷ್ಟೇ ಮಜವಾಗಿರುತ್ತದೆ. ಆದರೆ ಜನ ವಿಷ ತಯಾರಿಸಲು ಬಯಸುತ್ತಾರೆ. - ಮಾರ್ಗರೆಟ್ ಆಟ್ವುಡ್ ತನ್ನ ಅತಿ ಸಿನಿಮೀಕರಿಸದ ವಾಸ್ತವಿಕ ದೃಶ್ಯಗಳ ಸಂಯೋಜನೆಯಿಂದ ಇಷ್ಟವಾಗುವ ಚಿತ್ರ ಶೇರ್ನಿ. ನರಭಕ್ಷಕ ಎನಿಸಿಕೊಂಡಿರುವ ಒಂದು ಹುಲಿಯನ್ನು ಹಿಡಿಯುವ ಅಥವಾ ಕೊಲ್ಲುವ ವಸ್ತುವನ್ನು ಈ ಚಿತ್ರ...
ಕ್ರಾಂತಿ ಮತ್ತು ಬೆಳದಿಂಗಳನ್ನು ಬೆಸೆದ ಕವಿ..
ನಾಗರಾಜ್ ಹರಪನಹಳ್ಳಿ ಹೊಲೆಮಾದಿಗರ ಹಾಡನ್ನು ನಮ್ಮ ಕೈಗಿಟ್ಟು, ಹೋರಾಟಕ್ಕೆ ಸಾವಿರಾರು ಧ್ವನಿಗಳನ್ನು ಸೇರಿಸಿ, ಗುಡಿಸಲಿನಿಂದ ಅರಮನೆತನಕ ಪಯಣಿಸಿ ಹೊರಟುಹೋದರು ನಮ್ಮ ನೆಲದ ನಿಜದನಿಯ ಕವಿ. ಕವಿ ಸಿದ್ದಲಿಂಗಯ್ಯನವರು ನನಗೆ ಮುಖ್ಯ ಅನಿಸಿದ್ದು ಈ ಕಾರಣಗಳಿಗೆ : ಕವಿ ಸಿದ್ದಲಿಂಗಯ್ಯ ಕನ್ನಡದ ಕಾವ್ಯಕ್ಕೆ ಹೊಸ ಸ್ವರೂಪ ಕೊಟ್ಟರು, ನಮ್ಮ...
Latest
ಬಾ ಕವಿತಾ
ಶಿವಯೋಗಿ ಕಳ್ಳಿಮಠ ಕವಿತೆ- ಕೆಲವು ಶಾಯರಿಗಳು…
ಶಿವಯೋಗಿ ಕಳ್ಳಿಮಠ ನಿನ್ನ ಭೇಟಿಗೂ ಮುನ್ನನನ್ನ ಜೀವನವೇಇರಲಿಲ್ಲ.ಅದಕ್ಕಿಂತ ಮುಂಚೆನಾನು ಬದುಕಿದ್ದೆಎಂಬುದೇ ಪುಕಾರು. ನಿನ್ನ ನಗುವಿನ ತುಣುಕುಗಳಹೆಕ್ಕಿ ಬೆಳದಿಂಗಳೆಂದುದೋಕಾ ಮಾಲು...
ಸುಜಾತ ಹೆಬ್ಬಾಳದ ಕವಿತೆ – ನೆನಪುಗಳೇ ಹಿತವೆನಗೆ…
ಸುಜಾತ ಹೆಬ್ಬಾಳದ ಹೊಗಳಿಕೆಯ ಬೀಸಣಿಕೆಗಿಂತ ತೆಗಳಿಕೆಯ ಅಂಬುಗಳೇ ಹಿತವೆನಗೆಬೀರುವ ಕೃತಕ ಮಂದಹಾಸಕ್ಕಿಂತ ತೋರುವ ನೈಜ ತಿರಸ್ಕಾರಗಳೇ ಹಿತವೆನಗೆ ಅಸ್ಪಷ್ಟ ಭಾವಗಳ ಅರ್ಥಗಳ ಹುಡುಕುತ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಆಮ್ರಪಾಲಿ’
'ಆಮ್ರಪಾಲಿಯಿಂದ ಅಂಬೆಪಾಲಿಯವರೆಗೆ' ವರದೇಂದ್ರ ಕೆ ಮಸ್ಕಿ ಓದುಗನನ್ನು ಕ್ರಿ ಪೂ 500 ನೇ ಶತಮಾನಕ್ಕೆ ಸೆಳೆದೊಯ್ಯುವ, ಅಭೂತಪೂರ್ವವಾಗಿ ಮನಸನ್ನು ತಲ್ಲಣಗೊಳಿಸುವ ಐತಿಹಾಸಿಕ ಕಾದಂಬರಿ ಗಾಯತ್ರಿ ರಾಜ್ ಅವರ "ಆಮ್ರಪಾಲಿ". ಒಬ್ಬ ದೇಶಭಕ್ತೆಯ ಕಥಾ ಹಂದರ, ಒಬ್ಬ ಸೌಂದರ್ಯದ ಗಣಿಯಾದ ಹೆಣ್ಣು ಎದುರಿಸುವ ರಾಶಿ ರಾಶಿ ಸವಾಲುಗಳ, ಮನದ...
ಮತ್ತೊಂದು ಸಖೀಗೀತ
ಒಬ್ಬ ಅಜ್ಞಾತ ಮಹಾಪುರುಷ
ಗೌರವ ಸಂಪಾದಕರ ಮಾತು ವಿ.ಎಂ. ಕುಮಾರಸ್ವಾಮಿ ಅಜ್ಞಾತ ಮಹಾಪುರುಷ. ಒಂದು ವ್ಯಕ್ತಿತ್ವವನ್ನು ಹೀಗೆಪ್ರಶಂಸಿದವರು ಮಹಾಕವಿ ಕುವೆಂಪು. ಕುವೆಂಪು ಅಂತಹ ಪ್ರಜ್ಞಾವಂತರ ಲೇಖನಿಯಲ್ಲಿಹಳ್ಳಿಗಾಡಿನ ರೈತಾಪಿಯೊಬ್ಬ ಇಂಥಾ ಪ್ರಶಂಸಾ ನುಡಿ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಒಳಹೊಕ್ಕು ಅರಿತಾಗಲೇ ಗೊತ್ತಾಗುವುದು. ಹೌದು, ಅವರು...
ರಹಮತ್ ಕೃತಿ ಕುರಿತು ಅರುಣ ಜೋಳದಕೂಡ್ಲಿಗಿ
ವಾಗ್ವಾದಗಳ ಕನ್ನಡ ಸಾಹಿತ್ಯ ಚರಿತ್ರೆ ಡಾ.ಅರುಣ್ ಜೋಳದಕೂಡ್ಲಿಗಿ ಕನ್ನಡ ಸಾಹಿತ್ಯ ವಾಗ್ವಾದಗಳು ಡಾ.ರಹಮತ್ ತರೀಕೆರೆ ಪುಟ:230, ರೂ: 120, 2012 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಭಿನ್ನವಾಗಿ ಕಟ್ಟುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಅದು ಈಗಲೂ ನಿಂತಿಲ್ಲ. ಇಂತಹ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











