ಮೂಲ: ವಿನೋದ್ ಶುಕ್ಲ
ಕನ್ನಡಕ್ಕೆ: ಹೇಮಾ ಖುರ್ಸಾಪೂರ
ಹತಾಶೆಯಿಂದ ವ್ಯಕ್ತಿಯೊಬ್ಬ ಕೂತಿದ್ದ
ಅವನ ಪರಿಚಯ ನನಗಿಲ್ಲ
ಹತಾಶೆ ಎಂದರೇನು ಅಂತ ಮಾತ್ರ ಗೊತ್ತಿತ್ತು
ಅದಕ್ಕೆ ಕೈ ಚಾಚಿದೆ ಅವನತ್ತ
ಕೈ ಹಿಡಿದವನು ಎದ್ದು ನಿಂತ
ಅವನಿಗೂ ನನ್ನ ಪರಿಚಯವಿಲ್ಲ
ಕೈಚಾಚಿದೆ ಎಂದು ಅರಿತ
ಇಬ್ಬರೂ ಒಟ್ಟಿಗೆ ನಡೆದೆವು
ಇಬ್ಬರೂ ಅಪರಿಚಿತರೇ
ಒಟ್ಟಿಗೆ ನಡೆಯುವುದು ಮಾತ್ರ ಗೊತ್ತಿತ್ತು.
sooper