ದೀಪು ಶೆಟ್ಟಿ ದೊಡ್ಡಮನೆ ಕಂಡಂತೆ ‘ಆವರ್ತ-ಮಂಥನ’

ದೀಪು ಶೆಟ್ಟಿ ದೊಡ್ಡಮನೆ

‘ಆವರ್ತ-ಮಂಥನ’ ಕೃತಿಗೆ ಶ್ರೀ ದೀಪು ಶೆಟ್ಟಿ ದೊಡ್ಡಮನೆಯವರ ‘ಮೊದಲ ಮಾತು’:

ಆವರ್ತದ ಕಥಾ ನಿರೂಪಣೆ ನಿಜಕ್ಕೂ ಅದ್ಭುತ. ಪ್ರತೀಪ ಮಹಾರಾಜ ಜೀವನದ ಸಮುದ್ರವನ್ನು ಈಜಿ ದಡದಲ್ಲಿ ನಡೆಯುತ್ತಾ, ಗತ ಜೀವನದ ಘಟನೆಗಳನ್ನು ನೆನೆಯುತ್ತಾ ಮುಳುಗುತ್ತಿರುವ ಸೂರ್ಯನಂತೆ ಆತನ ಅರಿಷಡ್ ಗುಣಗಳು ಇಳಿಮುಖವಾದಂತೆ ಪೂರ್ವದಲ್ಲಿ ಆಧ್ಯಾತ್ಮದ ಪೂರ್ಣಚಂದ್ರ ಉದಯಿಸಿ ಶಾಂತ ಬದುಕಿನ ಸುಳಿಯೆಡೆಗೆ ನುಸುಳುವಂತೆ ಕಾಣುತ್ತಾನೆ. ಲಾಕ್ಷಿ ತನ್ನ ಒಳದೋಟಿಯನ್ನು ಬಿಟ್ಟು ಕೊಡದೆ ಕಾದಂಬರಿಯುದ್ದಕ್ಕೂ ಗುಪ್ತವಾಗಿ ಕಾಡುತ್ತಾ ದಿಟ್ಟೆಯಾಗಿ ಉಳಿಯುತ್ತಾಳೆ. ಪ್ರತೀಪನ  ವರ್ತಮಾನದಿಂದ ಭೂತಕಾಲಕ್ಕೆ ಮಗ್ಗುಲು ಬದಲಿಸುತ್ತಾ ಹೋಗುವ ಕ್ರಿಯೆ ಬಹಳ ಸೊಗಸಾಗಿದೆ.

ಅರಿಷಡ್ ವರ್ಗ ಸಾಗಿದಂತೆ  ಪ್ರತೀಪನ ಷಡ್ಯಂತ್ರ ವೂ ಸಾಗಿದೆ.
“ವಶ್ಯಾಕರ್ಷಣಯೋ ರಕ್ತಾ ಶಾಮಾ ಸ್ತಂಭವಿರೋಧ್ಯೋ ನಿಗ್ರಹೋಚ್ಚಾಟಯೋಃ ಕೃಷ್ಣಾ ಶ್ವೇತಾ ಮೋಕ್ಷಪರೋಕ್ಷಯೋಃ” ಎಂಬುದೊಂದು  ಶ್ಲೋಕ. ವಶ್ಯ; ಅಂದರೆ ವಶೀಕರಿಸಿಕೊಳ್ಳುವುದು,
ಸ್ತಂಭ; ಎಂದರೆ ಸ್ತಗಿತಗೊಳಿಸುವುದು.
ವಿರೋಧ; ಎಂದರೆ ಸ್ಪಷ್ಟ ವಿರೋಧ. ನಿಗ್ರಹ; ವಿರೋಧಿಯನ್ನು ತನ್ನ ನಿಯಂತ್ರಣದಲ್ಲಿಡುವುದು. ಉಚ್ಚಾಟನ; ಅಡ್ಡಲಾಗಿರುವವನನ್ನು ದಾರಿಯಿಂದ ಸರಿಸುವುದು. ಮೋಕ್ಷ; ಅಂದರೆ ಎಲ್ಲವನ್ನೂ ತ್ಯಜಿಸಿ‌ ನಿರ್ಮೋಹಿಯಾಗಿರುವುದು. ಪ್ರತೀಪ
ಹೀಗೆ ಈ ಆರು ರೀತಿಯ ಶಕ್ತಿಗಳನ್ನು ಪ್ರಯೋಗಿಸುವುದು ತೋರುತ್ತದೆ.

ಶ್ರೀಮತಿ ಆಶಾ ರಘುರವರಿಗೆ ಇದಾಗಲೇ ಹಲವು ಸಾಹಿತಿಗಳಿಂದ ಹಾಗೂ ಓದುಗರಿಂದ ಅಭಿಪ್ರಾಯಗಳು ಬಂದಿದ್ದವು. ಆಗಿಂದಾಗ್ಗೆ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಅವರು ಒಂದೆಡೆ ಜೋಪಾನವಾಗಿ ಇಟ್ಟುಕೊಂಡಿದ್ದರು. ಅವುಗಳನ್ನು ಸಂಗ್ರಹಿಸಿ, ಹೀಗೆ ಪುಸ್ತಕದ ಚೌಕಟ್ಟಿನೊಳಗೆ ಜೋಡಿಸುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಕಾರ್ಯ ವಹಿಸಿದಕ್ಕಾಗಿ ನಾನು ಆಶಾ ರಘುರವರಿಗೆ ಹಾಗೂ ಸಾಹಿತ್ಯಲೋಕ ಪಬ್ಲಿಕೇಶನ್ಸ್ ನ ರಘುವೀರ್ ಅವರಿಗೆ  ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

‘ಆವರ್ತ’ ಕಾದಂಬರಿಗೆ ತಮ್ಮ ಅಭಿಪ್ರಾಯಗಳನ್ನು ನೀಡಿದ ಸಾಹಿತಿಗಳಿಗೂ, ವಿಮರ್ಶಿಸಿರುವ ಪತ್ರಿಕೆಗಳಿಗೂ ಹಾಗೂ ಪ್ರತಿಕ್ರಿಯಿಸಿರುವ ಓದುಗ ಬಂಧುಗಳಿಗೂ ವಂದನೆಗಳನ್ನು ಸಲ್ಲಿಸುತ್ತಾ ವಿರಮಿಸುತ್ತೇನೆ. ನಮಸ್ಕಾರ.

ಆಶಾ ರಘು

ಕೃತಜ್ಞತೆ
 
’ಆವರ್ತ’ ಕಾದಂಬರಿಯ ಮೂರನೆ ಮುದ್ರಣದೊಂದಿಗೆ ಈ ’ಆವರ್ತ-ಮಂಥನ’ ಎಂಬ ಕಾದಂಬರಿಯ ಕುರಿತ ಅಭಿಪ್ರಾಯಗಳ ಸಂಗ್ರಹವೂ ಪ್ರಕಟಗೊಳ್ಳುತ್ತಿರುವುದು ನನಗೆ ಸಂತೋಷವನ್ನು ತಂದಿದೆ. ಮೊದಲ ಮುದ್ರಣಕ್ಕೆ ಡಾ. ಸಾ.ಶಿ.ಮರುಳಯ್ಯನವರು ಆಶಯದ ನುಡಿಯನ್ನೂ, ಪ್ರೊ.ಜಿ.ವೆಂಕಟಸುಬ್ಬಯ್ಯನವರು ಬೆನ್ನುಡಿಯನ್ನೂ ಬರೆದುಕೊಟ್ಟಿದ್ದರು. ಎರಡನೆಯ ಮುದ್ರಣಕ್ಕೆ ಶ್ರೀ ಎಂ.ಎನ್.ವ್ಯಾಸರಾವ್ ಅವರು ಪ್ರತಿಕ್ರಿಯೆಯನ್ನು ನೀಡಿದ್ದರು. ಈಗ ಆ ಮೂವರು ಹಿರಿಯರೂ ನಮ್ಮೊಂದಿಗೆ ಇಲ್ಲ. ಅವರನ್ನು ಗೌರವದಿಂದ ನೆನೆಯುತ್ತಾ, ಮುನ್ನುಡಿಯನ್ನ ಬರೆದುಕೊಟ್ಟ ಶ್ರೀ ಎಸ್.ದಿವಾಕರ್ ಅವರಿಗೂ, ಪ್ರತಿಕ್ರಿಯೆಗಳನ್ನು ನೀಡಿದ ಡಾ.ಎಸ್.ಎಲ್.ಭೈರಪ್ಪ, ಶ್ರೀಮತಿ ವೈದೇಹಿ, ಡಾ.ಎಂ.ಎಸ್.ಆಶಾದೇವಿ, ಡಾ.ಮಂಗಳಾ ಪ್ರಿಯದರ್ಶಿನಿ, ಪ್ರೊ.ಎ.ವಿ.ನಾವಡ, ಡಾ.ಪಿ.ವಿ.ನಾರಾಯಣ, ಶ್ರೀ ಅಗ್ರಹಾರ ಕೃಷ್ಣಮೂರ್ತಿ,  ಶ್ರೀ ಬಿ.ಎಸ್.ಜಯಪ್ರಕಾಶ ನಾರಾಯಣ, ಶ್ರೀ ಮುಕುಂದ ರಾವ್, ಶ್ರೀ ನೀಲಾವರ ಸುರೇಂದ್ರ ಅಡಿಗ, ಡಾ.ನಟರಾಜ ಬೂದಾಳು, ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀಮತಿ ಪ್ರೇಮಾ ಭಟ್, ಶ್ರೀಮತಿ ಜಯಶ್ರೀ ಕಾಸರವಳ್ಳಿ, ಶ್ರೀಮತಿ ನಾರಾಯಣೀ ದಾಮೋದರ್, ಶ್ರೀಮತಿ ಕೆ.ತಾರಾ ಭಟ್, ಶ್ರೀ ನಾಗೇಶ ಹೆಗಡೆ, ಶ್ರೀ ಜಿ.ಬಿ.ಹರೀಶ್, ಶ್ರೀ ಕೆ.ಕಲ್ಯಾಣ್, ಶ್ರೀ ಕುಂವೀ, ಶ್ರೀಮತಿ ಕೆ.ಶಾರದಾ ಭಟ್, ಶ್ರೀ ಡಿ.ಎಸ್.ರಾಮಸ್ವಾಮಿ, ಶ್ರೀ ಶ್ರೀಪತಿ ಮಂಜನಬೈಲು, ಶ್ರೀ ಅಶೋಕವರ್ಧನ, ಶ್ರೀಮತಿ ವಿದ್ಯಾರಶ್ಮಿ ಪೆಲತಡ್ಕ, ಶ್ರೀಮತಿ ಹರವು ಸ್ಫೂರ್ತಿಗೌಡ, ಶ್ರೀಮತಿ ದೀಪದಮಲ್ಲಿ, ಶ್ರೀ ಕುಗೋ, ಶ್ರೀ ವೈ.ಎಸ್.ಹರಗಿ, ಶ್ರೀ ಸಂಪಿಗೆ ತೋಂಟದಾರ್ಯ, ಶ್ರೀಮತಿ ಭವಾನಿ ರಾಮನಾಥ್, ಶ್ರೀ ದೊಡ್ಡಿ ಶಿವರಾಮ್, ಶ್ರೀ ಶ್ರೀನಿವಾಸ ಕುಂಡಂತಾಯ, ಶ್ರೀ ಎಂ.ಆರ್.ಮುಕುಂದ, ಶ್ರೀಮತಿ ವಿಭಾ ಕೃಷ್ಣ ಉಳಿತ್ತಾಯ, ಶ್ರೀ ಚೀಮನಹಳ್ಳ್ ರಮೇಶ್ ಬಾಬು, ಶ್ರೀ ಕಗ್ಗೆರೆ ಪ್ರಕಾಶ್, ಶ್ರೀ ಚಂದ್ರಶೇಖರ್ ಕುಲಗಾಣ, ಶ್ರೀಮತಿ ನಿವೇದಿತಾ ಎಚ್.ವಿಜಯ್, ಡಾ.ಪಾರ್ವತಿ ಜಿ.ಐತಾಳ್ ಹಾಗೂ ಶ್ರೀ ಭಗವಾನ್ ಕೆ.ನಾರಾಯಣ ಅವರುಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
 
ಕಾದಂಬರಿಯನ್ನು ಕುರಿತ ವಿಮರ್ಶೆಯನ್ನು ಪ್ರಕಟಿಸಿದ ಪ್ರಜಾವಾಣಿ, ಕನ್ನಡ ಪ್ರಭ, ವಾರ್ತಾಭಾರತಿ ಹಾಗೂ ಹೊಸ ದಿಗಂತ ಪತ್ರಿಕೆಗಳಿಗೆ, ಕಾದಂಬರಿಯನ್ನು ಪರಿಚಯಿಸಿದ ಅವಧಿ ಅಂತರ್ಜಾಲ ಪತ್ರಿಕೆಗೆ ಹಾಗೂ ಸಹೃದಯ ಪ್ರತಿಕ್ರಿಯೆಗಳನ್ನು ನೀಡಿದ ಓದುಗ ದೇವರುಗಳಿಗೆ ಅನಂತ ಧನ್ಯವಾದಗಳನ್ನು ಹೇಳ ಬಯಸುತ್ತೇನೆ.
 
ಈ ಕೃತಿಯ ಸಂಗ್ರಹ ಸಂಪಾದನೆಯನ್ನು ಮಾಡಿರುವ ಶ್ರೀ ದೀಪು ಶೆಟ್ಟಿ ದೊಡ್ಡಮನೆಯವರಿಗೂ, ಅಂದವಾದ ಮುಖಪುಟವನ್ನು ವಿನ್ಯಾಸ ಮಾಡಿರುವ ಶ್ರೀ ಅರುಣ್ ಕುಮಾರ್ ಜಿ ಅವರಿಗೂ, ಪ್ರಕಟಿಸುತ್ತಿರುವ ಸಾಹಿತ್ಯಲೋಕ ಪಬ್ಲಿಕೇಶನ್ಸ್ ನ ರಘುವೀರ್ ಅವರಿಗೂ, ಅಚ್ಚುಕಟ್ಟಾಗಿ ಮುದ್ರಿಸುತ್ತಿರುವ ಲಕ್ಷ್ಮೀ ಮುದ್ರಣಾಲಯದ ಸಿಬ್ಬಂದಿಗೂ, ಓದಲು ಕೈಗೆ ತೆಗೆದುಕೊಂಡಿರುವ ತಮಗೂ ನನ್ನ ವಿಶೇಷ ನಮನಗಳು.

‍ಲೇಖಕರು Admin

August 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: