ಇಂದು ಅವಧಿಯಲ್ಲಿ...
ಸ್ವ-ಭಾವ ಚಿತ್ರಗಳು…
ಕೆ ವಿ ಸುಬ್ರಹ್ಮಣ್ಯಂ ನಮ್ಮ ಸಂದರ್ಭದ ಅಸಾಮಾನ್ಯ ಭಾವಚಿತ್ರಕಾರರೇ ಅಲ್ಲದೆ ವಿಶಿಷ್ಟ ಸ್ವ - ಭಾವಚಿತ್ರ (self- portraits)ಕಾರರೂ ಆಗಿದ್ದ ಕೆ. ಎನ್. ರಾಮಚಂದ್ರನ್ ಅವರ ನೆನಪಿಗೆ ಈ ಕೆಲವು ಚಿತ್ರಗಳು. ಹೆಬ್ಬಾರ್, ಕಾರಂತರನ್ನೆ ಅಲ್ಲದೆ ನಮ್ಮಲ್ಲಿ ಹಲವರನ್ನು ಅವರದೇ ಆದ ಗ್ರಹಿಕೆಯಿಂದ ರಾಮಚಂದ್ರನ್ ಚಿತ್ರಿಸಿದ್ದಾರೆ....
ವಸಂತ ಪ್ರಕಾಶನದಿಂದ ಮಕ್ಕಳ ಸಾಹಿತ್ಯ ಸುಗ್ಗಿ…
ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಕನ್ನಡ ಪುಸ್ತಕ ಪ್ರಕಾಶನ ಲೋಕದಲ್ಲಿ ವಸಂತ ಪ್ರಕಾಶನವು ಬಹಳ ಮುಖ್ಯವಾದದ್ದು. ಹಲವು ಸದಭಿರುಚಿಯ ಪುಸ್ತಕಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಹಿರಿಯ ಸಾಹಿತಿಗಳ ಬರಹಗಳ ಜೊತೆಗೆ ʼವ್ಯಕ್ತಿ ಚಿತ್ರ ಮಾಲೆʼ, ʼಆರೋಗ್ಯ ಚಿಂತನ ಮಾಲಿಕೆʼಯಂತಹ ಪುಸ್ತಕ ಮಾಲಿಕೆಗಳನ್ನು ಪ್ರಕಟಿಸಿದ ಹೆಮ್ಮೆ ವಸಂತ ಪ್ರಕಾಶನದ್ದು....
ಸದಾಶಿವ್ ಸೊರಟೂರು ಕಥಾ ಅಂಕಣ- ಚಾಟಿಂಗ್ ಚಾಟಿಂಗ್…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ವಾಣಿಜ್ಯ ನಗರಿಯಲ್ಲಿ ಅರಳಿದ ಕಲೆ: ನಮ್ಮ ಜುಗಲ್ ಬಂದಿ
ಗಿರಿಜಾ ಶಾಸ್ತ್ರೀ (ನಾನು ಮತ್ತು ರಘುನಾಥ್ ಇಬ್ಬರೂ ಸೇರಿ ಬರೆದ ಬರಹ)"ನಮ್ಮ ದೇಶದಲ್ಲಿ ಅಂತಹ ನಗರಗಳೆಲ್ಲಿವೆ ನ್ಯೂಯಾರ್ಕ್ ನಂತಹವು?" ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಎನ್ನುವ ರಘುನಾಥ್ ಅವರ ಪಿಎಚ್. ಡಿ ವಿಷಯವನ್ನು ಕೇಳಿದ ಯು.ಆರ್ ಅನಂತಮೂರ್ತಿಯವರು ಸುಮಾರು ಇಪ್ಪತ್ತೈದು ವರುಷಗಳ ಹಿಂದೆ ಹೀಗೆ ನುಡಿದಿದ್ದರು. ಲಾಸ್...
ಮನಸಿನ ತುಂಬೆಲ್ಲ ಮಾಧವಿ ಮಾಧವಿ…
ಡಾ ಲಕ್ಷ್ಮಿ ಶಂಕರ ಜೋಶಿ ಅದರ ಹಾಡು ಬಿಡುಗಡೆಯ ಪಾಡು…ಹಾಡುತ್ತದೆ ಪಂಜರದ ಹಕ್ಕಿ ಭಯಕಂಪಿತ ದನಿಯಲ್ಲಿ.ತಿಳಿಯದ ಲೋಕದ ಬಗೆಗೆ, ಹಂಬಲಿಸುವ ಲೋಕದ ಬಗೆಗೆ.ಕೇಳುತ್ತಿದೆ ಅದರ ದನಿ ದೂರದ ಬೆಟ್ಟಕ್ಕೆ. ಯಾಕೆಂದರೆಅದರ ಹಾಡು ಬಿಡುಗಡೆಯ ಪಾಡು.ಮಾಧವಿ ನಾಟಕದ ಕೊನೆಯ ಮಾತಿದು…ಹೌದು ಕಲಬುರಗಿ ರಂಗಾಯಣದ ಮೂರು ದಿನದ ನಾಟಕೋತ್ಸವದಲ್ಲಿ ನನ್ನನ್ನು...
ಮಾತು ಮುಗಿಯುವ ಹೊತ್ತಿಗೆ ಕಾಫಿಯೂ ಮುಗಿದಿತ್ತು…
ಜೋಗಿ ‘ನನಗೆ ಯಾವ ದೇವರಲ್ಲೂ ನಂಬಿಕೆ ಇಲ್ಲ. ಪವಾಡಗಳಲ್ಲೂ ನಂಬಿಕೆ ಇಲ್ಲ. ದೇವರಿದ್ದಾನೋ ಇಲ್ಲವೋ ನನಗೆ ಬೇಕಾಗಿಲ್ಲ. ನನಗೆ ಆತನ ಆಗತ್ಯವೂ ಇಲ್ಲ.’ ಹಾಗಂತ ಹೇಳಿ ಸುಮ್ಮನೆ ಕೂತೆ. ಅವರೂ ಅರೆಕ್ಷಣ ಸುಮ್ಮನೆ ಕೂತರು. ನಂತರ ನಿಧಾನವಾಗಿ ತಿಳಿಹೇಳುವ ದನಿಯಲ್ಲಿ ‘ಪವಾಡಗಳನ್ನು ನಂಬಬೇಕು ನೀನು. ನಂಬೋಲ್ಲ ಅನ್ನೋ ಧೋರಣೆ ಒಳ್ಳೇದಲ್ಲ....
Latest
Invite
ಮಕ್ಕಳ ಕಥಾಸ್ಪರ್ಧೆಗೆ ಆಹ್ವಾನ
ಕಥೆ ಕಳಿಸುವ ಕೊನೆಯ ದಿನಾಂಕ ೩೦/ಅಕ್ಟೋಬರ್/೨೦೨೦ ಕಥೆ ಕಳುಗಿಸಬೇಕಾದ ಮೇಲ್ ಐಡಿ: chinnarachavani@gamil.com ಸ್ಪರ್ಧೆಯ ಆಯೋಜಕರು ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಲಿಂಗಸಗೂರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಸೂಗುರೇಶ ಹಿರೇಮಠ -9980454200, ಸುರೇಶ ರಾಜಮಾನೆ...
೨೦ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ೨೦ ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ ೨೦೧೯-೨೦ ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ ೧೯ ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈಗ...
ಬಾ ಕವಿತಾ
ಹೆಂಗಸರು ಮುಂಚೂಣಿಯಲ್ಲಿ ಸಾಯುವುದಿಲ್ಲ
ಬಿಲ್ಕಿಸ್ ಕ್ಯೂಜಾ ಮಾಲೆ ಕ್ಯೂಬಾದಲ್ಲಿ 1942 ಹುಟ್ಟಿ, ಅವಳು ಮತ್ತವಳ ಗಂಡ ಕ್ರಾಂತಿಕಾರಿ ಕವಿಗಳಾಗಿದ್ದರಿಂದ ದೇಶಭ್ರಷ್ಟೆಯಾಗಿ ಅಮೆರಿಕಾಗೆ ವಲಸೆ ಬಂದು ಪತ್ರಕರ್ತೆಯಾಗಿ ಕೆಲಸ...
ಗಿರಿಧರ್ ಖಾಸನೀಸ್ ಹೊಸ ಕವಿತೆ: ಅರೆ ಕತ್ತಲೆ ಬಾರಿನಲ್ಲಿ ನಾಲ್ಕು ಮೇಜುಗಳು
ಗಿರಿಧರ್ ಖಾಸನೀಸ್ ** ಟೇಬಲ್ ಎರಡು ಮತ್ತು ಮೂರರಲ್ಲಿ ಕೂತವರು ಬಿಯರ್ ಕುಡಿಯುತ್ತಿದ್ದಾರೆ.ಟೇಬಲ್ ಒಂದಕ್ಕೆ ಬ್ರಾಂಡಿ ಸರಬರಾಜಾಗಿದೆ.ಟೇಬಲ್ ನಾಲ್ಕರಲ್ಲಿ ಕೂತವನು ಮೆನು ಕಾರ್ಡ್...
ಪುಸ್ತಕದ ಪರಿಚಯ
Book Shelf
ಮೇಟಿ ಮಲ್ಲಿಕಾರ್ಜುನ ಓದಿದ ‘ಹಾವಳಿ’
ಹಾವಳಿ: ಭಾಷೆ ಮತ್ತು ವಿನ್ಯಾಸ ಮೇಟಿ ಮಲ್ಲಿಕಾರ್ಜುನ ------- ಭಾಗ -1 ಮುನ್ನೋಟ: ಸಾಹಿತ್ಯದ ಗ್ರಹಿಕೆಯಲ್ಲಿ ಭಾಷೆ ಏಕೆ ಮುಖ್ಯ? ಸಾಹಿತ್ಯ ಪಠ್ಯವನ್ನು ಅರಿಯುವುದರಲ್ಲಿ ನುಡಿಯೂ ಅತ್ಯಂತ ಪ್ರಮುಖ ನೆಲೆಯಾಗಿದೆ. ಪಠ್ಯದ ವಿಭಿನ್ನ ಬಗೆಗಳು ಭಾಷಾ ಶೈಲಿಯ ವಿಭಿನ್ನ ಮಾದರಿ ಇಲ್ಲವೇ ಬಗೆಗಳನ್ನು ಸೃಷ್ಟಿಸುತ್ತವೆ. ಭಾಷಿಕ ಸೃಷ್ಟಿಯ ಇಂತಹ...
ಓದಲೇಬೇಕಾದ ‘ಆಮೋಸ್ ಫಾರ್ಚೂನ್’
ಸಿದ್ಧರಾಮ ಕೂಡ್ಲಿಗಿ ನಾನು ಇದೀಗ ಓದಿ ಮುಗಿಸಿದ ಜೀವನ ಚರಿತ್ರೆ ಎಂದೆನಿಸಿಕೊಳ್ಳುವ ಕಿರು ಕಾದಂಬರಿ 'ಆಮೋಸ್ ಫಾರ್ಚೂನ್' ಕೃತಿ. ಗುಲಾಮಗಿರಿಯನ್ನು ಅನಾವರಣಗೊಳಿಸುವ ಪುಟ್ಟ ಕೃತಿಯಾದರೂ, ಅದರೊಳಗಿನ ಕಪ್ಪು ಜನಾಂಗದ ಬದುಕಿನ ಬವಣೆ ಎದೆಯನ್ನು ಕಲಕಿ ಬಿಡುತ್ತದೆ. ಮೂಲ ಕೃತಿಯನ್ನು ಕನ್ನಡಕ್ಕೆ ತಂದವರು ಜಯಶ್ರೀ ಭಟ್. ಅನುವಾದವೂ ಸುಂದರ,...
ತಮಾಷಾ ; ಜಾನಪದ ನಾಟಕ ಭರಪೂರ ಗಮ್ಮತ್ತು…
ಕಿರಣ ಭಟ್ ನವ್ಮೂರ ಯಕ್ಷಗಾನ ಮರಾಠೀ ರಂಗಭೂಮಿಯ ಹುಟ್ಟಿಗೆ ಪ್ರೇರಣೆಯಯಿತು ಎನ್ನುವದು ಸತ್ಯವಾಗಿದ್ದರೂ ಮರಾಠಿಯ ಜಾನಪದ ರಂಗಭೂಮಿ ಸಶಕ್ತವಾದದ್ದೂ ಪುರಾತನವೂ ಆಗಿದೆ. ಹಾಗೆ ನೋಡಿದರೆ ನಾವು ಮುಂಬೈ ಕರ್ನಾಟಕದವರಾಗಿದ್ದರೂ ಕನ್ನಡದ ಕರಾವಳಿಗೆ ಮರಾಠೀ ಜಾನಪದದ ಪರಿಚಯ ಕಡಿಮೆಯೇ. 'ತಮಾಷಾ' ದ ಬಗ್ಗೆಯಂತೂ ಕೇಳಿದ ಅಡಾ ಪಡಾ ಸುದ್ದಿಗಳೇ...
ಕಾವ್ಯ ಕಡಮೆ ಅವರ ‘ದೂರದೇಶವೆಂಬ ಪಕ್ಕದ ಮನೆ’
ಪ್ರಸನ್ನ ಸಂತೇಕಡೂರು ಇದು ಕಾವ್ಯ ಕಡಮೆ ನಾಗರಕಟ್ಟೆ ಅವರ ಪ್ರಬಂಧ ಸಂಕಲನದ ಹೆಸರು. ನಮಗೆ ತಿಳಿದ ಹಾಗೆ ಅಮೆರಿಕಾ ದೇಶದ ಬಗ್ಗೆ ಗೊರೂರು ರಾಮಸ್ವಾಮಿ ಅಯ್ಯಂಗಾರರು 'ಅಮೆರಿಕಾದಲ್ಲಿ ಗೊರೂರು', ಬಿ.ಜಿ.ಎಲ್. ಸ್ವಾಮಿಯವರು 'ಅಮೆರಿಕಾದಲ್ಲಿ ನಾನು', ಮೂರ್ತಿರಾಯರು 'ಅಪರವಯಸ್ಕನ ಅಮೆರಿಕಯಾತ್ರೆ', ಪ್ರಭುಶಂಕರರ 'ನಾನು ಮತ್ತು ಶಾಂತಿ',...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









