ಫ್ರೆಂಡ್ಸ್ ಕಾಲೊನಿ ಲೇಖನಗಳು
ಮಡಿ ಬಿಟ್ಟು ನಡೆದಾಗಲೇ ನುಡಿ-ಕಿಡಿ ಇಮ್ಮಡಿ.
ಸೂತ್ರಧಾರ ರಾಮಯ್ಯ ಅವಧಿಯಲ್ಲಿನ ನನ್ನ ‘ಪನ್ ‘ ಕಾಲಂಗೆ( ಡಿ. ೧ರ )ಪ್ರತಿಕ್ರಿಯಿಸುತ್ತಾ, ಕನ್ನಡದ ಜೊತೆಗೆ ಇಂಗ್ಲಿಷ್ ಶಬ್ಧಗಳನ್ನು ಬಳಸುವುದನ್ನು ಮಡೆ ಸ್ನಾನಕ್ಕೆ ಹೋಲಿಸಿ, ಇಂಗ್ಲಿಷ್ನ ಎಂಜಲು ಪದಗಳ ಮೇಲೆ ಹೊರಳಾಡುವ ಇಂತಹಾ ರೋಗ ವಾಸಿಯಾಗುವುದು ಯಾವಾಗಲೋ? ಎಂದು ದುಃಖಿಸಿ ಓದುಗರೊಬ್ಬರು […]
ಗಾಂಧೀ ಬಂದ ಕಾದಂಬರಿಯ ಹೊಸ ರೂಪ…
ಎಚ್ ನಾಗವೇಣಿಯವರ ಗಾಂಧೀ ಬಂದ ಕಾದಂಬರಿಯ ಹೊಸ ರೂಪ- ಅಪಾರ ಅವರ ವಿನ್ಯಾಸ …
ಜವಳಿ ಪರವಶ!
ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ [ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) […]
ಬಿ ಸುರೇಶ್:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?
-ಬಿ ಸುರೇಶ್ ೨೪ ನವೆಂಬರ್ ಶಾಸಕರ ಭವನದ ಎರಡನೇ ಸಬಾಂಗಣದಲ್ಲಿ ‘ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?’ ಎಂಬ ಪ್ರಶ್ನೆಯೊಂದಿಗೆ ಸುದೀರ್ಘ ಸಭೆ ನಡೆಯಿತು. ಜಿಕೆ ಗೋವಿಂದರಾವ್ ಅವರ ಪ್ರಸ್ತಾವನೆಯೊಂದಿಗೆ ಆರಂಭವಾದ ಈ ಸಬೆಯಲ್ಲಿ ಎಸ್.ಜಿ.ಸಿದ್ಧರಾಮಯ್ಯ ತರಹದ ಹಿರಿಯ ಚಿಂತಕರಲ್ಲದೆ ನಿರಂಗನಾರಾಧ್ಯ ಅಂತಹ ಶಿಕ್ಷಣ […]
ಮೀಡಿಯಾ ಡೈರಿ ಬರೆದ ನಲ್ಮೆಯ ಹುಡುಗ..
ಕಂಡಿದ್ದುಕಾಡಿದ್ದು- –ನಿರಂಜನ ವಾನಳ್ಳಿ ಕಿಂಗ್‌ಫಿಷರ್ ಮತ್ತು ಜೆಟ್ ಏರ್‌ವೆàಸ್ ಮಾಲಕರು, ಖಾಸಗಿ ವಿಮಾನಯಾನ ಸಂಕಷ್ಟದಲ್ಲಿದೆ. ಪೆಟ್ರೋಲ್ ಹಾಕಿಸಲು ಕಾಸಿಲ್ಲ. ಸಾಲ ತಂದರೆ ಮಾತ್ರ ವಿಮಾನ ಓಡಿಸೋಕೆ ಸಾಧ್ಯ. ಕೇಂದ್ರ ಸರ್ಕಾರ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಪ್ಯಾಕೇಜ್ ಕೊಡಬೇಕೆಂದು ಧಮಕಿ […]
ಅಪ್ಪನ ನೆನಪು..
-‘ಜಗದಗಲ’ ದಿಂದ ಈ ದಿನ ನನ್ನ ಜೀವನದಿಗಳ ಸಾವಿನ ಕಥನದ ಕೊನೆಯ ಅಧ್ಯಾಯದ ಕೊನೆಯ ಸಾಲುಗಳನ್ನು ಬರೆಯುವಾಗ ನನ್ನಪ್ಪ ನೆನಪಾಗಿಬಿಟ್ಟ ಆತನ ಬಗ್ಗೆ ಕೃತಿಯಲ್ಲಿ ದಾಖಲಿಸಿದ ಕೆಲವು ಮಾತುಗಳಿವು. ಇದು ಕಥೆಯಲ್ಲ, ಅವು 1963-64ರ ದಿನಗಳು. ನನಗಾಗ ಎಂಟು ವರುಷ. ನನ್ನೂರಿಗೆ […]
‘ಚಿಣ್ಣರ ಬಳಗ’ ಭದ್ರಾವತಿ ಆಕಾಶವಾಣಿಯಲ್ಲಿ..
ಆಕಾಶವಾಣಿಯಲ್ಲಿ ಕೌಸಲ್ಯ ರಘುರಾಂ ಶಿವಮೊಗ್ಗ : ಭದ್ರಾವತಿ ಆಕಾಶವಾಣಿ ಕೇಂದ್ರ ನ. ೨೦ ರ ಭಾನುವಾರ ಬೆಳಗ್ಗೆ ೮.೩೫ ರಿಂದ ೯ ರ ವರೆಗೆ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ವಿಶೇಷ ‘ಚಿಣ್ಣರ ಬಳಗ ’ ಕಾರ‍್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಶಿವಮೊಗ್ಗದ ಬಾಲ […]
ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು. ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ […]
ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ..
ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಹಣ್ಣು ಬಂದಿದೆ, ಕೊಳ್ಳಿರೋ: ಏಕವ್ಯಕ್ತಿ ಯಕ್ಷಗಾನ ಪ್ರಯೋಗಕ್ಕೀಗ ಹತ್ತು ಮೀರಿದ ಹರಯ, ಸಾವಿರಕ್ಕೂ ಮಿಕ್ಕ ಪ್ರದರ್ಶನಗಳ ದೃಢತೆ ಬಂದಿವೆ. ಸಂಶೋಧನೆ, ಪರಿಕಲ್ಪನೆ ಮತ್ತು ಸಾಹಿತ್ಯದ ನೆಲೆಯಲ್ಲಿ ಶತಾವಧಾನಿ ಡಾ| ರಾ. ಗಣೇಶರದು ಬತ್ತದ […]
ಹಸಿರಿಗೆ ಉಸಿರಾದವರು…
-ಡಾ. ಎನ್. ಜಗದೀಶ್ ಕೊಪ್ಪ. ಭಾರತವೂ ಸೇರಿದಂತೆ ವರ್ತಮಾನ ಜಗತ್ತಿನ ಕೃಷಿಲೋಕ ಸಂಕಟದ ಸ್ಥಿತಿಯಲ್ಲಿರುವಾಗ ದಿಕ್ಕೆಟ್ಟ ಅಮಾಯಕ ರೈತರಿಗೆ ದಾರಿ ದೀಪವಾಗಿ ಕೆಲಸ ಮಾಡುತ್ತಿರುವ ಧಾರವಾಡದ ಕೃಷಿ ಮಾಧ್ಯಮ ಕೇಂದ್ರಕ್ಕೆ ಈಗ ದಶಕ ಕಳೆದು ಹನ್ನೋಂದರ ಪ್ರಾಯ.ಇಂತಹ ಒಂದು ಆದರ್ಶ ಸಂಸ್ಥೆಯನ್ನು […]
ಸಂತಸ ಎಲ್ಲಿದೆ..?
-ವೀಣಾ ಭಟ್. ನಿಜವಾದ ಸಂತಸ ಎಲ್ಲಿದೆ..? ಈ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟದ ಕೆಲಸ .ಸಂತಸವೆಂದರೆ ಬೇರೇನೂ ಅಲ್ಲ, ಅದೊಂದು ಮನಸ್ಥಿತಿ ಎಂಬ ಮಾತಿದೆ . ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದು ,ಬೇರೆಯವರ ಸಂತೋಷಕ್ಕೆ ಕಾರಣರಾಗುವುದು ನಿಜವಾದ ಸಂತಸ ಎಂಬುದು ತುಂಬಾ […]
’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೇವಲ ನಾಲ್ಕು ಗಂಟೆಯ ರಚನೆ!
– ಡಾ ಬಿ.ಆರ್. ಸತ್ಯನಾರಾಯಣ ನಂದೊಂದ್ಮಾತು ನಿಂದ.. ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ‍್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯೆ ಒಂದು ದಿನ, ಊರಿಗೆ ಹೋಗಿ […]
ಸಾವು ಹಠಾತ್ ತಬ್ಬುವ ಮುನ್ನ……
-ಸಂತೋಷ್ ಅನಂತಪುರ ಭೂತದ ಹಿನ್ನಲೆಯಿಂದ, ವರ್ತಮಾನದ ಇರುವಿಕೆಯಿಂದ ಭವಿಷ್ಯದ ಕಾಯುವಿಕೆಯೊಂದಿಗೆ ವ್ಯಕ್ತಿ ನಿರಂತರ ಬೆಳೆಯುತ್ತಲೇ ಇರುತ್ತಾನೆ. ಬೆಳವಣಿಗೆ ಸಹಜ ಪ್ರಕ್ರಿಯೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಎಂಬೆರಡು ವಿಧಿಗಳು ಸಂತುಲಿತವಾಗಿದ್ದಲ್ಲಿ ಮಾತ್ರ ಪಕ್ವತೆ ಮನೆ ಮಾಡಿಕೊಂಡಿರಲು ಸಾಧ್ಯ. ಬದಲಾವಣೆ ಬದುಕಿನ ಅವಿಭಾಜ್ಯ ಕ್ರೀಯೆ. ಬದಲಾಗದ ಮನುಷ್ಯ ಆತ ಮನುಷ್ಯನೇ […]
ದಿಕ್ಕು ಮತ್ತು ಇತರ ಕಥೆಗಳು..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ಮುಕ್ತಿ ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ. ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು. ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ. ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ ‘‘ಈ […]
‘ಸುಧಾರಣೀಕರಣ’ ಮತ್ತು ‘ಏಕೀಕರಣ ‘- ನೆನಪುಗಳ ಎರಡು ದಿನಗಳು..
ಇದು ರಾಜ್ಯೋತ್ಸವದ ದಿನಾಚರಣೆ ಸಂದರ್ಭದಲ್ಲಿ ಬಿ ಎ ವಿವೇಕ ರೈ ಅವರು ಬರೆದ ಲೇಖನ. ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಅಕ್ಟೋಬರ್ ೩೧ ,ಜರ್ಮನಿಯಲ್ಲಿ ’ಸುಧಾರಣೀಕರಣದ ದಿನ’ (ರೆಫಾರ್ಮೆಶನ್ ಡೇ ).ಜರ್ಮನಿಯ ವಿತ್ತೆನ್ ಬೆರ್ಗ್ ನಲ್ಲಿ ಮಾರ್ಟಿನ್ ಲೂಥೆರ್ ೧೫೧೭ರಲ್ಲಿ […]
ಅಂಗೈಯಗಲ ಗೋರಂಟಿ..
-ಚರಿತಾ ಗೋರಂಟಿ ಯಿಂದ.. ನೋಡನೋಡುತ್ತ ಅಷ್ಟೆತ್ತರ ಬೆಳೆದು ತೊನೆಯುವ ಗೋರಂಟಿ ಗಿಡ. ಈಷ್ಟುದ್ದ ಕೈಚಾಚಿಯೇ ಪಡೆಯಬೇಕು ಒಂದೊಂದೆ ಎಲೆಗೆಳನ್ನ. ಅದರ ಧಿಮಾಕು ನಮಗೆ ತಿಳಿಯೋದಾದ್ರೂ ಹೇಗೆ ಮತ್ತೆ? ಎಲ್ಲಿ ನೋವಾಗುತ್ತೋ ಅಂತ ಒಂದೊಂದೆ ಎಲೆಗಳನ್ನ ನಿಧಾನ ಬಿಡಿಸಿಕೊಳ್ಳಬೇಕು ಅದರ ತೊಟ್ಟಿಂದ. ಬೊಗಸೆ […]
Confessions Of A Wordless World
Samvartha ‘Sahil’ Crazy Mind’s Eye It was in the year 2006 that this thought first crossed my mind. It was a moment of shame, for me, after a moment of […]
‘ಎಂಗೆಯುಂ..ಎಂಪ್ಪೋದಮ್..’ ಕುಮಾರ ರೈತ ಅವರ ವಿಮರ್ಶೆ
-ಕುಮಾರ ರೈತ ವರದಿಗಾರ ಈ ಚಿತ್ರ ಆರಂಭಗೊಳ್ಳುವುದೇ ಅಂತ್ಯದಿಂದ. ನಂತರ ಪಾತ್ರಗಳ ವಿವರದ ಸುರುಳಿ ಬಿಚ್ಚಿಕೊಳ್ಳುತ್ತಾ ಭೂತ-ವರ್ತಮಾನಗಳ ನಡುವೆ ಚಲಿಸುತ್ತದೆ. ಈ ಪ್ರಕ್ರಿಯೆಗಳನ್ನೆಲ್ಲ ಪ್ರತ್ಯಕ್ಷದರ್ಶಿಯಾಗಿ ನೋಡಿದ ಗಾಢ ಅನುಭವ ಆಗುತ್ತದೆ. ಇದು ಮನವನ್ನು ಕಲಕಿ….ವಿಷಾದದ ಭಾವ ಉಳಿಸುತ್ತದೆ. ಹೊಸತನದ ನಿರೂಪಣೆಯ ಈ ಸಿನಿಮಾ ತಮಿಳಿನ ‘ಎಂಗೆಯುಂ..ಎಂಪ್ಪೋದಮ್..ಅಂದರೆ ಎಲ್ಲಿಯೂ..ಯಾವಾಗಲೂ… ತಾನು ಪ್ರೀತಿಸಿದವನ ಪಡೆಯಲು ತಿರುಚ್ಚಿಯಿಂದ ಚೆನ್ನೈಗೆ ಬಸ್ಸಿನಲಿ ಸಾಗುವ ಯುವತಿ ಅಮುದ, ಇದೇ ಭಾವದಿಂದ ಚೆನ್ನೈಯಿಂದ ತಿರುಚ್ಚಿಗೆ ಸಾಗುವ ಯುವಕ ಗೌತಮ್. ಈತ ಕುಳಿತ ಬಸ್ಸನ್ನೇ ಮತ್ತೊಂದು ಜೋಡಿ ಏರುತ್ತದೆ. ತಾನು ತೀವ್ರವಾಗಿ ಪ್ರೀತಿಸಿದ ಮಣಿ ಮೇಘಮಾಲೆಯನ್ನು ತನ್ನ ಕುಟುಂಬದವರಿಗೆ ಪರಿಚಯಿಸುವುದಕ್ಕಾಗಿ ಕರೆದುಕೊಂಡು ಹೋಗುತ್ತಿರುವ ಕದಿರೇಶ. ದುಬೈನಲ್ಲಿದ್ದು ಐದು ವರ್ಷದಿಂದ ನೋಡಿರದ ಪುಟ್ಟ ಮಗಳನ್ನು ಕಾಣುವ ತವಕದಿಂದ ಊರಿಗೆ ಮರಳುತ್ತಿರುವ ವ್ಯಕ್ತಿ. ತವರಿಗೆ ತೆರಳುತ್ತಿರುವ ಪತ್ನಿಯನ್ನು ಅಗಲಿರಲಾರದೇ ತಾನೂ ಒಂದಷ್ಟು ದೂರ ಜೊತೆಗೆ ಬರುತ್ತೇನೆಂದು ಸಾಗುವ ಪತಿ. ಬಸ್ಸಿನಲಿ ಪಯಣಿಸುತ್ತಿರುವಾಗಲೇ ಪರಸ್ಪರ ಪ್ರೇಮದ ಸೆಳೆತಕ್ಕೆ ಸಿಲುಕುವ ಜೋಡಿ. ಹೀಗೆ ವಿವಿಧ ಪಾತ್ರಗಳ ವಿವರಗಳನ್ನು ಹೊತ್ತ ಬಸ್ಸುಗಳು ಗಮ್ಯದೆಡೆಗೆ ವೇಗದಿಂದ ಚಲಿಸುತ್ತವೆ. ಉದ್ಯೋಗದ ಸಂದರ್ಶನ ಮತ್ತು ಅಕ್ಕನ ಮನೆಗೆ ತೆರಳುವ ಉದ್ದೇಶದಿಂದ ಅಪರಿಚಿತ ಚೆನ್ನೈಗೆ ಬಂದಿಳಿಯುವ ಅಮುದ ಇದಕ್ಕಾಗಿ ಎಂದೂ ನೋಡಿರದ ಯುವಕನ ನೆರವು ಕೇಳಬೇಕಾಗುತ್ತದೆ. ಇದರಿಂದ ಇಬ್ಬರು ಮುಂಜಾನೆಯಿಂದ ಸಂಜೆವರೆಗೂ ಒಟ್ಟಿಗೆ ಸಾಗಬೇಕಾಗುತ್ತದೆ. ಈ ಅವಧಿಯಲ್ಲಿ ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವಗಳು ಅನಾವರಣಗೊಳ್ಳುತ್ತಾ ಸಾಗುತ್ತದೆ. ಅಕ್ಕನ ಮನೆ ತಲುಪುವುದರೊಳಗೆ ಅಮುದಾಳಿಗೆ ಗೌತಮ್ಮೇಲೆ ಪ್ರೇಮ ಅಂಕುರವಾಗುತ್ತದೆ. ಆದರೆ ಇದ್ಯಾವುದರ ಸೂಚನೆಯೂ ಇಲ್ಲದ ಗೌತಮ್ ನಿರ್ಭಾವುಕವಾಗಿ ತೆರಳುತ್ತಾನೆ. ಆದರೆ ಅಮುದ ದಿನದಿಂದ ದಿನಕ್ಕೆ ಭಾವುಕಳಾಗತೊಡಗುತ್ತಾಳೆ. ಬಂದ ಸಂಬಂಧಗಳ್ಯಾವುದು […]
ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ ..
-ಡಾ.ಅರುಣ್ ಜೋಳದ ಕೂಡ್ಲಿಗಿ ಕನ್ನಡ ಜಾನಪದ ದಿಂದ (ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ) -ಸಿದ್ಧರಾಮ ಹಿರೇಮಠ. ಕೂಡ್ಲಿಗಿ ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ […]
ಗುಬ್ಬಚ್ಚಿ ಸತೀಶ್ ಕಥೆ- ಟ್ಯೂಷನ್ ಫೀಸು
–ಗುಬ್ಬಚ್ಚಿ ಸತೀಶ್ ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು […]





















