ಸಾವು ಹಠಾತ್ ತಬ್ಬುವ ಮುನ್ನ……

-ಸಂತೋಷ್ ಅನಂತಪುರ

ಭೂತದ ಹಿನ್ನಲೆಯಿಂದ, ವರ್ತಮಾನದ ಇರುವಿಕೆಯಿಂದ ಭವಿಷ್ಯದ ಕಾಯುವಿಕೆಯೊಂದಿಗೆ ವ್ಯಕ್ತಿ ನಿರಂತರ ಬೆಳೆಯುತ್ತಲೇ ಇರುತ್ತಾನೆ. ಬೆಳವಣಿಗೆ ಸಹಜ ಪ್ರಕ್ರಿಯೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಎಂಬೆರಡು ವಿಧಿಗಳು ಸಂತುಲಿತವಾಗಿದ್ದಲ್ಲಿ ಮಾತ್ರ ಪಕ್ವತೆ ಮನೆ ಮಾಡಿಕೊಂಡಿರಲು ಸಾಧ್ಯ. ಬದಲಾವಣೆ ಬದುಕಿನ ಅವಿಭಾಜ್ಯ ಕ್ರೀಯೆ. ಬದಲಾಗದ ಮನುಷ್ಯ ಆತ ಮನುಷ್ಯನೇ ಅಲ್ಲ. ಬದಲಾವಣೆ ಅನಿವಾರ್ಯ. ಬದಲಾಗುವಿಕೆಯ ಹಿಮ್ಮುಖತನ ಹಾಗೂ ಮೇಲ್ಮುಖತನವನ್ನು ಅವಲಂಬಿಸಿಕೊಂಡು ವ್ಯಕ್ತಿಯಲ್ಲಿ ಗರಿಕೆದರಿದ ಪಕ್ವತೆಯು ಹರಿಯುತ್ತದೆ. ಭೂತ, ವರ್ತಮಾನ, ಭವಿಷ್ಯತ್ತಿನ ಸಮ್ಮೇಳನವನ್ನು ನಾವು ‘ ಕಾಲ ‘ ಎನ್ನುತ್ತೇವೆ. ನಿರ್ದಿಷ್ಟ ಪರಿಧಿಯೊಳಗೇ ಘಟಿಸಿದ ಘಟನಾವಳಿಗಳನ್ನು ಗುರುತಿಸಿಕೊಂಡು ನಾವು ಕಾಲದ ನಿರ್ಣಯವನ್ನು ಮಾಡುತ್ತೇವೆ.

ವ್ಯಕಿಯೊಬ್ಬನನ್ನು ಆತನ ಹೆಸರಿಗಿಂತಲೂ ಹೆಚ್ಚು ಆತನ ವ್ಯಕ್ತಿತ್ವವೇ ಗುರುತಿಸುವಂತೆ ಮಾಡುತ್ತದೆ. ಈ ವ್ಯಕ್ತಿತ್ವ ಕಾಣಸಿಗುವುದು, ವ್ಯಕ್ತಿಯ ಪಕ್ವತೆ, ವೈಚಾರಿಕತೆ, ದಾರ್ಶನಿಕತೆಗಳಿಂದ. ಇವು ಆತನಿಗೆ ಸದಾ ಬೆಂಗಾವಲಿನ ಜೊತೆಗೆ ಆತನ ಇರುವಿಕೆಯ ಪ್ರಭಾವಳಿಯಯನ್ನು ಸೃಷ್ಟಿಸುತ್ತದೆ. ವ್ಯಕ್ತಿಯ ಇರುವಿಕೆಯು ಇನ್ನೋರ್ವನ ಇರುವಿಕೆಗೆ ಧಕ್ಕೆಯಾದಾಗ ಹಲವು ಋಣಾತ್ಮಕ ಸಂಕೇತಗಳ ಹುಟ್ತಿಗೆ ಕಾರಣವಾಗುತ್ತವೆ. ವ್ಯಕ್ತಿ-ವ್ಯಕ್ತಿಯೊಳಗಿನ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣವೇ ಇರುವಿಕೆಯ ವಿಚಾರ. ಸಂಬಂಧದ ತೀವ್ರತೆ ಅಡಗಿರುವುದು ಕೊಡುಕೊಳ್ಳುವಿಕೆಯ ಮುಖೇನ. ಸಂಬಂಧ ಬೆಳೆಯಬೇಕಿದ್ದರೆ ಈ ವ್ಯವಹಾರ ತೀವ್ರಗತಿಯಲ್ಲಿ ತೊಡಗಬೇಕು. ಆದರೆ ಇಂದು ನಾವು ಕಾಣುವ ದ್ವಂದ್ವಯುಕ್ತ ಸಮಾಜದಲ್ಲಿ ಆರೋಗ್ಯವಂತ ವ್ಯವಹಾರ ಕಾಣಸಿಗುವುದು ಕಷ್ಟ. ಕಂಡರೂ ಅದು ಕ್ಷಣಿಕವೋ, ದಿಖಾವಗಳೋ ಆಗಿರುತ್ತವೆ. ವ್ಯಕ್ತಿ ವ್ಯಕ್ತಿಯೊಡನೆ ಬೆರೆಯುವ ಮೊದಲು ಪೂರ್ವಾಗ್ರಹ ಚಿಂತನೆಗಳತ್ತನುಗ್ಗುತ್ತಾನೆ. ವ್ಯಕ್ತಿಯ ಕುರಿತಂತೆ ಆತ ಹಾಗೆ, ಹೀಗೆ ಎಂದು ವ್ಯವಹರಿಸುವ ಮೊದಲೇ ತಾನೇ ಷರಾ ಬರೆದು ನಿರ್ಣಯಕ್ಕೆ ಬರುವುದು ಎಷ್ಟಕ್ಕೂ ಸರಿ ಎಂದೆಣಿಸುವುದಿಲ್ಲ. ವ್ಯಕ್ತಿಯೊರ್ವನ ಬಗ್ಗೆ ನಮ್ಮ ಮಸ್ತಿಶ್ಕದಲ್ಲಿ ಮೊದಲೇ ದಾಖಲಾಗಿರುವ ವಿಚಾರಗಳು ಕೇವಲ ಕಾಲ್ಪನಿಕ. ನಾವು ಅದನ್ನು ‘ ಮಾದರಿ ‘ ಮಾತ್ರ ಎಂದು ತಿಳಿದುಕೊಳ್ಳದಿರುವುದು ದೊಡ್ಡ ದುರಂತ ! ಕಲ್ಪನೆಗಳಿಗೇನು ಖರ್ಚು ಮಾಡಬೇಕೆ ? ತೆರಿಗೆ ಪಾವತಿಸಬೇಕೆ ?ಸಂಬಂಧಕುದುರಬೇಕಿದ್ದರೆ, ಬೆಳೆಯಬೇಕಿದ್ದರೆ ಸ್ವಂತ ಅನುಭವ ಮತ್ತು ನಂತರದ ಬೆಳವಣಿಗೆಗಳು ಮುಖ್ಯ. ವ್ಯಕ್ತಿಯೊಡನೆ ಬೆರೆತಾಗಲೇ, ಬೆರೆತು ವ್ಯವಹರಿಸಿದಾಗಲೇ ಸ್ವಂತ ಅನುಭವ ಹುಟ್ಟಲು, ಸಂಬಂಧ ಕಟ್ಟಲು ಸಾಧ್ಯ. ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ವ್ಯವಹರಿಸಬೇಕು. ಮೆದುಳಿನಲ್ಲಿ ಮೊದಲೇ ದಾಖಲಾಗಿರುವುದನ್ನು ಬದಿಗಿರಿಸಿ ಹೊಸ ಚಿಂತನೆಗಳೊಂದಿಗೆ ಬೇರೆಯಬೇಕು. ಮುಖ್ಯವಾಗಿ ನಮ್ಮನ್ನು ನಾವು ನಂಬಬೇಕು. ಕ್ರಿಯೆ ಇಲ್ಲದೆ ಹುಟ್ಟಿಕೊಳ್ಳುವ ಚಿಂತನೆಗಳು ಸಂಬಂಧದ ಬಗೆಗಿನ ಪೂರ್ವಾಗ್ರಹ ಚಿಂತನೆಗೆ ಗ್ರಾಸವೊದಗಿಸುತ್ತದೆ.

ಸಂತೋಷ ಎನ್ನುವುದು ಕೊಡುವವರ ಮತ್ತು ಕೊಳ್ಳುವವರ ನಡುವಿನ ಸಂಬಂಧ. ಬದುಕಲ್ಲಿ ಸಂಬಂಧದ ಕೊಂಡಿಗಳು ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತವೆ. ಸಂಬಂಧದ ತೀವ್ರತೆ ಅಡಗಿರುವುದು ಕೊಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ. ಈ ಕೊಡುಕೊಳ್ಳುವಿಕೆಯ ಮೇಲೆ ಸಂಬಂಧದ ಅಳಿವು-ಉಳಿವು ನಿರ್ಧರಿಸಲ್ಪಡುವುದು. ಸಂಬಂಧ ಕುದುರಿ ಬೆಳೆಯಬೇಕಿದ್ದರೆ ಅದಕ್ಕೆ ಅದರದ್ದೇ ಆದ ನೀತಿ ನಿಯಮಾವಳಿಗಳಿವೆ. ಸಂಬಂಧ ಹುಟ್ಟುವುದು ಜೊತೆಗೆ ಸಾಯುವುದು, ಈ ಎರಡೂ ಕ್ರಿಯೆ ಜರಗುವುದು ನಮ್ಮ ಮಸ್ತಿಶ್ಕದಲ್ಲಿ. ಸಂಬಂಧದ ಬೆಳವಣಿಗೆಗೆ ನಮ್ಮ ಮಸ್ಥಿಶ್ಕದಲ್ಲಿ ಕುದುರುವ ಯೋಚನಾ ಲಹರಿಗಳೇ ಪ್ರಮುಖ ಕಾರಣ.ಇಂದು ಪ್ರತಿಯೊಂದು ಸಂಬಂಧಗಳು ಅನಿವಾರ್ಯ ಹಾಗೂ ಅಷ್ಟೇ ಮುಖ್ಯ ಕೂಡ. ಪ್ರತಿಯೊಬ್ಬರೂ ತಮ್ಮ ಮನಸ್ಸಲ್ಲಿ ಹೊಸ ಸಂಕ್ರಮಣ ಘಟ್ಟಕ್ಕೆ ಸಿದ್ಧರಾಗಬೇಕು. ಜೊತೆಗೆ ನಮಗೆ ಬಡಿದಿರುವ ಪ್ರಾಪಂಚಿಕ ಮೌಢ್ಯವನ್ನು ಸರಿಸಲೇಬೇಕು. ಇಂದಿನ ಸತ್ಯ ನಾಳೆಗೆ ಅಸತ್ಯವಾಗುವ ಈ ದಿನಗಳಲ್ಲಿ ನಾವು ಮುಖ್ಯವಾಗಿ ಒಬ್ಬರನ್ನೊಬ್ಬರು ನಂಬಬೇಕು, ಬೆರೆಯಬೇಕು ಸಂಬಂಧಗಳು ಹರಿಯಬೇಕು ಹರಿಹರರ ಪಾದದವರೆಗೆ.

ಒಬ್ಬನನ್ನು ಸುಖಿಯನ್ನಾಗಲಿ ದು:ಖಿಯನ್ನಾಗಲಿ ಮಾಡುವುದು ಪರಿಸರವೂ ಅಲ್ಲ ಪರಿಸ್ಥಿತಿಯೂ ಅಲ್ಲ. ಆತನ ಮನಸ್ಸೇ ಎಲ್ಲಾ ಸುಖ-ದು:ಖಗಳಿಗೆ ಮೂಲ ಕಾರಣ. ಇದು ನಿಜ. ಆದರೆ ಕೆಲವೊಮ್ಮೆ ನಾವು ಪರಿಸ್ಥಿತಿಯ ಏಕಸ್ವಾಮ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಮ್ಮ ಬದುಕಿನ ಸುತ್ತ ಮುತ್ತ ನಮ್ಮ ಇಚ್ಛೆಯೇ ಇಲ್ಲದೆ ಹುಟ್ಟಿಕೊಳ್ಳುವ, ಬೆಳೆಯುವ ಘಟನೆಗಳನ್ನು ಅವಾಗಿಯೇ ಸಾಯಲು ಬಿಡುವುದು ಸೂಕ್ತ. ಕಾರಣ ನಮ್ಮಿಂದ ಅಸಾಧ್ಯವಾದ ಕ್ರಿಯೆಯ ನಿಯಂತ್ರಣವನ್ನು ಸಾಧಿಸುವ ಪ್ರಯತ್ನ ಖಂಡಿತಾ ವ್ಯರ್ಥ. ಶ್ರೇಷ್ಟ ದಾರ್ಶನಿಕ ಖಲೀಲ್ ಗಿಬ್ರಾನ್ ಹೇಳುವಂತೆ, “ಮರಣವೆಂದರೆ ನಿಶ್ಶ್ಯಬ್ಧವಾದ ನದಿಯಿಂದ ಒಂದು ಲೋಟ ನೀರನ್ನು ತೆಗೆದುಕೊಂಡು ಕುಡಿದಂತೆ ! ಹುಟ್ಟುತ್ತಿದ್ದಂತೆಯೇ ಸಾವೂ ಸ್ನೇಹದಂತೆ ಹಿಂದೆಯೇ ಬರುತ್ತದೆ. ಒಂದು ಕಡೆ ನೀನು ಆರಾಮವಾಗಿ ಕಾಲ ಕಳೆಯುತ್ತಿದ್ದಂತೆ ಪಕ್ಕದಲ್ಲೇ ಕಾಯುತ್ತಿರುವ ಸಾವಿಗೆ ದು:ಖಿಸುವುದೇಕೆ ? ” ಇಂದು ನಮ್ಮಲ್ಲಿ ಉದ್ಭವಿಸುವ ಎಲ್ಲಾ ಸಮಸ್ಯೆಯ ಮೂಲ ಅಡಗಿರುವುದು ಇಲ್ಲಿ. ಹೇಗೆಂದರೆ, ಇಂದು ನಮ್ಮಲ್ಲಿ ಈ ಪ್ರಜ್ಞೆಯ ಕೊರತೆ ಇದೆ. ಇರುವ ಅವಧಿಗೆ ಅರ್ಥಕೊಡಬೇಕು, ಹಸಿರಾಗಿಸಬೇಕು, ಸುಂದರಗೊಳಿಸಬೇಕು ಎಂಬ ಚಿಂತನೆಯತ್ತ ನಾವು ಯಾಕೆ ಸಾಗುತ್ತಿಲ್ಲ ? ಈ ನಿಟ್ಟಿನಲ್ಲಿ ನಾವೆಲ್ಲರೂ ಬಹಳಷ್ಟು ಚಿಂತಿಸಬೇಕಾದ ಅವಶ್ಯಕತೆಯಿದೆ.

ಸಾವು ಹಠಾತ್ ತಬ್ಬುವ ಮುನ್ನ, ನಾವೆಲ್ಲರೂ ಮಾಡಲೇಬೇಕಾದ ಅಗತ್ಯದ ಕೆಲಸಗಳಿವೆ. ಪ್ರೀತಿ, ತ್ಯಾಗ,ಪ್ರೇಮ,ವಿಶ್ವಾಸಗಳಿಗೆ ಇಂದು ಯಾವ ಬೆಲೆಯೂ ಇಲ್ಲದಾಗಿದೆ. ಯಾಕೆಂದರೆ ಮಾನವನ ಸಂಬಂಧಗಳು ಮನಸ್ಸಿನಂತೆ ಚಂಚಲ. ಬದಲಾಗುತ್ತಲೇ ಇರುತ್ತದೆ. ಆದ್ದರಿಂದ ನಾವೂ ಅಷ್ಟೆ. ಈ ಹೊತ್ತು ಇದ್ದೇವೆ, ನಾಳೆ ಹೇಗೋ ? ಏನೋ ? ಅದಕ್ಕೆ ಇವತ್ತೇ ಈಗಲೇ, ಈ ಕ್ಷಣ ನಮ್ಮ ಪ್ರೀತಿ ಪಾತ್ರರನ್ನು ಒಮ್ಮೆ ಪ್ರೀತಿಯಿಂದ ತಬ್ಬಿಕೊಂಡು, ಮೃದುವಾಗಿ ಮೈ,ತಲೆ ನೇವರಿಸಿ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಸುತ್ತಿರುವುದಾಗಿ ಹೇಳಬೇಕು. ಯಾಕೆ ಮುಜುಗರ ? ಹಿಂಜರಿಕೆ ? ಪ್ರೀತಿಯನ್ನು ಹೃದಯದಲ್ಲಿ ಮುಚ್ಚಿಡಲು ಅಸಾಧ್ಯ. ಅದು ಅಭಿವ್ಯಕ್ತಿಗೊಳ್ಳಲೇಬೇಕು. ಪ್ರಕಾರಗಳು ಭಿನ್ನವಿರಬಹುದು ಆದರೆ ಗುರಿ ಮಾತ್ರ ಒಂದೇ ತಾನೆ ! ಪ್ರೀತಿ-ಸಂತೋಷವನ್ನು ಹಂಚಿಕೊಳ್ಳಲಾರದಾತ, ಸೂಕ್ಷ್ಮತೆ ಇಲ್ಲದಾತ ಬಹುಶ: ಯಂತ್ರವಾಗಿರಲು ಮಾತ್ರ ಸೂಕ್ತ . ಮನುಷ್ಯನೆಂದಾದ ಮೇಲೆ ಭಾವನೆಗಳು ಆತನಲ್ಲಿ ಸ್ಫುರಿಸಲೇಬೇಕು. ಬದುಕಲ್ಲಿ ಹಲವು ಘಟ್ಟಗಳು ಆತನ ಭಾವನೆಗಳಿಗೆ ವೇದಿಕೆಯಾಗುತ್ತವೆ. ಅಲ್ಲದೆ, ಈ ಪ್ರೀತಿ ಎಂಬುದು ಹೃದಯವೆಂಬ ಹಾಲ್ಗಡಲನ್ನು ಸುರಾಸುರ ಶಕ್ತಿಗಳು ಮಥಿಸಿದಾಗ ವಿವೇಕದ ಕಡೆಗೋಲಿನಿಂದ ಕಡೆದಾಗ ಉದ್ಭವಿಸುವ ಅಮೂಲ್ಯ ಅಮೃತ. ಹೀಗಿರುವಾಗ, ನಮ್ಮ ನಿಮ್ಮ ಪ್ರೇಮ, ವಾತ್ಸಲ್ಯಗಳು ಸಣ್ಣ ಪುಟ್ಟ ಕ್ರಿಯೆಗಳಲ್ಲಿ ವ್ಯಕ್ತವಾಗಲಿ. ಒಂದು ಸಣ್ಣ ಮುಗುಳ್ನಗು, ಒಂದೆರಡು ಒಳ್ಳೆ ಮಾತು, ಒಂದಿಷ್ಟು ಬೆಚ್ಚಗಿನ ಮೌನ, ಕಣ್ಣನೋಟ, ಮೃದು ಮೈಯ ಪ್ರೀಯ ಸ್ಪರ್ಶ,ಒಂದಿಷ್ಟು ಸಂತಸ, ಇಷ್ಟೇ ಸಾಕು. ಯಾವುದೇ ವಸ್ತುವು ಬಳಸಿದಂತೆಲ್ಲಾ ಕಡಿಮೆಯಾಗುತ್ತದೆ ಎಂಬುದು ನಮಗೆಲ್ಲಾ ತಿಳಿದ ವಿಚಾರ. ಆದರೆ ಖರ್ಚು ಮಾಡಿದಂತೆಲ್ಲಾ ಹೆಚ್ಚಾಗಿ ನಮ್ಮ ಬಳಿಯೇ ಉಳಿವ ವಸ್ತುವೊಂದಿದ್ದರೆ ಅದು’ಸಂತೋಷ’ ಮಾತ್ರ ಈಗ ಮೈ ಬಿಸಿ ಇದೆ ನಾಳೆ ತಣಿದು ತಣ್ಣಗಾದೀತು. ಇಲ್ಲಿ ಎಲ್ಲವೂ ನಶ್ವರ. ಇದು ನಿಮಗೂ – ನನಗೂ ತಿಳಿದಿರುವ ನಿತ್ಯ ಸತ್ಯ. ಪ್ರತೀಕ್ಷಣ ಅದರ ಎಚ್ಚರ ಮಾತ್ರ ಅತಿ ಮುಖ್ಯ.

‍ಲೇಖಕರು avadhi

November 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Rankusa

    a philosophical writing on “the end,” with a pinch of advice at the end! (or is it throughout? lol);-) it is impossible not to feel the ‘latent urgency’ which the author desperately wants the reader to understand and experience. well, what’s the hurry dude?

    but it is very ironical to see that the title and the picture (of the homo sapiens) DO NOT get along with each other. the topic is, well, ‘death,’ and the pic is so damn full of ‘life!’ next time, pls choose a depressing pic when you’re writing a depressing article sire —> a sincere request (like the way you’ve picked up a matching hairclip and bangles for that kid (guess your daughter). or is that you developed the concept based on: “ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು..”??

    and “ಈ ಪ್ರೀತಿ ಎಂಬುದು ಹೃದಯವೆಂಬ ಹಾಲ್ಗಡಲನ್ನು ಸುರಾಸುರ ಶಕ್ತಿಗಳು ಮಥಿಸಿದಾಗ ವಿವೇಕದ ಕಡೆಗೋಲಿನಿಂದ ಕಡೆದಾಗ ಉದ್ಭವಿಸುವ ಅಮೂಲ್ಯ ಅಮೃತ….” how you make me feel so jealous of you! the topic that nobody could understand or explain since the dawn of time, which still is a great subject for research, which still saves or destroys lives, and will transcend for generations to come—how you’ve understood, captured, and defined such a topic in just two bloody lines! hats off to you sir, hats off to you! you’ve got no idea how many people will be grateful for this inimitable of yours…

    yours truly,
    -R

    ಪ್ರತಿಕ್ರಿಯೆ
    • Avadhi

      Though death is part of the write up we feel that the story is about positive spirit , hence the photo .
      At the same time we respect people’s right to differ and have different outlooks, and so we respect your views too.
      -avadhi

      ಪ್ರತಿಕ್ರಿಯೆ
      • Rankusa

        awesome, and thanks for respecting my views!

        however, there is something called ‘satirical humour,’ which is used to ‘derive more,’ or to ‘force one towards perfection,’ so much so that the subject is often pushed to the extremes of his/her threshold. in simple words, it is nothing but saying “gimme your best shot buddy.” also, it is the other way of saying “this work is good. but you’re capable of making it better.” the purpose is just to get the very best work from the ones who’ve got the ability to do it (coz us, the ‘incapable’ ones, do not have the ability to sit and stitch words together that get transformed into wonderful sentences). and this kinda humour is quite often used by the media to highlight the loopholes in a system. for e.g. cartoonists making a mockery of the political set up.

        but yes, to understand and to get the whole essence of satirical humour, it is necessary to be equipped with the “reading between the lines” skills. if one doesn’t understand this, then this kinda humour becomes just another irritating, annoying, and meaningless yapping– becoming a fiasco both in its beauty and purpose, and leaving the subject with nothing but vengeance.

        in response to readers’ comments about one of his poems, Jogi (author of Jogimane), puts forth a highly valuable point i.e. “ಕವಿತೆಯನ್ನು ವಿವರಿಸಬೇಕಾಗಿ ಬರುವುದು ಕವಿತೆಯ ಸೋಲು” [which, well, happens to be more beautiful than that poem itself! — satirical humour again! :)] unfortunately, i can see the same thing happening with my comments too. they either get misunderstood; or i’ll have to explain them—thus failing in their purpose. i was of the impression that the ‘brainy crowd’ here will never find humour offensive and will take it in a lighter vein. looks like i’ll have to reconsider my decision…

        hoping i don’t have to explain this too! 😉

        much thanks again!
        -R

        ಪ್ರತಿಕ್ರಿಯೆ
  2. D.RAVIVARMA

    ಸರ್ ನಿಮ್ಮ ಲೇಖನ ತುಂಬಾ ಮಾರ್ಮಿಕವಾಗಿದೆ , ದಿನ ನಿತ್ಯ ನಾವು ಸಾವಿರಾರು ಸಾವುಗಳನ್ನು ನೋಡುತ್ತಿದ್ದರು ,ನಾವು ಸ್ಪಂದಿಸದೇ,ಚಿರಂಜೀವಿಗಲೆಂದು ಬ್ರಮಿಸುವುದು. ಒಂದು ದೊಡ್ಡ ವಿಸ್ಮಯ ಅಲ್ಲವೇ?. ಡಿ,ವಿ,ಜಿ ಯವರ ಕಗ್ಗದಲ್ಲಿ ಹೇಳಿದ ಹಾಗೆ “ಬದುಕು ಜಟಕಾ ಭಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್ ಅವ ಪೇಳ್ದಂತೆ ಪಯಣಿಗರು, ಮದುವೆಗೋ,ಮಸಣಕೋ, ಹೊಗೆನ್ದಕದೆಗೊಗೋ,ಪದಕುಶಿವ ನೆಲವಿಹುದು,ಮಂಕುತಿಮ್ಮ” ಹಾಗೆಯೇ ಉಮರ್ ಕಯ್ಯಂ ಅವರ ಮಾತು ” ಈ ಜಗಕೆ ನಾನೇಕೆ ಬಂದಿಹೇನೋ ತಿಲಿಯಡದು,ಎಲ್ಲಿಂದ ಬಂದೆನೋ ,ಪೋಪುದಾವದೆಗೋ,ಇಚ್ಚೆಕೆಳುವರಿಲ್ಲ, ಗುಟ್ಟು ಬಿಚ್ಹುವರಿಲ್ಲ ಮರುಭೂನಿಯಲಿ ಭೋರಿಡುವ ಗಾಳಿ ನಾನು” ನಾನಂತೂ ಸಾವಿನ ಬಗ್ಗೆ ತುಂಬಾ ಯೋಚನೆ ಮಾಡಿರುವೆ, ಇದು ದೊಡ್ಡ ವಿಸ್ಮಯ, ಉಗ್ರರ ದಾಳಿಗೆ ಪ್ರಾಣತೆತ್ತ ಅಮಾಯಕ ಜೀವಿಗಳು, ಅದಿಕಾರಿಗಳ ಬೇಜವಾಬ್ದರಿಗೆ borewell ಬಾಯಿಗೆ ಬಿದ್ದ ಅಮಾಯಕ ಕಂದಮ್ಮಗಳು, ಸುನಾಮಿ,ಭುಉಕಂಪ,ಪ್ರವಾಹಕ್ಕೆ ತುತ್ತಾಗಿ ,ಪ್ರಾಣ ತೆತ್ತವರು., ಅಫಘತಳಲ್ಲಿ ಆಕಸ್ಮಿಕ ಪ್ರಾಣ ಕಳೆದುಕೊಂಡವರು,ವಿಷ ಸಾರಾಯಿ ಕುಡಿದು ಪ್ರಾಣ ತೆತ್ತವರು, ಹೆಣ್ಣು,ಹೊನ್ನು ಮಣ್ಣಿಗಾಗಿ ಕಾದಾ ಡಿ ಮಚ್ಚಿನೆತಿಗೋ,ಗುಂಡಿನೆತಿಗೋ ಬಲಿಯಾದವರು, ಕುಡಿಯುವ ನೀರು,ಅನ್ನವಿಲ್ಲದೆ,ಹಸಿವಿನಿಂದ ಸತ್ತವರು, ಸಾಲ ತೀರಿಸದೆ ಆತ್ಮಹತ್ಯೆ ಮಾಡಿಕೊಂಡವರು, ತಾ ವೆ ಮಾಡಿದ ತಪ್ಪಿಗೆ ಪ್ರಾಣ ಕೊಟ್ಟವರು,ಪರೀಕ್ಷೆಗಳಲ್ಲಿ ಫೈಲಾಗಿ ಅತ್ಮಹತ್ಯೆಮಡಿಕೊಂಡ ಮುಗ್ಧ ಬಾಲಕ,ಬಾಲಕಿಯರು, ಯಾರೊಂದಿಗೂ ಹಂಚಿಕೊಲ್ಲಲಾಗದ ನೋವನ್ನು ಒಳಗೊಳಗೇ ಅದುಮಿಕೊಂಡು,ಆತ್ಮಹತ್ಯೆ ಮಾಡಿಕೊಂಡವರು, ಇಳಿವಯಸ್ಸಿನಲ್ಲಿ ಯಾರು ಗತಿಯಿಲ್ಲದೆ ಅನ್ನ್ರೋಗ್ಯಕ್ಕೊಳಗಾಗಿ ಸತ್ತ ಹಿರಿಯ ಜೀವಗಳು, ಈಜಲು ಹೋಗಿ ನದಿ ,ಸಮುದ್ರ ಪಾಲಾದ ದುರಂತ ಜೀವಿಗಳು, ಹೀಗೆ,ಹೀಗೆ,ಸಾವ ನೋಡಲು ಹೋಗಿ ಸಾವಿಗೀಡದವರು ಒಟ್ಟಿನಲ್ಲಿ ಈ ಸಾವೇ ಒಂದು ದೊಡ್ಡ puzzle ಅಲ್ಲವೇ,ನಾವು ಈ ಭೊಮಿ ಬಿಟ್ಟು ಹೋಗುವ ಮುನ್ನ ನಮ್ಮ ಒಂದೆರೆಡು ಹೆಜ್ಜೆಗಳನ್ನು ಮೂಡಿಸಿ ಹೋಗಬೇಕಾದದ್ದು ಕೂಡ ಅರ್ಥಪೂರ್ನವಲ್ಲವೇ, ನಿಮ್ಮ ಚಿಂತನೆಗೆ ನನ್ನ ಅಭಿನಂದನೆಗಳು. ನನ್ನನಂತು ನಿಮ್ಮ ಲೇಖನ ತುಂಬಾ ಕಾದಿದೆ,ಒಮ್ಮೆ ಒಂದು ಗೆಳೆಯನ ಮನೆಯ ಸಾವಿಗೆ ಮಣ್ಣಿಗೆ ಹೋಗಿದ್ದೆ,ಆ ರಾತ್ರಿ ಅವರು ಭಜನೆ ಏರ್ಪಾಡು ಮಾಡಿದ್ದರು, ನಮ್ಮ ಕಡೆ ರಾತ್ರಿಯೆಲ್ಲ ಹೆಣ ಕಾಯುವುದು ಕಷ್ಟ ಹಾಗು ನಿದ್ದೆಯಿಂದ ತಪ್ಪಿಸಲು ಭಜನೆ ಹಮ್ಮಿಕೊಲ್ಳುತ್ತಾರೆ . “ಆ ರಾತ್ರಿ ಅವರು ಹಾಡಿದ ಒಂದು ಭಜನೆ ಹಾಡು ಇನ್ನು ಕಾಡುತ್ತಿದೆ.” ಈ ದೇಹದಿಂದ ದೂರನದೆ ಏಕೆ ಆತ್ಮವೇ, ಈ ಸಾವು ನ್ಯಾಯವೇ ” ನನಗೆ ಗೊತ್ತಿಲ್ಲದೇ ಕಣ್ಣೇರು ಇಟ್ಟಿದ್ದೆ.
    ಡಿ.ರವಿ ವರ್ಮ ಹೊಸಪೇಟೆ.

    ಪ್ರತಿಕ್ರಿಯೆ
  3. D.RAVIVARMA

    edi jagattige odessi nrutyavanne popular agi parichasida protima bedi,soundarya,cininati kalpana,manjula,yuvajanagada edeyannu badidu,nimirelisida nrutya madi nidde kedisida silksmita ,adesto dodda barahgararu atmahatye madikondaddu naavu odillave.saavu annuvudu ondu halavomme nijakku puzzle ,kelarantu baduki sattantiruttare,innu halavaru sattu badukiruttare alva,navenagabeko yochisona?
    d.ravi varma hospet

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: