ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಡೆಯೇನು ಕನಕ..!

 ವಸುಂಧರಾ ಕದಲೂರು

ಅವನಿಲ್ಲದೆಡೆಯಿಲ್ಲೆಂದು ಬಾಳೆ ತಿನ್ನದವ ನೀನು
ಸರಳ ಬಳಿ ಕೈ ಚಾಚಿ ಬೇಡಿಕೊಂಡೆಯೇನು
ಹೇಗೆ ನಂಬುವುದಪ್ಪಾ ಇಂಥಾ ಹುನ್ನಾರಗಳನ್ನು

ಕಂಡೆಯೇನು ಕನಕ ನೀನು ಕೃಷ್ಣನನ್ನು ಕೊನೆಗೆ
ಗುಡಿಕಟ್ಟಿ ಸೆರೆ ಹಿಡಿದವರು ಬಿಟ್ಟರೇನು ನಿನಗೆ

ಬಿಲ್ಲುಬಾಣ; ಆಯುಧಗಳನು ಬಿಟ್ಟದ್ದೇಕೋ
ಕಾಯಕ ಬಿಟ್ಟು ಶರಣಾದುದು ಸಾಕೋ

ನಾಯಕ ನೀನು ದಾಸನಾದುದು ಏಕೋ
ಕೋಣನ ಮಂತ್ರ ಕಲಿತುದೂ ಸಾಕೋ

ಒಲಿದು ಬಂತೆಂದರು ಕೆರೆಯ ತೂಬಿಗೆ ಕೋಣ
ಅಡಿಯಿಡಲಾಯಿತೆ ಗುಡಿಯೊಳಗೆ ನಿನಗೆ ಅಣ್ಣಾ

ಬಂದನೇನು ಕನಕ ಅವನು ನಿನ್ನ ಆರ್ತ ಕೂಗಿಗೆ
ನೊಂದೆಯೇನು ಅವರ ಮೋಸದಾಟದ ಜೂಜಿಗೆ

ಕಂಡೆಯೇನು ಕನಕ ನೀನು ಕೃಷ್ಣನನ್ನು ಕೊನೆಗೆ
ಬಿಟ್ಟುಕೊಟ್ಟರೇನು ಅವನ ಅವರು ನಿನಗೆ?!

‍ಲೇಖಕರು nalike

24 July, 2020

4 Comments

  1. Smitha Amrithraj.

    ಚೆನ್ನಾಗಿದೆ ಕವಿತೆ ವಸುಂಧರಾ

    • Vasundhara k m

      ಧನ್ಯವಾದ ಸ್ಮಿತಾ..

  2. Allabaksha bijapur

    ವಿಡಂಬನೆಯೊಂದಿಗೆ ನಮ್ಮ ಸಮಾಜ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ‘ಕಂಡೆ ಯೇನು ಕನಕ’.

    ಜಗದಗಲ ಮುಗಿಲಗಲ, ಎಲ್ಲೆಲ್ಲೂ ಇರುವ ಸೃಷ್ಟಿಕರ್ತನಿಗೆ ಆಲಯದಲ್ಲಿ ಕಟ್ಟಿಹಾಕಿ ಅವನ ದರ್ಶನ ಪಡೆಯುವೆವು ಎನ್ನುವ ನಮ್ಮೀ ಸಮಾಜಕ್ಕೆ ಕ್ಷಮಿಸೋ ದೇವ.

    ಅವನಿಲ್ಲದಲ್ಲಿ ಹೋಗಿ ತಿನ್ನುವೆಯಾ ಬಾಳೆ ಎಲೆ ಮರುಳೆ…,

  3. Allabaksha bijapur

    ವಿಡಂಬನೆಯೊಂದೆಗೆ ಸಮಾಜವನ್ನು ತಿದ್ದುವ ಪದ್ಯ ‘ ಕಂಡೆಯೇನು ಕನಕ’.

    ಜಗದಗಲ ಮುಗಿಲಗಲ ಎಲ್ಲದರಲ್ಲೂ ಇರುವ ಸೃಷ್ಟಿಕರ್ತನಿಗೆ ಆಲಯ ಕಟ್ಟಿಸಿ ಕೂಡ್ರಿಸಿ, ಅವನಿಗೇ ಅಣುಕಿಸಿವಂತೆ ಇಣುಕಿ ಇಣುಕಿ ನೋಡುತ್ತಾ ದರ್ಶನ ಪಡೆದೆವಂದು ಹೇಳುವ ಈ ನಮ್ಮವರನ್ನು ಕ್ಷಮಿಸು.

    ಭಾರತಿಪುರದ ಉಪಸಂಹಾರದಲ್ಲಿಯೂ ತಿಳಿಸಿಲ್ಲವೇ……

    ಅವನಿಲ್ಲದಲ್ಲಿ ಬಾಳೆ ತಿನ್ನಲಾಗದೇ ಮರಳಿದ ನಾಯಕ, ದಾಸ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading