ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜವಳಿ,ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-

ನಾಗರಾಜ ರಾವ್  ಜವಳಿ  ಇನ್ನು  ಇಲ್ಲ  ಎಂಬ  ಸುದ್ದಿಯನ್ನು  ಈಗ  ಜಿ ಎನ್ ಮೋಹನ್  ಫೇಸ್ ಬುಕ್ ನಲ್ಲಿ  ಬರೆದದ್ದನ್ನು  ಈಗತಾನೆ  ಓದಿದೆ .ನನಗೆ  ನಂಬಲು  ಆಗುತ್ತಿಲ್ಲ .ಇಲ್ಲಿ  ಜರ್ಮನಿ ಯಲ್ಲಿ  ಕುಳಿತುಕೊಂಡು  ಕಣ್ಣೀರು  ಹಾಕುವುದು  ಬಿಟ್ಟರೆ  ಬೇರೆ  ಏನೂ  ನಾನು  ಮಾಡಲಾರೆ .೧೯೭೧ರಲ್ಲಿ  ಮಂಗಳೂರಿನಲ್ಲಿ  ನಾನು  PG ಸೆಂಟರ್  ನಲ್ಲಿ  ಕನ್ನಡ  ವಿಭಾಗದಲ್ಲಿ ಉಪನ್ಯಾಸಕ ಆದಾಗ  , ಜವಳಿ  ಕನ್ನಡ  MA ಯಲ್ಲಿ  ನನ್ನ  ಮೊದಲ  ತಂಡದ  ವಿದ್ಯಾರ್ಥಿ  ಆಗಿದ್ದರು . ಅಂತರ್ಮುಖಿ, ಸಂವೇದನಶೀಲ, ಸೂಕ್ಸ್ಮ ಮನಸ್ಸಿನ ಜವಳಿ ಆಗ  ‘ರಾಜೇಶ್  ಜವಳಿ ‘ ಎಂಬ  ಹೆಸರಿನಲ್ಲಿ  ಒಳ್ಳೆಯ  ಕವನ ಬರೆಯುತ್ತಿದ್ದರು. ಪ್ರಚಾರದಿಂದ  ಹರದಾರಿ ದೂರ  ಇದ್ದ  ಜವಳಿ , ನಮ್ಮ  ಗುರು  ಪ್ರೊ .ಪರಮೇಶ್ವರ  ಭಟ್ಟರ  ಬಗ್ಗೆ  ಅಪಾರ  ಗೌರವ  ತಾಳಿದ್ದರು.

ಮಂಗಳೂರಿನ  ಕೆನರಾ ಕಾಲೇಜ್ ನಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ಕನ್ನಡ ಪ್ರಾಧ್ಯಾಪಕರಾಗಿ , ಕೊನೆಗೆ ಪ್ರಿನ್ಸಿಪಾಲ್  ಆಗಿ  , ಎಲ್ಲರ  ಅಪಾರ  ಪ್ರೀತಿ  ಅಭಿಮಾನ  ಪಡೆದಿದ್ದರು. ಮಂಗಳೂರಿನಲ್ಲಿ  ಆವರ ಗೆಳೆಯರು -DASAJANA -ದಾಮೋದರ ,ಸತ್ಯನಾರಾಯಣ , ನರಸಿಂಹಮೂರ್ತಿಯವರ ಜೊತೆಗೆ  ಹಿರಿಯರಾಗಿ  ಸಾಹಿತ್ಯ , ನಾಟಕ  ಉಳಿಸಿದವರು  ಜವಳಿ. ವೈಯಕ್ತಿಕವಾಗಿ  ನನ್ನ  ಬಗ್ಗೆ ಅಪಾರ  ಪ್ರೀತಿ  ಇಟ್ಟುಕೊಂಡಿದ್ದ  ಜವಳಿ  ,ನಾನು  ೨೦೦೯ರಲ್ಲಿ  Germany ಗೆ  ಹೊರಟಾಗ  ಮಂಗಳೂರಿನಲ್ಲಿ ದಾಸಜನ   ಸೇರಿ  ನಡೆಸಿದ  ಬೀಳ್ಕೊಡುಗೆ  ಕಾರ್ಯಕ್ರಮಕ್ಕೆ  ತೀರ್ಥಹಳ್ಳಿ  ಯಿಂದ  ಬಂದು  ತುಂಬಾ ಸಂಭ್ರಮದಿಂದ  ಓಡಾಡಿದರು .ನನ್ನ  ಬ್ಲಾಗ್  ಬರಹಗಳಿಗೆ  ಇಮೇಲ್  ಮೂಲಕ  ಮತ್ತು  FB ಯಲ್ಲಿ  ಪ್ರತಿಕ್ರಿಯೆ  ಕೊಡುತ್ತಾ  ಬಂದವರು .ನಾನು  ಜರ್ಮನಿ ಯಲ್ಲಿ  ಇದ್ದಾಗಲೂ  ಕಳೆದ  2 ವರ್ಷಗಳಿಂದ  ಜವಳಿಯನ್ನು  ಮಿಸ್  ಮಾಡಿರಲಿಲ್ಲ .ಆದರೆ  ಈದಿನ  ಜವಳಿ  ಇಲ್ಲದೆ  ನನಗೆ  ಶುಉನ್ಯ  ಆವರಿಸಿದೆ.

ಜವಳಿ, ನಮ್ಮನ್ನು  ನೀವು  ಇಷ್ಟು  ಬೇಗ  ಬಿಟ್ಟು  ಹೋಗಬಾರದಿತ್ತು .

‍ಲೇಖಕರು sreejavn

27 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading