ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ

ಪ್ರೊ ಬಿ ಎ ವಿವೇಕ ರೈ


ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಆಶ್ರಯದಲ್ಲಿ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ಇವತ್ತು ಬೆಳಗ್ಗೆ ಆರಂಭವಾಗುತ್ತದೆ . ಈ ಕನ್ನಡ ಬೇಸಗೆ ಶಿಬಿರವು ಸಪ್ಟಂಬರ ೨ ರಿಂದ ೧೪ ರವರೆಗೆ ನಡೆಯುತ್ತದೆ . ಇದರಲ್ಲಿ ಕನ್ನಡ ಭಾಷೆಯನ್ನು ಮಾತನಾಡಲು ಓದಲು ಮತ್ತು ಬರೆಯಲು ಕಲಿಸಲಾಗುವುದು . ಯೂರೋಪಿನ ಆಸಕ್ತ ಹತ್ತು ಜನರು ಇದರಲ್ಲಿ ಅಭ್ಯರ್ಥಿಗಳಾಗಿ ಭಾಗವಹಿಸುತ್ತಿದ್ದಾರೆ . ನಾನು ಮತ್ತು ಡಾ . ಕತ್ರಿನ್ ಬಿಂದರ್ ಕನ್ನಡ ಕಲಿಸುವ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತೇವೆ . ಸಾರಾ ಮೆರ್ಕ್ಲೆ ಅವರು ಅಭ್ಯರ್ಥಿಗಳಿಗೆ ಕನ್ನಡ ಅಕ್ಷರಾಭ್ಯಾಸ ಮಾಡುವ ಮತ್ತು ಪೂರಕ ವ್ಯಾಸಂಗದ ಕೆಲಸವನ್ನು ಮಾಡುತ್ತಾರೆ . ಪ್ರೊ . ಹೈದ್ರೂನ್ ಬ್ರೂಕ್ನರ್ ಅವರು ಕರ್ನಾಟಕಕ್ಕೆ ಸಂಬಂಧಪಟ್ಟ ಕೆಲವು ಉಪನ್ಯಾಸಗಳನ್ನು ಕೊಡುತ್ತಾರೆ .
ನಾವು ಕಳೆದ ವರ್ಷ ೨೦೧೨ ರ ಸಪ್ಟಂಬರ ದಲ್ಲಿ ವ್ಯೂರ್ತ್ಸ್ ಬುರ್ಗ್ ನಲ್ಲಿ ಮೊದಲನೆಯ ಪ್ರಯತ್ನವಾಗಿ ಇಂತಹ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ವನ್ನು ಆರಂಭ ಮಾಡಿದೆವು . ಇದರಲ್ಲಿ ಜರ್ಮನಿ ,ಇಟಲಿ ಮತ್ತು ಇಂಗ್ಲೆಂಡಿನ ಅಭ್ಯರ್ಥಿಗಳು ಭಾಗವಹಿಸಿದ್ದರು . ಎರಡೇ ವಾರಗಳಲ್ಲಿ ಅವರು ಕನ್ನಡವನ್ನು ಮಾತನಾಡುವ ಮತ್ತು ಓದುವ ಅಭ್ಯಾಸವನ್ನು ಕರಗತ ಮಾಡಿಕೊಂಡರು . ಅದರ ಯಶಸ್ಸಿನಿಂದ ಪ್ರಭಾವಿತರಾಗಿ ಈ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಅಂತಹದೇ ಎರಡು ವಾರಗಳ ಕನ್ನಡ ಕಲಿಕೆಯ ಶಿಬಿರವನ್ನು ನಡೆಸಿದೆವು .
ಈಗ ನಡೆಯುತ್ತಿರುವುದು ಈ ಸರಣಿಯಲ್ಲಿ ಮೂರನೆಯದು . ಕನ್ನಡವನ್ನು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಹಂತದಲ್ಲಿ ಬಹಳ ಕಾಲ ಕಲಿಸಿದ ನನಗೆ ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕನ್ನಡೇತರ ವಿದೇಶಿಯರಿಗೆ ಕಲಿಸುವ ಈ ಶಿಬಿರ ಸಂತೋಷ ಮತ್ತು ಸಂತೃಪ್ತಿಯನ್ನು ಕೊಟ್ಟಿದೆ . ನಾನು , ಡಾ . ಕತ್ರಿನ್ ಬಿಂದರ್ ಮತ್ತು ಸಾರಾ ಮೆರ್ಕ್ಲೆ ಇರುವ ನಮ್ಮ ತಂಡ ಒಂದು ಕುಟುಂಬದಂತೆ ಸಮನ್ವಯದಿಂದ ಕನ್ನಡದ ಕಾಯಕವನ್ನು ಮಾಡುತ್ತಿದೆ . ಈ ಕನ್ನಡ ಬೇಸಗೆ ಶಿಬಿರದಲ್ಲಿ ಕರ್ನಾಟಕದ ಇತಿಹಾಸ ,ಕನ್ನಡ ಭಾಷೆ ,ಕನ್ನಡ ಸಾಹಿತ್ಯ ,ಕಲೆಗಳು ಇತ್ಯಾದಿಗಳ ಬಗ್ಗೆ ದೃಶ್ಯ ಶ್ರವ್ಯ ಸಾಮಗ್ರಿಗಳ ಸಹಿತ ಉಪನ್ಯಾಸಗಳು ಇರುತ್ತವೆ . ಅಬ್ಯರ್ಥಿಗಳು ಪ್ರಾಯೋಗಿಕವಾಗಿ ಮಾಡುವ ಲವಲವಿಕೆಯ ಕೆಲಸಗಳು ಇರುತ್ತವೆ .
ಈ ಶಿಬಿರದಲ್ಲಿ ಪಾಲುಗೊಳ್ಳುವವರು ಯಾವುದೇ ಬಗೆಯ ಶುಲ್ಕ ಕೊಡಬೇಕಾಗಿಲ್ಲ . ಕನ್ನಡವನ್ನು ಕಲಿಯುವುದೇ ಅವರು ಕೊಡಬೇಕಾದ ಸಂಭಾವನೆ .
 
 

‍ಲೇಖಕರು avadhi

September 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. C. N. Ramachandran

    ಪ್ರಿಯ ಪ್ರೊ. ವಿವೇಕ ರೈ ಅವರಿಗೆ: ಜರ್ಮನಿಯಲ್ಲಿ ನೀವು ’ಕನ್ನಡ ಕಮ್ಮಟ’ವನ್ನು ಮೂರನೆಯ ಬಾರಿಗೆ ಆಯೋಜಿಸುತ್ತಿರುವುದು ತುಂಬಾ ಸ್ತುತ್ಯ ಹಾಗೂ ಅನುಕರಣೀಯ ಕಾರ್ಯ. ಇದೇ ನಿಜವಾದ ಕನ್ನಡ ಸೇವೆ. ಈ ಶಿಬಿರ ಹಾಗೂ ಮುಂದಿನ ಇಂತಹ ಶಿಬಿರಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  2. narayan raichur

    kannadavannu haraduva kelasa kadalaachegoo habbi jarmaniyallii kannada kalarava kelisuttiruva nimma balagakke nalmeya namana !!- Narayana Raichur ( Adhyaksha RBI Kannada Sangha- Ranga Vimarshaka)

    ಪ್ರತಿಕ್ರಿಯೆ
  3. ಗುಡ್ಡಪ್ಪ

    ನನಗೆ ಇದನ್ನು ಓದಿದ ಬಳಿಕ ಬಹಳ ಖುಷಿಯಾಯಿತು…

    ಪ್ರತಿಕ್ರಿಯೆ
  4. ರಘುನಾಥ

    ನಿಮ್ಮ ಕನ್ನಡದಕಂಪನ್ನುವಿದೇಶದಲ್ಲಿಪಸರಿಸುತ್ತಿರುವಸಾಹಸದಸಾರಥೈಕ್ಕೆವಂದನೆಅಭಿನಂದನೆನಾನುತಮಿಳುವಿಶ್ವವಿದೈಲಯದಲ್ಲಿದ್ದಾಗತಮಿಳುವಿದ್ವಾಂಸರಿಗೆಮುಂಬೈನಲ್ಲಿಮರಾಠಿಯರಿಗೆಅನೇಕವರುಷಕನ್ನಡಕಲಿಸಿದಸಂತೋಷಪಟ್ಟಿದ್ದೇನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: