“ಧನ್ಯವಾದ! ನಾವು ಚೆನಾಗಿ ಕನ್ನಡ ಕಲಿತೆವು”

ಜರ್ಮನಿಯಿಂದ ಬಿ ಎ ವಿವೇಕ ರೈ


ಜರ್ಮನಿಯ ವ್ಯೂರ್ತ್ಸ್ ಬುರ್ಗಿನ ಇಂಡಾಲಜಿ ವಿಭಾಗದಲ್ಲಿ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ಸಪ್ಟಂಬರ 17 ರಿಂದ 28ರ ವರೆಗೆ ಎರಡು ವಾರಗಳ ಕಾಲ ಅಚ್ಚುಕಟ್ಟಾಗಿ ನಡೆಯಿತು. ನಾನು ಮತ್ತು ಡಾ.ಕತ್ರಿನ್ ಬಿಂದರ್ ಅಧ್ಯಾಪಕರಾಗಿ ಕೆಲಸಮಾಡಿ ಹೊಸ ಅನುಭವ ಪಡೆದೆವು ಜರ್ಮನಿಯಲ್ಲಿ , ಬಹುಶಃ ಹೊರದೇಶದಲ್ಲಿ ಇಂತಹ ಈ ಪ್ರಮಾಣದ ಕನ್ನಡ ಕಲಿಸುವ ಶಿಬಿರ ಇದೇ ಮೊದಲನೆಯದು ಇರಬಹುದು .

ಕನ್ನಡದ ಅಕ್ಷರಜ್ಞಾನ ಇಲ್ಲದ ನಮ್ಮ ವಿದೇಶಿ ವಿದ್ಯಾರ್ಥಿಗಳು ನಿನ್ನೆಯ ದಿನ ಕನ್ನಡದಲ್ಲಿ ಚೆನ್ನಾಗಿ ಮಾತಾಡಿದರು. ಲಂಕೇಶರ ‘ಗುಬ್ಬಚ್ಚಿಯ ಗೂಡು ‘ಲೇಖನದ ಮೊದಲ ಪ್ಯಾರವನ್ನು ಓದಿದರು. ಮತ್ತೆ ಬೋರ್ಡಿನಲ್ಲಿ ಕನ್ನಡ ಶಬ್ದ ಮತ್ತು ವಾಕ್ಯಗಳನ್ನು ಬರೆದರು . ಕೊನೆಯಲ್ಲಿ ‘ಇದರ ಮುಂದಿನ ಹಂತದ ಕನ್ನಡ ಶಿಬಿರ ಮಾಡಿ’ ಎನ್ನುವ ಕೋರಿಕೆ ಸಲ್ಲಿಸಿದರು.

ಅವರು ನಮಗೆ ಅಧ್ಯಾಪಕರಿಗೆ ಒಂದೊಂದು ಉಡುಗೊರೆ ಕೊಟ್ಟು ಅದರಲ್ಲಿ ಸುಂದರವಾದ ಕೈಬರಹದಲ್ಲಿ ಕನ್ನಡದಲ್ಲಿ ” ಧನ್ಯವಾದ! ನಾವು ಚೆನಾಗಿ ಕನ್ನಡ ಕಲಿತೆವು” ಎಂದು ಬರೆದಿದ್ದರು. ನಮ್ಮ ಜೊತೆಗೆ ಸಾರಾ ಮೆರ್ಕ್ಲೆ ಶಿಬಿರಾರ್ಥಿಗಳಿಗೆ ಕನ್ನಡ ಅಕ್ಷರ ಅಭ್ಯಾಸವನ್ನು ಚೆನ್ನಾಗಿ ಮಾಡಿಕೊಟ್ಟರು. ಬೆಂಜಮಿನ್ ಹಾನ್ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸುವ ಸಾಧ್ಯತೆಗಳನ್ನು ಹೇಳಿಕೊಟ್ಟರು. ಶಿಬಿರದ ಸಿದ್ಧತೆಗಳಲ್ಲಿ ಸಹಾಯ ಮಾಡಿದರು.

ಜರ್ಮನಿಯಲ್ಲಿ ಮೂರು ವರ್ಷಗಳ ನನ್ನ ‘ಅತಿಥಿ ಪ್ರಾಧ್ಯಾಪಕತನ’ದ ಈ ಕೊನೆಯ ಸುತ್ತು- ಸಂತೃಪ್ತಿಯ ಧನ್ಯತೆಯ ಮುಕ್ತಾಯ.

‍ಲೇಖಕರು G

October 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಅಶೋಕವರ್ಧನ ಜಿ.ಎನ್

    ಅಭಿನಂದನೆಗಳು. ಆದರೆ ವಿಪರ್ಯಾಸ ನೋಡಿ, ಇಲ್ಲಿ ಕನ್ನಾಡಿನಲ್ಲಿ `ನಾವು ಕನ್ನಡ ಚೆನ್ನಾಗಿ ಮರೆತೆವು’ ಮಾಡಲು ಕಷ್ಟಪಡುತ್ತಲೇ ಇದ್ದೇವೆ 🙁
    ಅಶೋಕವರ್ಧನ

    ಪ್ರತಿಕ್ರಿಯೆ
  2. ಪಂಡಿತಾರಾಧ್ಯ ಮೈಸೂರು

    ಪ್ರೀತಿಯ ರೈಅವರಿಗೆ ನಮಸ್ಕಾರಗಳು.
    ನಿಮಗೆ ಮತ್ತು ನಿಮ್ಮ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು.
    ನಿಮ್ಮ ಮೂರು ವರ್ಷಗಳ ಅನುಭವ ನಿಮಗೆ ತೃಪ್ತಿಕೊಟ್ಟಿರುವುದು ಸಂತಸದ ಸಂಗತಿ.
    ನಮ್ಮ ಮಕ್ಕಳೂ ಚೆನ್ನಾಗಿ ಕನ್ನಡ ಕಲಿತೆವೆಂದು ಸಂತೋಷಪಡುವ ಶೈಕ್ಷಣಿಕ ವಾತಾವರಣದ ನಿರ್ಮಾಣದ ಅಗತ್ಯ ಈಗ ತುಂಬ ಇದೆ.
    ಈ ನಿಟ್ನಿನಲ್ಲಿ ನಿಮ್ಮ ಈ ಅನುಭವ ಅಮೂಲ್ಯವಾದುದು ಎಂದೇ ನನ್ನ ಭಾವನೆ.
    ಕರ್ನಾಟಕ ನಿಮ್ಮಿಂದ ಇದನ್ನೇ ನಿರೀಕ್ಷಿಸುತ್ತಿದೆ.
    ಪ್ರೀತಿಯಿಂದ
    ಪಂಡಿತಾರಾಧ್ಯ

    ಪ್ರತಿಕ್ರಿಯೆ
  3. ಎಚ್. ಸುಂದರ ರಾವ್

    ಸರ್
    ನಮಸ್ಕಾರ. ಜರ್ಮನರು ಅನುಕೂಲ. ಕನ್ನಡ ಕಲಿಯುತ್ತಾರೆ. ಕನ್ನಡಿಗರು (ಭಾರತೀಯರು) ಬಡವರು. ಇಂಗ್ಲಿಷ್ ಕಲಿಯಬೇಕಾಗಿದೆ.
    -ಎಚ್. ಸುಂದರ ರಾವ್

    ಪ್ರತಿಕ್ರಿಯೆ
  4. Gopaal Wajapeyi

    ನಾವು ತೊರೆಯುತ್ತಿದ್ದೇವೆ. ಅವರು ಪೊರೆಯುತ್ತಿದ್ದಾರೆ…

    ಪ್ರತಿಕ್ರಿಯೆ
  5. Adithya

    ಜರ್ಮ್ಮನ್ನರಿಗೆ ಭಾಷೆ ಅರಿವಿನ ಸೊಬಗು ಭಾರತೀಯರಿಗೆ ಇಂಗ್ಲೀಷ್ ಸೋಗು.

    ಪ್ರತಿಕ್ರಿಯೆ
  6. Prakash

    ನಮ್ಮ ದೆಶದಲ್ಲಿ ಇದೆ ಕನ್ಡ್ರಿ ನಾವು ಬೆಲೆಯುತ್ತೆವೆ ಅವರು ಬೆಳೆಸುತ್ತಾರೆ ಉದಾಹರನೆ ಯೋಗಾ ಮತ್ತು ಬೌದ್ದ ದರ್ಮ ಹೀಗೆ ನಮಗೂ ಅವರಿಗು ವ್ಯತ್ಯಾಸ ಗುರುಗಳೇ

    ಪ್ರತಿಕ್ರಿಯೆ
  7. nandi

    ಓದಿ ತುಂಬಾ ಖುಷಿಯಾಯ್ತು ಸರ್, ನಮ್ಮ ಬೆಂಗಳೂರ್ನಲ್ಲಿ ಇಂಥದ್ದೊಂದು ನಿರಂತರ ಕಾರ್ಯಗಾರ ನಡಿಬೇಕು ಅನ್ನಿಸುತ್ತೆ ಸರ್. (ಕನ್ನಡ ಬಂದ್ರು ಮಾತಾಡಲ್ಲ ಕೆಲವರು)

    ಪ್ರತಿಕ್ರಿಯೆ
  8. h. r. laxmivenkatesh

    ನಿಮ್ಮ ಕನ್ನಡ ಕಲಿಸುವಿಕೆಯ ಪ್ರಯತ್ನಕ್ಕೆ ನಮಿಸುವೆ. ಜರ್ಮನರು ಒಳ್ಳೆಯ ವಿದ್ಯಾರ್ಥಿಗಳು ಯಾವುದೇ ಕೆಟ್ಟ ಉಪಾಧ್ಯಾಯನಿಗೂ ಜರ್ಮನಿಯ ಹುಡುಗ ಹುಡುಕಿಯರು ಪ್ರಿಯರು. ವಿಶ್ವದಲ್ಲೇ ಜರ್ಮನಿಯ ಪ್ರಾಡಕ್ಟ್ ಹೆಸರುವಾಸಿ. ಅವರ ಏರ್ ಲೈನ್ಸ್, ಅವರ ಯಂತ್ರಗಳು, ಅವರ ಕರ್ತವ್ಯ ಪ್ರಜ್ಞೆ ಮೆಚ್ಚಬೇಕಾದದ್ದೆ. ನನ್ನ ತಮ್ಮ ಸ್ಟೂಟ್ಗಾರ್ಟ್ ನ ಒಂದು ಬೌತಶಾಸ್ತ್ರದ ಸಂಶೋಧನಾಲಯದಲ್ಲಿ ಕೆಲಸ ಸಿಕ್ಕಿತ್ತು. 3 ವರ್ಷ ಅವನಿಗೆ ಅದೊಂದು ಅಪೂರ್ವ ಅನುಭವವಾಗಿತ್ತು. ಅಮೇರಿಕದಲ್ಲಿ ಕೆಲಸಕ್ಕೆ ಕರೆದಾಗ ಹೋಗಲು ಮನಸ್ಸಿಲ್ಲದೆ ಒಪ್ಪಿಕೊಂಡ ! ಅದೇನೋ ಅಮೆರಿಕಾದ ಹುಚ್ಚು ಎಲ್ಲರಿಗೂ. ಎಷ್ಟು ಹೇಳಿದರು ಅಮೆರಿಕ ಅಮೆರಿಕವೇ !

    ಪ್ರತಿಕ್ರಿಯೆ
  9. h. r. laxmivenkatesh

    ಡಾ. ರೈ ರವರಿಗೆ ಹೇಳುವುದೇನೆಂದರೆ, ಅವರ ಹೆಸರು. ಡಾ. ಹೆಚ್. ಆರ್. ಚಂದ್ರಶೇಖರ್. ಕರ್ನಾಟಕ ಭಾಗವತ ಬರೆದರಲ್ವಾ ? ಭೌತಾಸಾಸ್ತ್ರದ ವಿಜ್ಞಾನಿ, ಅವರು !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: