Sekar, Shekar, Shekhara, Shekhar, Sekara..

 ಚಂದ್ರಶೇಖರ ಆಲೂರು 

ನಾ ..ಏನು .ಮಾಡಲಿ ..?

ನಿನ್ನೆ ಟಾಟಾ ಸನ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಎನ್ ಚಂದ್ರ ಅವರ
ಹೆಸರು chandra sekaran ಎಂದು ಸ್ಕ್ರಾಲ್ ಆಗುತ್ತಿರುವುದನ್ನ
ನೋಡಿದಾಗ ನನ್ನ ಹೆಸರಿನ ಉತ್ತರಾರ್ಧ ಅನುಭವಿಸುತ್ತಿರುವ ಸಂಕಟಗಳು,
ಅದರಿಂದಾಗಿ ನಾನು ಎದುರಿಸುತ್ತಿರುವ ಫಜೀತಿ ,ಮುಜುಗರಗಳು ನೆನಪಿಗೆ ಬಂದವು.

ಮೊದಲಿಗೆ ನನ್ನ SSLC ಅಂಕಪಟ್ಟಿಯಿಂದ ಈ ಸಮಸ್ಯೆ ಶುರುವಾಯ್ತು .ಯಾರೋ
ಪುಣ್ಯಾತ್ಮ ಚಂದ್ರ ಶೇಖರ ಎಂಬ ನನ್ನ ಹೆಸರನ್ನ chandra sekhara ಮಾಡಿದ .

ನಂತರ PUE ಅಂಕಪಟ್ಟಿಯಲ್ಲಿ ಅದು chandra sekhar ಆಯ್ತು.
ಪದವಿ ಮತ್ತು snatakottara ಪದವಿ ಅಂಕ ಪಟ್ಟಿಯಲ್ಲಿ chandra shekar
ಆಗಿ ನೌಕರಿಗೆ ಸೇರಿದಾಗ ಇದೇ ಮುಂದುವರಿಯಿತು .

ನಂತರ ಶುರುವಾಯ್ತು ಹೊಸ ಸಮಸ್ಯೆಗಳು. ಪಾಸ್ಪೋರ್ಟ್ ನವರು SSLC
ಅಂಕಪಟ್ಟಿಯಲ್ಲಿದ್ದ SEKHARA ವನ್ನ ಉಳಿಸಿಕೊಂಡರು. ಆಧಾರ್ ನಲ್ಲಿ SHEKHARA
ಮಾಡಿಸಿದೆ. ಮತ್ತೆ ವೋಟರ್ ಐ ಡಿ ಯಲ್ಲಿ SHEKAR ಆಯ್ತು .

ನನ್ನ ಪಾಸ್ಪೋರ್ಟ್ ನವೀಕರಿಸುವಾಗ SHEKHARA ಸರಿ ಪಡಿಸಿದೆ .
ಆದರೆ ನನ್ನ ಪತ್ನಿಯ ಮತ್ತು ಮಗಳ ಪಾಸ್ಪೋರ್ಟ್ ನಲ್ಲಿ ವಿವಿಧ ಅವತಾರಗಳಿವೆ .
ಈ sekar, shekar SHEKHARA,s hekhar, sekara ..ಈ ಸುಳಿಯಿಂದ
ಹೊರ ಬರುವುದು ಹೇಗೆ ?ಹೇಳಿ

ನಾ ..ಏನು ಮಾಡಲಿ

‍ಲೇಖಕರು admin

January 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: