ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಮಸಾಣ್’ ಚಲನ ಚಿತ್ರ : ಒಂದು ಪ್ರತಿಕ್ರಿಯೆ..

ಅಶ್ವತ್ಥ, ಶಿಕಾರಿಪುರ ನೀರಜ್ ಘಯ್ವನ್ ರ "ಮಸಾಣ್" ("ಸ್ಮಶಾನ" ದ ಶುದ್ಧ ದೇಸಿ ಹಿಂದಿ ಪದ) ನಮ್ಮ ಕಾಲದ ಸ್ಥಿತ್ಯಂತರ ಹಾಗೂ ಪಲ್ಲಟಗಳನ್ನು ಹಲವು ಸ್ತರಗಳಲ್ಲಿ ಕಟ್ಟಿಕೊಡಲು ಮಾಡಿರುವ ಪ್ರಶಂಸನೀಯ ಮತ್ತು ಪ್ರೌಢ ಪ್ರಯತ್ನ (ಚಿತ್ರ ವಯಸ್ಕರಿಗೆ ಮಾತ್ರ). ವಾರಾಣಸಿಯ ಹಿನ್ನೆಲೆಯಲ್ಲಿ, ನಮ್ಮ ಎಲ್ಲ ಸಣ್ಣ ನಗರ / ಪಟ್ಟಣಗಳ ರೂಪಾಂತರ...

read more
ಮಗನ ರೂಮಲ್ಲಿ ಕಾಲಿಟ್ಟರೆ 'ಖಾಲಿ'ಯೊಂದು ಅಪ್ಪಿ ಬಿಡುತ್ತದೆ

ಕೊಳಲು ಲಕ್ಷ್ಮಿಕಾಂತ ಇಟ್ನಾಳ್ ಯಾರಿದ್ದೀರಿ, ತೆರೆದ ಮನೆಯಲ್ಲಿ? ನಾವಿದ್ದೇವೆ, ನಾವು,.... ನಾವೆಂದರೆ? ನಾನು ಇವಳು ಮತ್ತೆ ಮಗಳು ಮೂರೇ ಜನಾನಾ? ಇಲ್ಲ ಇಲ್ಲ, ಪುಟ್ಟ ಖುಷಿ, ವಯಸ್ಸಾದ ಬುದ್ಧಿಯೂ ಇದೆ, ಈ ಖುಷಿಯಂತೂ ಓಡಾಡಿಕೊಂಡಿರುತ್ತದೆ ನಮ್ಮ ಮುಖಗಳಲ್ಲಿ , ಮನಗಳಲ್ಲಿ ತಂಗಾಳಿಯಂತೆ...ಮುದವಾಗಿರುತ್ತದೆ, ಒಂದೇ ಕಡೆಗಿರುವುದಿಲ್ಲ...

read more
ಹೊಸತನಕ್ಕೆ ತುಡಿವ ಮನ ಹೋಯಿತೆಲ್ಲಿಗೆ? – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಸರಿಯಾಗಿ ಒಂದು ಶತಮಾನದ ಹಿಂದೆ ಟಿ.ಎಸ್. ಎಲಿಯಟ್ ಬರೆದ 'ದಿ ಲೌ ಸಾಂಗ್ ಆಫ್ ಜೆ.ಆಲ್ಫ್ರೆಡ್ ಪ್ರುಫ್ರಾಕ್' ಪದ್ಯ ಇಂಗ್ಲಿಷ್ ಸಾಹಿತ್ಯದಲ್ಲಿ ಒಂದು ಅಪೂರ್ವ ಘಟನೆಯೆಂದು ಪರಿಗಣಿಸಲ್ಪಟ್ಟಿದೆ. ಈ ಪದ್ಯದ ಶತಮಾನೋತ್ಸವವನ್ನು ಇಂಗ್ಲಿಷ್ ಕಾವ್ಯ ಪ್ರೇಮಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಎಲಿಯಟ್ನ ಪ್ರತಿಭೆ, ಈ ಪದ್ಯದ...

read more
ಗೊತ್ತಿರಲಿಕ್ಕಿಲ್ಲ ಅವನಿಗೆ ತಾಜಾ ಕನಸುಗಳ ಸಂತೆಗೆ ಕಳಿಸಿದ್ದು – ಚೈತ್ರಿಕಾ

ಮರ್ಜಿಗಳ ನಡುವೆ - ಚೈತ್ರಿಕಾ ಶ್ರೀಧರ್ ಹೆಗಡೆ   ಗೊತ್ತೆ ಅವನಿಗೆ? ಪುಸ್ತಕಗಳ ಗಿರವಿ ಇಟ್ಟು ಕವಡೆ ತಂದಿದ್ದು? ಕೂಡಿ ಪಗಡೆ ಆಡಿದ್ದು? ಪಟ್ಟ ಕಟ್ಟಿ ಬೀಗಿದ್ದು?   ಮೆಟ್ಟುವ ದಾಟುವ ಕುಂಟೆಬಿಲ್ಲೆ ಗೆರೆಗಳ ಬರೆದು ಜಗಳವಾದರೆ ತೀರ್ಪಿಗೆ ಅಪ್ಪನ್ನ ಕರೆದು, ಕಡೆಗೂ ನೆನಪುಗಳ ಖಾಲಿ ಮಾಡಿಸಿ ಮನೆಗಳ ಮಾರಿದ್ದು?  ...

read more
ಸಾಯಲೆಂದು ಸಾಲ ಮಾಡಬೇಡಿ – ಡಾ ಎಸ್ ಬಿ ಜೋಗುರ

ಡಾ ಎಸ್ ಬಿ ಜೋಗುರ ಬದುಕನ್ನು ಗ್ರಹಿಸುವ, ಸ್ವೀಕರಿಸುವ ರೀತಿಯಲ್ಲಿಯೇ ಬಾಳಿನ ಸಾರ್ಥಕತೆ ಮತ್ತು ನಿರರ್ಥಕತೆಗಳು ಕೂಡಾ ನಿರ್ಣಯವಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರ ತಂದೊಡ್ಡುವ ಅನೇಕ ಬಗೆಯ ಧಾವಂತಗಳ ನಡುವೆಯೂ ನಾವು ನೆಮ್ಮದಿಯಿಂದ ಬದುಕಿ ಉಳಿಯಬೇಕು ಎಂತಾದರೆ ಭೌತಿಕತೆಯ ಮೋಹವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು....

read more
ನಾ ದಿವಾಕರ್ ಬರೆದ ಸಣ್ಣಕಥೆ

ಬದುಕುವ ಯೋಗ ನಾ ದಿವಾಕರ ಆರು ತಿಂಗಳ ಅವಿರತ ಶ್ರಮ ವಿಫಲವಾಗಿ ಎರಡು ಗುಂಟೆ ಭೂಮಿಯಲ್ಲಿ ತಾನು ನೆಚ್ಚಿಕೊಂಡಿದ್ದ ಬೆಳೆ ವಿಫಲವಾದಾಗ ತಿಮ್ಮಪ್ಪನಿಗೆ ಭೂಮಿಯೇ ಕುಸಿದಂತಾಗಿತ್ತು. ನಾಳಿನ ಚಿಂತೆ ಇರಲಿ ಒಪ್ಪೊತ್ತಿನ ಊಟಕ್ಕೇ ಸಂಚಕಾರ ಬಂದಿತ್ತು. ಸಾವು ಬದುಕಿನ ಹೋರಾಟದ ಛಾಯೆ ಅವರಿಸಿತ್ತು. ಒಂದು ಮುಂಜಾನೆ ಇಡೀ ಗ್ರಾಮವೇ ತಳಿರು...

read more
ಬೇಲೂರು ರಘುನಂದನ್ ಕಾಲಂ : ಕನಸುಗಳ ಕಟ್ಟಿ ನನಸು ಮಾಡುವ ಗಟ್ಟಿಗಿತ್ತಿ ಉಮಾಶ್ರೀ

ಕಟ್ಟುವುದು ಎಂದರೆ ಸುಲಭದ ಮಾತಲ್ಲ. ರಸ ಫಲವಾಗಲು ತೆನೆ ಕಟ್ಟಬೇಕು. ಪ್ರಕೃತಿಗೆ ಕಟ್ಟುವ ಮತ್ತು ಕೈ ಹಿಡಿದು ನಡೆಸುವ ಶಕ್ತಿ ಯಾವ ಕಾಲಕ್ಕೂ ಇದ್ದೇ ಇರುತ್ತದೆ, ಈ ಭೂಮಿಗೆ ಇರುವುದು ಬಹಳದೊಡ್ಡ ಧಾರಣ ಶಕ್ತಿ. ಪ್ರಕೃತಿಯ ಭಾಗವೇ ಆದ ಜೀವ ರಾಶಿಗಳಿಗೂ ಕಟ್ಟುವ ಅಥವಾ ಕಟ್ಟಿದ್ದರಲ್ಲಿ ಇರಬಲ್ಲ ಸಾಧ್ಯತೆಗಳು ಇದ್ದೇ ಇರುತ್ತದೆ. ಹೇಗೆಂದರೆ...

read more
’Classical Kannada poetry & prose A reader' ಇಂದು ಬಿಡುಗಡೆ

ಅನುವಾದಗಳು ನಾವು ಕಾಣದ ಇನ್ನೊಂದು ಲೋಕಕ್ಕೆ ನಮ್ಮನ್ನು ಪರಿಚಯಿಸುತ್ತದೆ. ಇನ್ನೊಂದು ಭಾಷೆಯೊಡನೆ, ಸಮಾಜದೊಡನೆ, ಬದುಕಿನೊಡನೆ ಸಂವಹನವನ್ನು ಸಾಧ್ಯವಾಗಿಸುತ್ತದೆ. ಬೇರೆ ಭಾಷೆಯಿಂದ ಅನುವಾದಗೊಂಡ ಕೃತಿಗಳು ನಮ್ಮ ಅರಿವನ್ನು ಹಿಗ್ಗಿಸುವಂತೆಯೇ, ನಮ್ಮ ಭಾಷೆ, ನಮ್ಮ ಬದುಕು ಇನ್ನೊಂದು ಭಾಷೆಗೆ ಅನುವಾದಗೊಂಡಾಗ ಜಗತ್ತಿನ ಕಿಟಕಿಯನ್ನು ಆ...

read more
’ಕೆ ಜಿ ಸೋಮಶೇಖರ್ ಮತ್ತು ಅವರ ಫೋಟೋಗ್ರಫಿ’ – ಆಕಾಶ್

ಆಕಾಶ್   ಪ್ರಿಯ ಸಹೃದಯರೆ, ಇತ್ತೀಚೆಗೆ ನಾನು ಸಚಿತ್ರವಾಗಿ ಓದಿ ಆಸ್ವಾದಿಸಿದ ಈ ಪುಸ್ತಕದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಈ ಲೇಖನ. ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ಕ್ಲೀಷೆಯ ಮಾತಾಗಿರಬಹುದು. ಆದರೂ ಒಬ್ಬ ಶ್ರೇಷ್ಠ ಕಲಾಕಾರನ ಸೃಷ್ಠಿಯಲ್ಲಿ ಒಂದು ಚಿತ್ರ ಅಥವಾ ಛಾಯಾಚಿತ್ರ ನಿಜಕ್ಕೂ ಸಾವಿರ ಪದಗಳಲ್ಲಿ...

read more
’ಅನಾಥವಾದ ಆರ್ತನಾದವೊಂದು ತರೆಗೆಲೆಗಳ ಅಡಿಯಲ್ಲಿ..’ – ರಶ್ಮಿ ತೆಂಡೂಲ್ಕರ್

ರಶ್ಮಿ ತೆಂಡೂಲ್ಕರ್ ಆಗಸದಲ್ಲಿ ದಿಶೆ ತಪ್ಪಿದ ಒಂಟಿ ಬೆಳ್ಳಕ್ಕಿಯ ಕೂಗು ನೀರಿನಿಂದ ದಡಕ್ಕೆ ಜಿಗಿದ ಮೀನಿನ ಚಡಪಡಿಕೆಯ ಸದ್ದು ಮೌನವನು ಸೀಳಲು ಹಾತೊರೆದಿದೆ   ಕಣ್ಣ ಹನಿ ಕೆನ್ನೆಗೆ ಜಾರುವ ಮುನ್ನವೇ ಆವಿಯಾಗಿ ಬೀಸುವ ಶುಷ್ಕ ಗಾಳಿಯಲಿ ಸುಟ್ಟ ಹೃದಯದ ಘಾಟು   ಮೇಲೇರಿಗೇರಲು ಸಿದ್ಧ ಭೂತವೂ, ಭವಿಷ್ಯವೂ ಬಯಲು ಕೋಲವೋ ಒತ್ತೆ...

read more
’ಮೂಗುತಿ ಮುಂಬಾರ..’ – ಸ್ಮಿತಾ ಅಮೃತರಾಜ್ ಬರೀತಾರೆ

  ಸ್ಮಿತಾ ಅಮೃತರಾಜ್ ಪುಟ್ಟು ಪುಟ್ಟ ಮಕ್ಕಳೆಲ್ಲರೂ ಅಪ್ಪ-ಅಮ್ಮನನ್ನು,ಹಿರಿಯರನ್ನು,ತನ್ನ ಸುತ್ತಮುತ್ತಲಿನವರನ್ನು ಅನುಕರಿಸುವುದು ಸಹಜ.ಅದರಲ್ಲೂ ಮನೆಯಲ್ಲಿ ಪುಟ್ಟ ಗೌರಿಗಳಂತೆ ಹೆಣ್ಣು ಮಕ್ಕಳಿದ್ದರಂತೂ ಮುಗಿಯಿತು.ಅಮ್ಮನಂತೆ ವೇಷ ಭೂಷಣ ಧರಿಸುವುದೇನು? ಸೀರೆ ರವಿಕೆ ತೊಡುವುದು,ಅವಳ ಹಾವ -ಭಾವಗಳನ್ನೆಲ್ಲಾ ಚಾಚು ತಪ್ಪದೇ...

read more
ಸಾಮಾಜಿಕ ಕಾರಣಗಳಿಗಾಗಿ ಮುಖ್ಯ ಆಗುವ 'ಬಾಹುಬಲಿ'

ಕುಮಾರ ರೈತ ಭಾರತೀಯ ಸಂದರ್ಭದಲ್ಲಿ ಮಹಿಳೆಯರು ಕೂಡ ದಲಿತರಷ್ಟೆ ಶೋಷಣೆಗೆ ಒಳಗಾದವರು. ಆದರೆ ಎಲ್ಲ ಕಾಲಘಟ್ಟದಲ್ಲಿಯೂ ಹೀಗೆ ಇತ್ತೆ ? ಖಂಡಿತ ಇದ್ದಿರಲಿಕ್ಕಿಲ್ಲ. ಭಾರತ ಉಪಖಂಡ ಅನೇಕ ಭಾಗಗಳು ನಿಜ ಅರ್ಥದಲ್ಲಿ ಮಾತೃ ಪ್ರಧಾನ ವ್ಯವಸ್ಥೆ ಹೊಂದಿತ್ತು. ಮನೆತನ ಮುನ್ನೆಡೆಸುವಂತೆ ಸಂಸ್ಥಾನ, ರಾಜ್ಯ, ದೇಶಗಳನ್ನು ಮುನ್ನಡೆಸಿದ್ದಾರೆ....

read more
ಅವಳು ನಿದ್ದೆಗೆಂದು ರೆಪ್ಪೆಗಳ ಮುಚ್ಚಿದ್ದೇ ಇಲ್ಲ…

ಸಂಗಂ ಸಾಹಿತ್ಯದ ಅಕಮ್ ಕವಿತೆಗಳು ಆರ್ ವಿಜಯರಾಘವನ್ ಪ್ರಾಚೀನ ತಮಿಳು ಸಂಗಂ ಕಾವ್ಯವನ್ನು ಅಕಮ್ ಮತ್ತು ಪುರಮ್ ಎಂದು ವಿಂಗಡಿಸಲಾಗಿದೆ. ಅಕಮ್ ಪ್ರೇಮ ಕಾವ್ಯ. ಪುರಂ ಕಾವ್ಯದ ಅಡಿ ಉಳಿದೆಲ್ಲವೂ ಸೇರ್ಪಡೆಯಾಗಿವೆ. ಇಲ್ಲಿ ಮೂರು ಅಕಮ್ ಕವಿತೆಗಳನ್ನು ಕೊಡಲಾಗಿದೆ. ಕೊಟ್ಟ ಭಾಷೆ ಅವನು ನಿನ್ನ ಹರಿವ ಕುರುಳ ಪ್ರೀತಿಯಿಂದ ನೇವರಿಸಿದ, ನುಡಿದ...

read more
'ಎಂದೂ ಮುಗಿಯದ ಸಿನಿಮಾದ ಕಥೆ…' – ಸ್ವರ್ಣ

ಸ್ವರ್ಣ ಎನ್ ಪಿ ಊರಿಗೆ ಬಂದ ನೆಂಟರನ್ನು ತಮ್ಮೂರಿನ ಥಿಯೇಟರುಗಳಿಗೆ ಕರೆದೊಯ್ದು ಸಿನೆಮಾ ತೋರಿಸುವುದು ಕೆಲ ದಶಕಗಳ ಮುಂಚಿನವರೆಗೂ ಅರಿಶಿನ ಕುಂಕುಮ ಕೊಡುವ ರಿವಾಜಿನಷ್ಟೇ ಪ್ರಮುಖ ಪಧ್ಧತಿಯಾಗಿತ್ತು . ಫಸ್ಟ್ ಶೋ ಎಂದು ಕರೆಯಲ್ಪಡುತ್ತಿದ್ದ ಸಂಜೆಯ ಶೋಗೆ ಮಧ್ಯಾಹ್ನ ಬೇಗ ಊಟ ಮುಗಿಸಿ , ಮುಸುರೆ ತೊಳೆದು , ಚಿಲ್ಟಾರಿಗಳಿಗೆಂದು...

read more
ಆಡಿಕೊಳ್ಳಲು ಬ್ಯಾಡಿ ಬಡವಾರ ಬದುಕಾ….

ಹುಲಿಕುಂಟೆ ಮೂರ್ತಿ 'ಕಾಕಮುಟ್ಟೈ' ಸಿನಿಮಾ ನೋಡಿ ವಾರವಾದರೂ, ಅದರ ಕುರಿತು ಏನನ್ನೂ ಬರೆಯಬಾರದು ಅಂದುಕೊಂಡರೂ ಅದ್ಯಾಕೋ ಬೆನ್ನಿನಲ್ಲಾದ ಕೀವು ತುಂಬಿದ ಗಾಯದ ಹಾಗೆ ಜುವುಗುಟ್ಟುತ್ತಿದೆ... ಸಿನಿಮಾ ಚೆನ್ನಾಗಿದೆ. ಈ ನೆಲದ ಕತೆಗಳನ್ನು ತಣ್ಣಗೆ ಆಡಂಬರವಿಲ್ಲದೆ ಹೇಳುವ ಕಲೆ ಗೊತ್ತಿರುವ ತಮಿಳರ ಯಥಾವತ್ತು ಶ್ರದ್ಧೆ ಸಿನಿಮಾವನ್ನು...

read more
ರಾಜಸ್ಥಾನವೆಂಬ ಸ್ವರ್ಗದ ತುಣುಕು : ಪ್ರೀತಿಯ ಕತ್ತಿಯಲಗಿಗೆ ಜೀವಕೊಟ್ಟ ಜೀವಕೆ..

ಲಕ್ಷ್ಮಿಕಾಂತ ಇಟ್ನಾಳ್ ’ಅವಧಿ’ಗಾಗಿ ಬರೆದ ಪ್ರವಾಸ ಲೇಖನ ’ರಾಜಾಸ್ಥಾನವೆಂಬ ಸ್ವರ್ಗದ ತುಣುಕು’ ದ ಕೊನೆಯ ಕಂತು ಇಲ್ಲಿದೆ *** ಪುಷ್ಕರದ ಬ್ರಹ್ಮ ಮಂದಿರದಲ್ಲಿ ಹಜರತ್ ಖ್ವಾಜಾ ಮೊಯಿನುದ್ದೀನರ ಶಿಷ್ಯನಾದ ಕುತ್ಬುದ್ದೀನ್ ಬಕ್ತಿಯಾರ್ಕಾಕಿ ಒಮ್ಮೆ 1235 ರಲ್ಲಿ ಒಂದು ದಿನ ಸಮಾ (ಕವ್ವಾಲಿಯ ಮೊದಲಿನ ಹೆಸರು) ಮೆಹಫಿಲ್ದಲ್ಲಿ ಶೇಖ್...

read more
'ಧರಿಸಿದ್ದು ವೇಷವಲ್ಲ …' – ವಾಸುದೇವ ನಾಡಿಗ್

ಕಳಚಿಡುವುದಕ್ಕೆ ವೇಷವಲ್ಲ ವಾಸುದೇವ ನಾಡಿಗ್ ಹಾಗೇ ಸುಮ್ಮನೆ ಪ್ರತಿ ಅಂಕಕ್ಕೊಮ್ಮೆ ನೇಪಥ್ಯಕೆ ತೆರಳಿ ಮುಖ ಬದಲಾಯಿಸಿ ಗೆರೆಗಳನ್ನು ಅಳಿಸಿ ಸರಿಪಡಿಸಿ ನೆರಿಗೆಗಳನ್ನು ಮತ್ತೆ ಮರಳಿ ಉರುಹೊಡೆದ ಮಾತುಗಳನೆಲ್ಲಾ ಬುಳಕ್ಕನೆ ವಾಂತಿಮಾಡಿಕೊಂಡಂತಲ್ಲ ಬದುಕು. ಯಾರೋ ಬರೆದಿಟ್ಟ ಕತೆಗೆ ಕಡೆದಿಟ್ಟ ಪಾತ್ರಕ್ಕೆ ತುಂಬಿ ಮಾತುಗಳ ಇರುಕಿ ಭಾವಗಳ...

read more
ಸಂಕಲ್ಪ ತಂಡದ ’ಮಾಕ್‌ಬೆತ್’ ನಾಟಕ

- ಸುಮನ ಶಿವಮೊಗ್ಗ ಬದುಕಿನಿಂದ ಬಹಿಷ್ಕೃತರಾಗಿ ಒಂಟಿಯಾಗಿ ಶಿಕ್ಷೆ ಅನುಭವಿಸುತ್ತಾ, ನಿರಂತರ ಕೀಳರಿಮೆಯಿಂದ ಬದುಕು ದೂಡುತ್ತಿರುವ ಕೈದಿಗಳಿಗೆ ಬದುಕು ಕಟ್ಟಿಕೊಡಬೇಕು. ನಾವಿನ್ನು ಒಂಟಿ, ನಮ್ಮ ಬದುಕು ಮೂರಾಬಟ್ಟೆಯಾಯಿತು ಎಂದು ಭಾವಿಸುವವರಿಗೆ ಗುಂಪಿನಲ್ಲಿಯೇ ಬದುಕಬೇಕು ಎನ್ನುವ ಮಂತ್ರ ಹೇಳಿಕೊಡಬೇಕು. ಬತ್ತಿದ ಬದುಕಿನೊರತೆಯಲ್ಲಿ...

read more
ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2015

ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ - 2015 ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರಿಂದ ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ " ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ - 2015" ಅನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವನಗಳನ್ನು...

read more

Pin It on Pinterest

Share This