ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಬೆಳದಿಂಗಳ ಗುರುತು ಉಳಿಸಿಕೊಳ್ಳುವುದಿಲ್ಲ ಭೂಮಿ' – ಹೇಮಾ ಕಳ್ಳಂಬೆಳ್ಳ
- ಹೇಮಾ ಕಳ್ಳಂಬೆಳ್ಳ ಮುಳ್ಳುಗಳ ನಡುವೆಯೇ ಗುಲಾಬಿಯು ಅರಳುವುದು ಕೇಳು ಗೆಳೆಯ ಮುಂಜಾನೆ ಉದಯಕೆ ಬೇಕು ಒಂದೆರಡು ಹಕ್ಕಿಗಳ ಚಿಲಿಪಿಲಿಯ ಸಂಗ ಧರೆ ಚಿಗುರಿ ಹಸಿರಾಗಿ ಉಸಿರಾಡಲು ಕುದಿಯಲೇಬೇಕು ಕಡಲು ನಿನ್ನೊಲವ ಸವಿಯಲು ಸಹಿಸುವೆನು ವಿರಹವನು ಸರಿ ಇರಲಿ ಬಿಡು ಮಾಮರಕೆ ಕೋಗಿಲೆ ಮಾವಿನ ಹಣ್ಣು ಗಿಳಿಗೆ ಮತ್ತೆ ಚಿಗುರು ಮತ್ತೆ ಹಣ್ಣು...
'ಇದು ಯಾರ ನೆತ್ತರು, ಇಲ್ಲಿ ಯಾರು ಸತ್ತರು?' – ಸಂವರ್ತ ಸಾಹಿಲ್
ಸಂವರ್ತ ಸಾಹಿಲ್ ಚಿತ್ರ ಕೃಪೆ : ಪಿ ಮಹಮದ್ ದೇಶ-ಧರ್ಮದ ಭಕ್ತನೇ ಹೇಳು, ಕಣ್ಣೆತ್ತಿ ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡು, ನನಗೂ ಕೇಳುವಂತೆ ಒಮ್ಮೆ ಉತ್ತರಿಸು, ಇದು ಯಾರ ನೆತ್ತರು, ಇಲ್ಲಿ ಯಾರು ಸತ್ತರು? ನೆಲದೆದೆಯ ಮೇಲೆ ಉರಿಯುತ್ತಿರುವ ಕೆಂಡದುಂಡೆಗಳು ಕೇಳುತ್ತಿವೆ ನಮ್ಮವರಾಗದೆ ಹೋದ ಮಂದಿಯ ಮೈಯಿಂದ ಹರಿಯುವ ರಕ್ತವು...
'ಕನಸುಗಳಲ್ಲಿ ಸಮಸ್ಯೆ ಪರಿಹಾರ ಸಾಧ್ಯವೆ?' – ಜೆ ಬಾಲಕೃಷ್ಣ ಬರೀತಾರೆ
(ಈ ಲೇಖನದ ಹಿಂದಿನ ಭಾಗ ಇಲ್ಲಿದೆ) ಜೆ ಬಾಲಕೃಷ್ಣ ಜರ್ಮನ್ ರಾಸಾಯನ ಶಾಸ್ತ್ರಜ್ಞ ಫ್ರೆಡರಿಕ್ ಕೆಕುಲೆ ಬೆಂಜೀನ್ನ ರಾಸಾಯನಿಕ ರಚನೆ ರೂಪಿಸಲು ಹಲವಾರು ವರ್ಷಗಳಿಂದ ಹೆಣಗಾಡುತ್ತಿದ್ದರೂ ಸಾಧ್ಯವಾಗಿರಲಿಲ್ಲ. ಅದೇ ಪ್ರಯತ್ನದಲ್ಲಿ 1865ರ ಒಂದು ರಾತ್ರಿ ಅಧ್ಯಯನದಿಂದ ಆಯಾಸಗೊಂಡು ರಾತ್ರಿ ಬೆಂಕಿಯ ಮುಂದೆ ಚಳಿ ಕಾಯಿಸಿಕೊಳ್ಳುತ್ತಾ...
ಕನ್ನಡ ಮನಸುಗಳನ್ನು ಬೆಸೆಯಲಿ ಸಾಹಿತ್ಯ ಸಮ್ಮೇಳನಗಳು
ಸಾಹಿತ್ಯ ಪರಿಷತ್ತು ಮಾಡಲೇಬೇಕಾದ ಕೆಲಸವಿದು ಡಾ ಎಸ್ ಬಿ ಜೋಗುರ ಶತಮಾನದ ಸಂದರ್ಭದಲ್ಲಿರುವ ಸಾಹಿತ್ಯ ಪರಿಷತ್ತು ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಯೋಚನೆಯ ಬೆನ್ನಲ್ಲಿಯೇ ಬರಗಾಲದ ಬಿಸಿ ಮಾತುಗಳು ಕೇಳಿಬರತೊಡಗಿವೆ. ಬರಗಾಲದ ಪರಿಸ್ಥಿತಿ ಇದೆ ಎನ್ನುವ ಕಾರಣಕ್ಕಾಗಿ ನಾವು ಪರಿಷತ್ತು ಮಾಡಬೇಕಾದ ಪಾರಂಪರಿಕ...
ಮೂಢ ನಂಬಿಕೆಗಳ ಮಿಥ್ಯೆಯ ನಡುವೆ ವೈಚಾರಿಕತೆಯ ಹತ್ಯೆ
ನಾ ದಿವಾಕರ ಭಾರತದ ಸಾಮಾಜಿಕ ಸನ್ನಿವೇಶದಲ್ಲಿ ಆಧುನಿಕತೆ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ನಾಗರೀಕತೆಯ ಮೇಲೆ ಎಷ್ಟೇ ಪ್ರಭಾವ ಬೀರಿದ್ದರೂ ನಮ್ಮ ಸಮಾಜದ ಆಂತರ್ಯದಲ್ಲಿ ಬಲವಾಗಿ ಬೇರೂರಿರುವ ಮತೀಯ ಭಾವನೆಗಳು, ಧಾರ್ಮಿಕ ನಂಬಿಕೆಗಳು ಮತ್ತು ದೈವೀಕ ವಿಶ್ವಾಸ ಜನರನ್ನು ಪ್ರಗತಿಯತ್ತ ಕೊಂಡೊಯ್ಯುವ ಬದಲು ಮೌಢ್ಯತೆಯೆಡೆಗೆ,...
ನಿದ್ದೆ ಮತ್ತು ಕನಸುಗಳು
(ಲೇಖನದ ಹಿಂದಿನ ಭಾಗ ಇಲ್ಲಿದೆ) ಜೆ ಬಾಲಕೃಷ್ಣ ಕನಸು ಮತ್ತು ಆರೋಗ್ಯ ಫ್ರಾನ್ಜ್ ಕಾಫ್ಕನ ಪ್ರಸಿದ್ಧ ಕತೆ 'ರೂಪಾಂತರ'ದ ಮೊದಲನೆಯ ಸಾಲು ಹೀಗಿದೆ: 'ಗ್ರೆಗರ್ ಸಂಸ ಒಂದು ದಿನ ಬೆಳಿಗ್ಗೆ ಕೆಟ್ಟ ಕನಸುಗಳಿಂದ ಎಚ್ಚೆತ್ತಾಗ ತನ್ನ ಹಾಸಿಗೆಯಲ್ಲಿ ತಾನೊಂದು ದೊಡ್ಡ ಹುಳುವಾಗಿ ರೂಪಾಂತರಗೊಂಡಿರುವುದಾಗಿ ಕಂಡ'. ಗ್ರೆಗರ್ ಸಂಸನಲ್ಲಿ...
ಸತ್ಯ ಉಳಿಸುವೆವು ಹತ್ಯೆಗಳ ಸರದಿಯಲಿ ಸಿಡಿದು ನಿಲ್ಲುತ್ತಾ …
ಮಾರ್ಗದಲಿ ಹೆಜ್ಜೆಯಾಗಿ.. ರಮೇಶ ಗಬ್ಬೂರು ಸತ್ಯ ಉಳಿಸುವೆವು ಹತ್ಯೆಗಳ ಸರದಿಯಲಿ ಸಿಡಿದು ನಿಲ್ಲುತ್ತಾ .. ಹುಡುಕುವುದು ಬಿಡೆವು ನಿಮ ತುಪಾಕಿಯ ಗುಂಡಿಗೆ ಗುಂಡಿಗೆಯ ಒಡ್ಡುತ್ತಾ.. ಸಾವನ್ನು ಬೆನ್ನಿಗಟ್ಟುಕೊಂಡು ಬರುವೆವು ನಿಮ ಕೋವಿಯಲಿ ಗೂಡು ಕಟ್ಟುತ್ತಾ.. ಮತಮೌಢ್ಯದ ಹಾವನ್ನು ಹಿಡಿಯದೆ ಬಿಡೆವು ವಿಚಾರದ ಬುಟ್ಟಿ ಹೆಣೆಯುತ್ತಾ.....
ಏನಿದು ಕಳಸಾ-ಬಂಡೂರಿ ನಾಲಾ ವಿವಾದ?
ಅರಕಲಗೂಡು ಜಯಕುಮಾರ್ ರಾಜ್ಯದ ಜನತೆಯನ್ನು ಪ್ರತೀ ಬಾರಿ ಕಾಡುವ ಸಮಸ್ಯೆಗಳಲ್ಲಿ ಜಲವಿವಾದದ್ದು ಪ್ರಮುಖವಾದುದು. ಇತ್ತ ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಆಗಿಂದಾಗ್ಯೆ ಭುಗಿಲೇಳುತ್ತಿದ್ದ ಕಾವೇರಿ ನೀರಿನ ವಿವಾದ ಆತಂಕ ಸೃಷ್ಟಿಸಿದರೆ, ಅತ್ತ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ಯೋಜನೆಯ ಪಾಲು ಪಡೆಯುವಲ್ಲಿ ಆತಂಕದ ವಾತಾವರಣ...
ಟಿ ಎನ್ ಸೀತಾರಾಮ್ ಮದುವೆ ದಿನ ಹಿಂಗಾಯ್ತಂತೆ
ಟಿ ಎನ್ ಸೀತಾರಾಮ್ ಮೊದಲು ರಿಜಿಸ್ಟರ್ ಮದುವೆ ಸಾಕೆ೦ದೂ ಛತ್ರದ ಮದುವೆ ಬೇಡವೆ೦ದೂ ನಾನು ಹೇಳಿದಾಗ ಅವರ ಮನೆಯವರು ಗಾಭರಿ ಬಿದ್ದರು. ಗೀತಾ ತ೦ದೆ ಮು೦ಚೆಯೇ ಹೋಗಿಬಿಟ್ಟಿದ್ದರು. ಅಣ್ಣನೇ ಸಾಕಿದ್ದು. ತ೦ಗಿಯ ಮದುವೆ ಚೆನ್ನಾಗಿ ಮಾಡಿಕೊಡದಿದ್ದರೆ ಜನ ತನ್ನನ್ನು ಆಡಿಕೊಳ್ಳುತ್ತಾರೆ೦ದೂ ಈ ಥರದ ರಿಜಿಸ್ಟರ್ ಮದುವೆ ಬೇಡವೆ೦ದೂ,...
ಕನಸುಗಳು ಮತ್ತು ಅವುಗಳ ಸಂಕೇತಗಳು – ಜೆ ಬಾಲಕೃಷ್ಣ
ಕನಸುಗಳ ಮಾಯಾಲೋಕದ ಬಗ್ಗೆ ಬರೆಯುತ್ತಿದ್ದಾರೆ ಜೆ ಬಾಲಕೃಷ್ಣ. ಲೇಖನದ ಮೊದಲ ಭಾಗ ನಿನ್ನೆ ಪ್ರಕಟವಾಗಿತ್ತು. ಮುಂದಿನ ಭಾಗ ಇಲ್ಲಿದೆ. ಜೆ ಬಾಲಕೃಷ್ಣ ಕನಸುಗಳ ವಿಶ್ಲೇಷಣೆ ಕನಸುಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ 1861ರಲ್ಲಿ ಎ.ಮಾರಿಯ ಅವರ 'ನಿದ್ರೆ ಮತ್ತು ಕನಸುಗಳ ಅಧ್ಯಯನ' ಎಂಬ ಪುಸ್ತಕದ ಪ್ರಕಟಣೆಯೊಂದಿಗೆ...
ಗೊರೂರರ ಮನೆ ಹೀಗಾಯ್ತೆ…
ಎಂ ಆರ್ ಕಮಲ ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ರಾಜಾಜಿನಗರದಲ್ಲಿ ವಾಸವಾಗಿದ್ದ ಮನೆ.. ಇವತ್ತು ಕಾಲೇಜಿಗೆ ಹೋಗುವಾಗ ಮನೆಯನ್ನು ಒಡೆದು ಹಾಕುತ್ತಿದ್ದ ದೃಶ್ಯವನ್ನು ನೋಡಿ ತೀರಾ ಕಸಿವಿಸಿಯಾಯಿತು.. ಇದೇ ದಾರಿಯಲ್ಲಿ ೩೦ ವರ್ಷಗಳ ಹಿಂದೆ ಕಾಲೇಜಿಗೆ ಹೋಗುತ್ತಿದ್ದಾಗ ದಿನ ನಿತ್ಯವು ಅವರನ್ನು ಮಾತನಾಡಿಸಿ...
’ಬನ್ನಿ ಎಂದೂ ಕರೆದರೂ ಬರುವವರಿಲ್ಲ’ – ಸುಚಿತ್ರಾ
ಸುಚಿತ್ರಾ ಬನ್ನಿ ಎಂದೂ ಕರೆದರೂ ಬರುವವರಿಲ್ಲ?! ಮತ್ಯಾತಕೋ ಈ ಸಂಬಂಧಗಳು ಬೆಸುಗೆ- ಆತ್ಮೀಯತೇ- ಪ್ರೀತಿ ಬನ್ನಿ ಎಂದೂ ಕರೆದರೂ ಬರುವವರಿಲ್ಲ ಮತ್ಯಾತಕೋ ಈ ಭವದ ಮೋಹ ಈ ಭೇದ ಭಾವದ ಹಂಗುಗಳು ಬನ್ನಿ ಎಂದೂ ಕರೆದರೂ ಬರುವವರಿಲ್ಲ ಇನ್ನೇತಕೋ ಜಾತಿ-ಧರ್ಮದ ಗೋಡೆ ಕೆಡವಿ ಕಟ್ಟಿರೋ ಒಂದೇ ಸೂರಿನಡಿಯ ಬೆಳಕು ಬನ್ನಿ ಎಂದೂ ಕರೆದರೂ...
ಹಿರಿಯ ಸಂಶೋದಕ ಕಲ್ಬುರ್ಗಿ ಗುಂಡಿನ ದಾಳಿಯಿಂದ ಸಾವು
ಹಿರಿಯ ಚಿಂತಕ, ಸಂಶೋದಕ ಎಂ ಎಂ ಕಲಬುರ್ಗಿ ಅವರ ಮೇಲೆ ಇಂದು ಮುಂಜಾನೆ ಅವರ ಮನೆಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿ ಆಗಿದ್ದು ಕಲಬುರ್ಗಿಯವರು ಮೃತ ಪಟ್ಟಿದ್ದಾರೆ. ೭೬ ವರ್ಷಗಳ ಕಲಬುರ್ಗಿಯವರ ಮೇಲೆ ಧಾರವಾಡದಲ್ಲಿ ನಡೆದ ಗುಂಡಿನ ದಾಳಿ ಎಲ್ಲರನ್ನೂ ಆಘಾತಕ್ಕೊಳಪಡಿಸಿದೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮ ನವಂಬರ...
ಬೇಲೂರು ರಘುನಂದನ್ ಕಾಲಂ : 'ಆ ದಿನಗಳು' ಚೈತನ್ಯ ಕಂಡಂತೆ ಉಮಾಶ್ರೀ
'ಕಿಚ್ಚು ಧಾರಾವಾಹಿ ಮಾಡುವಾಗ ಮತ್ತು ಒಂದೆರಡು ಸಿನೆಮಾದಲ್ಲಿ ಉಮಾಶ್ರೀ ಅವರನ್ನು ಹತ್ತಿರದಿಂದ ನೋಡಿದ್ದೇನೆ. ನನಗೆ ತಿಳಿದಂತೆ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಕೂಡ ಮಾಡಿದ್ದೇನೆ. ಕಿಚ್ಚು ಧಾರವಾಹಿ ಮಾಡುವಾಗ ನನಗೆ ದೊಡ್ಡ ಹೆಸರೇನು ಇರಲಿಲ್ಲ. ಆದ್ರೆ ಆ ಹೊತ್ತಿಗೆ ಉಮಾಶ್ರೀ ಅವರು ಕನ್ನಡದಲ್ಲಿ ಸ್ಟಾರ್ ನಟಿ....
’ಕನಸೆಂಬ ಮಾಯಾಲೋಕ’ ಕ್ಕೆ ಕರೆದೊಯ್ಯುತ್ತಾರೆ ಜೆ ಬಾಲಕೃಷ್ಣ
ಜೆ ಬಾಲಕೃಷ್ಣ ಮಸುಕು ಸುಪ್ತ ಪ್ರಜ್ಞೆಯ ಆಳದಿಂದ ನಮ್ಮ ಬದುಕಿನ ಆದಿಮ ಮತ್ತು ಪ್ರಾಚೀನ ವಾಂಛೆಗಳನ್ನು ಕನಸುಗಳು ಬಡಿದೆಬ್ಬಿಸುತ್ತವೆ ನಮ್ಮ ಎಚ್ಚೆತ್ತ ಬದುಕಿನ ಸುಪ್ತ ಆಸೆಗಳನ್ನು ಈಡೇರಿಸಿಕೊಳ್ಳುವಂತೆ... -ಜೇಮ್ಸ್ ಸುಲ್ಲಿ, 1893 ಕನಸುಗಳಿಲ್ಲದಿದ್ದಲ್ಲಿ ನಮ್ಮ ಬದುಕೇ ನೀರಸವಾಗಿರುತ್ತಿತ್ತು. ಒಂದು ರೀತಿಯಲ್ಲಿ ನಮ್ಮ ಕನಸುಗಳೇ...
'ಕ್ಲಾಸ್‌ಗೆ ಆಟಗಾರ, ಮಾಸ್‌ಗೆ ಮಾಟಗಾರ' – ಚಿತ್ರಪ್ರಿಯ ಸಂಭ್ರಮ್
ಚಿತ್ರಪ್ರಿಯ ಸಂಭ್ರಮ್ ದೂರದಲ್ಲೊಂದು ದ್ವೀಪ. ಒಂಟಿ ಮನೆ. ಆಧುನಿಕ ತಂತ್ರಜ್ಞಾನದ ಸುಳಿವು ಅಲ್ಲಿಲ್ಲ. ಸಮಾಜದ ವಿವಿಧ "ಮಹಾನ್ ಕಾರ್ಯ"ಗಳಲ್ಲಿ ಗುರುತಿಸಿಕೊಂಡಿರುವ ಹತ್ತು ಜನರು ಅಂಥ ಮನೆಯಲ್ಲಿ ತಿಂಗಳವರೆಗೆ ಜೀವಿಸುವ ವಾಹಿನಿಯೊಂದರ ಆಟವದು. ಈ ಪರಿಕಲ್ಪನೆ ಬಿಗ್ ಬಾಸ್ ಷೋಗೆ ಹೋಲಿಕೆ ಇದ್ದರೂ, ಇಲ್ಲಿ ನಡೆಯೋದೇ ಬೇರೆ....
ಹೃದಯಗಳನ್ನು ಬೆಸೆದ ಬೆಳದಿಂಗಳು ಉಲಿಯಿತು ..
ಲಕ್ಷ್ಮಿಕಾಂತ್ ಇಟ್ನಾಳ್ ಇಂಪು, ಕಂಪಿನ ಪರಿಮಳದ ಬೆರಗು ಕಣ್ತಣಿವ ಬೆಳದಿಂಗಳು ರೆಕ್ಕೆಯಲಿ ಯಕ್ಷಿ ಅಂಗಳದಲಿ ಹಾಲ್ನೊರೆಯ ತಿಳಿಗೆಂಪಲಿ ತುಟಿಯರಳಿ ತುಳುಕಿದ ನಗೆ ಮಿಂಚಲಿ ವಾತ್ಸಲ್ಯವರಳಿದ ಗೊಂಚಲು ಲವಲವಿಕೆಯ ಮೊಳಕೆ ಪರಿಸರಕೆ ಸಡಗರಕೆ ಸಡಗರ ಮನೆಯ ಸಕಲಕೆ ಭಾವಗಳಿಗೆ ಜೀವಸಹಿತ ಕನಸು ನಿರೀಕ್ಷೆಗೂ ಅನಿರೀಕ್ಷಿತ ನನಸು ಕೊಳಲಾದ ಕಣ್ಣುಗಳು...
ಮೆಹಂದಿ ಇಲ್ಲದೆ ಮದುವೆಯಾಗುವ ಆತಂಕದಲ್ಲಿ ಅತ್ತ ಪೂರ್ಣಿಮಾ!
ಮತ್ತೆ ಮತ್ತೆ ನೆನಪಾಗುವ ಗೌರತ್ತೆ .. (ಕಾಟ!) ಪೂರ್ಣಿಮಾ ಹೆಗಡೆ ನಮ್ಮ ಹುಟ್ಟಿದಾಗಿನಿಂದ ಸಾಯೋವರೆಗೂ ಅವನ ಜೀವನದ ಪ್ರತಿಯೊಂದು ಹಂತನೂ ಅತ್ಯಂತ ಮುಖ್ಯ ಅನ್ನೋದು ಅಕ್ಷರಶಃ ಸತ್ಯ. ಹಾಗೇ ನಮ್ಮ ಜೀವನದ ಮಜಲುಗಳನ್ನು ಅಷ್ಟು ಮುಖ್ಯವಾಗಿಸಿಕೊಳ್ಳೋದು ಹೇಗೆ ಎನ್ನೋದು ನಮಗೇ ಬಿಟ್ಟಿದ್ದು! ಹಾಗೊಂದು ವೇಳೆ ಜೀವನದ ಯಾವುದಾದರೂ ಒಂದು...
ಸಂಧ್ಯಾರಾಣಿ ಕಾಲಂ : ಅಲೆಯಿಡುವ ಮುತ್ತಿನೊಲು ಕಾಣುವುದು ನಿನ್ನೊಲುಮೆ…
ಅಲೆಯಿಡುವ ಮುತ್ತಿನೊಲು ಕಾಣುವುದು ನಿನ್ನೊಲುಮೆ ಇಲ್ಲ ಮೇಲಿನ ವಾಕ್ಯವನ್ನು ನಾನು ತಪ್ಪಾಗಿ ಬರೆದಿಲ್ಲ, ಅದು ’ಅಲೆಯಿಡುವ ಮುತ್ತಿನೊಳು ಕಾಣುವುದು ನಿನ್ನೊಲುಮೆ, ಒಳ ಗುಡಿಯ ಮೂರ್ತಿ ಮಹಿಮೆ’ ಎನ್ನುವುದು ನನಗೆ ಗೊತ್ತು. ಆದರೆ ನಾನೇನು ಮಾಡಲಿ, ನನಗೆ ಅತ್ಯಂತ ಆಳದ ಒಲುಮೆಗಳೆಲ್ಲಾ ಕಡಲ ಅಲೆಯಿಡುವ ಮುತ್ತಿನೊಲು ಕಾಣುತ್ತವೆ. ನನಗೆ...
'ಒಡಲ ದಾಟುವ ತವಕ ತಿಳಿಗೊಳ್ಳುವ ತನಕ…' – ಕಾವ್ಯ ಕಡಮೆ
ಹಸಿವು ಜೀವಂತ ಕಾವ್ಯಾ ಕಡಮೆ ನಾಗರಕಟ್ಟೆ ಹಸಿವು 1: ತೇವ ತಟ್ಟಲೇನು ಭಾಗ್ಯದ ಬಟ್ಟಲ ಬಾಗಿಲ ಸುಟ್ಟ ಗಂಟಲ ಗಂಟುಗಳ ನಯ ಬಾಗಿಸಿ ಜೀವ ಕತ್ತರಿಸಿ ತೇವ ಹರಿಯಲು ಪುಟಕ್ಕಿಟ್ಟ ಸಂಕಟ ಉಸಿರಾಡಿತು ನಡುವೆ ಕಲುಕಲಾರದ ಪ್ರಾಣ ಅಲ್ಲೆಲ್ಲೋ ಹಸಿವಿಗೆ ತುಸು ಜಾಗ ಕೊಡೆಂದು ಬೇಡುತ್ತದೆ ಉದರ ಅವನ ಪಾದದ ಬಿರುಕು ಇವನ ಮನೆ ಅವನುಸಿರ ಹಿಡಿದರೆ ಇವನ...
ದ್ವಿತೀಯ ಪುರುಷ ನಿರೂಪಣೆ – ಎಸ್ ದಿವಾಕರ್
ಎಸ್ ದಿವಾಕರ್ ಒಂದು ಕತೆಯಲ್ಲಿ ಏನೇನು ನಡೆಯಬೇಕೆಂದಿದೆಯೋ ಅದೆಲ್ಲವನ್ನೂ ಓದುಗರಿಗೆ ಮನದಟ್ಟುಮಾಡಿಕೊಡುವ ನೆಲೆ ಯಾವುದು? ದೃಷ್ಟಿಕೋನವೇ ಅಲ್ಲವೆ? ಕತೆಗಾರರಿಗೆ ಅದೊಂದು ಬಹುಮುಖ್ಯ ರಾಚನಿಕ ಸಂಪನ್ಮೂಲ. ಅದು ಕತೆಗಾರ ತನ್ನ ಕತೆಗೆ ಅಧಿಕೃತತೆಯನ್ನು ತಂದುಕೊಳ್ಳುವ ತಂತ್ರ; ತನ್ನ ವಸ್ತುವನ್ನೂ ಆಶಯವನ್ನೂ ಒಂದು ಕ್ರಮಕ್ಕೆ ಒಳಪಡಿಸಿ,...
