'ಮಗ ಆ ಕಡೆ ದೊಡ್ಡಮಾಂಸ ಮತ್ತು ಹಂದಿ ತಿಂತಾರಂತೆ…?

ಊಟ ನಮ್ಮಿಷ್ಟ ನೋಟ ಪರರಿಷ್ಟ

 

ಜಡಿಯಪ್ಪ ಗೆದ್ಲಗಟ್ಟಿ 

ಹೊಸಪೇಟೆಯಿಂದ ಮೈಸೂರಿಗೆ ಓದಲು ಬಂದು ಮಹಾರಾಜ ಕಾಲೇಜಿನ ಹಾಸ್ಟೆಲ್ ಸೇರಿದಾಗ ನನಗೆ ಸುಮಾರು 20 ವರ್ಷ, 10 ಮತ್ತು 12ನೇ ಕ್ಲಾಸಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಫೇಲಾದ ರೆಕಾರ್ಡ್ ನನ್ನ ಹೆಸರಿನಲ್ಲಿರುವ ಕಾರಣಕ್ಕೆ ಡಿಗ್ರಿಗೆ ಒಂದ್ಸೊಲ್ಪ ಲೇಟಾಗಿ ಸೇರಿದ್ದೆ.

beef1ಹೊಸಪೇಟೆಯಲ್ಲಿದ್ದಾಗ ನಮ್ಮ ಮನೆಯ ಊಟ ಮಾಮೂಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯಾಗಿತ್ತು ಮತ್ತು ಅದರ ಜೊತೆಯಲ್ಲಿ ವಾರಕ್ಕೆರಡು ಬಾರಿಯಾದ್ರು ಮಾಂಸದೂಟ ನೆಡೆಯುತ್ತಿತ್ತು, (ಆರ್ಥಿಕ ಶಕ್ತಿಗನುಸಾರವಾಗಿ ಮಾಂಸ ಕೊಳ್ಳಬಹುದು ಲೈಕ್ ತೊಡೆ ಮಾಂಸ, ತಲೆ ಮಾಂಸ, ಹೊಟ್ಟೆಯೊಳಗಿನ ಖಲೀಜ ಇತ್ಯಾದಿ) ಮಕ್ಕಳು ತಿನ್ನಲೆಂದು ಅಮ್ಮ ತಂದಿದ್ದು ಮತ್ತು ಅಪ್ಪನಿಗೆ ಹಳ್ಳಿಯಲ್ಲಿ ಬೇಟೆ ರೂಪದಲ್ಲಿ ಸಿಕ್ಕಿದ್ದು.

ಹೀಗಿದ್ದ ನನ್ನ ಊಟದ ಮೆನು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದ ತಕ್ಷಣ ಇದ್ದಕ್ಕಿದ್ದ ಹಾಗೆ ಬದಲಾಗಿ ಬಿಟ್ಟಿತ್ತು, ಹಾಸ್ಟೆಲ್ನಲ್ಲಿ ಬಾತ್ ಎನ್ನುವ ದಶವತಾರಿ ದಿನ ಬೆಳಗೊಮ್ಮೆ ಬೇರೆ ಬೇರೆ ರೂಪದಲ್ಲಿ ಬಂದು ತಟ್ಟೆಯನ್ನು ಆವರಿಸಿಕೊಳ್ಳುತ್ತಿತ್ತು, ಮದ್ಯಾಹ್ನ ಮತ್ತು ರಾತ್ರಿ ರಾಗಿ ಮುದ್ದೆ ಎಂಬ ಸ್ಥಳಿಯ ಅಜಾನುಬಾವ ತಟ್ಟೆಯಲ್ಲಿ ಉರುಳಾಡತೊಡಗಿದ್ದ ಗತಿ ಇಲ್ಲದೆ ತಿನ್ನುವುದ ಕಲಿತೆ. ಇನ್ನೂ ಮಾಂಸವೆನ್ನುವುದು ಕನಸಲ್ಲಿ ಬಂದೋಗತೊಡಗಿತ್ತು.

beefಜೋಳದ ರೊಟ್ಟಿಯ ಜಾಗವನ್ನು ಪ್ರಕೃತಿ ರಾಗಿ ಮುದ್ದೆಯ ಮುಖಾಂತರ ಬದಲಿಸಿದ್ದಕ್ಕೆ ನಾನು ಅಡ್ಜೆಸ್ಟಾಗಿ ಬದುಕುತ್ತಿದ್ದ ಸಮಯದಲ್ಲಿ ಮಾಂಸ ತಿರುಕನ ಕನಸಾಗತೊಡಗಿತ್ತು, ಹೋಟೆಲ್ಗೆ ಹೋಗಿ ತಿನ್ನೋಣವೆಂದರೆ ಬಡವರು ಮಕ್ಕಳು ಹಾಗಾಗಿ ಕಡಿಮೆ ಕಾಸಿಗೆ ಸಿಕ್ಕುವ ಮಾಂಸದ ಹಾದಿ ಹಿಡಿದು ಸಾಗಿದ ನನ್ನಂತವರಿಗೆ ಸಿಕ್ಕಿದ್ದು ಮಂಡಿ ಮೊಹಲ್ಲ, ಗೌಡರ ಬೀಗರ ಊಟ ಮತ್ತು ಕೊಡವರ ಮದುವೆಯ ಪಂದಿಕರಿ (ಇವೆರಡು ಬಿಟ್ಟಿ ಮತ್ತು ಅದೊಂದು ಬೇರೆ ಕತೆ)

ಇವೆಲ್ಲವುಗಳ ನಡುವೆ ಅವ್ವನದ್ದು ಒಂದೇ ಕನವರಿಕೆ ‘ಮಗ ಆ ಕಡೆ ದೊಡ್ಡಮಾಂಸ ಮತ್ತು ಹಂದಿ ತಿಂತಾರಂತೆ…? ಹುಷಾರು ಕಣೋ ಹೋಟೆಲ್ ಗಳಲ್ಲಿ ಮಿಕ್ಸ್ ಮಾಡ್ತಾರಂತೆ’

ಮೈಸೂರು ಓದು ಮುಗಿಸಿ ಹತ್ತಾರು ದೇಶಗಳನ್ನು ಸುತ್ತಿ ಬಂದಾಗ ಅರಿವಾಗಿದ್ದು ಒಂದೇ ಜಗತ್ತಿನಲ್ಲಿ ಅತಿ ಹೆಚ್ಚು ಮಾಂಸ ತಿನ್ನುವುದು ದೊಡ್ಡಮಾಂಸ, ಪಂದಿಕರಿ, ಚಿಕನ್ ಮತ್ತು ಮಟನ್.

‘ಊಟ ನಮ್ಮಿಷ್ಟ ನೋಟ ಪರರಿಷ್ಟ’ ಧರ್ಮ ಮತ್ತು ಜಾತಿ ಆದರಿತ ತರಕಾರಿಗಳ ಬರುವಿಕೆಯ ಆತಂಕದಲ್ಲಿ ನಿಮ್ಮವ…!

‍ಲೇಖಕರು admin

November 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ajith

    ಧರ್ಮ ಮತ್ತು ಜಾತಿ ಆದರಿತ ತರಕಾರಿಗಳು..:)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: