ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಂದ್ರಿಕಾ ಎಂಬ 'ಚಿಟ್ಟಿ'
ಜಿ ಎನ್ ಮೋಹನ್ ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ.. ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- 'ಸರಯೂ ನದಿಯ ದಂಡೆಯಲ್ಲಿ'. ನನ್ನ 'ಅಣ್ತಮ್ಮ' ಎಸ್ ವೈ ಗುರುಶಾಂತ್ ಒಂದು ಪದ್ಯಗಳ ಕಟ್ಟನ್ನು ನಾನಿದ್ದ ಕಲಬುರ್ಗಿಗೆ ಕಳಿಸಿ ಎಲ್ಲವನ್ನೂ ಓದಿ ಬಹುಮಾನ ಕೊಡು ಎಂದಿದ್ದ. ಹಾಗಾಗಿ...
ಕಿಂಡಲ್.. ಕಿಂಡಲ್..
ಎಂ ಎಸ್ ಶ್ರೀರಾಮ್ ಪ್ರೀತಿಯ Jogi ಈ ದಿನ Jogi ನೀವು ಕನ್ನಡಲ್ಲಿ ಕಿಂಡಲ್ ಪುಸ್ತಕ ಸಿಗಬೇಕು ಅನ್ನುವ ಚರ್ಚೆಯನ್ನು ಮುಂದಿಟ್ಟಿದ್ದೀರಿ. ಇಲ್ಲಿ ನಿಮ್ಮ ವಾದವನ್ನು ನಾವು ಗಂಭೀರವಾಗಿ ಗಮನಿಸಿ ಚರ್ಚೆಗೆ ಒಡ್ಢಬೇಕು. ಬೇಳೂರು ಸುದರ್ಶನ ಮತ್ತು ಗೆಳೆಯರು ಪ್ರಾರಂಭಿಸಿರುವ ಅಹವಾಲಿಗೆ ನಾನೂ ಸಹಿ ಹಾಕಿದ್ದೇನೆ. ಆದರೆ ಆ ಚರ್ಚೆ ಕಿಂಡಲ್...
70 ವರ್ಸ ಆಗಿ ಹೋತಂತ್ಯಲ್ಲೋ ನಮಿಗ್ಯ ಸ್ವಾತಂತ್ರ್ಯ ಸಿಕ್ಕು ?
ಈ ವರ್ಸ ನಮ್ ಪ್ರಧಾನಿಗುಳು ಏನ್ ಭಾಷ್ನ ಮಾಡ್ಬೋದು ? ಮಣ್ಣಮ್ಮನವರ ಅಂಬವ್ವ ಪ್ಲಾಟ್ ನಾಗಿಂದ ತನ್ನ ಮಗ ಯಶವಂತನ ಕುಟಗ ಸೈಕಲ್ ಮೋಟ್ರದ ಹಿಂದ ಕುಂತ್ಕಂಡು ಅಡಿವಿ ಹೊಲಕ್ಕ ಹೊಂಟಿದ್ಲು, ಕರಿಯವ್ವನ ಗುಡಿ ಬಂದಿದ್ಕ ಯಶ್ವಂತಗ ‘ತಮ್ಮಾ ಒಂದೀಟು ಗಾಡಿ ತರಬಪ್ಪೋ ಕರಿಯವ್ವಗ ಕೈ ಮುಗುದು ಬರ್ತಿನಿ’ ಅಂತಂದು ಗಾಡಿ ಇಳದು ಗಂಟಿ ಹೊಡದು...
ತಿಪ್ಪೆಲಕ್ಷ್ಮೀ ಹಬ್ಬದ ಶುಭಾಶಯಗಳು!
ಇವಳು ತಿಪ್ಪೇಲಕ್ಷ್ಮೀ.. ತಿಪ್ಪೇಲಕ್ಷ್ಮಿಯನ್ನು ಮರೆಯಬೇಡಿರಿ - ಮರೆತರೆ ನಿಮಗೆ ಅನ್ನ ಸಿಕ್ಕುವುದಿಲ್ಲ ಡಾ ವಡ್ಡಗೆರೆ ನಾಗರಾಜಯ್ಯ ಈ ತಿಪ್ಪೆಲಕ್ಷ್ಮಿಯು ರೈತಾಪಿಗಳ ಮತ್ತು ದುಡಿಯುವ ರೈತಕೂಲಿಗಳ ಲಕುಮಿ; ಲಕ್ಷಮಿ. ಲಕ್ಷಮಿ- ಲಚ್ಚಮಿ- ಲಚ್ಮಿಯಾದ ಈ ಲಕ್ಷ್ಮಿಯನ್ನು ತಿಪ್ಪೇಲಕ್ಷ್ಮಮ್ಮ, ತಿಪ್ಪೇಲಕ್ಕವ್ವ, ತಿಪ್ಪಮ್ಮ, ತಿಪ್ಪೇರಂಗಪ್ಪ,...
ಮುಟ್ಟಬಾರದ,ನೋವುಂಡ ಮನಸುಗಳಿಗೆ ಜೋಲಿ
ಅಜ್ಜನ ಕಣ್ಣ ಬೆಳಕಿನ ಹಾದಿಯಲಿ ಬಿದಲೋಟಿ ರಂಗನಾಥ್ ಅಜ್ಜನ ಕಣ್ಣ ಬೆಳಕಿನ ಹಾದಿಯಲಿ ಸಾಗಿದ ಬದುಕಿನ ಹೆಜ್ಜೆಗಳು ಆತ್ಮಸ್ಥೈರ್ಯದ ರೆಕ್ಕೆಗಳು ತಿರೆಯನು ನಂಬಿ ತರಿದ ಕತ್ತಲೆಯಲಿ ಬದುಕಿನ ಅಜ್ಜನ ಬೆವರಹನಿಗಳು ಹಸಿರು ಕಂಡ ಕನಸುಗಳು ತುಳಿದ ಹೆಜ್ಜೆಗಳ ಮೇಲೆ ಸಕ್ಕರೆ ತಿಂದ ಇರುವೆಗಳ ಸಾಲು.. ಸಕ್ಕರೆ ಕರಗಿದ ಮೇಲೆ ಆ ಹೆಜ್ಜೆಯೋ...
ಪದ್ಯಕ್ಕೆ ಮತ್ತಿನ ರುಚಿ ತಂದು ಕೊಟ್ಟಿದ್ದು ರತ್ನಮಾಲಾ..
ಟಿ ಎನ್ ಸೀತಾರಾಂ ಗಾನ ಕೋಗಿಲೆ ರತ್ನಮಾಲಾ ಪ್ರಕಾಶ್ ಅವರಿಗೆ ಪ್ರತಿಷ್ಠಿತ ಸಂತ ಶಿಶುನಾಳ...ಪ್ರಶಸ್ತಿ ಸಿಕ್ಕಿದೆ.. ಅವರ ಕಂಠದಲ್ಲಿ ಒಟ್ಟುಗೂಡಿ ಬರುವ ಮಾರ್ದವತೆ ಮತ್ತು ವಿಷಾದ ನಾನು ಬೇರೆಯವರ ಕಂಠದಲ್ಲಿ ಕೇಳಿರುವುದು ಅಪರೂಪ.... ಅವರು 'ಯಾವ ಮೋಹನ ಮುರಳಿ'ಯನ್ನು ಎಷ್ಟು ಆರ್ದ್ರತೆ ಮತ್ತು ಮೋಹಕತೆಯಿಂದ ಹಾಡಿದ್ದಾರೆಂದರೆ ಒಂದು...
ಆಕೆ ಸುಮ್ಮನೇ ನಾಚಿ.. ನಿಡುಸುಯ್ದಳು
ಪ್ರಸಾದ್ ಶೆಣೈ ಆರ್ ಕೆ ಒಂದು ತಣ್ಣಗಿನ ಮಳೆ ಪಿಟ ಪಿಟನೇ ಅಂತ ಬೀಳುತ್ತಿರಬೇಕು, ಸ್ನಾನದ ಮನೆಯಲ್ಲಿ ಬಿಸಿ ನೀರು ಮತ್ತೂ ಬಿಸಿಯಾಗಿ ಕುದಿಯುತ್ತಲೇ ಇರಬೇಕು, ಅದನ್ನು ಹಾಯಾಗಿ ನೆತ್ತಿ ಮೇಲೆ ಹೊಯ್ದುಕೊಂಡರೆ ನೆನಪುಗಳ ಸುರ ಹೊನ್ನೆ ಮೈ ಮೇಲೆಲ್ಲಾ ಬರುತ್ತಾಳೆ, ಬಾಯಲ್ಲಿ ತಂತಾನೇ ಹೊಮ್ಮುವ ಹಾಡಿಗೆ ಹಂಡೆಯೂ ತಲೆದೂಗುತ್ತದೆ.. ಸಾಬೂನಿನ...
ಇವು ದುರಿತ ಕಾಲದ ಕವಿತೆಗಳು..
ಮುರಳೀಧರ ಉಪಾಧ್ಯ ಹಿರಿಯಡಕ ಈ ವರ್ಷದ { 2016 } ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದಿರುವ " ಲಾವೋನ ಕನಸು " ಕವಿ ರಾಜೇಂದ್ರ ಪ್ರಸಾದರ ನಾಲ್ಕನೆಯ ಕವನ ಸಂಕಲನ . ಈ ಸಂಕಲನದಲ್ಲಿ ಐವತ್ತು ಕವನಗಳಿವೆ . ಈ ಸಂಕಲನದ ಮೊದಲ ಕವನ 'ಪ್ರಾರ್ಥನೆ' -"ಪ್ರಭುವೇ, ಎಂದೂ ಏನೂ ಕೇಳದ ನಾನು ಮಂಡಿಯೂರಿ ಬೊಗಸೆಯಷ್ಟು ಪ್ರೀತಿ ಬೇಡಿದೆ" ಎಂದು...
ನೋಡಿ, ಮಿಸ್ ಮಾಡ್ಬೇಡಿ..
ಇದ್ಯಾವ ‘ಪರಿ’ಯ ಸೊಬಗು…?
ಶಿವು ಮೊರಿಗೇರಿ ನಿಜಕ್ಕೂ ಇಲ್ಲಿನ ಹತ್ತಾರು ಕಥೆಗಳು ಪರಿ ಪರಿಯಾಗಿ ಕಾಡುವ ಪರಿಗೆ ನಮಗೇ ಸೋಜಿಗ ಎನ್ನಿಸಿಬಿಡುತ್ತೆ. ಹಂಗೆ ಬಿಟ್ಟೂ ಬಿಡದೆ ಕಾಡುವ ಕಥೆಗಳ ಗುಚ್ಛ 'ಈ ಪರಿಯ ಸೊಬಗು'. ಏನಿದು ಪರಿ ? ಇದ್ಯಾವ ಪರಿಯ ಸೊಬಗು ಅಂತ ನೀವು 'ಈ ಪರಿಯ ಸೊಬಗು' ಪುಟಗಳನ್ನ ತಿರುಗಿಸುತ್ತಾ ಹೋದರೆ ನಿಮ್ಗೇ ಗೊತ್ತಾಗಿಬಿಡುತ್ತೆ ಇದು ಅಸಲಿ...
ಇದ್ಯಾವ 'ಪರಿ'ಯ ಸೊಬಗು…?
ಶಿವು ಮೊರಿಗೇರಿ ನಿಜಕ್ಕೂ ಇಲ್ಲಿನ ಹತ್ತಾರು ಕಥೆಗಳು ಪರಿ ಪರಿಯಾಗಿ ಕಾಡುವ ಪರಿಗೆ ನಮಗೇ ಸೋಜಿಗ ಎನ್ನಿಸಿಬಿಡುತ್ತೆ. ಹಂಗೆ ಬಿಟ್ಟೂ ಬಿಡದೆ ಕಾಡುವ ಕಥೆಗಳ ಗುಚ್ಛ 'ಈ ಪರಿಯ ಸೊಬಗು'. ಏನಿದು ಪರಿ ? ಇದ್ಯಾವ ಪರಿಯ ಸೊಬಗು ಅಂತ ನೀವು 'ಈ ಪರಿಯ ಸೊಬಗು' ಪುಟಗಳನ್ನ ತಿರುಗಿಸುತ್ತಾ ಹೋದರೆ ನಿಮ್ಗೇ ಗೊತ್ತಾಗಿಬಿಡುತ್ತೆ ಇದು ಅಸಲಿ...
ನಿನ್ನ ಹೃದಯಗಳ ಬಾಗಿಲುಗಳ ಮುಚ್ಚು..
ನಿನಗಿಷ್ಟ ಬಂದದ್ದನ್ನು..ನಿನಗಿಷ್ಟಬಂದಹಾಗೆ…ನಿನಗಿಷ್ಟ ಬಂದಾಗ.. ಕು.ಸ.ಮಧುಸೂದನ ರಂಗೇನಹಳ್ಳಿ ಕೇಳುಗರೆದೆಯೊಳಗೆ ಪ್ರೇಮ ಹುಟ್ಟಿಸುವ ನಿನ್ನ ದನಿಯ ಕೇಳದೇ ಅದೆಷ್ಟು ದಿನಗಳಾದವು ನೀನಾಗೆ ಹೊಲಿದುಕೊಂಡ ತುಟಿಗಳ ಹೊಲಿಗೆ ಬಿಚ್ಚಿ ಒಮ್ಮೆ ಕಣ್ಣು ಹಾಯಿಸು ಘನಮೋಡಗಳ ಗರ್ಭಧಾರಣೆಯ ಮುಂಚಿನ ನೀರವ ಮೌನವ ಬಿಳಿಚಿಕೊಂಡ ಬಾಣಂತಿ ಆಕಾಶದ...
ನಾಳೆ..
ದೇವನೂರು ಮಹಾದೇವ ಕೇಳ್ತಾರೆ: ಅಸಲಿ ಗೋರಕ್ಷಕರು ಯಾರು..?
"ಮೋದಿಯವರು ನಕಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅಸಲಿ ಗೋರಕ್ಷಕರು ಯಾರು..? ಹಾಲು ಕುಡಿಯೋರು, ಬೆಣ್ಣೆ ತಿನ್ನೋರು, ತುಪ್ಪ ಸವಿಯೋರು., ದನದ ಸೆಗಣಿ, ಗಂಜಲವನ್ನು ಔಷಧಿ ಎಂದು ಸೇವಿಸೋರು..!!? ಇವರಂತೂ ಖಂಡಿತ ಅಲ್ಲ. ಚಳಿ,ಮಳೆ,ಬಿಸಿಲೆನ್ನದೆ ಗೋವುಗಳನ್ನು ಮೇಯಿಸಿ ಕಾಪಾಡುವ ದನಗಾಹಿಗಳೇ ಅಸಲಿ ಗೋರಕ್ಷಕರು'...
ತೆರೆದ ಕಣ್ಣುಗಳಿಂದ ನೋಡಿದಾಗ..
ಇತ್ತೀಚೆಗೆ ನಾನೊಂದು ವೃದ್ಧಾಶ್ರಮಕ್ಕೆ ಹೋಗಿದ್ದೆ. ಅಲ್ಲೊಬ್ಬರು ೮೦ ರ ಆಸುಪಾಸಿನ ಹಿರಿಯರು ಎಲ್ಲರೊಡನೆ ನಗುತ್ತಾ ಮಾತಾಡುತ್ತಿದ್ದರು. ಅವರು ಮಾತಾಡುತ್ತಿದ್ದ ಇಂಗ್ಲೀಷ್ ನನಗೆ ತೆಲುಗಿನಂತೆ ಕೇಳುತ್ತಿತ್ತು. ಅವರ ಮಾಸಿದ ಬಿಳಿ ಪಂಚೆ ಶರ್ಟ್ , ದಿನವಿಡೀ ಆಟವಾಡಿ ಸಂಜೆ ಮನೆಗೆ ಮರಳಿದ ಹುಡುಗನ ಬಸವಳಿಕೆಯಂತೆ ಇತ್ತು. ಸುಮ್ಮನೆ...
ಉಗಿಸಿಕೊಳ್ಳೋಕೊಬ್ಬರು … ಶೋಭಾ ದೇ
ರಾಜಾರಾಂ ತಲ್ಲೂರು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕೇಂದ್ರ ಸರ್ಕಾರಕ್ಕೆ ಜೂನ್ 20, 2016 ರಂದು ಸಲ್ಲಿಸಿದ ವರದಿಯ ಪ್ರಕಾರ ಈ ಬಾರಿ ಭಾರತಕ್ಕೆ 12-17 ಒಲಿಂಪಿಕ್ ಮೆಡಲುಗಳ ಅಧಿಕೃತ ನಿರೀಕ್ಷೆ ಇದೆ. ಈ ತಯಾರಿಗಾಗಿ TOP (Target Olympic Podium) ಯೋಜನೆಯಡಿ 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಭಾರತ ವಿಶ್ವಗುರು ಎಂಬ...
ಈ ವಿಡಂಬನೆ ಇದೆಯಲ್ಲ ಅದು ಕುಂವೀ ಬ್ರಾಂಡಿನದ್ದು..
ಓ ಎಲ್ ನಾಗಭೂಷಣ ಸ್ವಾಮಿ ಕುಂವೀ ಅವರ ಕಾದಂಬರಿಯಲ್ಲಿ ಓದುಗರು ಏನೇನು ನಿರೀಕ್ಷಿಸಬಹುದೋ ಅವೆಲ್ಲವೂ 'ನಿಜಲಿಂಗ'ದಲ್ಲಿರುವಂತೆಯೇ ನಿರೀಕ್ಷಿಸಿರದ ಸಂಗತಿಗಳೂ ಇದ್ದು, ಇದೇನು ನಯಾಗರವೋ ಜೋಗ್ ಜಲಪಾತವೋ ಎಂಬ ಭ್ರಮೆ ಹುಟ್ಟಸುವಂಥ ಅವರ ಟ್ರೇಡ್ ಮಾರ್ಕ್ ಭಾಷೆಯಲ್ಲಿ ಜೆಟ್ ವೇಗಕ್ಕಿಂತ ತುಸು ಹೆಚ್ಚು ಬೆಳಕಿನ ವೇಗಕ್ಕಿಂತ ತುಸು ಕಡಮೆ...
ಬೆನ್ನಲ್ಲಿ ತುಟಿಯಿಂದ ಬರೆವ ಹೈಕುಗಳು..
ಶಮ ನಂದಿಬೆಟ್ಟ ಸಂತೆಯ ನಡುವೆ ನಿಂತಿದ್ದರೂ ಏಕಾಂತಕ್ಕೆ ಕರೆವ ದನಿ ಎಲ್ಲರ ದಾಟಿ ನನ್ನನ್ನೇ ಸವರಿದೆ ಬೆಚ್ಚಿ ತಿರುಗಿ ನೋಡಿದರೆ ನಗುವಿನ ಇನ್ನೊಂದು ಮಗ್ಗುಲಲ್ಲಿ ಕಂಡೂ ಕಾಣದಂತೆ ಪೊರೆಕಳಚಿದ ತುಂಟತನ ನನಗಾಗೇ ಎತ್ತಿಟ್ಟ ಹೊಸ ಹಸಿ ಬಯಕೆಗಳ ನಿಗಿನಿಗಿ ಚೂರುಗಳ ರಾಶಿಯ ಮೇಲೆ ನೀನು ತಂಪು ಕಣ್ಣುಗಳ ಅಂಚಿನಲ್ಲಿ ಸುಳಿವೇ ಕೊಡದಂತೆ...
ಏನಂದ್ರೀ ಕಿರಣ್ ಬೇಡಿ..??
ಡಾ. ಸಿ ಎಸ್ ದ್ವಾರಕಾನಾಥ್, ಡಾ. ಟಿ ಎನ್ ಚಂದ್ರಕಾಂತ್, ಡಾ. ಎ ಎಸ್ ಪ್ರಭಾಕರ, ಅರುಣ್ ಜೋಳದಕೂಡ್ಲಿಗಿ. ಹರ್ಷಕುಮಾರ್ ಕುಗ್ವೆ, ಲೋಹಿತ್ ಮತ್ತು ತಳಸ್ತರದ ವೇದಿಕೆಯ ಸದಸ್ಯರು ಮಾನ್ಯರೇ, ಮಾಜಿ ಐಪಿಎಸ್ ಅಧಿಕಾರಿಯೂ, ರಾಜಕೀಯ ಪಕ್ಷವೊಂದರ ಸಕ್ರಿಯ ಕಾರ್ಯಕರ್ತರೂ, ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್...
ಅಕ್ಷಯ ಕಾವ್ಯದಲ್ಲಿ ರಾತ್ರಿಗಳಲ್ಲೂ ಬೆಳಗು ಕಾಣುತ್ತಿದ್ದೇನೆ
ಸುರೇಂದ್ರನಾಥ್ ನಾನೆಷ್ಟು ಸರ್ವಾಧಿಕಾರಿಯಾಗಿದ್ದೆನೆಂದರೆ ನನ್ನ ಮಾತಿಗೆ ಉತ್ತರಗಳೇ ಬರುತ್ತಿರಲಿಲ್ಲ ಬರೇ ಪ್ರತಿಧ್ವನಿಗಳು ಬರುತ್ತಿದ್ದವು. --- ಆಲದ ಮರದ ತುಂಬಾ ಬೆಂಕಿಹುಳುಗಳು ಆಷಾಢದ ರಾತ್ರಿ ತೆರೆಯುತ್ತವೆ ಮುಚ್ಚುತ್ತವೆ ಏಕ ಕಾಲಕ್ಕೆ ಮೊದಲೇ ತಾಲೀಮು ಮಾಡಿದ ಹಾಗೆ ಹೇಗೆ ಗೊತ್ತು ಅವಕ್ಕೆ ಒಂದರ ಮನಸ್ಸು ಇನ್ನೊಂದಕ್ಕೆ. ---...
‘ಯಾವುರಪ್ಪ?’ ‘ಸುಗ್ಗನಳ್ಳಿ’ ‘ಯಾರಮನೆ’ ‘ಶಿವಮ್ಮರ ಮನೆ’
ಲಕ್ಷಣವಾದ ಹೆಂಗಸು ನಾನೂ ನೋಡಿದ್ದೆ ಕಣಮಗ ಹೆಚ್.ಆರ್. ಸುಜಾತಾ ನಮ್ಮೂರ ಗದ್ದೆ ಏರಿ ಹತ್ತಿ ಇಳಿದ್ರೆ ಸುಗ್ಗನಳ್ಳಿ ಅಂತ ಈತೆ. ನಮ್ಮೂರಲ್ಲಿ ಮೂವತ್ತು ಮನೆ. ಅಲ್ಲಿ ಹತ್ತು ಹನ್ನರಡು ಲಿಂಗಾಯತರ ಮನೆ ಇದಾವೆ. ಅವರು ನಮ್ಮೂರಾಸೇ ಪ್ಯಾಟೆಗೆ ಹೋಗಬೇಕಾಗಿತ್ತು. ನಮ್ಮೂರ ಗದ್ದೆ ಇಳುದು ಕೆರೆ ಏರಿ ಮೇಲಾಸಿ ನಮ್ಮೂರ ಕಾವಲು ದಾಟಿ...
