ಕ್ರ ಚ ನ ವ ಜೀ !! ( ಜೀವನಚಕ್ರ)

” Life in reverse” ಎಂಬ George Carlin ನ ಈ ಪದ್ಯ “ಸಾವಿ”ನಿಂದ ಶುರುವಾಗಿ ‘ಹುಟ್ಟಿ’ ನಲ್ಲಿ ಕೊನೆಗೊಳ್ಳಬಹುದಾದ ನಮ್ಮ ಜೀವನದ ಬಗ್ಗೆ ಸೊಗಸಾದ ಕಲ್ಪನೆ. ಓದಿ ನೋಡಿ ಸದ್ಯದ ನಿಮ್ಮ ಹಂತ ವನ್ನು ಪರೀಕ್ಷಿಸಿಕೊಳ್ಳಿ.

shivakumar-mavali

ಕನ್ನಡಕ್ಕೆ : ಶಿವಕುಮಾರ್ ಮಾವಲಿ

ಮುಂದೆ ಮುಂದೆ ಓಡುವ
ಜೀವನಕ್ರಮವನ್ನು ಒಮ್ಮೆ ಹಿಮ್ಮುಖವಾಗಿಸಿದರೆ
ಈ ಮುಂದಿನಂತಿರುತ್ತದೆ ;

ಸಂಭವಿಸಬೇಕು ಸಾವು ಮೊದಲು
ಆಮೇಲಿನ ಜೀವನ ಸಲೀಸು.
ಕಳೆಯಬೇಕು ಒಂದಿಪ್ಪತ್ತು ವರುಷಗಳ
ವೃದ್ಧಾಶ್ರಮ ಜೀವನ, ವೃದ್ಧಾಪ್ಯ ವೇತನ…

paintingಜವ್ವನಿಗನಾದಂತೆ ಒದ್ದೋಡಿಸಬೇಕು ಅಶ್ರಮದಿಂದ
ನೇರ ಕಾರ್ಖಾನೆ ಕೆಲಸಕ್ಕೆ,
ಕೈಯಲ್ಲಿ ಬಂಗಾರದ ವಾಚು,
ಕಾರು, ಬೈಕು, ಸೂಟು, ಸೆಂಟು…

ಹೀಗೆ ದುಡಿದು ದಣಿಯಬೇಕು
ನಾಲ್ಕು ದಶಕಗಳ ಕಾಲ…
ಉಕ್ಕಿ ಬರುತ್ತದಲ್ಲ ಹರೆಯ, ಆಗ
ದುಡಿಮೆಗೆ ನಿವೃತ್ತಿ ಹೇಳುತ್ತ , ಪಿಂಚಣಿ ಪಡೆಯುತ್ತ;
ಕಾಲೇಜ್ ಸೇರಿ ಕುಣಿದು, ಕುಡಿದು,ಕುಪ್ಪಳಿಸಿ,
ಪಿಂಚಣಿ ಹಣ ಕೈಯಲ್ಲಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚಿಸಿ
ಇನ್ನೂ ಚಿಕ್ಕವರಾಗಿ ಶಾಲೆಯೊಂದನು ಸೇರಿ
ಆಡುತ್ತ, ಹಾಡುತ್ತ,ಓದುತ್ತ, ಜವಾಬ್ದಾರಿಗಳ ಪೊರೆ ಕಳಚುತ್ತ…

ಹುಡುಗನೋ, ಹುಡುಗಿಯೋ ಏನಾದರೊಂದು ಆಗಿ,
ಪುಟ್ಟ ಪುಟ್ಟ ಹೆಜ್ಜೆಯಿಟ್ಟು,ತೊದಲು ನುಡಿದು,ಮೊಲೆ ಕುಡಿದು
ಸೇರಿಬಿಟ್ಟರಾಯ್ತು ಅಮ್ಮನ ಗರ್ಭದೊಳಗೆ
ನವಮಾಸ ಅಲ್ಲಿಯೇ ನಲಿದಾಡಿ
ಕಳೆದರಾಯ್ತು ಅಂತಿಮ ದಿನಗಳನ್ನು ಅಮ್ಮನ ಉದರದಲ್ಲಿ
ಮತ್ತೆ ಮಿಂಚಿದರಾಯ್ತು ಯಾರದೋ ಹೊಳೆವ ಕಂಗಳಲ್ಲಿ …

 

Life in reverse By George Carlin

“The most unfair thing about life is the way it ends.
I mean, life is tough. It takes up a lot of your time.
What do you get at the end of it?
A death.
What’s that, a bonus?
I think the life cycle is all backwards.
You should die first; get it out of the way.
Then you live in an old age home.
You get kicked out when you’re too young, you get a gold watch,
you go to work.
You work forty years until you’re young enough to enjoy your retirement.
You drink alcohol, you party,
you get ready for high school.
You go to grade school, you become a kid, you play, you have no responsibilities, you become a little baby, you go back into the womb,
You spend your last nine months floating…
Then you finish off as an orgasm.”

‍ಲೇಖಕರು Admin

September 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sangeeta Kalmane

    ಹಣ್ಣು ಹಣ್ಣು ಮುದುಕಿ
    ಬೆನ್ನು ಬಾಗಿ ಕೋಲು ಕುಟ್ಟುತ್ತ
    ಹಣೆಗೆ ಕೈ ಅಡ್ಡ ಹಿಡಿದು
    ಎದುರಿಗೆ ಬಂದವರನ್ನು ಕಣ್ಣು ಕಿರಿದಾಗಿಸಿ ನೋಡಿ
    ಯಾರು ಮಗಾ ನೀನು?
    ವಯಸ್ಸಾತು ಕಣ್ಣೂ ಕಾಣ್ತಿಲ್ಲೆ
    ಕಿವೀನೂ ಕೇಳ್ತಿಲ್ಲೆ
    ಊರು ಹೋಗು ಹೇಳ್ತು
    ಸಾವು ಬಾ ಬಾ ಹೇಳ್ತು
    ಮಾಡಿದ ಖಮ೯ ತೀರವಲಿ
    ಎಂದಲವತ್ತು ಕೊಳ್ಳುವ ಜೀವ
    ಮುದಿ ವಯಸ್ಸಿನ ಬವಣೆ
    ಬರಲಿ ಬಿಡು ಬೇಜಾರಿಲ್ಲೆ.

    ಬುಡಬುಡಕೆ ಬದುಕು
    ಐವತ್ತರ ಹರೆಯ
    ಕಣ್ಣು ಕಿಚಾಯಿಸುವ ತಲುಬು ಬಿಟ್ಟಿಲ್ಲ
    ನೋಡುವವರ ಕಣ್ಣಿಗೆ ಸಂಭಾವಿತರಂತೆ
    ಮುಖವಾಡ ಹೊತ್ತ ದರಿದ್ರ ಬಿಕನಾಸಿಗಳ
    ಬುಡ ಕಿತ್ತು ಸುತ್ತ ಎಂಟು ದಿಕ್ಕುಗಳಿಗೆ
    ವಗಾಯಿಸಿ ಬಿಡಬೇಕೆನ್ನುವ ಕಿಚ್ಚು
    ದೇಶೋದ್ಧಾರದ ಕನಸು ನನಸಾಗಿಸಿ
    ಅವಕಾಶವಾದಿಯಾಗಿ ಬದುಕಬೇಕು.

    ಬಿಸಿ ರಕ್ತ ಹರಿದಾಡುವ ವಯಸ್ಸು
    ಅನುಭವಿಸಬೇಕು ಜಗತ್ತಿನ ಅಷ್ಟೂ ಸುಃಖ
    ಅಪ್ಪನ ದುಡ್ಡೊ ಅಮ್ಮನ ದುಡ್ಡೊ
    ವಾರಸುದಾರ ನಾನೊಬ್ಬಳೆ ಅಲ್ಲವೆ?
    ಮೈ ಮನ ತಣಿವಷ್ಟು ಸುಃಖಪಡಬೇಕು
    ಕಾಲು ಬಿದ್ದು ಹೋಗುವಷ್ಟು ದೇಶ ಸುತ್ತ ಬೇಕು
    ಕೋಶ ಓದಿ ಬರೆದೂ ಬರೆದೂ
    ಕಣ್ಣು ಕೈ ಕಾಲು ಸಾಕೂ ಅನ್ನಬೇಕು
    ಒಡವೆ, ವಸ್ತ್ರ, ಕಾಂಚಾಣದೊಡತಿ
    ನಾನೂ ಆಗಬೇಕು.

    ಕುಂಟೆ ಬಿಲ್ಲೆ, ಚಿನ್ನಿ ದಾಂಡು, ಗಜಗದಾಟ
    ಸುತ್ತ ಮಾ ರಾಶಿ ಮಕ್ಕಳ ಸೈನ್ಯ
    ಊಹೂ ಇಷ್ಟೇ ಸಾಲದು
    ಗೇರು ಬೆಟ್ಟ, ಬಿಕ್ಕೆ ಹಣ್ಣು, ಕೌಳಿ ಕಾಯಿ
    ಒಂದಾ ಎರಡಾ ಮಜಾನೆ ಮಜಾ
    ಚೌತಿ ಹಬ್ಬ, ನವರಾತ್ರಿ ಹಬ್ಬ, ದೊಡ್ಡಬ್ಬ
    ಪಟಾಕಿ, ಶಿಡ್ಲೆಕಾಯಿ ಜುಂಜು ದೀಪ, ಭೂತನ ಕಟ್ಟೆ
    ಶೃಂಗರಿಸಿದ ಎತ್ತಿನ ಓಟ, ಸುಳ್ಗಾಯಿ ಆಟ
    ಪೊಗದಸ್ತಾದ ಊಟ, ಅರಿಶಿನದ ತೆಳ್ಳವು
    ಯಾವುದೂ ನಾನಂತೂ ಬಿಡದೆ ಅನುಭವಿಸಬೇಕು.

    ಇಯ್ಯೆ^^ಇಯ್ಯೆ^^^
    ಊರೆಲ್ಲ ಕೇಳೊ ಅಳು
    ಬೇಕಾದ್ದು ಕಸಿಯುವ ಕಸರತ್ತು
    ಬಿಟ್ಟು ಹೋದ ನನ್ನಮ್ಮನ ಪ್ರೀತಿ
    ನಾ ಮತ್ತೆ ಪಡೆಯಬೇಕು
    ಅವಳೊಟ್ಟೆಯೊಳಗೆ ಇರೊ ಸ್ವಗ೯
    ಹೊಕ್ಕಿ ಮತ್ತೆ ಈ ಭೂಮಿಗೆ ಬರಲೇ ಬಾರ್ದು!!

    ಪ್ರತಿಕ್ರಿಯೆ
  2. ಗಣನಾಥ

    ಕವನವೂ, ಅನುವಾದವೂ ಒಂದಕ್ಕಿಂತ ಒಂದು ಚೆನ್ನಾಗಿವೆ! ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: