ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕವಿತೆಯ ಸಾಲುಗಳಂತೆ..
ಭವ್ಯ ಗೌಡ ಫೋಟೋ: ರವಿ ಕುಲಕರ್ಣಿ "ದಕ್ಕುವುದಿಷ್ಟೇ ದೇಹಕೆ, ನೆಲಮಾಳಿಗೆಯ ಮಣ್ಣು, ಕೊನೆಗೆ" ಆತ್ಮವೊಂದು ಜಾಗೃತವಾಯಿತು, ಚಿವುಟಿ ಹೇಳಿತು- "ಸುಳಿದಾಡುವ ನನಗೆ ಕೊನೆಯೆಲ್ಲಿ?! ನಿರಂತರ ಐಕ್ಯ ಅನಂತದಲಿ; ಕವಿತೆಯ ಸಾಲುಗಳಂತೆ, ಅವುಗಳೊಳಗಿನ ಅರ್ಥದಂತೆ" ಇದು,ಸಾವಿನಾಚೆಯ ಬದುಕು 'ಕವಿ'ತೆ...
ಅವಧಿ recommends 'ಕಿವಿಮಾತು'
ಯುವ ನಿರ್ದೇಶಕ ಸಂದೀಪ ಕುಮಾರ್ ಒಂದು ಕಿರುಚಿತ್ರವನ್ನು ಮಾಡಿದ್ದಾನೆ. ಹಲವು ಸೂಕ್ಷ್ಮಗಳನ್ನು ಒಳಗೊಂಡ ಈ ಚಿತ್ರ ತನ್ನ ಪ್ರಾಮಾಣಿಕ ಪ್ರಯತ್ನದಿಂದಾಗಿ ನಮ್ಮಗಮನ ಸೆಳೆಯುತ್ತದೆ. ಬಿಡುವಿನಲ್ಲೊಮ್ಮೆ ನೋಡಿ ಪ್ರೋತ್ಸಾಹಿಸಿ. -ವಸುಧೇಂದ್ರ Aparna P The emotions are captured very well.. Nice work Sandeep and team...
ಕ್ಲಿಕ್ ಆಯ್ತು ಕವಿತೆ: ನೀವು ನೀವೆ ಹೋಗ್!!
ಗೀತಾ ಹೆಗ್ಡೆ ಇದಾವ ನೃತ್ಯದ ಭಂಗಿ! ಕಟ್ಟು ಮಸ್ತಾದ ದೇಹದ ಬೆನ್ನೇರಿ ಛಂಗನೆ ಹತ್ತಿ ನಿಂತ ಶೋಡಷ ಚೆಲುವೆ. ಕಣ್ಣೆರಡೂ ದುರುಗುಟ್ಟಿ ಕೈ ಮೇಲೆತ್ತಿ ನತ್ತು ಕೊಂಕಿಸಿ ಕೆಂಪು ಕುಂಕುಮ ಹಣೆಯೆ ಕಾಣದಲ್ಲ; ಕಾಲು ಎತ್ತಿ ನಿಂತ ನೀ ಯಾಕೆ ರೌದ್ರಾವತಾರ ತಾಳಿದೆ ಬಾಲೆ? ಬಾ.... ಹೆಡೆಮುರಿ ಕಟ್ಟಿ ರಕ್ತ ಚಂಡಾಡುವೆ ನೋಡು ಬೆಂಕಿಯಂತೆ ಕಿಡಿ...
ಇರುವುದಾದರೂ ಎಲ್ಲಿ ನೀ?
ಪರಿಮಳ ಜಿ ಕಮತರ್ ಹೋಗತ್ತ ಎಂದರೆ ಹೋಗೇ ಬಿಡುವುದೆ? ಬಾರದೂರಿನ ದಾರಿಗೆ ಅಗಣಿತ ನಕ್ಷತ್ರಗಳ ಅರಮನೆಗೆ ನೋಡದಿರು ಎಂದರೆ ತಿರುಗಿ ತಿರುಗಿ ಕಾಡುವುದೆ ನನಗೂ ತಿಳಿಯ (ಸ)ದೆ ಸುಳಿವೂ ನೀಡದೆ ಅಲ್ಲಾ, ಇರುವುದಾದರೂ ಎಲ್ಲಿ ನೀ? ಕರೆದರು ತಿರುಗದ ನುಡಿದರು ಮಿಡಿಯದ ನೀ ಕಲ್ಲಂತೂ ಅಲ್ಲ ಕಂಬನಿಗೂ ಕರಗದ ಹಂಬಲಿಸಿದರು ಅರಿಯದ ನೀ ಬಂಡೆಯೂ ಅಲ್ಲ...
ತಲ್ಲಣಿಸುತ್ತಿದೆ ಮನವು ತಾಳದೆ..
ಒಲವಿಗೆ ಆಹ್ವಾನ ಆರನಕಟ್ಟೆ ರಂಗನಾಥ ರೈಲು ಬಂಡಿಯ ಬಿಸಿಯುಸಿರಿಗೆ ಬೆಸೆದಿದ್ದ ಮನವೀಗ ನಗುವಿನ ಸೂತಕದಲ್ಲಿ ಬಸಿರಾಗಿ ಒಲವಿನ ನಿಶಬ್ಧವ ಮಸಣದ ನೀರವತೆಯ ಪ್ರಸವಿಸುತ್ತಿದೆ ೨ ಏಕಾಂತವ ಧ್ಯಾನಿಸುವ ಗಳಿಗೆಯಲಿ ಭಗ್ನಗೊಂಡು ಪ್ರೇಮದ ಆರ್ದತೆಗೆ ಉಸಿರ ಉಲ್ಲೇಖಿಸಿದರು ಸಂಬಂಧಗಳ ಮರಗಟ್ಟಿಸುವ ನಿನ್ನ ಶವಾಗಾರದ ಕಾವಲಿರಲಾರೆ ೩ ಮರಣಿಸಿದ...
ಮನ್ಸೂನ್ ಮೇರಿಜಾನ್
ರಾಜೀವ ನಾರಾಯಣ ನಾಯಕ ಪತನಗೊಂಡ ಕೋಟೆಕೊತ್ತಲಗಳಲ್ಲಿ ಅಡ್ಡಾಡುವಾಗ ವಿಶಾದ ಭಾವವೊಂದು ಸಾಮಾನ್ಯವಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಅಲ್ಲಿಯ ಗೋಡೆಗಳು, ಕಂಬಗಳು, ಬಾಗಿಲುಗಳಿಂದ ಹಾಯುವ ನಿಟ್ಟುಸಿರ ಸುಯ್ಲು ನಮ್ಮನ್ನು ತಟ್ಟುತ್ತದೆ. ಇತಿಹಾಸ ಚರಿತ್ರೆಗಳು ಭಗ್ನ ಅವಶೇಷಗಳ ಅಡಿಯಲ್ಲಿ ಸಿಲುಕಿ ಸಣ್ಣಗೆ ನರಳುತ್ತಿರುವಂತೆಯೂ...
ಬನ್ನಿ, ಕವಿತೆ ಬರೆಯಿರಿ..
ಕ್ಲಿಕ್ ಆಯ್ತು ಕವಿತೆಯ ಐದನೆಯ ಫೋಟೋ ಇದು ಕಳೆದ ನಾಲ್ಕು ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ ಉಳಿದ ಮೂರು ಫಲಿತಾಂಶ ಇನ್ನೆರಡು ದಿನದಲ್ಲಿ ಪ್ರಕಟವಾಗಲಿದೆ - ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ 16 (ಭಾನುವಾರ)ದ ನಂತರ ಬಂದ ಕವಿತೆಗಳನ್ನು...
ತಲೇಲಿ ಹುಳ ಬಿಟ್ಕೊಂಡೆ..
ಅಶೋಕ್ ಶೆಟ್ಟರ್ ದುರ್ಗಾಷ್ಟಮಿಯಂದು ತಲೇಲಿ ಹುಳ ಬಿಟ್ಕಂಡು...: ಅಸುರರೆಂದರೆ ಯಾರು? ಅಸುರರು ಇರುತ್ತಾರಾ? "ರಾಕ್ಷಸಾ"ಕಾರ, ಕಪ್ಪು ಬಣ್ಣ, ಕೋರೆ ಹಲ್ಲುಳ್ಳವರು, ಬಂಡಿಗಟ್ಟಲೆ ಅನ್ನ, ಕೊಳಗಗಟ್ಟಲೆ ಸಾರು ನುಂಗುವವರು....,? ಅಥವಾ "ನೀನೇನು ಮನುಷ್ಯನೋ ರಾಕ್ಷಸನೋ", "ಅವ ತುಂಬ ಒಳ್ಳೇಯವ ಕಣ್ರಿ, ದೇವರಂಥ ಮನುಷ್ಯ" ದಂಥ...
ಕಸ ಎತ್ತುವವರ ಆಯುಧಕ್ಕೂ ಪೂಜೆ..
ಟಿ ರಾಮಚಂದ್ರಪ್ಪ ಕಸ ಎತ್ತುವವರ ವಿಶಿಷ್ಠ ಆಯುಧ ಪೂಜೆ ದಾವಣಗೆರೆ../ ೯ ೧೦ ೧೬ /ಮಟ ಮಟ ಮಧ್ಯಾಹ್ನ.. ಎಂ.ಸಿ.ಸಿ ಬಿ ಬ್ಲಾಕ್ ನಲ್ಲಿ ಹೀಗೊಂದು ಗಮನ ಸೆಳೆಯುವ ದೃಶ್ಯ ಕಂಡೆ.. ಹತ್ತು ಹಲವು ವರ್ಷಗಳ ಹಳೆಯದಾದ ,ನಿತ್ಯ ಕಸ ಎತ್ತಲು ಉಪಯೋಗಿಸುವ ತಳ್ಳುವ ಬಂಡಿ (ಗಂಟೆ ಬಂಡಿ ಅಂತೆ.. ತಳ್ಳಿದಾಗ ಗಂಟೆಯ ಶಬ್ಧ ಮನೆಯವರಿಗೆ ಗುರುತಂತೆ.....
ಸರಿಯಾಗಿ ಒಂದು ವರ್ಷದ ಹಿಂದೆ..
ಆದರೂ ಇದು ಒಂದೊಳ್ಳೆ ರಾಮಾಯಣ!
Reader's Review ಚಂದ್ರಶೇಖರ ಬಿ ಸಿ ನಾವು ಈ ಸಿನಿಮಾಗೆ ಹೋಗಿದ್ದೇ ಪ್ರಕಾಶ್ ರೈಗಾಗಿ!! ಪ್ರಕಾಶ್ ರೈ ನಿರ್ದೇಶಿಸಿರುವ, ನಟಿಸಿರುವ ಹಾಗು ತನ್ನಂತೆಯೇ ಇತರ ನುರಿತ ಕಲಾವಿದರ ಬಳಗವನ್ನು ಬಳಸಿಕೊಂಡು 'ಒಂದೊಳ್ಳೇ' ಚಿತ್ರವನ್ನು ಮಾಡಲು ಪ್ರಯತ್ನಿಸಿರುವ ಅವರ ಹೊಸ ಕಲಾಕೃತಿಯನ್ನು ನೋಡುವುದಕ್ಕೆ. ಸೂಕ್ಷ್ಮ ಮನೋಭಾವಿಗಳೂ...
ಇಲ್ಲೊಬ್ಬ ಮಹಾನ್ ಕಲಾವಿದನಿದ್ದಾನೆ
ಪ್ರವರ ಕೊಟ್ಟೂರು ಇಲ್ಲೊಬ್ಬ ಮಹಾನ್ ಕಲಾವಿದನಿದ್ದಾನೆ ಚೂಪು ಮೂಗು, ಮಂಪರು ಹತ್ತಿಕೊಂಡ ಕಣ್ಣು, ಜೋಲು ಮುಖ,ಕೆದರು ಕೂದಲು ಅಷ್ಟೇನು ಚೆಂದವಿಲ್ಲದ ಅಂಗಿ ಯಾವುದೋ ಹಾಳು ಸಂಜೆಯಲ್ಲಿ ಸರೀಸೃಪದ ಉಸುರು ತಾಕಿ ಬಾಡಿದ ಹೂವಿನ ಹಾಗೆ... ಅಸ್ತವ್ಯಸ್ಥ ಕೋಣೆಯಲ್ಲಿ ಭರಪೂರ ಕತ್ತಲು, ಬಣ್ಣಗಳನ್ನು ಗುರುತಿಸಲಿಕ್ಕೆಂದೇ ಮಬ್ಬು ಕಿಟಕಿ ದಾಟಿ...
ಈತ ದೈವಿಕ್..
ಸಿದ್ದು ದೇವರಮನಿ ಇದೀಗ ದೈವಿಕ್ ಗೆ ರಜೆ. ಅವನ ಊಹೆಗಳು ನನಗೆ ಅಚ್ಚರಿ ಉಂಟು ಮಾಡಿದೆ. ಇಲ್ಲಿನ 'Crying pappa' ಎಂಬ ಚಿತ್ರದ ಗೆರೆಗಳೆಲ್ಲ ಹೆಮ್ಮೆಯ ಗರಿಗಳಾಗಿವೆ. ಸದಾ ನಗುತ್ತಲೇ ಇರುವ ನಾನು ಯಾವಾಗ ಅತ್ತಿದ್ದೆ? ಅದನ್ನು ಇವನು ಯಾವಾಗ ನೋಡಿದ ಅನ್ನುವುದು ಅಚ್ಚರಿ. ಚಿತ್ರ ಬಿಡಿಸಿ, ನೋಡಿ ನಗುವ ಅವನ ತುಂಟಾಟಿಕೆಯ...
ಕಾರಂತ ಎನ್ನುವ ದುಡಿ ನನ್ನೊಳಗೆ ನುಡಿಯುತ್ತಲೇ ಇದೆ..
ಜಿ ಎನ್ ಮೋಹನ್ ಕಲೆ: ಪೆರ್ಮುದೆ ಮೋಹನ್ ಕುಮಾರ್/ ಎಂ ಎಸ್ ಮೂರ್ತಿ । ಛಾಯಾಚಿತ್ರಗಳು: ಯಜ್ಞ "..ಈ ದಿನವೂ ಗುಡಿ ಬಂದೊಡನೆ ಬಾಡು ನಾಯಿ ನಿಂತಿತು. ಚೋಮನೂ ತಟಸ್ಥನಾಗಿ ಮೊಣಕಾಲುಗಳನ್ನು ಕೇವಲ ಅಭ್ಯಾಸ ಬಲದಿಂದಲೇ ಊರಿದ. ಎದೆ ಜುಮ್ಎಂದಿತು. ತಾನು ಪಾದ್ರಿಮಠವನ್ನು ಸೇರಲಿರುವವನು. ಇನ್ನು ಪಂಜುರ್ಲಿಗೆ ಡೊಗ್ಗಾಲು ಹಾಕುವುದೇ ಎಂದು...
ಕಾಫಿಯೂ ಉಂಟು.. ಕೊಲಂಬಸ್ ಸಹಾ ಉಂಟು..
Concern ಎರಡು ಕಾರಣಗಳಿಗಾಗಿ ಅಕ್ಟೋಬರ್ ನನಗೆ ತೀರಾ ಮುಖ್ಯ. ಒಂದು ಅಕ್ಟೊಬರ್ ೧, ವಿಶ್ವ ಕಾಫಿ ದಿನ. ಕಾಫಿಯನ್ನು ಇನ್ನಿಲ್ಲದಂತೆ ಬಸಿದುಕೊಳ್ಳುವ ನನಗೆ ಅಕ್ಟೊಬರ್ ಇಷ್ಟವಾಗಲು ಇದೊಂದೇ ಕಾರಣ ಸಾಕು. ಆದರೆ ಇನ್ನೊಂದು ದಿನವಿದೆ. ಅದು ನಾನು ಇಷ್ಟಪಡದ ದಿನ. ಅಕ್ಟೋಬರ್ ೧೦, ಕೊಲಂಬಸ್ ದಿನಾಚರಣೆ. ಹಾಗಾಗಿ ಕಾಫಿ ಮತ್ತು ಕೊಲಂಬಸ್...
ದೇರ್ ಈಸ್ ಹೋಪ್..
ಇವತ್ತು ವಿಶ್ವ ಮನೋ-ಆರೋಗ್ಯ ದಿನ. ಕತ್ತಲಕೋಣೆಗಳಲ್ಲಿ ಮೌನವಾಗಿ ಕಣ್ಣೀರಾಗುತ್ತಿರುವ ಜೀವಗಳು ಧೈರ್ಯವಾಗಿ ಹೊರಬನ್ನಿ. ಜಗವನ್ನು ಬೆಳಗುವ ಭರದಲ್ಲಿ ತಾನು ಹೊತ್ತಿ ಉರಿಯಬೇಕೆಂದೇನೂ ಇಲ್ಲ. ನೀವುಗಳು ಏಕಾಂಗಿಯಲ್ಲ. ಭರವಸೆಯೆಂಬುದು ಇನ್ನೂ ಇದೆ. ದೇರ್ ಈಸ್ ಹೋಪ್. ಪ್ರಸಾದ್ ನಾಯ್ಕ್ 'ಐ ಹೇಟ್ ಯೂ, ಡೋಂಟ್ ಲೀವ್ ಮೀ' ರಾತ್ರಿ ಎರಡರ...
ಜೆನೆರಿಕ್ಕು ಮತ್ತು ಲಾಜಿಕ್ಕು
ರಾಜಾರಾಂ ತಲ್ಲೂರು ಕೆಲವೊಮ್ಮೆ ಸರ್ಕಾರಗಳು ಬಹಳ ಲಾಜಿಕಲ್ ಆದ ತೀರ್ಮಾನಗಳನ್ನು ತೆಗೆದುಕೊಂಡಾಗ, ಅವು ಜನಸಾಮಾನ್ಯರ ಬದುಕಿನ ಮೇಲೆ ನೇರವಾಗಿ ಒಳ್ಳೆಯ ಪರಿಣಾಮ ಬೀರುವಂತಹದಾಗಿರುತ್ತವೆ. ಜೆನೆರಿಕ್ ಔಷಧಿಚೀಟಿ ಕಡ್ಡಾಯಗೊಳಿಸಿದ್ದು, ಸರ್ಕಾರಿ ಉದ್ಯೋಗದಲ್ಲಿರುವವರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯ...
ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಬೇಕು..
ನಮ್ಮ ವೃತ್ತೀನೆ ಹೀಗೆ, ಎಲ್ಲೋ ಮನೆಗೆ ಮಗಳಿಗೆ ಹೆಚ್ಚಿನ ಸಮಯ ಕೊಟ್ಟಿಲ್ಲವೆಂಬ ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ.ಹಾಗಾಗಿ ಮಗಳ ಒಂದು ಆಸೆ ಪೂರೈಸಲು ಮುಂದಾಗಿದ್ದೆ. ನವದೆಹಲಿಗೆ ಕರೆದುಕೊಂಡು ಹೋಗೆಂದು ಬಹಳ ಬಾರಿ ಮಗಳು ಕೇಳಿದ್ದಳು. ಈ ಬಾರಿ ಕರೆದುಕೊಂಡು ಹೋಗದಿದ್ರೆ ಖಂಡಿತ ನನ್ನನ್ನು ನಂಬಲ್ಲ ಅನ್ನೋದು ನಂಗೆ ಗೊತ್ತಾಯ್ತು....
ಕತ್ತಲ ಕೋಣೆಯೊಳಗಿನ ಜೀವ..
ನಂ. ಪಾರ್ವತಿ ಕತ್ತಲ ಕೋಣೆಯೊಳಗಿನ ಜೀವದ ಕಣ್ಣಿಗೇನೂ ಕೆಲಸವಿಲ್ಲ ಎಡವಿ ನಡೆವ ಕಾಲುಗಳು, ತಡವಿ ಹುಡುಕುವ ಕೈಗಳು, ಮುಟ್ಟಿದ್ದಕ್ಕೆಲ್ಲಾ ಜೀವಕೊಡುವ ಸ್ಪರ್ಷ, ವಾಸನೆ ಹಿಡಿದು ಜಾಡ ಅರಸುವ ಮೂಗು, ಸಣ್ಣ ಶಬುದವನ್ನೂ ಎಚ್ಚರದಿಂದ ಆಲಿಸುವ ಕಿವಿಗಳದ್ದೇ ರಾಯಬಾರ... ಕೋಣೆಯೊಳಗೆ ಕತ್ತಲಿದ್ದರೇನು? ಆಚೆ ಬೆಳಕಿದೆ ಅನ್ನೋ ಅರಿವಿಗೆ...
ನಿನಗೊಂದು ಸಲಾಮ್..
ಕುಸುಮಾ ಪಟೇಲ್ ಕಿಟಕಿಯಲಿ ಬೆಳಕು ಕಂಡ ಕೈ ಬೆರಳು ಎಳೆದು ತಂದಿದೆ ನೋಡು ಇತಿಹಾಸದ ಅಮ್ರೀನಳ ನೆರಳು- ಬೆಳಕು ಕಾಣದ ಖೋಲಿ ಸೂರ್ಯನಿಣುಕದ ಮೂಲೆ ಹಗಲು ರಾತ್ರಿ ಹೊದ್ದು ಬದುಕ ದಾರಿ ಕತ್ತಲು- ಶತಶತಮಾನದ ಶೋಷಣೆಗೆ ಸಿಡಿದೆದ್ದ ನಿನ್ನ ಈ ಕೈ ಬೆರಳು ಹುಡುಕಿ ಹಿಡಿದಿದೆ-ನೋಡು ಸೂರ್ಯನಾ ನೆರಳು- ಕತ್ತಲೆಯ ಕೋಣೆಯ ತಲ್ಲಣಕೆ ಬರೆದ ಶಾಯರಿಗಳು...
BREAKING NEWS: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬರಗೂರು ರಾಮಚಂದ್ರಪ್ಪ ಆಯ್ಕೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ ರಾಯಚೂರಿನಲ್ಲಿ ಬರುವ ಡಿಸೆಂಬರನಲ್ಲಿ ಸಮ್ಮೇಳನ ಜರುಗಲಿದೆ ದೆಹಲಿಯಲ್ಲಿ ನಡೆದ ರಾಜ್ಯ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ತಿರ್ಮಾನ ಕೈಗೊಳ್ಳಲಾಯಿತು. ಕಸಾಪ...

