
ಅಶೋಕ್ ಶೆಟ್ಟರ್

ದುರ್ಗಾಷ್ಟಮಿಯಂದು ತಲೇಲಿ ಹುಳ ಬಿಟ್ಕಂಡು…:
ಅಸುರರೆಂದರೆ ಯಾರು?
ಅಸುರರು ಇರುತ್ತಾರಾ?
“ರಾಕ್ಷಸಾ”ಕಾರ, ಕಪ್ಪು ಬಣ್ಣ, ಕೋರೆ ಹಲ್ಲುಳ್ಳವರು, ಬಂಡಿಗಟ್ಟಲೆ ಅನ್ನ, ಕೊಳಗಗಟ್ಟಲೆ ಸಾರು ನುಂಗುವವರು….,?
ಅಥವಾ
“ನೀನೇನು ಮನುಷ್ಯನೋ ರಾಕ್ಷಸನೋ”, “ಅವ ತುಂಬ ಒಳ್ಳೇಯವ ಕಣ್ರಿ, ದೇವರಂಥ ಮನುಷ್ಯ” ದಂಥ ನುಡಿಗಟ್ಟುಗಳಲ್ಲಿ ವ್ಯಕ್ತವಾಗುವಂತೆ ಈ ಸುರ- ಅಸುರಗಳು ಬರೀ ಗುಣವಾಚಕಗಳಾ??
“ಸುರ”ರ ಯಾವ ನಿಯಮ, ನಿಬಂಧನೆ, ಕಟ್ಟಳೆಗಳನ್ನು ಪಾಲಿಸದಿರುವದಕ್ಕೆ ಅಥವಾ ವಿರೋಧಿಸಿದ್ದಕ್ಕೆ ಮನುಷ್ಯರು “ಅಸುರ”ರಾದರು?
ಭಾರತದ ಸಂದರ್ಭದಲ್ಲಿ ಸುರರು ಯಾರು? ಅವರೇ ಯಾಕೆ?
ಅಸುರರು ಯಾರು?? ಅವರೇ ಯಾಕೆ??





0 Comments