ಕತ್ತಲ ಕೋಣೆಯೊಳಗಿನ ಜೀವ..

nam-parvathi
ನಂ. ಪಾರ್ವತಿ

ಕತ್ತಲ ಕೋಣೆಯೊಳಗಿನ ಜೀವದ
ಕಣ್ಣಿಗೇನೂ ಕೆಲಸವಿಲ್ಲ
ಎಡವಿ ನಡೆವ ಕಾಲುಗಳು,
ತಡವಿ ಹುಡುಕುವ ಕೈಗಳು,
ಮುಟ್ಟಿದ್ದಕ್ಕೆಲ್ಲಾ ಜೀವಕೊಡುವ ಸ್ಪರ್ಷ,
ವಾಸನೆ ಹಿಡಿದು ಜಾಡ ಅರಸುವ ಮೂಗು,
ಸಣ್ಣ ಶಬುದವನ್ನೂ ಎಚ್ಚರದಿಂದ
ಆಲಿಸುವ ಕಿವಿಗಳದ್ದೇ ರಾಯಬಾರ…

ಕೋಣೆಯೊಳಗೆ ಕತ್ತಲಿದ್ದರೇನು?
ಆಚೆ ಬೆಳಕಿದೆ ಅನ್ನೋ ಅರಿವಿಗೆ ಕೊರತೆಯೇನು?
ಮಕ್ಕಳ ಗದ್ದಲ, ಬೆಂದಕ್ಕಿಯ ವಾಸನೆ,
click-kavte4ಬೆಳಕಿನ ಸುದ್ದಿಯ ತಾರದೇನು?
ಎಡವಿ, ತಡವಿ ಸಾಕಾದಾಗೊಮ್ಮೆ
ಕಿಟಕಿಯ ಸರಳಿಗೆ ಕೈಹಚ್ಚಿ ನಿಂತಾಗ
ಬೆಳಕೇ ಕಂಡಂತೆ, ಮನ ಎಚ್ಚರಗೊಂಡಂತೆ
ಬಣ್ಣ-ಬಣ್ಣದ ನೆನಪುಗಳು ಅರಳಿ
ಕೈಬೆರಳುಗಳಿಗೂ ಕಣ್ಣು ಮೂಡಿಬಿಟ್ಟ ಭಾವ…

ಕತ್ತಲ ಕೋಣೆಯಾಚೆಯ ಲೋಕದ ಚಿಂತೆ
ಒಳಗಿನ ಜೀವಕ್ಕಿಲ್ಲ,
ಬರೀ ತಾನಾಯಿತು, ತನ್ನ ಪಾಡಾಯಿತು
ಅನ್ನುವ ಲೆಕ್ಖವೇ ಎಲ್ಲ,
ಮೂರೂ ಹೊತ್ತೂ ಒಂದೇ ಜಪ,
ಬೆಳಕು ಬಂದೀತೆ? ಕತ್ತಲು ಹೋದೀತೆ?…..
ಯಾವುದು ಬೆಳಕೋ, ಯಾವುದು ಕತ್ತಲೋ
ಅರಿವಾಗುವ ತನಕ..
ಹೊರಗಿನ ಬೆಳಕು-ಕತ್ತಲೆಯ ಜೂಜಿನಾಟಕೆ ಅಂಟದೆ
ಕೋಣೆಯ ಬೆಳಗಬೇಕೆಂಬ ಆಸೆ ಹುಟ್ಟುವ ತನಕ…

ಕತ್ತಲ ಕೋಣೆಯೊಳಗಿದ್ದಷ್ಟು ಹೊತ್ತಾದರೂ
ದೀಪ ಬೆಳಗಹೋಗದ ಗುಟ್ಟೇನೋ?
ಕತ್ತಲಲ್ಲಿ ಕಂಡದ್ದು
ಬೆಳಕಲ್ಲಿ ಕಾಣದೇ ಹೋಗಬಹುದೆಂಬ ಭಯವೋ?
ಯಾವ ವಾಸನೆ ಕಾಡುತ್ತಿರುವುದೋ?
ಯಾವ ಮಾತುಗಳು ಕಿವಿಯ ತುಂಬಿರುವುದೋ?
ಇದೆಯೇನೋ ಜೀವಕ್ಕೆ ಕತ್ತಲಿನಲ್ಲಿ ತಡಕಾಡಿ, ಮುಟ್ಟಿ,
ಯಾವುದಕ್ಕೋ ಜೀವ ಎರೆಯುವ ತುತರ್ು
ಇರಲಿ ಅದರ ಪಾಡಿಗೆ ಆ ಜೀವ
ತನ್ನ ಬೆಳಕ ತಾನು ಹುಡುಕುವ ಬದುಕಿನಲ್ಲಿ…

ಬೆಳಕಿಗೇನು ಬರವೆ?
ಕತ್ತಲೆಯೇನು ಹೊಸತೆ?

‍ಲೇಖಕರು Admin

October 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: