ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕತ್ತಲ ಕೋಟೆಯ ಹೂವು
ವಿಶ್ವನಾಥ ಎನ್. ನೇರಳಕಟ್ಟೆ ಮುಂಬಯಿಯ ಕೆಂಪುದೀಪದ ಆ ಪುಟ್ಟ ಮನೆಯೊಳಗಣ ಮಗು ಕಥೆಗಾಗಿ ಅಮ್ಮನನ್ನು ಪೀಡಿಸತೊಡಗಿತ್ತು. ಕ್ಷಣ ಮೊದಲು ಗಿರಾಕಿಯೊಬ್ಬನ ವಿಕೃತತೆಗಳಿಗೀಡಾಗಿದ್ದ ಅವಳು ಮಗುವಿಗಾಗಿ ಕಥೆ ಹೇಳತೊಡಗಿದಳು- “ಸುಂದರವಾದ ಉದ್ಯಾನದಲ್ಲಿ ಅರಳಿದ್ದ ಆ ಹೂವಿನಲ್ಲಿ ಎಂದಿಗೂ ಬತ್ತದ ಸೌಂದರ್ಯ, ಪರಿಮಳಗಳಿದ್ದವು. ಕಾಲವುರುಳಿದರೂ...
ಆದರೆ, ಅಪ್ಪ ಬರಲೇ ಇಲ್ಲ…
ಸೋನಿಯಾ ಆರ್.ಸಿ. ಜಾತ್ರೆಯ ಗದ್ದಲದಲ್ಲಿ ಕಳೆದುಹೋಗದಂತೆ ಗಟ್ಟಿಯಾಗಿ ಕೈಹಿಡಿದು ನಡೆಸಲು ಅವನು ಬರುತ್ತಾನೆ ಅಂದುಕೊಂಡಿದ್ದೆ ಆದರೆ, ಅಪ್ಪ ಬರಲೇ ಇಲ್ಲ... ಸಂತೆಯನು ಬಹು ಎತ್ತರದಿಂದ ಕಾಣಲು ಅವನ ಹೆಗಲಿಗಾಗಿ ಇನ್ನಿಲ್ಲದಂತೆ ಹಂಬಲಿಸಿದ್ದೆ ಆದರೆ, ಅಪ್ಪ ಬರಲೇ ಇಲ್ಲ... ಸ್ಪರ್ಧೆಯಲ್ಲಿ ಬಂದ ಪ್ರಥಮ ಸ್ಥಾನದ ಬಹುಮಾನ...
ʼತಾಯಿ ನಾಡಿʼಗೆ ಸ್ವಾಗತ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...
‘ಜ್ಞ’ ಗೂ ‘ಘ್ನ’ ಕ್ಕೂ ವ್ಯತ್ಯಾಸ…
‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...
ಕನ್ನಡಿ ಕಲಿಸಿದ ಡೆಮೋಕ್ರಾಟಿಕ್ ಪಾಠ
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ. ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...
ಬಂಡಾರ ಪ್ರಕಾಶನದ ಜೊತೆ ‘ಫಟಾ ಫಟ್’
ರಾಯಚೂರಿನ ಮಸ್ಕಿ ಮೂಲದ ಬಂಡಾರ ಪ್ರಕಾಶನ ಪುಸ್ತಕ ಮಳಿಗೆಗಳ ಪೈಕಿ ತನ್ನದೇ ಗುರುತು ಮೂಡಿಸಿದೆ. ತನ್ನ ವಿಶಿಷ್ಟ ಪುಸ್ತಕ ಸಂಗ್ರಹದಿಂದಾಗಿಯೇ ಬಂಡಾರ ನಾಡಿನ ಎಲ್ಲೆಡೆ ಪರಿಚಯವಾಗಿದೆ. ಇನ್ನೊಂದು ಮಳಿಗೆಯಲ್ಲಿ ಈ ಕೃತಿ ಸಿಗುವುದಿಲ್ಲ ಎನ್ನುವಂತಹ, ಸಂಶೋಧಕರಿಗೆ ರಸದೂಟವೆನಿಸುವ ಪುಸ್ತಕಗಳು ಬಂಡಾರದ ಯಶಸ್ಸಿನ ಗುಟ್ಟು. ಪರಶುರಾಮ...
ಇವರು ಶಶಿಧರ ಅಡಪ..
ಎನ್ ಆರ್ ವಿಶುಕುಮಾರ್ ಖ್ಯಾತ ರಂಗಕರ್ಮಿ, ಚಲನಚಿತ್ರ ಕಲಾ ನಿರ್ದೇಶಕ ಶಶಿಧರ ಅಡಪ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಅವರೊಂದಿಗಿನ ತಮ್ಮ ಗೆಳೆತನವನ್ನು ನೆನಪಿಸಿಕೊಂಡಿದ್ದಾರೆ. ಶಶಿಧರ ಅಡಪ.. ಮೊದಲು...
ನುಗಡೋಣಿಯವರ `ಸವಾರಿ’ಯಲ್ಲಿ ಮಾನವ ಪ್ರೀತಿ
ರಾಜು ಎಂ ಎಸ್ ಅಮರೇಶ ನುಗಡೋಣಿಯವರ ಕಥಾಲೋಕದೊಳಗೆ ಇಳಿಯುವುದು ಎಂದರೆ, ನಮ್ಮ ಲೋಕಾನುಭವದ ಒಳನೋಟ ಬೀರಿ ಪಡೆವ ಅನುಭೂತಿ. ಇದು ನಿಜಕ್ಕೂ, ಬದುಕಿನ ಬಗೆಗೆ ನಮ್ಮ ವಿಚಾರ ಲಹರಿಯೋ, ಅಥವಾ ಕಥೆಗಳ ವೈವಿಧ್ಯ-ವಾಸ್ತವ ಚಿತ್ರಣಗಳಿಗೆ ಪ್ರತಿಸ್ಪಂದಿಸುವ ಭಾಷಾ ವ್ಯವಹಾರವೋ, ಎನ್ನಿಸುವಷ್ಟು ಒಮ್ಮೊಮ್ಮೆ ಅಚ್ಚರಿ ಮೂಡಿಸುತ್ತದೆ. ಭಾಷಾ...
ಕಾಡುವ ಮಂಜುಳಾ ಡಿ ಕೃತಿಗಳು
ಸುಮತಿ ಶೆಣೈ ಕಾವ್ಯಸ್ಫುರಣ ಸಂವೇದನೆಗಳನ್ನೇ ಜೀವಾಳವಾಗಿಸಿದಂಥ ಲೇಖಕಿ ಡಿ. ಮಂಜುಳಾರವರ ಗದ್ಯ ಬರಹ 'ನಿನಾದವೊಂದು..' ಮತ್ತು 'ಜೋಡಿಸಿಡಲು ಪ್ರಯತ್ನಿಸುತ್ತಿದ್ದೇವೆಂದರೆ ಒಡೆದು ಹೋಗಿತ್ತು ಎಂದೇ ಅರ್ಥವಲ್ಲವೇ' ಎಂದು ತಮ್ಮ ' ಆಸೆಯ ಕಂದೀಲು' ಕವನ ಸಂಕಲನದ ಚುಟುಕದಲ್ಲಿ ಕೇಳುವ ಕವಯಿತ್ರಿಯ ಎಲ್ಲ ಪುಟ್ಟ ಪುಟ್ಟ ಸೊಲ್ಲುಗಳಲ್ಲಿ...
ದಿಲ್ ಸೆ ಮಾತನಾಡೋಣ..
ಡಿ. ರವಿವರ್ಮ ಗೆಳತೀಇನ್ನಾದರೂ ಮರೆತುಬಿಡು ,ನಿನ್ನ ಛಪ್ಪನ್ನಾರು ಚಿಂತೆಗಳ,ಕಳಚಿಬಿಡು ನಿನ್ನ ಹತ್ತಾರು ಮುಖವಾಡಗಳ ,ಈ ಹುಣ್ಣಿಮೆ ಚಂದ್ರನ ಬೆಳದಿಂಗಳ ಬೆಳಕಲ್ಲಿನಮ್ಮ ಗಂಟು ಮುಖಗಳ, ಗಂಟು ಮನಸ್ಸುಗಳ,ಬಿಚ್ಚಿ, ತೆರೆದಿಟ್ಟು, ದಿಲ್ ಸೆ ಮಾತನಾಡೋಣ. ಓ ಸೂರ್ಯ ಪ್ರಭುವೇ ನೀನೊಂದು ದಿನ ವಿರಮಿಸು ಎಂದು ಬೇಡುವೆಈ ಹುಣ್ಣಿಮೆಯ ಚಂದ್ರನಿಂದು...
ಕನ್ನಡ ಡಿಂಡಿಮ ಬಾರಿಸಿದವರು ಇನ್ನಿಲ್ಲ
ಶ್ರೀನಿವಾಸ ಜೋಕಟ್ಟೆ 'ಸಂಕಲ್ಪ ಸರಿ ಇದ್ದಾಗ ಪರಿಣಾಮ ಒಳ್ಳೆಯದಾಗಿರುತ್ತದೆ' ಎನ್ನುವಂತಹ ಸಾವಿರಾರು ಲೇಖನಗಳನ್ನು ಬರೆದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ, ಎಂದೂ ಕೂಡಾ ಸಂಭಾವನೆಯನ್ನು ನಿರೀಕ್ಷಿಸದ 85ರ ಇಳಿ ವಯಸ್ಸಿನ ಅಜಾತಶತ್ರು ಕನ್ನಡಿಗ ಸಾಹಿತಿ ಒಬ್ಬರು ಬರೋಡದಲ್ಲಿದ್ದರು ಎಂದರೆ...
ಬೆಳಕಿಲ್ಲದ ಏರ್ ಪೋರ್ಟ್ ರೋಡ್ ನಲ್ಲಿ..
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಚಿನ್ನೆಕೋಲು, ದಸ್ಯ ಒಂದಾಗಿ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ದಿನೇಶ್ ಮಡಗಾಂವ್ಕರ್ ಜೊತೆ ‘ಫಟಾ ಫಟ್’
ಪತ್ರಕರ್ತ ದಿನೇಶ್ ಮಡಗಾಂವ್ಕರ್ ಹೊಸ ಕಥಾ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಸಾಕಷ್ಟು ಸುದ್ದಿ ಮಾಡಿದೆ. ಈ ಕೃತಿಯ ಸಂಭ್ರಮದಲ್ಲಿದ್ದ ಅವರನ್ನು ‘ಅವಧಿ’ ಫಟಾ ಫಟ್ ಮಾತಿಗೆಳೆಯಿತು. ಗೆಂಡೆಹಳ್ಳಿ ರಾಮ ವನವಾಸಕ್ಕೆ ಏಕೆ ಹೋಗಿದ್ದು ? ಈಗಿರೋ ಪರಿಸ್ಥಿತಿಯಲ್ಲಿ ನಾಡನಲ್ಲಿ...
ಕಾರಂತರು ನಲುಗಬಾರದಿತ್ತು..
ಬಾಬುಕೋಡಿ ವೆಂಕಟರಮಣ ಕಾರಂತ ನನಗೆ ಸದಾ ನೆನಪಿನಲ್ಲಿ ಇರಲೇಬೇಕು. ಏಕೆಂದರೆ ಅವರ ನಿರ್ದೇಶನದ 'ಇಸ್ಪೀಟ್ ರಾಜ್ಯ' ನೋಡಲೆಂದೇ ನಾನು ಕಲಾಕ್ಷೇತ್ರದ ಮೆಟ್ಟಿಲು ಹತ್ತಿದ್ದು. ಅವರ ನಿರ್ದೇಶನದ ನಾಟಕಗಳಿಗಾಗಿಯೇ ನಾನು ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಕುಳಿತವನು. ಇವರ ನಾಟಕಕ್ಕಾಗಿಯೇ ಕೈಲಾಸಂ ಕಲಾಕ್ಷೇತ್ರ ಹೊಕ್ಕವನು. ಹೀಗಾಗಿ ಬಿ...
ಎದಿಯ ಗೂಡಿನ ಸಂದಿಯೊಳಗ..
ಸರೋಜಿನಿ ಪಡಸಲಗಿ ಮುಗಿಲಿನ ಬಯಲಾಗ ಬಣ್ಣದ ಓಕುಳಿ ಸುರಿsದು ಹರಡಿತ್ತ ಎದಿಯ ಗೂಡಿನ ಸಂದಿಯೊಳಗ ಜೀಕಳಿ ತಾ ಛಲ್ಲಂತ ಚಿಮ್ಮಿತ್ತs|| ಬಾನ ರಂಗಿನ ಗುಂಗಿನ್ಯಾಗ ಮತ್ತ ಸಂಜಿಯ ಮಬ್ಬಿನ್ಯಾಗ ಅತ್ತ ಇತ್ತ ಹಾರಿ ಜಿಗಿದು ಮನ ಸಂsಚಾsರ ಹೊರಟಿತ್ತು || ನೆನಪು ಕನಸು ಹೊದ್ದು ಕೊಂಡು ಸವಿ ಸವಿ ಮಾತು ನೆsನಸಿಕೊಂಡು ಬೆಳಕಿನ ಗದ್ದಲ ದೂರ ಸರಿಸಿ...
ವಧುವಾಗಿ ತಲೆಬಾಗಿ…
ಶ್ಯಾಮಲಾ ಮಾಧವ ಬಿ.ಎಸ್ ಸಿ. ಮೊದಲ ವರ್ಷದ ಫೈನಲ್ ಪರೀಕ್ಷಾ ದಿನಗಳು ಸಮೀಪಿಸುತ್ತಿದ್ದುವು. ಒಂದು ರವಿವಾರ ಬೆಳಿಗ್ಗೆ ಮಗು ಮಾಮ ಮನೆಗೆ ಬಂದರು. ನಾವು ಮಕ್ಕಳನ್ನೆಲ್ಲ ಪ್ರೀತಿಯಿಂದ ಮಗೂ, ಎಂದೇ ಸಂಬೋಧಿಸುತ್ತಿದ್ದ ಅವರನ್ನು ನಾವು ಮಗು ಮಾಮ ಎಂದೇ ಅನ್ನುತ್ತಿದ್ದೆವು. ನಾನು ಮಾಡಿ ಕೊಟ್ಟ ಶರಬತ್ ಕುಡಿದು ಹೋದ ಅವರು,...
ಮೂರು ಮಾದರಿಗಳು ಎರಡು ಪುಸ್ತಕಗಳು ಹಾಗೂ ಒಂದು ಸತ್ಯ
ಶ್ವೇತಾ ಹೊಸಬಾಳೆ ಇತ್ತೀಚೆಗೆ ಓದಿದ ಎರಡು ಪುಸ್ತಕಗಳು, ಮಕ್ಕಳ ಮನೋಲೋಕವನ್ನು ನಮ್ಮೆದುರು ತೆರೆದಿಡುವ ‘ತುಂಗಾ’, ಮತ್ತು ಮಣ್ಣು-ಕೃಷಿ-ನಾವಿರುವ ಜಾಗದೊಂದಿಗೆ ಬೆಸೆದುಕೊಳ್ಳುವುದರಲ್ಲಿನ ಖುಷಿ, ಸಿಗುವ ಸಂತೃಪ್ತಿಯ ಬಗ್ಗೆ ಹೇಳುವ ‘ITಯಿಂದ ಮೇಟಿಗೆ’ ನನ್ನ ಮನಸ್ಸನ್ನು ತುಂಬಾ ಉಲ್ಲಸಿತಗೊಳಿಸಿದವು. ಹೊಸಾ ವಿಷಯಗಳನ್ನು ತಿಳಿಸುವುದರ...
ಹಿಟ್ಲರ್‌ನ ಕಾಲುಗುಣ ಸರಿಯಿಲ್ಲ ಕಣ್ರೀ!
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಧ್ಯರಾತ್ರಿ 3 ಘಂಟೆಗೆ ವಿಮಾನ. ನಡುರಾತ್ರಿ 11ಕ್ಕೆ ಎರಡು ಟ್ಯಾಕ್ಸಿ ಹೇಳಿದ್ದ ನನ್ನ ಗಂಡ. ಸೂಟ್‌ಕೇಸ್‌ಗಳು ದೊಡ್ಡವಿರುತ್ತವಾದ್ದರಿಂದ ಒಂದರಲ್ಲಿ ಎಲ್ಲವೂ ಹಿಡಿಯುವುದಿಲ್ಲವಲ್ಲ ಹಾಗಾಗಿ....
ಮಣ್ಣಪಳ್ಳದಲ್ಲೊಂದು ಮೃದು ಕನಸಿದೆ..
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...




















