ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಈ ಹೊತ್ತಿಗೆ’ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ…
ಸಾಹಿತ್ಯ ಅಧ್ಯಯನಕ್ಕೊಂದು ಹೊಸ ರೂಪು ಕೊಟ್ಟ ‘ಈ ಹೊತ್ತಿಗೆ’ಯು ಕಥಾ ಪ್ರಕಾರಕ್ಕೆ ಮಾತ್ರವಲ್ಲದೆ, ಈ ವರ್ಷದಿಂದ ಕನ್ನಡದ ಮೂಲ ಸಾಹಿತ್ಯ ಪ್ರಕಾರವಾದ ಕಾವ್ಯಕ್ಕೂ ಪ್ರಶಸ್ತಿ ಕೊಡಲು ನಿರ್ಧರಿಸಿದೆ. ‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು...
ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ತಪ್ಪಿದೆ…
ಸರೋಜಿನಿ ಪಡಸಲಗಿ ಬೊಮ್ಮ….ಒಪ್ಪಿದೆ ನೀನು ವಿಶಿಷ್ಟ ಸೃಷ್ಟಿ ಕರ್ತ ಎಂದುಜಾಣನಾದರೂ ತಪ್ಪಿಬಿಡ್ತಿ ನೋಡು ಒಮ್ಮೊಮ್ಮೆಹೇಳಿಸಿ ಹೆಣ್ಣಿಗೆರಡು ದಡ ಹೊಳೆಯಂತೆ ಅಂದುತಪ್ಪಿದೆ ಬೊಮ್ಮ ನೀನೇ ಸೃಷ್ಟಿಸಿದ ಅವಳನರಿಯಲು ಬೊಮ್ಮ……ಹೆಣ್ಣೇ ಒಂದು ಹೊಳೆಯಲ್ವೆ ಹೇಳು ನೋಡೋಣಬರೀ ಎರಡು ದಡಗಳಲ್ಲ ಎರಡು ಮನೆಗಳಲ್ಲಎಲ್ಲೆಯೇ ಇರದ ಅಗಾಧ ಹರಿವುಳ್ಳ...
ಸುಬ್ರಾಯ ಚೊಕ್ಕಾಡಿ ಮೆಚ್ಚಿದ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’
ಅನನ್ಯ ತುಷಿರಾ ಅವರ 'ಅರ್ಧ ನೆನಪು ಅರ್ಧ ಕನಸು' ಕೃತಿಗೆ ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಬರೆದ ಮಾತುಗಳು ಇಲ್ಲಿವೆ- ದಕ್ಕುವ ಬೆಳಕಿನ ಕಥೆಗಳು ಸುಬ್ರಾಯ ಚೊಕ್ಕಾಡಿ ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಉದ್ಯೋಗದಲ್ಲಿರುವ ಅನನ್ಯಾರ ಪರಿಚಯ ನನಗಾದದ್ದು ಗೋಪಾಲಕೃಷ್ಣ ಕುಂಟಿನಿಯವರು ಅಡ್ಮಿನ್ ಆಗಿರುವ ಕಥೆ ಕೂಟ...
ಕೇಸರಿ ಹರವೂ ʼಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನ..
ಕಳೆದ ಡಿಸೆಂಬರ್‌ನಿಂದ ನಡೆಯುತ್ತಿರುವ ರೈತ ಚಳವಳಿಯು ಜಗತ್ತಿನ ಗಮನ ಸೆಳೆದ ಅಪರೂಪದ ಸತ್ಯಾಗ್ರಹವಾಗಿದೆ. ಈ ಚಳವಳಿಯ ಕುರಿತ ಸಾಕ್ಷ್ಯಚಿತ್ರ ‘ಕಿಸಾನ್ ಸತ್ಯಾಗ್ರಹ’ ಈಗ ಪೂರ್ಣಗೊಂಡು, ಇದರ ಪ್ರಥಮ ಪ್ರದರ್ಶನವನ್ನು ಡಿಸೆಂಬರ್ 5 ರಂದು, ಕಲ್ಪ ಕ್ಷೇತ್ರ, ೫೮೧/೧, ೪ನೇ ಹಂತ, ೧ನೇ ಫೇಸ್, ವಿಜಯನಗರ ೩ನೇ ಹಂತ, ವಿಜಯನಗರ, ಮೈಸೂರಿನಲ್ಲಿ...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಸಪ್ನ ʼಅವಧಿʼ ಟಾಪ್ ಟೆನ್
ಶರಪಂಜರ ಶಿವರಾಂ ಬಾರದೂರಿಗೆ ಪಯಣ…
ಗಣೇಶ್ ಶೆಣೈ ಚಿತ್ರ ರಂಗದ ಹಿರಿಯ ನಟ ಶಿವರಾಮಣ್ಣ, ಸುಚಿತ್ರ ಫಿಲ್ಮ್ ಸೊಸೈಟಿ ಯನ್ನು ಕಟ್ಟಿ ಬೆಳೆಸಿದ ಹಿರಿಯ ರಲ್ಲಿ ಪ್ರಮುಖರು.. ಕಳೆದ ಎರಡು ವರ್ಷಗಳಿಂದ ಸುಚಿತ್ರ ಫಿಲ್ಮ್ ಸೊಸೈಟಿ ಯ ಕಾರ್ಯಕಾರಿ ಸಮಿತಿಯಲ್ಲಿ ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ಒದಗಿಬಂತು.. ಕನ್ನಡ ಚಿತ್ರರಂಗದ ಅನೇಕ ಘಟನೆಗಳಿಗೆ ಸಾಕ್ಷಿ ಯಾಗಿದ್ದ ಅವರು, ಅನೇಕ...
ಹಿರಿಯ ನಟ ಶಿವರಾಂ ಇನ್ನಿಲ್ಲ…
ಲಾಂಗೂಲಾಚಾರ‍್ಯರು ಇಲ್ಲಿದ್ದಾರೆ..
ಎಂ ಬಿ ರಾಜೇಶ್ ಗೋವೆಯಲ್ಲಿರುವ ನಮ್ಮ ಕುಲದೇವರ ಸನ್ನಿಧಿಗೆ ವರ್ಷದಲ್ಲಿ ಎರಡು ಬಾರಿ ತಪ್ಪದೇ ಹೋಗಿ ಬರುವುದು ರೂಢಿ. ಮೈಸೂರಿನಿಂದ ನೇರ ಟ್ರೈನ್ ಸೌಕರ್ಯವಿಲ್ಲದ ಕಾರಣ ನೈಟ್ ಟ್ರೈನಿನಲ್ಲಿ ಹುಬ್ಬಳ್ಳಿಗೆ ಹೋಗಿ ಮಧ್ಯಾಹ್ನ ಹಳೆಯ ಬಸ್ ನಿಲ್ದಾಣದ ಎದುರಿರುವ ಬಸವೇಶ್ವರ ಖಾನಾವಳಿಯಲ್ಲಿ ಜೋಳದ ರೊಟ್ಟಿ ಊಟ ಮಾಡಿ ಸಂಜೆ ಗಿರ್ಮಿಟ್ ಮತ್ತು...
ಕೆ ವಿ ಅಕ್ಷರ ಮೆಚ್ಚಿದ ನಂದಕುಮಾರ್ ‘ಜಾಲಿ ಮುಳ್ಳು’
ಈ ಭಾನುವಾರ ಸಂಜೆ ೫ಕ್ಕೆ ಜೋಗಿ ಅವರ ಕಣ್ಗಾವಲಿನಲ್ಲಿ ಎರಡು ಹೊಸ ಪ್ರತಿಭೆಗಳ ಕೃತಿಗಳು ಹೊರಬರುತ್ತಿವೆ.ಅದರಲ್ಲಿ ಜಿ ಕೆ ನಂದಕುಮಾರರ 'ಜಾಲಿ ಮುಳ್ಳು'ಸಹಾ ಒಂದು ಆ ಕೃತಿಗೆ ಖ್ಯಾತ ನಾಟಕಕಾರ ಕೆ ವಿ ಅಕ್ಷರ ಬರೆದ ಮಾತುಗಳು ಇಲ್ಲಿವೆ- ಕೆ ವಿ ಅಕ್ಷರ ರಂಗಮಾಧ್ಯಮದಲ್ಲಿ ಕೆಲಸ ಮಾಡುವ ಜನರನ್ನು ಹಲವು ಕಾಲ ಸಮೀಪದಿಂದ ನೋಡುತ್ತ ಬಂದ ನನಗೆ...
ರಂಜಿನಿ ಪ್ರಭು ಹೊಸ ಕಾಡುವ ಕವಿತೆ
ರಂಜಿನಿ ಪ್ರಭು 1. ಕವಿತೆ—ಬಂದಳಿಕೆಒಂದಿರುಳು ಕಳೆದುಬೆಳಗಾಗುವನಿತರಲ್ಲಿಕಿಲಕಿಲ ನಗುವಅರಮನೆಯಾರು ತಾನೇ ಮಲಗಿದ್ದಾರೆಅಯೋದ್ಯೆಯ ಅರಮನೆಯಲ್ಲಿಕಳೆದಿರುಳು?ಅದೇನು ಸಣ್ಣ ವಿಷಯವೇರಘುರಾಮನಿಗೆಪಟ್ಟಾಭಿಷೇಕ?ಕೆಲವೇ ಜಾಮಗಳಲ್ಲಿನಡೆಯಬೇಕಿದೆ ಸಿದ್ಧತೆಇಳಿಯಬೇಕಿದೆ ಗಂಧರ್ವಲೋಕವೇ ಧರೆಗೆಗಡಿಬಿಡಿ..ಓಡಾಟಹೂವು ಗಂಧತೋರಣ ಬಾಲ ಅರುಣಮುಗಿಲ...
ಚೇತನ್ ಎಸ್ ಪೊನ್ನಾಚಿ ಹೊಸ ಕವಿತೆ- ಕಪ್ಪು ಸುಂದರಿ…
ಚೇತನ್ ಎಸ್ ಪೊನ್ನಾಚಿ ಅವಳೊಟ್ಟಿಗಿನ ದಿನವು ಬೆದೆಯೊಡೆದು ಎದೆಯೊಳಗೆ;ದಿನ ಬಿಟ್ಟು ದಿನವು ಚಿಗುರುತ್ತಿಹುದು.ಕಾರ್ತಿಕದ ಕತ್ತಲಲಿ ಕಾಳಮ್ಮನ ಗುಡಿ ಮುಂದೆಅವಳಚ್ಚಿಟ್ಟ ದೀಪ ಇನ್ನು ಬೆಳಗುತ್ತಿಹುದು. ಗದ್ದಿಗೆ ಕೊಂಡಿಯ ಉದ್ದಿಗೆ ಮಣೆ ಮೇಲೆನಿಂತವಳ ಹೆಸರನ್ನು ನೂರು ಬಾರಿ.ಕೂಗಿ ಕರೆವಾಗ ಬಿಸಿಲು ಮಳೆ ಬಂದುಮದುವೆ ದಿಟವಾಯ್ತೆಂದು...
ಮರೆಯಲಾಗದ ಪತ್ರಕರ್ತ ಪಿ ರಾಮಯ್ಯ
ಶಿವಾನಂದ ತಗಡೂರು ಸುದ್ದಿ ಮನೆಯಲ್ಲಿ ಪಿ.ರಾಮಯ್ಯ ಹೆಸರು ಕೇಳದವರಿಲ್ಲ. ಅಷ್ಟರ ಮಟ್ಟಿಗೆ ಹೆಸರುವಾಸಿ. ಐದು ದಶಕಗಳ ಕಾಲ ಪತ್ರಕರ್ತ ವೃತ್ತಿಯನ್ನು ಜತನದಿಂದ ಕಾಪಾಡಿಕೊಂಡು ಬಂದವರು. ಸುದ್ದಿ ಮನೆಯಲ್ಲಿ ತಮ್ಮದೇ ಧಾಟಿಯಲ್ಲಿ ಸುಧೀರ್ಘ ಕಾಲ ಸವೆಸಿ, ಹಿರಿತನದ ಘನತೆಯನ್ನು ಕಾಪಾಡಿದವರು. 1953. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ...
ಮಹಾಮನೆ ಅಂಕಣ – ಕಲ್ಯಾಣವೆನ್ನೀರೀ ಕಾರುಣ್ಯ ಮೂರ್ತಿಗೆ – ಕಲ್ಯಾಣವೆನ್ನೀ ಜಗವೆಲ್ಲಾ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Pic by Mika Kiki
ತಿರುಪತಿ ಭಂಗಿ ಕಥೆ- ಹರೆವು…
ತಿರುಪತಿ ಭಂಗಿ 'ಕೇಳ್ರಪೋ..ಕೇಳ್ರೀ.. ಇಂದ ಹೊತ್ತ ಮುನಗೂದ್ರವಳಗಾಗಿ ಊರ ಖಾಲಿ ಮಾಡ್ಬೇಕಂತ ನಮ್ಮ ಡಿ.ಸಿ ಸಾಹೇಬ್ರ ಆದೇಶ ಆಗೇತಿ, ಲಗೂನ ನಿಮ್ಮ ಸ್ವಾಮಾನಾ ಸ್ವಟ್ಟಿ ತಗೊಂದ, ನಿಮ್ಮ ದನಾ ಕರಾ ಹೊಡ್ಕೊಂಡ, ತುಳಸಿಗೇರಿ ಗುಡ್ಡಕ ಹೋಗಿ ಟಿಕಾನಿ ಹೂಡ್ರೀ ಅಂತ ಹೇಳ್ಯಾರು, ನನ್ನ ಮಾತ ಚಿತ್ತಗೊಟ್ಟ ಕೇಳ್ರಪೋ..ಕೇಳ್ರೀ.. ಹೇಳಿಲ್ಲಂದಿರೀ.....
ರಜಿಯಾ ಡಿ ಬಿ ಹೊಸ ಕವಿತೆಗಳು…
ರಜಿಯಾ ಡಿ ಬಿ 1. ಅನನ್ಯ ಕಣ್ಣಿನ ನೋಟವಾಗಿಶಬ್ದದ ಅರ್ಥವಾಗಿಆತ್ಮದೊಂದಿಗೆಜೀವವಾಗಿ;ಈ ಚಾಲನೆಗೆಸಂಚಾಲನೆಯಾಗಿ -ನೀ ಇಲ್ಲದೆಯೇನಿನ್ನಿರುವಿನ 'ಅರಿವು'ಚಿಗಿಯುತ್ತಿಹುದಿಲ್ಲಿ 2. ರಿವಾಜ್ಈಟಿ ಮಾತಿನ ಏಟಿಗೆದಹಿಸಲಾಗದ ದೇಹದಮನವಾಗದ ಧೋರಣೆಗೆದಂಗೆ ಏಳಬಯಸುವದಂಧೆಯಲ್ಲೇ -ದಂಗಾದ ಪೋರಿಗಳುದಾರುಣ ರಿವಾಜಿಗೆಸಿಕ್ಕು ಸಜೀವ ಗೋರಿಗಳು 3....
ಪುಟ್ಟರಾಧ್ಯ ಎಸ್ ನೆನಪಿನ – ಹುಡುಕಾಟ…!
ಪುಟ್ಟರಾಧ್ಯ ಎಸ್ ಅವಳು ಹೋದ ಶುರುವಿನಲ್ಲಿ ಅಮ್ಮ ಸರ್ವಾಣಿಯನ್ನು ಹುಡುಕಿದ ಜಾಗಗಳು ನೂರಾರು. ಎಲ್ಲೋ ಹೋಗುತ್ತಿದ್ದವನಿಗೆ ರಸ್ತೆಯ ಮೂಲೆಯಲ್ಲಿ ಯಾರೋ ಒಂಟಿ ಹೆಂಗಸೊಬ್ಬಳು ನಿಂತಿದ್ದರೆ ಅವಳಲ್ಲವೆಂದು ನನ್ಮನ ಗಟ್ಟಿಯಾಗಿ ಹೇಳಿದರೂ ನಿಧಾನಿಸಿ ಒಮ್ಮೆ ಅವರ ಮುಖ ನೋಡಿ ಅವಳಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆಯೇ ಮುಂದೋಗುತ್ತಿದ್ದುದು....
ಮಠದ ಅವರಿಗೆ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ…
ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳದ ಯುವ ಕವಿ ಮೆಹಬೂಬ ಮಠದ ಅವರ ಚೊಚ್ಚಲ ಕವನ ಸಂಕಲನ 'ಬಿಸಿಲು ಕಾಡುವ ಪರಿ' ಆಯ್ಕೆಯಾಗಿದೆ. ಮಾನವೀಯ ಕಾಳಜಿಯ ಆತ್ಯಂತಿಕ ನೆಲೆಯು ಅವರ ಕಾವ್ಯದ ಜೀವಾಳವಾಗಿದ್ದು ಹೊಸ ತಲೆಮಾರಿನ ಭರವಸೆಯ ಕವಿ ಎಂದು ವಿಮರ್ಶಕರು...
ಗೀತಾ ಕುಂದಾಪುರ ಓದಿದ- ಮನಸೇ ನೀನೇಕೆ ಹೀಗೆ…
ಗೀತಾ ಕುಂದಾಪುರ ಲೇಖಕಿ ಗೀತಾ ಅವರು ತಮ್ಮ ಕೃತಿಯಲ್ಲಿ ಮನುಷ್ಯನ ಗುಣಗಳನ್ನು, ಸ್ವಭಾವಗಳನ್ನು, ಭಾವನೆಗಳನ್ನು ವಿಶ್ಲೇಷಿಸಿದ್ದಾರೆ, ಪುಸ್ತಕದಲ್ಲಿ 32 ಲೇಖನಗಳಿದ್ದು ಎಲ್ಲವೂ ಪ್ರಸಿದ್ಧ ಪತ್ರಿಕೆಗಳಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾದವುಗಳು. ಮನುಷ್ಯನ ಮನಸ್ಸು, ಸ್ವಭಾವ, ಭಾವನೆಗಳನ್ನೇ ವಿಷಯವಾಗಿಟ್ಟುಕೊಂಡು ಎಷ್ಟೊಂದು...
Pic by Ganesh vanare





















