ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷತಾ ಕೃಷ್ಣಮೂರ್ತಿ- ಗಜಲ್…

ಅಕ್ಷತಾ ಕೃಷ್ಣಮೂರ್ತಿ

ನೀನು ಮೆಲ್ಲನೆ ಬೆಣ್ಣೆ ಕದಿಯಲು ಬಂದ ಗೋಪಿಕಂದನೆಂದಾಗಲೇ ನಾ ನಕ್ಕಿದ್ದು
ನೀನು ರಾಧೆಯ ಹೆರಳಿನ ಪಾರಿಜಾತದ ಪಕಳೆಯೆಂದಾಗಲೇ ನಾ ನಕ್ಕಿದ್ದು

ನನ್ನ ನಯವಾದ ನಜರಿಗೆ ಕಾಣುವುದು ಬರಿ ನಿನ್ನೊಲವು ನಸುಕು
ಬರ್ ಪೂರ್ ಬಾಚಿಕೊ ನೀನು ನುಡಿದಾಗಲೇ ನಾ ನಕ್ಕಿದ್ದು

ಒಂದು ಮಾತು ಎಂದವನೆ ಬಿಡದೆ ಸಾವಿರ ಸಾವಿರ ಒಲವಿನದೆ ಮಾತಾಡುವೆ
ಪ್ರತಿ ಅಕ್ಷರವೂ ಎನ್ನ ಒಳಗೆ ನಾಚುವ ನಿನ್ನ ಕಂಡಾಗಲೇ ನಾ ನಕ್ಕಿದ್ದು

ಕೆಂಪನೆಯ ತುಟಿಯಲ್ಲಿ ನನಗೆಂದೆ ಕೊಡಲು ಕಾದಿದೆ ಮುತ್ತು
ಬೇಗನೆ ಕೊಡು ಎಂದು ಗಡಬಡಿಸಿದಾಗಲೇ ನಾ ನಕ್ಕಿದ್ದು

ಎದೆಯ ಬಾಗಿಲು ತೆರೆದಿದೆ ಬಾ ಎಂದು ಸಾರಿ ಸಾರಿ ಕೂಗುತ್ತದೆ ನನ್ನೆದೆ
ಅಂದಾಡಿದ ನಿನ್ನ ಸುಪ್ರಭಾತವ ಕೇಳಿ ಎದ್ದಾಗಲೇ ನಾ ನಕ್ಕಿದ್ದು

ಮಳೆಹನಿಗಳು ನಿನ್ನೊಲುಮೆಯ ಮಾತು ಕೇಳಿ ಸೋತು ಮರುಳು ನನ್ನೊಳಗೆ
ಅಲ್ಲೆ ದಂಗಾಗಿ ಇಳೆಯಲ್ಲಿ ನಿಂತುಬಿಟ್ಟಾಗಲೇ ನಾ ನಕ್ಕಿದ್ದು

ಬದುಕು ಚಿಕ್ಕದು ಬಯಸಿ ಬರುವೆ ಎಂದ್ಹೇಳಿಬಿಡು ಕೇಳಿ ಖುಷಿಯಲಿ ಮೈಮರೆವೆನು
ನಿನ್ನ ಉಸಿರಲ್ಲಿ ಮಿಂದೆಂದು ಅಕ್ಷತ ನಿರ್ಮಲವಾದಾಗಲೇ ನಾ ನಕ್ಕಿದ್ದು

‍ಲೇಖಕರು Admin

22 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading