ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಾಲ್ಯದ ಜಗುಲಿಗೆ ಕರೆವ ನಾದಗಳು…
"ಡೋರ್ ನಂ. 142" ಕಾಲಂ ಬಹುರೂಪಿ ಆಫೀಸ್ ನಲ್ಲಿ ಮಾರ್ನಿಂಗ್ ರಾಗ, ಈವನಿಂಗ್ ರಾಗದ ಬಗ್ಗೆ ಮಾತಾಡ್ತಿದ್ದೆ. ಹೇಗೆ ದಿನಾ ಅನ್ನೋದು ಹಲವು ಮೂಡ್ ಗಳ ಸಂಗಮ ಅನ್ನೋದನ್ನ ವಿವರಿಸ್ಬೇಕಿತ್ತು. ಸಡನ್ನಾಗಿ ನನ್ನ ಮನಸ್ಸು ಜಾರಿ ಹಿಂದಕ್ಕೆ ಹೋಯಿತು. ಕೌಸಲ್ಯಾ ಸುಪ್ರಜಾರಾಮ... ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ......
ಜನಮನದ ಸೊಲ್ಲಿಗೆ ಸಾವಿಲ್ಲವೋ…
"ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬುದು ಕೂಡ ಒಂದು ಗಾದೆ. ಯಾವುದೂ ನಿಲ್ಲದಿದ್ದರೂ ಕಡೆಗೆ ಗಾದೆ ನಿಂತುಬಿಡುತ್ತದೆ. ಹಾಗೆ ಸ್ಥಾಪಿಸಿಕೊಳ್ಳಬಲ್ಲ ಸ್ವಯಂ ಶಕ್ತಿಯ ಕಾರಣದಿಂದಾಗಿಯೇ ಗೆಲ್ಲುತ್ತದೆ. ಗ್ರಾಮೀಣ ಬದುಕಿನಲ್ಲಿ, ಕೃಷಿಗೆ ಹತ್ತಿರಾದ ಬದುಕಿನಲ್ಲಿ ಗಾದೆಗೆ ಘನವಾದ ಸ್ಥಾನಮಾನ. ಅಂಥ ಕೆಲವು ಗಾದೆಗಳನ್ನು ಇಲ್ಲಿ...
ಅವನು ದೇವದೂತನಂತೆ ಬಂದಿದ್ದ!
ಇದು, ಪ್ರಸಿದ್ಧ ರಷ್ಯನ್ ಲೇಖಕ ದಾಸ್ತೊಯೆವ್ ಸ್ಕಿ ಸಾವಿನ ಬಾಯಲ್ಲಿ ಹೋಗಿ ನಿಂತಿದ್ದ ಕಥೆ. ಇನ್ನೇನು ಧಡಲ್ ಎಂದು ಗುಂಡು ಸಿಡಿಯುವುದಿತ್ತು. ಅಷ್ಟು ಹೊತ್ತಿಗೆ ಸರಿದು ಹೋಯಿತು ಸಾವಿನ ತೆರೆ. ತೆರೆದುಕೊಂಡಿತ್ತು ಬದುಕು ಮತ್ತೆ. ೧೮೪೯ ಯುರೋಪಿನಲ್ಲಿ ಕ್ರಾಂತಿಗಳ ವರ್ಷ. ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಬಂದದ್ದೂ ಆ ಹೊತ್ತಿನಲ್ಲೇ....
ಚಂದಮಾಮದಿಂದ ಎಸ್ಸೆಮ್ಮೆಸ್ ತನಕ
ಮುಲ್ಲಾನಾಸಿರುದ್ದೀನ್ ಒಬ್ಬ ಸೂಫಿ ಸಂತ ಎನ್ನುವುದನ್ನು ಹೊರತುಪಡಿಸಿದರೆ ಆತ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ. ಸೂಫಿಗಳ ಕುರಿತು ಬಹಳಷ್ಟು ಸಂಶೋಧನೆಗಳನ್ನು ನಡೆಸಿದ ಇದ್ರಿಸ್ ಶಾನೇ ಈ ಅಭಿಪ್ರಾಯಕ್ಕೆ ಬಂದಿದ್ದಾನೆ. ಈತ ಸೂಫಿ ಸಂತರ ದರ್ವೇಶ್ ಪಂಥದ ಅನುಭಾವಿಗಳ ಸೃಷ್ಟಿ ಎಂಬ ಮತ್ತೊಂದು ವಾದವೂ ಇದೆ. ಮುಲ್ಲಾ ಇದ್ದನೇ ಇಲ್ಲವೇ...
ಮುಲ್ಲಾನಾಸಿರುದ್ದೀನ್ ಕಥೆಗಳು
ಮುಲ್ಲಾ ತನ್ನ ಗೆಳೆಯ ವಿದ್ವಾಂಸರ ಜತೆ ಚರ್ಚಿಸುತ್ತಿದ್ದ. ಒಬ್ಬಾತ ಮುಲ್ಲಾನಿಗೊಂದು ಪ್ರಶ್ನೆ ಎಸೆದ. "ಪ್ರಾಪಂಚಿಕ ವಸ್ತುಗಳು ಮತ್ತು ಪರಲೋಕದ ವಸ್ತುಗಳ ನಡುವಣ ಸಂಬಂಧ ವಿವರಿಸುತ್ತೀಯಾ?" "ಸರಿ, ನೀನು ರೂಪಕಗಳನ್ನು ಅರ್ಥ ಮಾಡಿಕೊಳ್ಳಬೇಕು." "ನಿನ್ನ ಒಗಟು ಬೇಡ. ಪ್ರಾಯೋಗಿಕವಾದ ಏನನ್ನಾದರೂ ತೋರಿಸು. ಉದಾಹರಣೆಗೆ ಸ್ವರ್ಗದ ಸೇಬು."...
ನಮ್ಮನ್ನೆಲ್ಲ ಕಾಡುವ ಜಾಫ್ನಾದ ಈ ಹುಡುಗಿ…
ಜಯಸರಿತಾ ನಾಜಿಗಳ ಕ್ರೌರ್ಯದ ಇತಿಹಾಸಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಚಿತ್ರ ನಿರ್ದೇಶಕ ಅಲೆನ್ ರೆನೆ "ನೈಟ್ ಅಂಡ್ ಫಾಗ್" ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾನೆ. ವರ್ತಮಾನದಲ್ಲಿ ಹಸಿರು ಹುಲ್ಲುಗಾವಲಿನಂತೆ ಸುಂದರವಾಗಿ ಕಾಣುವ ಹಳೆಯ ಯಾತನಾ ಶಿಬಿರಗಳು, ಪುಸ್ತಕಗಳು, ವ್ಯಕ್ತಿಗಳು ಇತ್ಯಾದಿಗಳನ್ನು ಬಳಸಿಕೊಂಡು ಭೂತವನ್ನು...
ಶುರುವೇ ಆಗದ ಪ್ರೇಮಗಾಥೆ
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಸುಂದರಿ.... ಅವಳ ಸವಿಗೆ ದುಂಬಿ ದಂಡು. ದಂಡಿನಲ್ಲೊಬ್ಬ ಪ್ರೇಮ ಪೂಜಾರಿ. ಹಗಲಿರುಳೂ ಅವನದೇ ಸುತ್ತ ಮುತ್ತ. ಆದರವನ ಪ್ರೇಮಕ್ಕೆ ಬೆಲೆಯೇ ಇಲ್ಲ ಅವಳಲ್ಲಿ. ಅಸಲು, ಪ್ರೀತಿಯೆಂಬುದರ ಅರಿವೇ ಇಲ್ಲ ಅವಳಿಗೆ. ಒಳಗಿಂದೊಳಗೇ ಎಂಥದೋ ತಿರಸ್ಕಾರ. ಅವನ ಬಳಿ ಬೈಕೂ ಇಲ್ಲವಲ್ಲ! ಹೀಗಿರುವಾಗೊಮ್ಮೆ...
ಊರು ಬದಲಾಯಿಸೋದಿದೆಯಲ್ಲ, ಲೇಖಕನಿಗೆ ಅದು ಮುಖ್ಯ
ಕುಂ ವೀರಭದ್ರಪ್ಪ ನಾನಿದ್ದ ಹಳ್ಳಿಗಳ ಕಡೆ ಗೌಡರು ಯಾವತ್ತೂ ಸುಳ್ಳು ಹೇಳೋದಿಲ್ಲ ಅನ್ನೋ ನಂಬಿಕೆ ಜನರಲ್ಲಿತ್ತು. ಅಲ್ಲಿ ಒಂದು ಚಪ್ಪರ ಚೆನ್ನಪ್ಪನ ಗುಂಡು ಅಂತ ಇತ್ತು. ಸುಮಾರು ೨೦೦ ಕೆ.ಜಿ. ತೂಕದ್ದು. ಅದನ್ನು ಎತ್ತಿದವರಿಗೆ ಬೆಳ್ಳಿ ಕಡಗ ಬಹುಮಾನ ಅನ್ನೋ ಸವಾಲು ಅಲ್ಲಿತ್ತು. ಆ ಕಡಗ ಗೌಡರ ಹತ್ರ ಇತ್ತು. ಆದವಾನಿಗೆ ನಾನು ಹೋಗಿದಾಗ...
ಎಸ್ ದಿವಾಕರ್ ಮತ್ತೆ ಬರೆದಿದ್ದಾರೆ
ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಎಸ್ ದಿವಾಕರ್ | ಅಂಕಿತ ಪ್ರಕಾಶನ | ದೂರವಾಣಿ: ೦೮೦-೨೬೬೧೭೧೦೦ ೫೩, ಗಾಂಧಿ ಬಜಾರ್, ಬಸವನಗುಡಿ,...
ನ್ಯೂಯಾರ್ಕಿನಿಂದ ಒಂದು ತಾಜಾ ಮಾಲಿನ ರಫ್ತು
"ವೆಂಕಿ ಬರ್ಗರ್" ವೆಂಕಿ ತಮ್ಮದೆಲ್ಲವನ್ನೂ ಚಿಕ್ಕ ಊರುಗಳಿಗೆ ರಫ್ತು ಮಾಡುತ್ತಾ ಇರುವುದು ದೊಡ್ಡ ನಗರಗಳ ಪ್ರತಿಷ್ಠೆಗಳಲ್ಲೊಂದು-ಅವರ ಮೌಲ್ಯಗಳು, ಮೌಢ್ಯತೆಗಳು ಎಲ್ಲವನ್ನೂ ಬೇರೆ ಊರುಗಳ ಮೇಲೆ ಹೇರುವುದು. ಜೊತೆಗೆ ಇಡೀ ದೇಶಕ್ಕೇ ಆವರಿಸಿಕೊಳ್ಳುವಂತೆ ಮಾಡುವುದು. ನಮ್ಮಿಂಡಿಯಾದಲ್ಲಿ ಮುಂಬಯಿಯ ಬಾಲಿವುಡ್...
ಡಿ ವಿ ಜಿ ಜ್ಞಾಪಕ ಚಿತ್ರಗಳು
ಮುದವೀಡು ಕೃಷ್ಣರಾಯರು ಖ್ಯಾತ ವಾಗ್ಮಿಗಳು. ಒಮ್ಮೆ ಬೆಂಗಳೂರಲ್ಲಿ ಅವರ ನಿರರ್ಗಳ ಮಾತು ಸಾಗಿತ್ತು: "ನಮ್ಮಲ್ಲಿ ಎಂಥೆಂಥ ಮಹಾಕವಿಗಳು ಆಗಿಹೋದರು. ಪಂಪ ಏನು! ರನ್ನ ಏನು! ಪೊನ್ನ ಏನು! ಜನ್ನ ಏನು!..." ಹೀಗೇ ಅವರು ಮಾತು ಮುಂದುವರಿಸಿದ್ದಾಗ ಪಕ್ಕದಲ್ಲೇ ಕುಳಿತಿದ್ದ ಡಿ ವಿ ಜಿ, ಕೃಷ್ಣರಾಯರನ್ನು ತಿವಿದರು. ಕೃಷ್ಣರಾಯರು ತಿರುಗಿದಾಗ...
ಮಂದಿಯ ಮಧ್ಯೆ ಹೀಗೊಂದು ದಾಂಪತ್ಯ ಕಥಾ!
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ "ಮಳೇಲಿ ಅಳು ಕಾಣೋಲ್ಲ. ಅತ್ತು ಬಿಡು..." ಅಂವ ಛಕ್ಕನೆ ತಿರುಗಿದ. "ಚಾಪ್ಲಿನ್ನನ ಡೈಲಾಗು ಕದೀಬೇಡ" ಅಂತ ಕೂಗಬೇಕೆನಿಸಿತು. ಊಹೂಂ...ಅವಳ ಹತ್ರ ಅಂಥದ್ದೇನಿತ್ತೋ...ಅಂವ ಪೂರಾ ಲಾಚಾರನಾಗಿಬಿಡ್ತಿದ್ದ. ಚಾಲಾಕಿ ಹುಡುಗಿ. ಒಳ್ಳೆ ಏಣಿಯನ್ನೇ ಹುಡುಕಿದ್ದಳು! "ನಂಗೊತ್ತು. ನೀ ನನ್ನ ಬಿಟ್ಟು...
ಡೋರ್ ನಂ. 142
ಅವಧಿ ಬಳಗದ ಪ್ರೀತಿಯ ಲೇಖಕಿ ಊರ್ಮಿಳೆ ಮತ್ತೆ ಅಮೆರಿಕೆಗೆ ಹೊರಟು ನಿಂತಿದ್ದಾರೆ. ಕೆಲ ದಿನಗಳ ಮಟ್ಟಿಗೆ ಅಂತಾ ಸ್ವದೇಶಕ್ಕೆ ಬಂದಿದ್ದ ಅವರು, ಅವಧಿಗೆ ಪ್ರತಿ ವಾರ ಪ್ರೀತಿಯಿಂದ ಬರೆದುಕೊಡುತ್ತಿದ್ದ "ರಾಗಿ ರೊಟ್ಟಿ" ಇನ್ನು ಮುಂದೆ ಇರುವುದಿಲ್ಲ. ಆದರೆ ಅವಧಿ ಜೊತೆಗಿನ ಅವರ ಬಾಂಧವ್ಯ ಮುಂದುವರಿಯುತ್ತದೆ. ಸಾಧ್ಯವಾದಾಗೆಲ್ಲ ಅವರು...
ಮಗ್ಗುಲಲ್ಲೊಂದು ತವರಿನ ಗಂಧ
"ಡೋರ್ ನಂ. 142" ಕಾಲಂ ಅವಳ ಮುಖದಲ್ಲಿ ಇನ್ನಿಲ್ಲದ ದುಗುಡವಿತ್ತು. ಏನಾಯಿತು? ಎಂಬುದರ ಎಳೆ ಹುಡುಕಲು ಪ್ರಯತ್ನಿಸಿದೆ. ಆ ದಿನ ಆಗಿತ್ತಲ್ಲ, ಹಾಗೆ ದಿಢೀರನೆ ಹಾವೇನಾದರೂ ಮನೆಗೆ ನುಗ್ಗಿತ್ತೆ? ಇಲ್ಲಾ ರಸ್ತೆಯಲ್ಲಿ ಕಾಟ. ತರಕಾರಿ ಅಂಗಡಿಯಲ್ಲಿ ಕಿತ್ತಾಟ. ಉಹೂಂ, ಏನೂ ಗೊತ್ತಾಗಲಿಲ್ಲ. ಇನ್ನೇನು ಕಣ್ಣಿಂದ ಹನಿ...
ಒಂದು ಪತ್ರಿಕೆಯ ಶಕ್ತಿಯನ್ನು ನೆನೆಯುತ್ತ…
ನಿರ್ಭೀತಿ, ನಿಷ್ಠುರತೆ ಮತ್ತು ಅದರ ಬಲದಿಂದಲೇ ಒಳ್ಳೆಯದನ್ನು ಗುರುತಿಸುವ ಆತ್ಮಸಾಕ್ಷಿ. ಇವತ್ತು ಇವೆಲ್ಲ ಇಲ್ಲವೇ ಇಲ್ಲ ಎಂಬಂತಾಗಿರುವ ಹೊತ್ತಲ್ಲಿ ಲಂಕೇಶ್ ಪತ್ರಿಕೆ ನೆನಪಾಗುತ್ತಿದೆ. ಇವಿಷ್ಟರಿಂದಲೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಸಾಧ್ಯತೆಯನ್ನು ಅದು ತೆರೆದಿತ್ತು. ಜೀವಂತಿಕೆಗೆ ಬೇಕಾದ...
ಇಂದಿಗೂ ನೆನಪಿದೆ
ಸಾರಾ ಅಬೂಬಕ್ಕರ್ ನನ್ನ ಪ್ರಥಮ ಲೇಖನ "ಪತ್ರಿಕೆ"ಯಲ್ಲಿ ಪ್ರಕಟವಾದ ದಿನ ಇಂದಿಗೂ ನನಗೆ ನೆನಪಿದೆ. ಕನ್ನಡದ ಯಾವ ಪತ್ರಿಕೆಯೂ ನನಗೆ ಪ್ರೋತ್ಸಾಹ ನೀಡದೆ, ನನ್ನ ಸಾಹಿತ್ಯಾಸಕ್ತಿಯೇ ಕುಂದತೊಡಗಿದ್ದ ಆ ದಿನಗಳಲ್ಲಿ, ನನ್ನ ಮನದಾಳದ ಭಾವನೆಗಳನ್ನು, ಕಂಡು ಕೇಳಿದ ಹಲವಾರು ಘಟನೆಗಳನ್ನು ಹರಿಯಬಿಡಲು ಹಾದಿ ಕಾಣದೆ ತಳಮಳಗೊಳ್ಳುತ್ತಿದ್ದ ಆ...
ಇ-ಟ್ರೈನ್ ವಿಶೇಷ
"ವೆಂಕಿ ಬರ್ಗರ್" ವೆಂಕಿ ನ್ಯೂಯಾರ್ಕಿನ ಸಬ್ ವೇ ಇ-ಟ್ರೈನ್ ಕುರಿತು ಯುಟ್ಯೂಬ್.ಕಾಮ್(YouTube.com)ನಲ್ಲಿ ೩೦ ಸೆಕೆಂಡ್ ಗಳ ಒಂದು ವಿಡಿಯೋ ದೃಶ್ಯಗಳ ಕ್ಲಿಪ್ ಇದೆ (ಹವ್ಯಾಸಿ ಚಿತ್ರಗ್ರಾಹಕರ ಈ ಅನ್ ಲೈನ್ ಯುಟ್ಯೂಬ್.ಕಾಮ್ ಪ್ರಯತ್ನ ಈಗ ಒಂದು ಜಾಗತಿಕ ಗೀಳು ಆಗಿಬಿಟ್ಟಿದೆ). ಈ ವಿಡಿಯೋ ಚಲನಚಿತ್ರದಲ್ಲಿ ಸಬ್ ವೇ ಟ್ರೈನ್...
ತುಂಬಾ ಮಾತು; ಬರೆದರೆ ಹರಳು
ಉಷಾ ಕಟ್ಟೇಮನೆ. ಸಿಕ್ಕಾಪಟ್ಟೆ ಮಾತು. ಮನಸ್ಸು ಬಂದರೆ ಬರೆವಣಿಗೆ. ಲೇಖಕಿ ಎಂಬ ಭ್ರಮೆಗೂ ಉಷಾ ಅವರಿಗೂ ಬೆಂಗಳೂರಿಂದ ಸುಳ್ಯಕ್ಕೆ ಇರುವಷ್ಟೇ ದೂರ. ಉಷಾ, ಮೂಲತಃ ಸುಳ್ಯದವರಾದರೂ ವಾಸ ಬೆಂಗಳೂರಲ್ಲಿ. ಆದರೆ ಸುಳ್ಯದಂಥ ಗ್ರಾಮೀಣ ಸರಳತೆ ಮತ್ತು ದಿಟ್ಟತನವನ್ನು ಬೆಂಗಳೂರೆಂಬ ಜನನಿಬಿಡ ಕಾಡಲ್ಲೂ ಕಾಪಾಡಿಕೊಂಡವರು. ಉಷಾ ಏನೇ ಬರೆದರೂ...
ಕತ್ತಲೆಗೇ ಕಾಯಬೇಕಾದ ಇವರ ಪಾಡು ನೋಡಿ!
ಉಷಾ ಕಟ್ಟೇಮನೆ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದಂತಹ ಹಲವಾರು ಸಮಸ್ಯೆಗಳು ಹೆಣ್ಣುಮಕ್ಕಳಲ್ಲಿವೆ. ಅದು ಗಂಡು ಪ್ರಪಂಚಕ್ಕೆ ಅರ್ಥವಾಗಲು ಸಾಧ್ಯವೇ ಇಲ್ಲ. ಅರ್ಥವಾಗಬೇಕೆಂದು ನಾವು ಹಠ ಮಾಡುವುದು ಕೂಡ ಅರ್ಥವಿಲ್ಲದ್ದು. ನಮ್ಮ ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ವಿಶಾಲವಾದ ಆಟದ ಮೈದಾನವಿರುತ್ತದೆ. ಕೊಠಡಿಗಳ ಸಂಖ್ಯೆ...
“ಪರಂಗಿ” ಬಂದುದು ಎಲ್ಲಿಂದ?
ಬಿ ಜಿ ಎಲ್ ಸ್ವಾಮಿ "ಪರಂಗಿ"ಯವರೆಂದರೆ ಇಂಗ್ಲಿಷರು ಎಂಬುದು ಇಂದಿನ ಸಾಮಾನ್ಯ ತಿಳಿವಳಿಕೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಇದರ ಬೆಳವಣಿಗೆ ಸ್ವಾರಸ್ಯವಾಗಿದೆ. ಮೊದಮೊದಲು ಪರದೇಶದಿಂದ ನಮ್ಮ ದೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಸಿದ ಬಿಳಿಯ ಜನಾಂಗ ಪೋರ್ಚುಗೀಸರದೇ. ಕ್ರುಸೇಡ್ ಕಾಲದಿಂದಲೂ ಫ್ರೆಂಚ್ ಜನಾಂಗಕ್ಕೆ ಫ್ರಾಂಕ್ಸ್ ಎಂಬ...
ನಿತ್ಯ ನೂತನ ದಿನಚರಿ!
"ವೆಂಕಿ ಬರ್ಗರ್" ವೆಂಕಿ "ನೀವು ರೆಡಿನಾ?" ಬೆಳಕ್ಕೆ ೮ಕ್ಕೆ ಸಿದ್ಧರಾಗಿ ಬಂದ ಡಾ.ವಸುಂಧರಾ ಕೇಳಿದರು. ಸ್ಥಳ: ಲಾಂಗ್ ಐಲ್ಯಾಂಡ್ (ಐಲ್ಯಾಂಡ್/ದ್ವೀಪ)ನಲ್ಲಿನ ಸುಂದರವಾದ ರೋಸ್ಲಿನ್ ಹೈಟ್ ನಲ್ಲಿನ ಅವರ ಮನೆ. ಹೂಂಗುಟ್ಟಿದ ನಾನು ಕಾರುಗಳು ನಿಲ್ಲಿಸಿದ್ದ ಸ್ಥಳಕ್ಕೆ ಅವರ ಹಿಂದೆ ಹೆಜ್ಜೆ ಹಾಕಿ, ಅವರ ಐಷಾರಾಮಿ ಕಾರು...
