ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಈ ಮಧ್ಯೆ ಹೊನ್ನಾವರದಲ್ಲಿ..

ಹೊನ್ನಾವರದ 'ಕಾವ್ಯ ಬೋಧಿ' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್ ಎನ್ ಆರತಿ ಕವಿತೆ ವಾಚಿಸಿದರು . ವಿಷ್ಣು ನಾಯ್ಕ ಅಂಕೋಲಾ, ಡಾ ಎಚ್ ಎಸ್  ಅನುಪಮಾ, ಲಡಾಯಿ ಬಸು, ಹಣಮಂತ ಹಾಲಗೆರಿ, ನಾಗರಾಜ ಹರಪನಹಳ್ಳಿ, ಕೃಷ್ಣ ಗಿಳಿಯಾರ್ ಸೇರಿದಂತೆ ಹಲವರು ಕವಿತೆ ವಾಚಿಸಿ, ಮಾತನಾಡಿ ಗೋಷ್ಠಿಗೆ ಕಳೆ ತಂದರು....

read more
ಕ್ವಿಜ್: ಕೊನೆ ಅವಕಾಶ ಬಹುಮಾನ ಗೆಲ್ಲಲು..

ಈ ಚಿತ್ರದಲ್ಲಿ ಇರುವವರು ಯಾರು ಎಂದು ಕೇಳಿದ್ದೆವು. ಸಾಕಷ್ಟು ಉತ್ತರಗಳು ಬಂದಿವೆ ರವಿವರ್ಮ ಹೊಸಪೇಟೆ, ಶ್ರೀರಾಮುಲು, ದೇವನೂರು ಮಹಾದೇವ, ಹನುಮಣ್ಣ ನಾಯಕ ದೊರೆ, ರಂಜಾನ್ ದರ್ಗಾ, ಅಬ್ದುಲ್ ರಶೀದ್.. ಹೀಗೆ ಈ ಉತ್ತರಗಳಲ್ಲೇ ಸರಿ ಉತ್ತರವೂ ಇದೆ ಈಗ ಒಂದು ಹೆಸರು ಆಯ್ಕೆ ಮಾಡಿ ಯಾರು ಬಹುಮಾನ ಗೆಲ್ಲುತ್ತಾರೆ ನೋಡಿಯೇ...

read more
ಜಿ ಎನ್ ಮೋಹನ್ ಕಾಲಂ: ನರಗುಂದದ ಆ ನಿಟ್ಟುಸಿರಿನೊಳಗೆ..

ಜಿ ಎನ್ ಮೋಹನ್   ನಾನು ಅಮ್ಮನ ಮುಂದೆ ಕುಳಿತಿದ್ದೆ. ಅಮ್ಮ ಉರಿಯುತ್ತಿದ್ದ ಒಲೆಯ ಮೇಲೆ ಚಪಾತಿ ಸುಡುತ್ತಲೇ ಇದ್ದರು. ಆ ಬೆಂಕಿಯ ಕುಣಿತದಲ್ಲಿ ಅಮ್ಮನ ಮುಖವೂ ಉರಿವ ಉಂಡೆಯಂತೆಯೇ ಕಾಣುತ್ತಿತ್ತು. ಆ ಉರಿ ಅಲ್ಲಿಂದ ಹಾರಿ ನನ್ನನ್ನೂ ಸೇರಿಸಿಕೊಂಡು ಇಡೀ ಕೋಣೆಯನ್ನೇ ಆವರಿಸಿತ್ತು. ನನ್ನ ಮನೆಯೊಳಗೆ ಒಂದು ಸಿಟ್ಟಿನ, ರೋಷದ ಕುಣಿತ...

read more
ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : `ಅಮ್ಮ ಮೈಲಿಗೆ ಎಂದರೆ ಏನು?'

ಮಡಿ, ಮೈಲಿಗೆ ಮತ್ತು ಅಜ್ಜಿ (ಇಲ್ಲಿಯವರೆಗೆ...) ಅಪರೂಪಕ್ಕೆ ಅಪ್ಪ ಕೊಟ್ಟಿದ್ದ ಹತ್ತು ಪೈಸೆ ಹಿಡಿದು ಏನ್ ಬರುತ್ತೆ? ಹತ್ತು ಬೋಟಿ, ಐದು ಬೆಲ್ಲದ ಉಂಡೆ, ಎರಡ್ ಬಣ್ಣದ ಸಕ್ಕರೆ ಕಡ್ಡಿ- ಹೀಗೆ ಮೂಲೆ ಅಂಗಡಿ ಧರ್ಮಣ್ಣನ ಗಾಜಿನ ಡಬ್ಬಿಯ ಹಿಂದೆ ಕೂತು ಕಣ್ಣನ್ನ ಸೆಳೆಯುತ್ತಿದ್ದ ಒಂದೊಂದೇ ತಿಂಡಿಗಳಲ್ಲಿ ಯಾವುದನ್ನು ಕೊಳ್ಳಲಿ ಎಂದು...

read more
’ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೊ?’ – ಪ್ರಶಾಂತ್ ಅಡೂರ್ ಬರೀತಾರೆ

ಪ್ರಶಾಂತ್ ಆಡೂರ್ ಮುಂಜಾನೆ ಏಳೋದ ತಡಾ ನಮ್ಮವ್ವಂದ ರಗಳಿ ಶುರುನ. ಅಕಿಗೆ ವಟ್ಟ ಯಾವಾಗಲು ವಟಾ-ವಟಾ ಅಂತ ಎಲ್ಲಾರಿಗೂ ಬೈಕೋತ ಇದ್ದರ ಸಮಾಧಾನ. ಅದರಾಗ ಅಕಿ ಕೈಯಾಗ ನನ್ನ ಮಗಾ ಸಿಕ್ಕ ಬಿಟ್ಟಾನ, ಅವಂದು ಅಡ್ನಾಡಿ ವಯಸ್ಸು ಯಾರ ಹೇಳಿದ್ದ ಕೇಳೊ ವಯಸ್ಸಲ್ಲಾ ನಮ್ಮವ್ವಂದ ತನ್ನ ತಲ್ಯಾಗ ಬಂದದ್ದ ಆಗೋತನಕ ಬಿಡೊ ವಯಸ್ಸಲ್ಲಾ. ನನ್ನ ಮಗಗ ಮಾತ...

read more
ನಿಂದಿಸಿದ್ದು ರಾಮನಿಗೆ. ಆದರೆ ಕಾಡಿಗೆ ಹೋಗಿದ್ದು ಸೀತೆ! – ಬಿ ಆರ್ ಸತ್ಯನಾರಾಯಣ ಬರೀತಾರೆ

ಸೆಕೆಂಡ್ ಸೆಕ್ಸ್ ಮತ್ತು ಮ್ಯಾನ್ ಮೇಡ್ ಲಾಂಗ್ವೇಜಸ್ ಬಿ ಆರ್ ಸತ್ಯನಾರಾಯಣ ಕಳೆದ ವಾರಾಂತ್ಯದಲ್ಲಿ ಪಿಹೆಚ್.ಡಿ. ಅಧ್ಯಯನದ ಅರ್ಧವಾರ್ಷಿಕ ವರದಿಯೊಂದನ್ನು ಓದುವ ಅವಕಾಶ ದೊರೆಯಿತು. ಅದರಲ್ಲಿ ಪ್ರಸ್ತಾಪವಾಗಿದ್ದ 'ಸೆಕೆಂಡ್ ಸೆಕ್ಸ್' ಮತ್ತು 'ಮ್ಯಾನ್ ಮೇಡ್ ಲಾಂಗ್ವೇಜಸ್' ಎಂಬ ಎರಡು ಪದಗುಚ್ಛಗಳು ಗಮನ ಸೆಳೆದವು. ನಂತರ...

read more
ಅದೆಲ್ಲೋ ಮಳೆಯಾಗಿದೆ ಅಲ್ಲಿ ನೀನಿದ್ದೀಯ…

ಕೇಳಬೇಕಿದೆ...ಕ್ಷಮೆಯನ್ನು ಪ್ರಸನ್ನ ಚಲಂ   ಸರ ಸರ ಸರ ಹರಿದಾಡುವ ಹಾವುಗಳ ಒಳಗಿಟ್ಟುಕೊಂಡವನು ನಿನ್ನಲ್ಲಿ ಕನಿಷ್ಠ ರೋಮಾಂಚನವನ್ನಾದರೂ ಹುಟ್ಟಿಸಬೇಕಿತ್ತು.. ಹಾಗಾದರೆ ಸೋತದ್ದೆಲ್ಲಿ ಅಂತ ನೋಡಿದರೆ ಒಳಗಿದ್ದ ತರ ತರ ತರನಾದ ಹಾವುಗಳು ಸತ್ತು ನಾರುತ್ತಾ ಅದೆಷ್ಟು ದಿನಗಳಾದವೋ..? ಅಸಹ್ಯವನ್ನೂ ಪಡದ ನಿನ್ನಲ್ಲಿ ಕ್ಷಮೆ...

read more
ಸುಗತ ಬರೆಯುತ್ತಾರೆ: ಓಲ್ಗಾ ಎಂಬ ಹೆಣ್ಣು ಮಾಡಿದ ಕಲೆಯ ಮೌಲ್ಯಮಾಪನ

ಸುಗತ ಶ್ರೀನಿವಾಸರಾಜು ಕೆಲವು ದಿನಗಳ ಹಿಂದೆ ಯುರೋಪಿನಲ್ಲಿ ಸದ್ದು ಮಾಡಿದ ಒಂದು ಸಮಾಚಾರ, ಭಾರತದ ಪತ್ರಿಕೆಗಳಲ್ಲಿ ಅಷ್ಟಾಗಿ ಪ್ರಚಾರ ಪಡೆಯ ಲಿಲ್ಲ. ಮೂಲೆಯಲ್ಲಿ, ಸಣ್ಣ ಸುದ್ದಿಯಾಗಿ ಬೆಳಕು ಕಂಡಿತು ಅಷ್ಟೆ. ಇದು ಸಂಪಾದಕರ ತಿಳಿವಿನ ಊನಕ್ಕೆ ಸಂಬಂಧಿಸಿದ ವಿಚಾರವೋ ಅಥವಾ ಓದುಗರ ಆಸಕ್ತಿಯ ಮಿತಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಯೋ...

read more
ಮಂಡ್ಯ ರಮೇಶ್ ಕಾಲಂ : ಗ್ರೀಕ್ ನಾಟಕದಲ್ಲಿ ನಾವು!

(ಇಲ್ಲಿಯವರೆಗೆ...) ಪ್ರದರ್ಶನ ನೋಡಿದ ಸುಬ್ಬಣ್ಣ, ಡಿ.ಆರ್.ನಾಗರಾಜ್, ಮರುಳಸಿದ್ಧಪ್ಪ, ಕಿ.ರಂ. ಎಲ್ಲರೂ ಕವನದ ಪ್ರಬಂಧ ಧ್ವನಿ ಸ್ಪಷ್ಟವಾಗದಿದ್ದರೂ ತುಂಬಾ ಒಳ್ಳೆ ಎಕ್ಸರ್ಸೈಜ್ ಇದು.... ಒಳ್ಳೆ ಸಾಧ್ಯತೆ ಇದು ಎಂದರು. ಈ ನಾಟಕ ಮ್ಯಾಟ್ನೀ ಪ್ರದರ್ಶನಗಳನ್ನೂ ಸಹ ಕಂಡಿತು. ಒಂದೆರಡು ಪ್ರೇಕ್ಷಕರಿದ್ದರೂ ಕೂಡ ಅಷ್ಟೇ ನಿಷ್ಠೆಯಿಂದ...

read more
’ ಜಂಗಮ ಪಕೀರನ ಜೋಳಿಗೆ’ ಮತ್ತು ’ಬೆಂಕಿಗೆ ತೊಡಿಸಿದ ಬಟ್ಟೆ’ – ಫೋಟೋ ಆಲ್ಬಂ

ಹೊಸಪೇಟೆಯ ರೋಟರಿ ಕ್ಲಬ್ ನಲ್ಲಿ 27 ರ ಸಂಜೆ ನಡೆದ ಆರಿಫ್ ರಾಜಾ ಅವರ ಜಂಗಮ ಪಕೀರನ ಜೋಳಿಗೆ ಮತ್ತು ಬೆಂಕಿಗೆ ತೊಡಿಸಿದ ಬಟ್ಟೆ ಎರಡು ಕವನ ಸಂಕಲನಗಳ ಬಿಡುಗಡೆಯ ಸಮಾರಂಭವನ್ನು ಪುಸ್ತಕವನ್ನು ಹೊರತಂದ ಪಲ್ಲವ ಪ್ರಕಾಶನ ಸಂಘಟಿಸಿತ್ತು. ಆ ಕಾರ್ಯಕ್ರಮದ ಕೆಲ ಪೋಟೋಗಳಿವು. ಚಿತ್ರ ಕೃಪೆ : ಶಿವಶಂಕರ್ ಬಣಗಾರ್ ಚಿತ್ರಗಳನ್ನು ದೊಡ್ಡದಾಗಿ...

read more
'ಹಾರಿ ಹೋದ ಬಾಲಿವುಡ್ 'ಪ್ರಾಣ'…' – ನಾ ದಿವಾಕರ್ ಬರೀತಾರೆ

  ಸಿನಿಮಾಗಳಲ್ಲಿ, ವಿಶೇಷವಾಗಿ ಭಾರತೀಯ ಸಿನಿಮಾ ರಂಗದಲ್ಲಿ ಖಳನಾಯಕ ಎಂದರೆ ಜನಸಾಮಾನ್ಯರ ದ್ವೇಷಕ್ಕೊಳಗಾಗುವ ಒಂದು ಪಾತ್ರ. ಖಳನಾಯಕನ ಪಾತ್ರ ಮಾಡುವ ವ್ಯಕ್ತಿ ಎಷ್ಟೇ ಸಂಭಾವಿತರಾಗಿದ್ದರೂ ಕೆಲವೊಮ್ಮೆ ಸಮಾಜದಲ್ಲಿ ಶಂಕಾಸ್ಪದ ವ್ಯಕ್ತಿಯಾಗಿಯೇ ಉಳಿಯುವ ಸಾಧ್ಯತೆಗಳು ಹೆಚ್ಚು. ಅದರೂ ಭಾರತೀಯ ಚಿತ್ರರಂಗದಲ್ಲಿ ಖಳನಾಯಕನ ಪಾತ್ರ...

read more
ತೇಜಸ್ವಿಯನ್ನು ಹುಡುಕುತ್ತಾ : ಮೂಡಿಗೆರೆ, ಮೂಡಿಗೆರೆ … ರೈಟ್ ರೈಟ್!

ಭಾಗ ೦೬ (ಭಾಗ ೫ ಓದಲು ಇಲ್ಲಿ ಕ್ಲಿಕ್ಕಿಸಿ) ಮರುದಿನ ಬೆಳಿಗ್ಗೆ ಮೂಡಿಗೆರೆಗೆ ವಿದಾಯ ಹೇಳಿ ಬೆಂಗಳೂರಿಗೆ ಹೋಗುವ ಬಸ್ ಹಿಡಿಯಬೇಕಿತ್ತು. ಸಾಕ್ಷ್ಯಚಿತ್ರಕ್ಕಾಗಿ ಬೇಕಾದ ವಿಷಯಗಳು, ಮಾಹಿತಿಗಳು ಸಹ ಸಾಕಷ್ಟೇ ಸಿಕ್ಕಿದ್ದವು. ಆದರೆ ನನಗೆ ಅಷ್ಟು ಬೇಗ ಮೂಡಿಗೆರೆಯಂತಹ ಸುಂದರ ಊರನ್ನು ಬಿಟ್ಟು ಹೋಗುವ ಮನಸ್ಸಿರಲಿಲ್ಲ. ‘ಇನ್ನೊಂದೆರಡು ದಿನ...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಜನಪದ ಎಂದರೆ ಏನು?

ಜನಪದ ಕಲೆಗಳ ರೂಪಾಂತರಗಳು ಸಾಮಾನ್ಯವಾಗಿ ಜನಪದ ಎಂದರೆ ಏನು? ಎನ್ನುವ ಸರಳ ಪ್ರಶ್ನೆಯನ್ನು ಈಗಿನ ಶಾಲಾ ಮಕ್ಕಳಿಗೆ ಕೇಳಿದರೆ, ಕೆಲವರಾದರೂ ಜನಪದ ಪ್ರದರ್ಶನ ಕಲೆಗಳ ಹೆಸರನ್ನು ಹೇಳಬಹದು. ಕಾರಣ ಜಾನಪದ ಎಂದರೆ ಈಗ ಎದ್ದು ಕಾಣುವುದು ಪ್ರದರ್ಶನ ಕಲೆಗಳು ಮಾತ್ರ. ಯಾವುದೇ ಸರಕಾರಿ ಉತ್ಸವಗಳಲ್ಲಿಯೂ, ರಾಜಕಾರಿಣಿಗಳು ಹೋದೆಡೆ...

read more
ಒಂದು ಫೇಸ್‌ಬುಕ್ ಸ್ಟೇಟಸ್ ಮತ್ತು ಒಂದು ’ಸಾರಿ’

ಮೊನ್ನೆ ಸತೀಶ್ ನಾಯ್ಕ್ ಫೇಸ್ ಬುಕ್ಕಿನಲ್ಲಿ ಒಂದು ಸ್ಟೇಟಸ್ ಹಾಕಿದ್ದರು. ಆಮೇಲೆ ಭಾರತಿ ಅವರು ಅವಧಿಯಲ್ಲಿ ಬರೆದ  "ಜಯಾ ಬಾಧುರಿ ’ಪತಿಯರೆಲ್ಲಾ ಪ್ರಿಯಕರರಲ್ಲ’ ಅಂದುಬಿಟ್ಟಿದ್ದರೆ!" ಲೇಖನ ಓದಿ ಆ ಲೇಖನಕ್ಕೆ ಪ್ರತಿಕ್ರಯಿಸಿದ್ದರು. ಒಂದು ಲೇಖನ ನಾವು ಆಲೋಚಿಸುವ ರೀತಿಯನ್ನು ಹೀಗೆ ಬದಲಾಯಿಸಬಹುದು ಅಂದರೆ ... ಯಾಕೋ ನಿಮ್ಮ ಜೊತೆ...

read more
ಮೈಥುನವ ಮುತ್ತಿಕೊಂಡ ಮೌನ ಬಿಸಿಯುಸಿರಿಗೆ ಮಾತು ಕಲಿಸಿದೆ…

ಮುನಿಸಿಕೊಂಡ ಮೇಲೂ... ಹೆಚ್  ಕೆ ಶರತ್ ಮೈಥುನವ ಮುತ್ತಿಕೊಂಡ ಮೌನ  ಬಿಸಿಯುಸಿರಿಗೆ ಮಾತು ಕಲಿಸಿದೆ   ಕತ್ತಲೆದುರು ಬೆತ್ತಲಾದ ದೇಹ ಬೆಳಕಿನ ಕಣ್ಣಿಗೆ ಬಟ್ಟೆ ತೊಡಿಸಿದೆ   ನದಿಯ ಮೋಹಕೆ ಮರುಳಾದ ಮಣ್ಣು ನೆಲದ ಮಮತೆಗೆ ಬೆನ್ನು ತೋರಿದೆ   ಯಾವ ನಂಟಿಗೂ ಗಂಟು ಬೀಳದ ಮನಸು ನಿನ್ನ ಕನಸಿನ ಹೊಸ ಕವಲಾಗಿ...

read more
ದೇವನೂರು ಫ಼ೇಸ್ ಬುಕ್ ಗೆ ಬರ್ತಾರಂತೆ…

ಮುರಳೀಧರ ಉಪಾಧ್ಯ ಉಡುಪಿಗೆ ’ ಎದೆಗೆ ಬಿದ್ದ ಅಕ್ಷರ ’ ಕ್ಕೆ ಇನಾಂದರ್ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬರಲು ದೇವನೂರು ಮಹಾದೇವರು ಮೊದಲು ಒಪ್ಪಲಿಲ್ಲ . ಎರಡು ಬಾರಿ ಕಾರ್ಯಕ್ರಮ ಮುಂದೂಡಬೇಕಾಯಿತು . ೧೩-೭-೨೦೧೩ ಎಮ್.ಜಿ. ಎಮ್ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಎನಾಂದಾರ್ ಪ್ರಶಸ್ತಿ ಸ್ವೀಕರಿಸಿ ದೇವನೂರು, ಬೆಂಗಳೂರಿನಲ್ಲಿ...

read more
ಒಂದಿಷ್ಟು ಹಾಯ್ಕುಗಳು…

ಪಿ ಮಂಜುನಾಥ ಎಲ್ಲ ಮುಗಿಯಿತು ಅನ್ನಿಸಿತು, ಇಲ್ಲ ನಿನ್ನ ನಗೆ ನನ್ನ ಬದುಕಿಸಿತು. * ನೋವು ಇಂಗದ ಕಾಲು, ನಿನ್ನ ಕಂಡರೆ ಊರುಗೋಲಿನ ನೆನಪು. * ನೀನು ನನ್ನ ನೆರಳೆ? ಬೇಡ ನೆರಳಿಗೆ ಸ್ವಂತಿಕೆಯಿಲ್ಲ * ವಂಚನೆಯೆ? ಎದೆಯೊಳಗೆ ನೋವಿನ ಧಗೆ ಮುಖದಲ್ಲಿ ಸೋಗಿನ ಬಗೆ. * ನಿಲ್ಲು ಕನ್ನಡಿಯ ಮುಂದೆ ಸುಳ್ಳಿಗೆ ಆಸ್ಪದವೇ ಇರದು....

read more

Pin It on Pinterest

Share This