ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿಡುಗಡೆಯಾಗುತ್ತಿದೆ ‘ಮರುಭೂಮಿಯ ಹೂ’

ಜಗದೀಶ್ ಕೊಪ್ಪ ಅವರ ಹೊಸ ಪುಸ್ತಕ ’ಮರುಭೂಮಿಯ ಹೂ’ ಶುಕ್ರವಾರ ಅಂದರೆ ೩೧ ನೆಯ ತಾರೀಖು ಬಿಡುಗಡೆ ಆಗುತ್ತಿದೆ ಜಗದೀಶ್ ಕೊಪ್ಪ ಸಮಾರಂಭದ ಆಹ್ವಾನ ಪತ್ರಿಕೆ, ಪುಸ್ತಕದ ಮುಖ ಪುಟ ಇಲ್ಲಿದೆ ಜೊತೆ ಪುಸ್ತಕದ ಒಂದು ಮನಮಿಡಿಯುವ ಅಧ್ಯಾಯ ಸಹ   ಪುಸ್ತಕದ ಮುಖಪುಟ ಮರುಭೂಮಿಯ ಹೂ ಅಧ್ಯಾಯ-4- ಯಾಂಗ ಹೇಳಲಿ? ಹೆಂಗಸಾಗುವ ಪರಿಯ? ನನ್ನ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ರಾಜ ಬಂದ ಹೆಂಡತಿಯೊಡನೆ…

(ಇಲ್ಲಿಯವರೆಗೆ) ಕೃಷ್ಣಪ್ಪನ ಕಳ್ಳಂಗಡಿಯಿಂದ ಹೊರಗೆ ಬರುತ್ತಿದ್ದ ಕಲ್ಲವ್ವ ತಟ್ಟಾಡುತ್ತಿದ್ದಳು. ಈಚೆಗೆ ಅವಳು ಹಗಲುಹೊತ್ತೇ ಕುಡಿಯಲಿಕ್ಕೆ ಶುರುಮಾಡಿಕೊಂಡಿದ್ದಳು. ಊರಲ್ಲಿ ‘ಏನು ಕಲ್ಲವ್ವ?’ ಅಂತ ಕೇಳಿದರೆ ‘ಏನು ಮಾಡಲಿ ಮೈಲೇಲೆ ಇರೋ ಮುನೇಶ್ವರ ನನಗೆ ಸುಮ್ಮನೆ ಹಿಂಸೆ ಕೊಡ್ತಾನೆ ಅದನ್ನ ತಡಕೊಳ್ಳಲಾಗದೆ ಕುಡೀತೀನಿ’ ಎಂದು ಮಾತನ್ನು...

read more
’ನಮ್ಮ ಇತ್ತೀಚಿನ ಕನ್ನಡ ಸಾಹಿತ್ಯ ಓದುಗರು ಯಾರು?’ – ಚಲಂ ಕೇಳ್ತಾರೆ

ಚಲಂ ನಮ್ಮ ಇತ್ತೀಚಿನ ಕನ್ನಡ ಸಾಹಿತ್ಯ ಓದುಗರು ಯಾರು?ಯಾರಾದರೂ ಒಂದು ಹೊಸ ಅಭಿರುಚಿಗೆ ಹೇಗೆ ಪ್ರವೇಶಿಸುತ್ತಾರೆ? ಈಗಿನವರು ಯಾರೂ ಓದುತ್ತಿಲ್ಲ ಎಂಬ ಗಂಭಿರ ಆರೋಪದ ಹಿನ್ನೆಲೆಯಲ್ಲಿ ಈಗ ಬರುತ್ತಿರುವ ಸಾಹಿತ್ಯ ಎಂತಹುದು ಎಂಬುದು ಕೂಡ ಮುಖ್ಯವಾಗುತ್ತದೆ.ತುಂಬಾ ಜನ ಲೇಖಕರು ಚೆನ್ನಾಗಿ ಬರೆಯುವವರೂ ಇರುವುದರ ನಡುವೆಯೇ ಈ ಪ್ರಶ್ನೆಯನ್ನು...

read more
ಶವದ ಜೊತೆ ಹೆಸರೂ ಮಣ್ಣಾಗುವುದು…..

ಹೆಸರಲ್ಲೇನಿದೆ ಹೇಳು? ನಮ್ಮದಲ್ಲದ್ದು! - ನಾಗೇಂದ್ರ ಕುಮಾರ್ ಕೆ ಎಸ್ ಹುಟ್ಟಿದ ಮೇಲೆ ಜೀವಕ್ಕೊಂದು ಗುರುತು ಪತ್ರದಂತೆ; ಪ್ರೀತಿಯಿಂದಲೋ? ಯಾರ ನೆನಪಿನಿಂದಲೋ? ಗೊಣಗಿದಂತೆ, ದೂರದ ಅದಾವುದೋ ಕಾಣದ ತರಂಗಗಳಂತೆ, ಬೇಸಿಗೆಯ ನೀರವ ರಾತ್ರಿಯ ಪೇಲವ ಉಸಿರಾಟದಂತೆ, ಬಾಳ ಬಂಡಿಯ ಪಯಣದಲ್ಲಿ ಬದುಕಲು ಟಿಕೇಟು-ಹೆಸರು||  ಕಾಗದದ ಮೇಲೆ...

read more
’ಸಂವೇದನೆ’ – ಸಣ್ಣ ಕಥೆ

ಗೋಪಾಲ ಕೃಷ್ಣ ಭಟ್ ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್ಲಾ, ಆರಂಭ. ಹೊಸಹುಟ್ಟು. ಕಾಲದ ನವನಾಟಕದ ಆರಂಭಕ್ಕೆ ವೇದಿಕೆಯೇ ಮೌನ! ಆವರಿಸಿದ ರಾತ್ರಿಯ...

read more
ಡೈಲಿ ಬುಕ್ : ’ಮೊಗಸಾಲೆಯ ಮುಖಾಂತರ’

  ಸಾಹಿತ್ಯವೆನ್ನುವುದು ಹಲವು ಅರ್ಥಗಳಲ್ಲಿ ಸ್ವಾಂತಸುಖಾಯ ಆಗುತ್ತಿರುವ ಹೊತ್ತೊಂದರಲ್ಲಿ ಮೊಗಸಾಲೆಯವರು ಹಲವು ಅರ್ಥಗಳಿಂದ ಎತ್ತರದ ವ್ಯಕ್ತಿಯೆನಿಸಿಕೊಳ್ಳುತ್ತಾರೆ. ಅವರು ಕಾಂತಾವರದಲ್ಲಿ ಮಾತ್ರವಲ್ಲ. ಕನ್ನಡನಾಡಲ್ಲೇ ಒಂದು ನಿಶ್ಯಬ್ದ ಕ್ರಾಂತಿಯನ್ನು ಆಗುಮಾಡಿದ್ದಾರೆ ಮಾಡುತ್ತಿದ್ದಾರೆ. ಅದೊಂದು ಕ್ರಾಂತಿಯೆಂದು ನಮಗಾರಿಗೂ...

read more
ಶಿವ-ಪಾರ್ವತಿಯರದ್ದು ಮೊದಲ ಅಂತರ್ಧರ್ಮೀಯ ವಿವಾಹ.. – ಕೆ ನೀಲಾ ಬರೀತಾರೆ

ಕಿಚ್ಚು ದೈವವೆಂದು ಹವಿಯನಿಕ್ಕದಿರಿ ಕೆ ನೀಲಾ ಇನ್ನೇನು ಬೆಳಕಾಗುವುದು. ರಾತ್ರಿ ತಲೆದಿಂಬಿನಡಿ ಇಟ್ಟ ನೀಲಿ-ಬಿಳಿ ಬಣ್ಣದ ಸ್ಕರ್ಟು - ಶರ್ಟು ಗರಿಗರಿಯಾಗಿರುತ್ತದೆ. ಉಟ್ಟು ಥಾಟಾಗಿ ಪ್ರಭಾತಫೇರಿಯಲ್ಲಿ ಭಾಗವಹಿಸಿ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿತರಿಸುವ ಬಹುಮಾನ ಪಡೆಯಲು ಮನಸು ಹಾತೊರೆಯುತ್ತಿತ್ತು. ಆದರೆ...

read more
'ಅಪ್ಪಾ, ಇದು ಕಣ್ಣೀರು. ಕವಿತೆಯಲ್ಲ' – ಉದಯ್ ಇಟಗಿ

ಕವಿತೆಯೆಂದರೆ ಕಣ್ಣೀರು... ಅರೇಬಿ ಮೂಲ: ನಿಜಾರ್ ಖಬ್ಬಾನಿ ಕನ್ನಡಕ್ಕೆ: ಉದಯ್ ಇಟಗಿ ನನ್ನ ಮಗ ನನ್ನ ಮುಂದೆ ಕ್ರೇಯಾನ್ ಬಣ್ಣಗಳನ್ನು ಹರಡಿ ಪಕ್ಷಿಯ ಚಿತ್ರವೊಂದನ್ನು ಬಿಡಿಸಲು ಹೇಳುತ್ತಾನೆ. ನಾನು ಸುಮ್ಮನೆ ಕಂದುಬಣ್ಣದಲ್ಲಿ ಕುಂಚವನ್ನದ್ದಿ ಬೀಗ ಜಡಿದಿರುವ ಸರಳುಗಳ ಚೌಕಟ್ಟೊಂದನ್ನು ಬಿಡಿಸುತ್ತೇನೆ. ನನ್ನ ಮಗ ಕಂಗಳ ತುಂಬಾ...

read more
’ಕೊಟ್ಟು ಖುಷಿ ಪಡುವ ಆ ಕ್ಷಣ…’ – ಶ್ರೀದೇವಿ ಕೆರೆಮನೆ

ಕೊಟ್ಟು ಕೆಟ್ಟವರಿಲ್ಲ ಶ್ರೀದೇವಿ ಕೆರೆಮನೆ ಜೀವನದಲ್ಲಿ ನಾವೆಷ್ಟು ಪಡೆದುಕೊಂಡೆವು ಎಂಬುದು ಮುಖ್ಯವಲ್ಲ. ನಾವು ಎಷ್ಟು ಕೊಟ್ಟೆವು ಎನ್ನುವುದು ಮುಖ್ಯ. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೇ ಜೀವನದ ಸಾರ್ಥಕತೆ ಹೆಚ್ಚಿದೆ. ಯಾರೂ ನಮ್ಮನ್ನು ನಾವು ಎಷ್ಟು ಪಡೆದುಕೊಂಡೆವು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ....

read more
ತೇಜಸ್ವಿಯನ್ನು ಹುಡುಕುತ್ತಾ : ತಾರಿಣಿಯ ಕಣ್ಣಲ್ಲಿ ತೇಜಸ್ವಿ

(ಇಲ್ಲಿಯವರೆಗೆ...) ಜಿ.ಹೆಚ್ ನಾಯಕರ ಸ್ಮೃತಿಕೋಶದಿಂದ ಅವರ ದೀರ್ಘಕಾಲದ ಗೆಳೆಯ ತೇಜಸ್ವಿಯವರ ನೆನಪುಗಳನ್ನು ಕೇಳಿ ದಾಖಲಿಸಿಕೊಂಡ ನಂತರ ನಮ್ಮ ಹುಡುಕಾಟ ಮುಂದುವರೆದದ್ದು ತೇಜಸ್ವಿ ಆಡಿ ಬೆಳೆದ ಮನೆಯಲ್ಲಿ.ಆ ಮನೆಯ ಹೆಸರು ’ಉದಯರವಿ’. ’ಉದಯರವಿ’ ಎಂಬ ಅರ್ಥಗರ್ಭಿತವಾದ ಈ ಹೆಸರು ಕನ್ನಡ ಸಾಹಿತ್ಯಲೋಕದ ಕುರಿತು ಆಸಕ್ತಿ ಇರುವ ಯಾರಿಗೆ...

read more
’ಗಣರಾಜ್ಯದ ಕೆಲವು ನೆನಪುಗಳು’ – ನಾ ದಿವಾಕರ ಬರೆಯುತ್ತಾರೆ

ನಾ ದಿವಾಕರ ಭಾರತವನ್ನು ಗಣರಾಜ್ಯವನ್ನಾಗಿ ರೂಪಿಸಲು 271 ತಜ್ಞರು, ವಿದ್ವಾಂಸರು, ರಾಜಕೀಯ ಮುತ್ಸದ್ಧಿಗಳು ಸಂವಿಧಾನ ರಚನಾ ಮಂಡಲಿಯ ರೂಪದಲ್ಲಿ ದೆಹಲಿಯ ಶಾಸಕಾಂಗ ಸಭೆಯಲ್ಲಿ ಸೇರಿದ್ದರು. ಬ್ರಿಟಿಷರ ಆಳ್ವಿಕೆಯಿಂದ ವಿಮೋಚನೆ ಹೊಂದಿದ ರಾಷ್ಟ್ರದ ಭವಿಷ್ಯದ ಹಾದಿಯನ್ನು ರೂಪಿಸಲು ಈ ತಂಡ ಮೂರು ವರ್ಷಗಳ ಕಾಲ ಶ್ರಮ ವಹಿಸಿತ್ತು. ವಿವಿಧ...

read more
’ಊರುಭಂಗಂ’, ಹಲವು ಕಲಾಪ್ರಕಾರಗಳ ದೃಶ್ಯವಿಸ್ಮಯ..

ಶಶಿಕಾಂತ ಯಡಹಳ್ಳಿ ಮಹಾಭಾರತ ಎನ್ನುವುದು ಕಥೆ-ಉಪಕಥೆಗಳ ಮಹಾಕಾವ್ಯ. ಮನುಷ್ಯನ ದೌರ್ಬಲ್ಯ, ದುರಹಂಕಾರ, ಅಧಿಕಾರದಾಹ, ತಂತ್ರ-ಕುತಂತ್ರಗಳನ್ನೆಲ್ಲಾ ಮಾರ್ಮಿಕವಾಗಿ ಮಹಾಭಾರತದಲ್ಲಿ ಕಟ್ಟಿಕೊಡಲಾಗಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಕೊನೆಯ ಘಟ್ಟವಾದ ದುರ್ಯೋಧನನ ಪತನವನ್ನು ಹೇಳುತ್ತಾ ಮಹಾಭಾರತದ ಘಟನೆಗಳನ್ನು ಪ್ಲಾಷ್ಬ್ಯಾಕ್ನಲ್ಲಿ...

read more
ಗಣರಾಜ್ಯೋತ್ಸವದ ವಿಶೇಷಕ್ಕಾಗಿ ಸುಚಿತ್ರಾದಲ್ಲಿ…

ಸುಚಿತ್ರ ಫಿಲಂ ಸೊಸೈಟಿ ಮತ್ತು ಸಂವಾದ ಡಾಟ್ ಕಾಂ ಅರ್ಪಿಸುವ ಚಿತ್ರ ಪ್ರದರ್ಶನ ಮತ್ತು ಸಂವಾದ (ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ವಿಜೇತ ಚಿತ್ರಗಳು) ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ, ಬನಶಂಕರಿ ದಿನಾಂಕ: ೨೬ ನೇ ಜನವರಿ ೨೦೧೪ ಮಾರ್ನಿಂಗ್ ಶೋ: ಬೆಳಿಗ್ಗೆ ೧೦.೩೦ ಕ್ಕೆ ಕೋ ಯಾದ್ ನಿರ್ದೇಶನ: ಮಂಜು ಬೊರಾ ಮಿಶಿಂಗ್/ಅಸ್ಸಾಮಿ...

read more

Pin It on Pinterest

Share This