'ದಯೆಯಿಟ್ಟು ಕ್ಷಮಿಸಿ ಬಿಡಿ ಈ ಅವಿವೇಕಿ ಹೂಗಳನ್ನು…’ ರೂಪಾ ಹಾಸನ ಕವನ

ಅವಿವೇಕಿ ಹೂಗಳು

ರೂಪ ಹಾಸನ

 
ಅರಳಲು ಕಾದಿರುವ ನಮ್ಮ ತೋಟದ
ಮೊಗ್ಗುಗಳ ದಳವರಳಬಾರದೆಂದು
ಊರೊಡೆಯರು ಆಗ್ರಹಿಸುತ್ತಲೇ ಇದ್ದಾರೆ.
 
ಜುಜುಬಿ ಹೂಗಳಿಗೇನು?
ಅರಳುತ್ತಲೇ ಇರುತ್ತವೆ ಹೊತ್ತುಗೊತ್ತಿಲ್ಲದೇ.
ನಮಗೋ ಒಡೆಯನೇ ದೇವರು!

 
‘ರೆಕ್ಕೆ ಚಾಚಲು ಕಾತರಿಸಿರುವ ಮೊಗ್ಗುಗಳೆ,
ದಮ್ಮಯ್ಯ ಕೈ ಮುಗಿದು ಬೇಡುತ್ತೇವೆ
ದಳಗಳ ಒಳಗೇ ಸುತ್ತಿ ಸುರುಟಿಸಿಕೊಳ್ಳಿ
ಆಳದಿಂದಲೇ ಹೂವಾಗಿ
ಉಕ್ಕಲು ಕಾದಿರುವ
ಜೀವಶಕ್ತಿಯ ಒಳ ತಳ್ಳಿ
ಅರಳದಂತೆ ಭಾರ ಹೇರಿಬಿಡಿ’
ಬೇಡುತ್ತಲೇ ಇದ್ದೇವೆ…..ನಾವು
 
ಪ್ರತಿಬಾರಿಯೂ ಲೋಕ ನಿರೀಕ್ಷೆಯ ಉಲ್ಲಂಘಿಸಿ
ಅಪರಾಧವೆಸಗುವ ಮೊಗ್ಗುಗಳು
ಅರಳುತ್ತಲೇ ಇವೆ ಎಗ್ಗಿಲ್ಲದೇ
ತಮ್ಮದೇ ಇಷ್ಟಕ್ಕೆ
ನಾವು ಸೋತು ವಧಾಸ್ಥಾನಕ್ಕೆ!
 
ಒಡೆಯರೇ,
ಒಪ್ಪುತ್ತೇವೆ ತಪ್ಪು ನಮ್ಮದೇ,….
ತೋಟ ನಮ್ಮದೇ, ಗಿಡಗಳೂ ನಮ್ಮವೇ
ಹೂವೂ……
 
ದಯೆಯಿಟ್ಟು ಕ್ಷಮಿಸಿ ಬಿಡಿ
ಈ ಅವಿವೇಕಿ ಹೂಗಳನ್ನು………
ಶಿಕ್ಷೆ ನಮಗೇ ಇರಲಿ.

‍ಲೇಖಕರು avadhi

March 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. V.D.Ganesh

    nimma kavitheyalli Janisuvudu, Badukuvudu, namma hakku, Adannu manavakula Aritu dvg Avaru tilisiruva nithya parivarthana niyamavannu palisabeku emba kalakali chennagi mudide
    ganesh
    kannadapraba
    gowribidanuru
    9448412641

    ಪ್ರತಿಕ್ರಿಯೆ
  2. Anonymous

    Estondu sarala! Aadare astee gambheera! olle kavite kottiddakke ondane madam…
    Anu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: