ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತಿನ್ಬೇಡ್ ಕಣಮ್ಮಿ ನೀ ಪೀಜ಼ಾ ಬರ್ಗರು – ಕಮಲಾ ಬೆಲಗೂರ್ ಹೇಳ್ತಾರೆ
ಉಡುಗೆ - ತೊಡುಗೆ ವಿದೇಶೀಯಾದ್ರೂ, ಅಡುಗೆ ಮಾತ್ರ ಸ್ವದೇಶಿಯೇ ಚೆನ್ನ ಏನಂತೀರಾ ? ಕಮಲಾ ಬೆಲಗೂರ್ ನಾಗರೀಕತೆ ಬೆಳೆದಂತೆಲ್ಲ ನಮ್ಮ ಜೀವನ ಶೈಲಿ, ಆಹಾರಪದ್ಧತಿಗಳಲ್ಲಿಯೂ ಸಹ ಬದಲಾವಣೆ ಕಾಣುತ್ತಿದೆ. ವೇಗದ ಜೀವನ, ಬದಲಾದ ಜೀವನ ಗುಣಮಟ್ಟ, ಬಿಡುವಿಲ್ಲದ ದುಡಿತ, ಸಮಯದ ಅಭಾವ ಸುಲಭವಾಗಿ ದಕ್ಕುವ ಆಹಾರಗಳತ್ತ ನಮ್ಮನ್ನು ಸೆಳೆಯುತ್ತಿವೆ....
ಡೈಲಿ ಬುಕ್ : ಕನಸು ಕಾಣೆಯಾಗಿದೆ
'ಹ್ಯಾಪಿ ಗೋ ಲಕಿ ಗಯ್' ಮಿಥುನ್ ಗೆ ತನ್ನ ಜೀವನದ ಮೂವತ್ತು ವಸಂತಗಳು ಉರುಳಿದ್ದೇ ಗೊತ್ತಾಗಲಿಲ್ಲ. ಜೀವನದ ಹೈವೇಯಲ್ಲಿ ಅವನದು ಯಾವತ್ತೂ ನೂರಿಪ್ಪತ್ತು. ನೂರನಲ್ವತ್ತರ ವೇಗ. ಹೀಗಿರುವಾಗ ಅದೊಮ್ಮೆ ಸಣ್ಣದೊಂದು ಗುಂಡಿಯಲ್ಲಿಅವನ ಬಂಡಿ ಇಳಿದು ಹತ್ತಿತು ಆಗಲೇ ಮಿಥುನ್ ಗೆ ಗೊತ್ತಾಗಿದ್ದು, ತಾನು ಆಗಸದಲ್ಲಿ ಹಾರುತ್ತಿಲ್ಲ ಎಂದು. ಕೈ...
ಅಶೋಕ ಶೆಟ್ಟರ್ ಕಾಲಂ : ’ಎದೆಗೆ ಬಿದ್ದ ಅಕ್ಷರ’ ಲೋಕದಲಿ ಒಂದಿಷ್ಟು
"ಕೆಲ ವರ್ಷಗಳ ಹಿಂದೆ ನನಗೆ ಗೊತ್ತಿದ್ದ ದಲಿತ ಸಂಘಟನೆಯಲ್ಲಿದ್ದ ಸ್ನೇಹಿತನೊಬ್ಬನ ಕೊಲೆಯಾಯಿತು. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ’ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು’ ಎಂದಳು. ಆ ಕ್ಷಣ ನನಗೆ ’ಗೋಡೆಗೆ...
ಚಂದ್ರನಿಗೊಂದು ಜೋಡಿ ಹುಡುಕಲಾಗಿಲ್ಲ…
ಹನಿ ಹನಿ ಮೋಹನ್.ವಿ.ಕೊಳ್ಳೇಗಾಲ ಕಾಗೆಗೂಡಲ್ಲಿ ಕೋಗಿಲೆ ಮೊಟ್ಟೆ ಸೇರಿತು ನೋವಿನಿಂದ ಕೂಗಿದ ಕೋಗಿಲೆಯ ಒಂಟಿ ದನಿ ಜಗಕೆ ಕರ್ಣಾನಂದವಾಯಿತು * ಪುಣ್ಯಕೋಟಿಯ ಕಥೆಯ ಕೇಳಿದ ಪ್ರಾಣಿಯ ಸುತ್ತ ಬರಿ ಹುಲ್ಲು ಹಸಿವ ತಾಳದ ವ್ಯಾಗ್ರ ಜಾರಿ ಬಿದ್ದಿತು * ನಿನ್ನೆ ಕನಸ್ಸಿನಲ್ಲಿ ಬಂದಿದ್ದ ನ್ಯೂಟನ್ ಗುರುತ್ವಾಕರ್ಷಣಕ್ಕೆ ತಳ ತಿರುಗಿಸಿದಿರುವೆ...
’ಶ್ರೀ ರಾಮಾಯಣದರ್ಶನಂ ಡಿವಿಡಿ ಕೇಳಿದ್ರಾ’, ಡಾ ಬಿ ಆರ್ ಸತ್ಯನಾರಾಯಣ
ಡಾ ಬಿ ಆರ್ ಸತ್ಯನಾರಾಯಣ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ವಾಚನದ ಡಿ.ವಿ.ಡಿ.ಗಳು ಹೊರ ಬರುತ್ತಿವೆ ಎಂಬುದು ಅತ್ಯಂತ ಖುಷಿ ಕೊಡುವ ವಿಚಾರವಾಗಿತ್ತು. ಕುಪ್ಪಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅವುಗಳು ಬಿಡುಗಡೆಯಾದ ದಿನವೇ ಕೊಂಡು ತಂದು ಕೇಳಲಾರಂಭಿಸಿದೆ. ಸುಮಾರು ಎಂಬತ್ತು ಗಂಟೆಗಳಿಗೂ ಅಧಿಕ ಕಾಲಾವಧಿಯ ಈ ಡಿ.ವಿ.ಡಿ.ಗಳ...
’ನನ್ನ ಕಾಡಿದ್ದು ಸಿನಿಮಾ ಅಲ್ಲ ಪುಸ್ತಕ’, ಸುಮಾ ಬರೀತಾರೆ
ಬಿಳಿಯರು ಕರಿಯರ ರಕ್ತ ಮಾಂಸಗಳ ಜೊತೆ ಆಟವಾಡಿದರು ಸುಮ ಮುದ್ದಾಪುರ್ ನಾನು ರೂಟ್ ಪುಸ್ತಕದ ಅನುವಾದಿತ ಪುಸ್ತಕವಾದ ತಲೆಮಾರನ್ನು ಓದಿದೆ. ಇದರಲ್ಲಿ ಆಫ್ರಿಕಾದ ಬುಡಕಟ್ಟಿನ ಏಳು ತಲೆಮಾರುಗಳ ಹುಡುಕಾಟ ಇದೆ. ಆಫ್ರಿಕಾ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಮೊಟ್ಟ ಮೊದಲು ಬರುವುದು ಅಲ್ಲಿಯ ಕಡುಗಪ್ಪು ಮತ್ತು ದಷ್ಟ-ಪುಷ್ಟವಾದ ಜನಾಂಗ....
'ಅಂದಿನಿಂದ ಇಲ್ಲದ ಡಬ್ಬಿಂಗ್ ಈಗೇಕೆ?'
-ಶಶಿಕಾಂತ ಯಡಹಳ್ಳಿ ಇಂತಹುದೊಂದು ಪ್ರಶ್ನೆ ಡಬ್ಬಿಂಗ್ ವಿವಾದದ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ. ಅಥವಾ ಡಬ್ಬಿಂಗನ್ನು ಶತಾಯಗತಾಯ ವಿರೋಧಿಸುವವರು ಈ ರೀತಿಯ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ನಿಜಕ್ಕೂ ಇದು ಆಲೋಚಿಸಬಹುದಾದ ವಿಚಾರ. ಹಿಂದೆ ಇಲ್ಲದ್ದು ಈಗ್ಯಾಕೆ? ಇದರ ಅಗತ್ಯ ಇದೆಯಾ? ಆಗ ಅಪ್ರಸ್ತುತವಾಗಿದ್ದು ಈಗ ಪ್ರಸ್ತುತವಾ?...
ಮುರಿದು ಬಿದ್ದ ಫಿರಂಗಿ,ಬಾಗಿಲುಗಳೇ ಹೇಳಿ ನಾನಾರೆಂದು?
ಕೋಟೆ ಕೊತ್ತಲಗಳೆಂದರೆ ನನಗಿಷ್ಟ! ನಾಗೇಂದ್ರ ಕುಮಾರ್ ಕೆ ಎಸ್ ಕೋಟೆ ಕೊತ್ತಲಗಳೆಂದರೆ ನನಗಿಷ್ಟ! ಮನಸು ತುಂಬಿಬರುವುದು; ಮನಸನೆಳವುದು; ಭಾವ ಉಕ್ಕುವುದು; ಏಕೋ ಗೊತ್ತಿಲ್ಲ ನಾ ಕಾಣೆ? ಹೋರಾಟಗಳ ಸಂಕೇತವೆಂದೋ? ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ? ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ? ಕೋಟೆ-ಕೊತ್ತಲಗಳೆಂದರೆ ಮನಸು...
’ಆಟ-ಮಾಟ’ – ನಾವು ಬರ್ತೀವ ನಿಮ್ಮ ನೋಡಲಿಕ್ಕ, ನೀವು ನಮ್ಮ ನೋಡಲಿಕ್ಕ
ಇಲ್ಲಿ ಮೂರು ಉತ್ತಮ ನಾಟಕಗಳಿವೆ. ನುರಿತ ಕಲಾತಂಡವಿದೆ. ಬೇಕಿರೋದೇನು ಗೊತ್ತಾ ? ಪ್ರದರ್ಶನಕ್ಕೊಂದು ಅವಕಾಶ. ಆಟ-ಮಾಟ ಧಾರವಾಡ, ಒಂದು ಸಾಂಸ್ಕೃತಿಕ ಪುಳಕದ ಡೀಟೆಲ್ ಇಲ್ಲಿದೆ...
ಡೈಲಿ ಬುಕ್ : ’ತಕ್ಕ ಮಣ್ಣಿನ ತೇವಕ್ಕಾಗಿ’
ಯಾವುದೆ ನುಡಿನಿರೂಪಣೆ ಧರಿಸಬಹುದಾದ ತಾತ್ವಿಕತೆಗಳು ಯಾವುವು ಮತ್ತು ಅವುಗಳ ಅರ್ಥಸಾಧ್ಯತೆಗಳೇನು ಎಂದು ವಿಮರ್ಶೆಯು ವಿವರಿಸಿದರೆ ಸಾಕೆ? ಆಯಾಯಾ ನುಡಿನಿರೂಪಣೆಗಳು ತಾವು ಇರುವಂತೆಯೆ ಯಾಕೆ ಸಂಭವಿಸುತ್ತವೆ? ಅವುಗಳ ಉದ್ದೇಶ, ಕಾರಣ, ಪರಿಣಾಮಗಳು ಯಾವುವು? ಅವುಗಳ ಓದುಗಳಿಂದ ಯಾವ ಒತ್ತಡಗಳು ಮತ್ತು ನಡೆಗಳು ನಿರ್ಮಾಣವಾಗುತ್ತವೆ; ಇಂತಹ...
ಮೋಹನಸ್ವಾಮಿ ಮತ್ತು ನಮ್ಮ ಪರಿಧಿ – ಜಯಶ್ರೀ ಕಾಸರವಳ್ಳಿ ಬರೀತಾರೆ
ಜಯಶ್ರೀ ಕಾಸರವಳ್ಳಿ ಕೆಲವೊಂದು ವಿಷಯಗಳು ಸಾಹಿತ್ಯ ವಲಯಕ್ಕೆ ತೀರಾ ಹೊಸತಾಗಿ ಮೂಡಿಬಂದಂತೆ ಅನ್ನಿಸುವುದಾದರೂ ಬದುಕಿನ ವಾಸ್ತವದಲ್ಲಿ ಖಂಡಿತಾ ನಿರ್ಲಕ್ಷಕ್ಕೆ ಒಳಗಾಗಿರದೆ ಒಳಗೆಲ್ಲೋ ಕುದಿಯುತ್ತಿರುವಂತಹದು ಬಿಡುಗಡೆಯ ದಾರಿ ಹುಡುಕುತ್ತಲೇ ಬರವಣಿಗೆಯ ಮೂಲಕ ಪ್ರಕಟವಾಗಿಬಿಡುತ್ತದೆಯೇನೊ? ಎಂದೋ ಯಾವಾಗಲೋ ಅಂಥಾ ಒಂದು ಅವಕಾಶ ಸಿಕ್ಕಾಗ,...
’ಅಮೆರಿಕೆಯಲ್ಲಿ ಕನ್ನಡ ಓದುಗನ ಸಂಕಟ’ – ವೈಶಾಲಿ ಹೆಗಡೆ ಬರೀತಾರೆ
- ವೈಶಾಲಿ ಹೆಗಡೆ ಬರೆಯುವ ಖುಷಿ ಹೆಚ್ಚೋ, ಓದುವ ಖುಷಿ ಹೆಚ್ಚೋ ಎಂದು ಮೊನ್ನೆ ಒಬ್ಬರು ಕೇಳಿದ್ದರು. ಉತ್ತರ ಬಹು ಸುಲಭ. ಓದುವ ಖುಷಿಯ ಮುಂದೆ ಬರೆವ ಖುಷಿ ಏನೂ ಅಲ್ಲ. ಅಂದು ಶಾಲೆಯ ಬೆಂಚಿನಲ್ಲಿ ಕುಳಿತು ಪಟ್ಟಿ ಹಾಳೆಯ ಹಿಂಬದಿಗೆ ಗೀಚಿದ ಕವನದ ದಿನಗಳಾದಿಯಾಗಿ ಬರೆದು ಒಗೆದದ್ದೆಷ್ಟೋ, ಇಟ್ಟುಕೊಂಡದ್ದೆಷ್ಟೋ, ಪ್ರಕಟಿಸಿದ್ದೆಷ್ಟೋ....
ಪಿ ಚಂದ್ರಿಕಾರ ಕಾದಂಬರಿ 'ಚಿಟ್ಟಿ' : ’ಆರೋಗ್ಯ ’ಮದರ್’ ಆಗಲು ಹೋದಳು’
(ಇಲ್ಲಿಯವರೆಗೆ) ತನ್ನ ಒಳಗಿನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದನ್ನು ಚಿಟ್ಟಿ ಚೆನ್ನಾಗೇ ಅಭ್ಯಾಸ ಮಾಡಿಕೊಂಡಿದ್ದಳು. ಯಾಕೆ ಹೀಗಿದ್ದೀಯ ಅಂತ ಅಮ್ಮ ಕೇಳಿದರೆ ‘ಏನೂ ಇಲ್ಲಮ್ಮ ಯಾಕೋ ತುಂಬಾ ತಲೆ ನೋವು’ ಎಂದು ಉತ್ತರ ಕೊಡುತ್ತಿದ್ದಳು. ಆದರೆ ಅವಳ ಕಣ್ಣು ಮಾತ್ರ ಸಂಧ್ಯಾಳ ಮೇಲೆ ಇತ್ತು. ಅವಳ ನಡೆ-ನುಡಿ ಹಾವ-ಭಾವ ಎಲ್ಲವನ್ನೂ...
ನಾಟಕ ಬೆಂಗ್ಳೂರು ಮತ್ತೆ ಬಂತು
ರವೀಂದ್ರ ಕಲಾಕ್ಷೇತ್ರದ 50ರ ಸುವರ್ಣ ಸಂಭ್ರಮದಲ್ಲಿ ನಾಟಕಗಳ ಜಾತ್ರೆಯೇ ಜರುಗಲಿದೆ. ಅಂದ ಹಾಗೆ ನಿಮಗೆ ಕಾರ್ಯಕ್ರಮದ ಫುಲ್ ಡೀಟೈಲ್ಸ್ ಬೇಕಲ್ವಾ ? ಸಂಭ್ರಮದ ವೇಳಾಪಟ್ಟಿಯಿದೆ ಇಲ್ಲಿ...
'ಎಲ್ಲಾ ಹೆಣ್ಮಕ್ಕಳೂ ದೇವರುಗಳೇ….' – ನಳಿನ ಬರೀತಾರೆ
ನಾವು ಹೆಣ್ಮಕ್ಕಳು ನಳಿನ ಮನೆಗೊಂದು ದೀಪದಂತೆ, ಮನೆಯೊಳಗೆ ಬಂದವರ ಹೋದವರ ಕಣ್ಣು ಕುಕ್ಕಿಸಿ, ಗೆಜ್ಜೆ ಗಿಲುಕಿ ಕುಲುಕಿಸಿ ಓಡೋಡಿ ಆಟವಾಡಿದೆವು. ಹಿತ್ತಲ ಗಿಡದಲಿ ಸದ್ದಿಲ್ಲದೆ ಹೂಬಿಟ್ಟ ಬಾಳೆಯ ಹಾಗೆಯೇ ಮೈನೆರೆದು ದಾವಣಿಯಲಿ ನಾಚಿದೆವು. ಮನೆ ಮನೆಗಳಲ್ಲೂ ನಾವು ನೆಲ ಗೋಡೆ, ಅಂಗಳ, ಶೌಚ ಗುಡಿಸಿ ಸಾರಿಸಿ,...
'ಶಿಶಿಲರೆಂದರೆ ಅಸಮಾನ್ಯ ವ್ಯಕ್ತಿತ್ವದ ಮೇಷ್ರು..' – ಸ್ಮಿತಾ ಬರೀತಾರೆ
ಸ್ಮಿತಾ ಅಮೃತರಾಜ್ ಸಂಪಾಜೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಎಂಬ ಪುಟ್ಟ ಊರು ಹೇಗೆ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪರಿಶ್ರಮದಿಂದ ವಿದ್ಯಾನಗರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿತೋ,ಅಂತೆಯೇ ಸುಳ್ಯದಲ್ಲೊಂದು ಸಾಂಸ್ಕೃತಿಕ ಸಂಚಲನವನ್ನುಂಟು ಮಾಡಿ ಸುಳ್ಯವನ್ನು ಸಾಂಸ್ಕೃತಿಕ ನಗರಿಯನ್ನಾಗಿ ಮಾಡಿದ ಡಾ. ಶಿಶಿಲರ ಸಾಧನೆಯೂ...
ಪತ್ರಕರ್ತರು ಯಾಕೆ ಎಲ್ಲೆಲ್ಲೂ ಟಾರ್ಗೆಟ್ ಆಗ್ತಾ ಇದ್ದಾರೆ?
ಮೀಡಿಯಾ ಟಾರ್ಗೆಟ್! ಶಂಶೀರ್ ಬುಡೋಳಿ, ಎಂ ಸಿ ಜೆ ಪತ್ರಕರ್ತರು ಸಮಾಜದ ರಕ್ಷಕರು.. ದಿನವಿಡೀ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಸಮಾಜಕ್ಕಾಗಿ ಕೆಲ್ಸ ಮಾಡುವ ಪತ್ರಕರ್ತರು ಸಮಾಜ ರಕ್ಷಕರೆಂದೇ ಗುರುತಿಸಿಕೊಂಡವ್ರು. ಆದ್ರೆ ಪತ್ರಕರ್ತರಿಗಿಂದು ಯಾವುದೇ ರಕ್ಷಣೆ ಇಲ್ಲ. ಜಗತ್ತಿನಲ್ಲಿ ಅಲ್ಲಲ್ಲಿ...
ಡೈಲಿ ಬುಕ್ : ಡಾ ಕೋ ಚೆನ್ನಬಸಪ್ಪ ಅವರ ’ಭಾರತದಲ್ಲಿ ಕೋಮುದ್ವೇಷ’
ಇದು ಕತೆಯಲ್ಲ; ಕಾದಂಬರಿ ಅಲ್ಲ. ರಾಜ್ಯ ಸಾಮ್ರಾಜ್ಯಗಳ ಇತಿಹಾಸವಲ್ಲ. ಪುಣ್ಯಭೂಮಿ, ಕರ್ಮಭೂಮಿ, ಧರ್ಮಕ್ಷೇತ್ರ... ಎಂಬ ಇತ್ತಯಾದಿ ಪವಿತ್ರ ಹೆಸರುಗಳಿಂದ ಕರೆಯುವ ಈ ಭಾರತದಲ್ಲಿ ಚಾತುರ್ವರ್ಣ ಪದ್ಧತಿ, ಜಾತಿವ್ಯವಸ್ಥೆ, ಮನುಧರ್ಮಶಾಸ್ತ್ರ, ಅಸ್ಪೃಶತೆ ಮುಂತಾದ ಅನಾರೋಗ್ಯಕರ ಆಚರಣೆಗಳ ಅನಾಚಾರ - ಅತ್ಯಾಚಾರ ಯಾವಾಗ, ಯಾಕೆ, ಹೇಗೆ ತಲೆ...
ಸುಗತ ಬರೆಯುತ್ತಾರೆ : ಸಂದರ್ಶನಗಳಿಗೆ ತಾಲೀಮು ನಡೆಸಬೇಕಿದೆ
ಸುಗತ ಶ್ರೀನಿವಾಸರಾಜು ರಾಹುಲ್ ಗಾಂಧಿ ಕಳೆದ ಸೋಮವಾರ ಟೈಮ್ಸ್ ನೌ ಸುದ್ದಿ ವಾಹಿನಿಯ ಅರ್ನಾಬ್ ಗೋಸ್ವಾಮಿಗೆ ಕೊಟ್ಟ ಸಂದರ್ಶನ ಸಹಜವಾಗಿಯೇ ಬಹಳ ಚರ್ಚೆಗೆ ಒಳಪಟ್ಟಿದೆ. ರಾಹುಲ್, ಸಾರ್ವಜನಿಕ ಬದುಕಿಗೆ ಬಂದ ಹತ್ತು ವರ್ಷಗಳಲ್ಲಿ ಮತ್ತು ತಮ್ಮ ಈವರೆಗಿನ ಜೀವಿತಾವಧಿಯಲ್ಲಿ ನೀಡಿದ ಪ್ರಥಮ ಸಂದರ್ಶನ ಇದಾಗಿದ್ದರಿಂದ ಅವರ ಮಾತು-ಮೌನ,...
’ಅಸಹಾಯಕ ರಾತ್ರಿಗಳಲ್ಲಿ ದಿಟ್ಟಿಸಲೂ ಆಗದ ವಿರಹವಿರುತ್ತದೆ ಅಲ್ಲಿ…’ – ಭವ್ಯ ಬರೆಯುತ್ತಾರೆ
ಕೆಂಪುಹಾಸಿನ ಜನರ ಕುರಿತು ಹೆಚ್ ಸಿ ಭವ್ಯ ಹೂವುಗಳಡಿಯಲ್ಲಿ ಅಗೋಚರ ಕೆಂಡಗಳಿದ್ದವು ಹೊಳೆಯುವ ಮುಂಗಾಲುಗಳ ತೋರುತ್ತಾ ನಡೆದ ಅವರ ಪಾದಗಳಲ್ಲಿ ಬಣ್ಣಗಟ್ಟಿದ ಬೊಬ್ಬೆಗಳು ಆ ಬನಾವಟಿ ಚೆಹರೆಗಳಲ್ಲಿ ಅಪಾಪದ ಭ್ರಮೆ ಗೊತ್ತಿಲ್ಲ, ನಿಮಗೆ ಎದೆಯೊಳಗಿನ ಚೀರುಗಳು ಸುಮ್ಮನಾದರೂ ನಗುತ್ತಿರುತ್ತವೆ ನೀವು ಮೋಸ ಹೋಗುತ್ತೀರಿ.. ...
ನನ್ನನ್ನು ಕಾಡಿದ ಸಿನೆಮಾ : ’ಜೈ ಭೀಮ್ ಕಾಮ್ರೇಡ್’
'ಎಡಬಲಪಾಕ' ಸಾಕ್ಷಾತ್ಕರಿಸಿಕೊಳ್ಳುವ ಹಂಬಲದ ಅಭಿವ್ಯಕ್ತಿಯಾಗಿ 'ಜೈ ಭೀಮ್ ಕಾಮ್ರೇಡ್' ರೂಪುಗೊಂಡಿದೆ ವಿ ಎನ್ ಲಕ್ಷ್ಮಿನಾರಾಯಣ ಆನಂದ್ ಪಟವರ್ಧನ್ರವರ 'ಜೈ ಭೀಮ್ ಕಾಮ್ರೇಡ್' ಮೂರು ಚೌಕಟ್ಟು ಅಥವಾ ಪದರಗಳಲ್ಲಿ ಸಂಯೋಜಿಸಿರುವ ಮಹತ್ವಾಕಾಂಕ್ಷೆಯ ಎಪಿಕ್ ಶೈಲಿಯ ಒಂದು ಸಾಕ್ಷ್ಯಚಿತ್ರ. ಸ್ವಾತಂತ್ರ್ಯ-ಸಮಾನತೆ ಮತ್ತು ಮಾನವೀಯ...
